ವಾರ್ತಾ ಮತ್ತು ಪ್ರಸಾರ ಸಚಿವಾಲಯ

54 ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವ (ಐ.ಎಫ್.‌ ಎಫ್.‌ ಐ) ಗೋವಾದ ಭಾರತೀಯ ಸಿನಿಮಾದ ಸಾರವನ್ನು ಸೆರೆಹಿಡಿಯುವ ಚೇತೋಹಾರಿ ಸಿ.ಬಿ.ಸಿ ವಸ್ತು ಪ್ರದರ್ಶನವನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಅನಾವರಣಗೊಳಿಸಿದರು


ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಪ್ರದರ್ಶನಕ್ಕೆ ಭೇಟಿ ನೀಡಿ, "ಸಿನಿಮಾ ಪ್ರೇಮಿಗಳಿಗೆ ಅನ್ವೇಷಿಸಲು, ಅನುಭವಿಸಲು ಮತ್ತು ಶಿಕ್ಷಣ ಪಡೆಯಲು ಸರಿಯಾದ ಸ್ಥಳ"ಎಂದು ಹೇಳಿದರು.

Posted On: 21 NOV 2023 5:03PM by PIB Bengaluru

ಗೋವಾ, 21 ನವೆಂಬರ್ 2023

 

ಗೋವಾದಲ್ಲಿ ನಡೆಯುತ್ತಿರುವ 54 ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವ (ಐ.ಎಫ್.‌ ಎಫ್.‌ ಐ) ಗೋವಾ, ಇದರ ಜೊತೆಗೆ ಸಿ.ಬಿ.ಸಿ ವಸ್ತು ಪ್ರದರ್ಶನವನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಅನಾವರಣಗೊಳಿಸಿದರು. ಈ ವರ್ಷದ ಸಿಬಿಸಿ ಪ್ರದರ್ಶನವು ಭಾರತೀಯ ಚಲನಚಿತ್ರಗಳನ್ನು ಸಂಕ್ಷಿಪ್ತವಾಗಿ ಪ್ರಕ್ಷೇಪಿಸುವ ಸಾರವನ್ನು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಭವಿಷ್ಯದ ಚಲನಚಿತ್ರ ಪ್ರವೃತ್ತಿಯನ್ನು ಬಳಸಿಕೊಂಡು ಪ್ರದೃಶಿಸಲಾಗಿದೆ. ಡಿಜಿಟಲ್ ಪ್ರದರ್ಶನ ಕೇಂದ್ರವನ್ನು ಪಣಜಿಯ ಕಲಾ ಅಕಾಡೆಮಿಯಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್, ಸಚಿವಾಲಯ ಮಾಹಿತಿ ಮತ್ತು ಪ್ರಸಾರ (ಐ&ಬಿ) ಜೊತೆಯಾಗಿ ಸ್ಥಾಪಿಸಲಾಗಿದೆ.

  

ಕೇಂದ್ರ ಐ & ಬಿ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಪ್ರದರ್ಶನಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಪ್ರದರ್ಶನಗಳ ಪ್ರಾಮುಖ್ಯತೆಯನ್ನು ವಿವರಿಸಿದ ಅವರು, “ಪ್ರದರ್ಶನವು ಪ್ರತಿಯೊಬ್ಬರಿಗೂ ಇತಿಹಾಸ, ಹೊಸ ತಂತ್ರಜ್ಞಾನ ಮತ್ತು ವಿ.ಎಫ್.ಎಕ್ಸ್.ನಂತಹ ಹೊಸ ವ್ಯವಸ್ಥೆಗಳನ್ನು ನೋಡಲು ಅವಕಾಶ ನೀಡುತ್ತದೆ ಮತ್ತು ವರ್ಚುವಲ್  ರಿಯಾಲಿಟಿಯನ್ನು ಬಳಸಿ ಸಿನೆಮಾ ಜಗತ್ತಿನಲ್ಲಿ ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ. ಸಿನಿಮಾ ಪ್ರೇಮಿಗಳಿಗೆ ಅನ್ವೇಷಿಸಲು, ಅನುಭವಿಸಲು ಮತ್ತು ಶಿಕ್ಷಣ ಪಡೆಯಲು ಇದು ಸರಿಯಾದ ಸ್ಥಳವಾಗಿದೆ” ಎಂದು ಹೇಳಿದರು.  

 

ಪ್ರದರ್ಶನದ ಮುಖ್ಯ ವಿಷಯವು ಭಾರತೀಯ ಸಿನಿಮಾವನ್ನು ಆಧರಿಸಿದೆ, ಉದಾಹರಣೆಗೆ ಮಹಿಳಾ ಸಬಲೀಕರಣ, ಸಾಮಾಜಿಕ ಕಾರಣ ಮತ್ತು ನಡವಳಿಕೆ ಬದಲಾವಣೆ, ಮಹಾತ್ಮ ಗಾಂಧಿಯವರ ಸಿದ್ಧಾಂತ, ಯುವಕರನ್ನು ಪ್ರೇರೇಪಿಸುವ, ರಾಷ್ಟ್ರೀಯ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ರಾಷ್ಟ್ರೀಯ ಏಕೀಕರಣ & ಕೋಮು ಸೌಹಾರ್ದತೆ, ಮತ್ತು ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿ ಮುಂತಾದ ಸಿನಿಮಾದ ವಿವಿಧ ಅಂಶಗಳನ್ನು ಚಿತ್ರಿಸಲಾಗಿದೆ.

 
ಇಂಟರಾಕ್ಟಿವ್ ಡಿಸ್ಪ್ಲೇಗಳ ಮೂಲಕ ಚಲನಚಿತ್ರದ ಬಗ್ಗೆ ತಿಳಿದುಕೊಳ್ಳಲು ಚಲನಚಿತ್ರ ಅಭಿಮಾನಿಗಳಿಗೆ ಅವಕಾಶ ನೀಡುವುದು, ಪ್ರದರ್ಶನವು ಒಳನೋಟವುಳ್ಳ ಮತ್ತು ತೊಡಗಿಸಿಕೊಳ್ಳುವ ಅನುಭವವನ್ನು ನೀಡುತ್ತದೆ. ಸಂದರ್ಶಕರ ಅನುಭವವನ್ನು ಹೆಚ್ಚಿಸಲು ಆಗ್ಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ, ಡಿಜಿಟಲ್ ಪಜಲ್, ಇಮ್ಮರ್ಸಿವ್ ರೂಮ್, ಡಿಜಿಟಲ್ ಫ್ಲಿಪ್ಬುಕ್ ಮುಂತಾದ ವಿವಿಧ ತಂತ್ರಜ್ಞಾನಗಳನ್ನು ಬಳಸಲಾಗಿದೆ.
 

ದೇಶಭಕ್ತಿಯ ಥೀಮ್ ಆಧಾರಿತ ಸ್ವಾತಂತ್ರ್ಯಪೂರ್ವ ಹಾಡುಗಳ ವಿಭಾಗವನ್ನು ಸಹ ಪ್ರದರ್ಶಿಸಲಾಗುತ್ತದೆ. ಹಾಡುಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:
1. ವತನ್ ಸೆ ಚಲಾ ಹೈ ವತನ್ ಕಾ ಸಿಪಾಹಿ_ಚಾಂದ್ _1944
2. ಯೈ ದೇಶ್ ಹಮಾರಾ ಪ್ಯಾರಾ_ಹುಮ್ಜೋಲಿ 1946
3. ಏ ಹಿಂದ್ ಕೆ ಸಪುತೋ ಜಾಗೋ ಹುವಾ ಸವೇರಾ, ಚಲನಚಿತ್ರ - ಕೋಶಿಶ್ 1943
4. ಗುಲಾಮಿ 1945_ ಏ ವತನ್ ಮೇರೆ ವತನ್ ತುಜ್ ಪೆ ಮೇರಿ ಜಾನ್ ನಿಸಾರ್
5. ಮಾತಾ ಮಾತಾ ಭಾರತ್ ಮಾತಾ (Hd) - ತಕ್ದೀರ್ (1943) ಹಾಡು - ನರ್ಗೀಸ್ - ಮೋತಿಲಾಲ್ - ಚಂದ್ರ ಮೋಹನ್
6. (1943)_ದೂರ್ ಹಥೋ ಏ ದುನಿಯಾ ವಾಲೋ - ಕಿಸ್ಮತ್ ಪೂರ್ಣ ಹಾಡು
7. ಚಲೋ ಸಿಫಿ, ಕ್ರೋ ಸಫಾಯಿ_ಬ್ರಹ್ಮಚಾರಿ_1938
8. 1940_-ಚಲ್ ಚಲ್ ರೇ ನೌಜವನ್_ಬಂಧನ್
9. ಹಮ್ ಪಂಚಿ ಹೈ ಆಜಾದ್_ನಸೀಬ್ 1945
10.1937_ದುನಿಯಾ ನಾ ಮನೆ_--ಶಾಂತಾ ಆಪ್ಟೆ
11.ಭಾರತ್ ಪ್ಯಾರಾ ದೇಶ್ ಹಮಾರಾ_ಮುಸ್ಕರಹತ್_1943
12.ಹೈ ಧನ್ಯಾ ತು ಭಾರತ್ ನಾರಿ_ಭಾರತ್ ಕಿ ಬೇಟಿ_1936
 
ಎಲ್ಫಿನ್ ಸ್ಟೋನ್ ಪಿಕ್ಚರ್ ಪ್ಯಾಲೇಸ್ ಮೂವೀ ಥಿಯೇಟರ್ನ ತಲ್ಲೀನಗೊಳಿಸುವ ಅನುಭವವು ಈ ಪ್ರದರ್ಶನದೊಳಗೆ ಇನ್ನೊಂದು ಆಸಕ್ತಿದಾಯಕ ವೈಶಿಷ್ಟ್ಯವಾಗಿದೆ. ಕೋಲ್ಕತ್ತಾದಲ್ಲಿರುವ ಎಲ್ಫಿನ್ ಸ್ಟೋನ್ ಪಿಕ್ಚರ್ ಪ್ಯಾಲೇಸ್ ಭಾರತದ 1ನೇ (ಮೊತ್ತ ಮೊದಲ) ಸಿನಿಮಾ ಹಾಲ್ ಆಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

ಪ್ರದರ್ಶನವು ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸಿದೆ ಮತ್ತು ಸಂದರ್ಶಕರನ್ನು ಮಂತ್ರಮುಗ್ಧರನ್ನಾಗಿಸಲು ಮತ್ತು ಮನ ಸೆರೆಹಿಡಿಯುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೊಂದಿಗೆ ಸೆಲ್ಫಿಗಾಗಿ ಎ.ಆರ್ ಬೂತ್, 360 ಡಿಗ್ರಿ ರೋಬೋಟಿಕ್ ಆರ್ಮ್, ಮೂರು ಬದಿಯ ಲೆಡ್ ವಾಲ್ ಇತರವುಗಳಿವೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಜೆ ಎರಡು ಲೇಸರ್ ಶೋ ಹಾಗೂ ಸಿನಿಮಾ ಥೀಮ್ ಆಧಾರಿತ ಪ್ರೊಜೆಕ್ಷನ್ ಮ್ಯಾಪಿಂಗ್ ಶೋ ಆಯೋಜಿಸಲಾಗಿದೆ. ಪ್ರದರ್ಶನಕ್ಕೆ ಎಲ್ಲರಿಗೂ ಉಚಿತ ಪ್ರವೇಶ ಅವಕಾಶವಿದೆ. 

ಉದ್ಘಾಟನಾ ಸಮಾರಂಭದಲ್ಲಿ ಎಸ್.‌ ಇ. ಜಿ . ಸಿ.ಇ.ಒ. ಶ್ರೀಮತಿ ಅಂಕಿತಾ ಮಿಶ್ರಾ ಮತ್ತು ಪಿಐಬಿ ಪಶ್ಚಿಮ ವಲಯದ ಮಹಾನಿರ್ದೇಶಕರಾದ ಶ್ರೀಮತಿ ಮೊನಿದೀಪ ಮುಖರ್ಜಿ  ಅವರು ಉಪಸ್ಥಿತರಿದ್ದರು.


***



(Release ID: 1978686) Visitor Counter : 106