ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 2

ಸಿನಿಮಾನಂದ,  ಖುಷಿಯ ಸಂಭ್ರಮದಲ್ಲಿ 54ನೇ ಐಎಫ್‌ಎಫ್‌ಐ ಚಲನಚಿತ್ರೋತ್ಸವಕ್ಕೆ ಗೋವಾದ ರಮಣೀಯ ಕರಾವಳಿಯಲ್ಲಿ ವರ್ಣರಂಜಿತ ಚಾಲನೆ


ಭಾರತದಲ್ಲಿ ವಿದೇಶಿ ಚಲನಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹಧನವನ್ನು 2.5 ಕೋಟಿ ರೂ.ಗಳಿಂದ 30 ಕೋಟಿ ರೂ.ಗೆ ಹೆಚ್ಚಳ; ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಣೆ

ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ಭಾರತವನ್ನು ಹೆಚ್ಚು ಬೇಡಿಕೆಯ ತಾಣವಾಗಿ ರೂಪಿಸಲು ಸರಕಾರ ಬದ್ಧವಾಗಿದೆ; ವಸುದೈವ ಕುಟುಂಬಕಂ ಕಲ್ಪನೆಯಲ್ಲಿ ಐಎಫ್ಎಪ್ಐ ಬೇರೂರಿದೆ: ಅನುರಾಗ್ ಠಾಕೂರ್

'75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ' ಕಾರ್ಯಕ್ರಮದ ಅಡಿ ನೇಮಕಾತಿ ಆಂದೋಲನ ಮತ್ತು ಇತರೆ ಉಪಕ್ರಮಗಳನ್ನು ಘೋಷಿಸಲಾಗಿದೆ

20% ವಾರ್ಷಿಕ ಬೆಳವಣಿಗೆಯ ದರದೊಂದಿಗೆ, ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ವಿಶ್ವದ 5ನೇ ಅತಿದೊಡ್ಡ ಮತ್ತು ಹೆಚ್ಚು ಜಾಗತೀಕರಣಗೊಂಡ ಉದ್ಯಮವಾಗಿದೆ: ಅನುರಾಗ್ ಠಾಕೂರ್

ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಯನ್ನು ಐಎಫ್ಎಫ್ಐನಲ್ಲಿ ಪರಿಚಯಿಸಲಾಗಿದೆ

ಚಿತ್ರ ನಿರ್ಮಾಣ ಉದ್ಯಮ ವಿಸ್ತರಣೆಗಾಗಿ ಗೋವಾ ಸರ್ಕಾರ, ರಾಜ್ಯದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲಿದೆ: ಸಿಎಂ ಪ್ರಮೋದ್ ಸಾವಂತ್

ಗೋವಾ, 20 ನವೆಂಬರ್ 2023

 

ಸೃಜನಾತ್ಮಕತೆ, ಸಿನಿಮೀಯ ತೇಜಸ್ಸು ಮತ್ತು ಚಲನಚಿತ್ರಗಳ ಮೂಲಕ ಕಥೆ ಹೇಳುವ ಕಲೆಯ ಭವ್ಯತೆಯಲ್ಲಿ ವರ್ಣರಂಜಿತವಾದ, ಏಷ್ಯಾದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾಗಿರುವ 54ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ(ಐಎಫ್ಎಫ್ಐ), ಗೋವಾದ ರಮಣೀಯ ಕರಾವಳಿ ಸ್ವರ್ಗದಲ್ಲಿ ಮೋಡಿ ಮಾಡುವ ಸಿನಿಮೀಯ ಪಯಣವನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಜಗಮಗಿಸುವ ಉದ್ಘಾಟನಾ ಸಮಾರಂಭದೊಂದಿಗೆ, ವೈವಿಧ್ಯತೆ ಮತ್ತು ಸೃಜನಶೀಲತೆ ಅಳವಡಿಸಿಕೊಂಡು, ಚಲನಚಿತ್ರೋತ್ಸವದ ಈ ಆವೃತ್ತಿಯು ಚಲನಚಿತ್ರಗಳ ಅದ್ಭುತ ಮತ್ತು ರೋಮಾಂಚನ ಶ್ರೇಣಿಯನ್ನು ನೀಡುತ್ತದೆ, ವಿಶ್ವದಾದ್ಯಂತದ ಸಂಸ್ಕೃತಿಗಳು, ದೃಷ್ಟಿಕೋನಗಳು ಮತ್ತು ನಿರೂಪಣೆಗಳ ಶ್ರೀಮಂತಿಕೆ  ಪ್ರದರ್ಶಿಸುತ್ತದೆ. 9  ದಿನಗಳ ಚಲನಚಿತ್ರೋತ್ಸವವು ಪ್ರಶಸ್ತಿ ವಿಜೇತ ಬ್ರಿಟಿಷ್ ಚಲನಚಿತ್ರ ನಿರ್ಮಾಪಕ ಸ್ಟುವರ್ಟ್ ಗ್ಯಾಟ್ ಅವರ “ಕ್ಯಾಚಿಂಗ್ ಡಸ್ಟ್‌”ನ ಅಂತಾರಾಷ್ಟ್ರೀಯ ಚೊಚ್ಚಲ ಪ್ರದರ್ಶನದೊಂದಿಗೆ ವಿಧ್ಯುಕ್ತವಾಗಿ ಆರಂಭವಾಗಿದೆ.

ಪ್ರಸಿದ್ಧ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರಿಗೆ ಗೌರವಪೂರ್ವಕವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು 'ಭಾರತೀಯ ಸಿನಿಮಾಗೆ ನೀಡಿರುವ ಅಪಾರ ಕೊಡುಗೆಗಾಗಿ ವಿಶೇಷ ಮನ್ನಣೆ'ಯ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/20-6-1POL3.jpg

ಫೋಟೋದಲ್ಲಿ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರಿಗೆ ‘ಭಾರತೀಯ ಸಿನಿಮಾಗೆ ನೀಡಿದ ಅಪಾರ ಕೊಡುಗೆಗಾಗಿ ವಿಶೇಷ ಮನ್ನಣೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

 

ಭಾರತವನ್ನು ಚಲನಚಿತ್ರ ಚಿತ್ರೀಕರಣಕ್ಕೆ ಹೆಚ್ಚು ಬೇಡಿಕೆಯ ತಾಣವಾಗಿ ರೂಪಿಸಲು ಸರಕಾರ ಬದ್ಧವಾಗಿದೆ; ವಸುದೈವ ಕುಟುಂಬಕಂ ಕಲ್ಪನೆಯಲ್ಲಿ ಐಎಫ್ಎಫ್ಐ ಬೇರೂರಿದೆ: ಅನುರಾಗ್ ಠಾಕೂರ್

https://static.pib.gov.in/WriteReadData/userfiles/image/20-6-2WQMW.jpg

 

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಿನಿಮಾದ ಶಕ್ತಿ ಅಸಾಧಾರಣವಾಗಿದೆ,  ಅದರ ಇತಿಹಾಸದುದ್ದಕ್ಕೂ ಚಲನಚಿತ್ರವು ಶಾಂತಿಯ ಪ್ರೇರಕ ಶಕ್ತಿಯಾಗಿ ರೂಪಿಸುವ ಪರಿಕಲ್ಪನೆಗಳು, ಭಾವನಾಶಕ್ತಿ ಮತ್ತು ನಾವೀನ್ಯತೆಗಳನ್ನು ಸೆರೆಹಿಡಿದಿದೆ.  ವಿಶ್ವಾದ್ಯಂತ ಹೆಚ್ಚುತ್ತಿರುವ ವಿಭಜನೆಯೊಂದಿಗೆ ಸಂಕಷ್ಟದಲ್ಲಿರುವ ಜಗತ್ತಿನಲ್ಲಿ ಪ್ರಗತಿ ಮತ್ತು ಸಮೃದ್ಧಿ ತರುತ್ತಿದೆ ಎಂದರು.

ದೇಶದಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರವನ್ನು ವಿಸ್ತಾರಗೊಳಿಸಲು ಭಾರತ ಸರ್ಕಾರವು ಕೈಗೊಂಡ ಹಲವಾರು ಮಹತ್ವದ ಉಪಕ್ರಮಗಳನ್ನು ಎತ್ತಿ ತೋರಿಸಿದ ಸಚಿವರು, ಗೌರವಾನ್ವಿತ ಪ್ರಧಾನ ಮಂತ್ರಿಗಳು ಭಾರತವನ್ನು ಚಲನಚಿತ್ರ-ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಬೆಂಬಲದೊಂದಿಗೆ ಹೆಚ್ಚು ಬೇಡಿಕೆಯ ತಾಣವನ್ನಾಗಿ ಮಾಡಲು ಬಯಸಿದ್ದಾರೆ. ನಮ್ಮ ಯುವಕರು ಮತ್ತು ಮಕ್ಕಳ ಪ್ರತಿಭೆ ಮತ್ತು ನಮ್ಮ ಉದ್ಯಮದ ನಾಯಕರ ನಾವೀನ್ಯತೆ. ಸಿನಿಮಾಟೋಗ್ರಾಫ್ (ತಿದ್ದುಪಡಿ) 2023ರ  ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಡೆ ಅನುಮೋದನೆ ಪಡೆದಿದೆ. "ಈ ಶಾಸನವು ಕಾನೂನು ಚೌಕಟ್ಟನ್ನು ವಿಸ್ತರಿಸುವುದಲ್ಲದೆ, ಹಕ್ಕುಸ್ವಾಮ್ಯ ರಕ್ಷಣೆಯನ್ನು ಒಳಗೊಳ್ಳಲು ಸೆನ್ಸಾರ್‌ಶಿಪ್‌ನ ಆಚೆಗೆ ತನ್ನ ಗಮನವನ್ನು ಬದಲಾಯಿಸುತ್ತದೆ. ಮುಖ್ಯವಾಗಿ, ಪೈರಸಿ ವಿರುದ್ಧ ಕಠಿಣ ಕ್ರಮಗಳನ್ನು ಪರಿಚಯಿಸುತ್ತದೆ ಮತ್ತು ಚಲನಚಿತ್ರ ನಿರ್ಮಾಪಕರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ವ್ಯರ್ಥವಾಗದಂತೆ ನೋಡಿಕೊಳ್ಳಲು ಪೈರಸಿ ವಿರೋಧಿ ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ಸಚಿವರು ಹೇಳಿದರು.

ಇತ್ತೀಚೆಗೆ ಮುಕ್ತಾಯಗೊಂಡ ಜಿ-20 ಶೃಂಗಸಭೆ ಉಲ್ಲೇಖಿಸಿದ ಕೇಂದ್ರ ಸಚಿವರು, ಅಭಿವೃದ್ಧಿ, ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವದ ಆಧಾರದ ಮೇಲೆ ಭಾರತದ ಬಹುಮುಖಿ ಮತ್ತು ಬಹು-ಪದರದ ಅಭಿವೃದ್ಧಿ ಮಾದರಿಗೆ ಇಡೀ ಜಗತ್ತು ಸಾಕ್ಷಿಯಾಗಿದೆ. ಜಿ-20 ಅಧ್ಯಕ್ಷತೆ ವಹಿಸಿದ್ದಾಗ ಭಾರತದ ಕಾರ್ಯವಿಧಾನದಂತೆಯೇ, ಭಾರತದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮುಖ್ಯ ಪರಿಕಲ್ಪನೆ ಮತ್ತು ಥೀಮ್ “ವಸುದೈವ ಕುಟುಂಬಕಂ” ಪರಿಕಲ್ಪನೆಯಲ್ಲಿ ಈ ಚಿತ್ರೋತ್ಸವ ಬೇರೂರಿದೆ, ಇದು ಇಡೀ ಜಗತ್ತೇ ಒಂದೇ ಕುಟುಂಬವಿದ್ದಂತೆ ಎಂಬ ಶಾಂತಿಯುತ ಸಹಬಾಳ್ವೆಯ ಸಾರವನ್ನು ಸಾರುತ್ತದೆ ಎಂದರು.

 

ವಿದೇಶಿ ಚಲನಚಿತ್ರಗಳ ನಿರ್ಮಾಣಕ್ಕೆ ಪ್ರೋತ್ಸಾಹಧನ ಘೋಷಣೆ

ಸಮಾರಂಭದಲ್ಲಿ ಪ್ರಮುಖ ಘೋಷಣೆ ಮಾಡಿದ ಕೇಂದ್ರ ಸಚಿವರು ಭಾರತದಲ್ಲಿ ವಿದೇಶಿ ಚಲನಚಿತ್ರಗಳ ನಿರ್ಮಾಣಕ್ಕೆ ಇರುವ ಪ್ರೋತ್ಸಾಹ ಧನವನ್ನು 30%ನಿಂದ 40%ಗೆ ಹೆಚ್ಚಿಸುವುದಾಗಿ ಘೋಷಿಸಿದರು, ಇದರ ಮಿತಿಯನ್ನು 2.5 ಕೋಟಿ ರೂ.ನಿಂದ 30 ಕೋಟಿ ರೂ.ಗೆ ಹೆಚ್ಚಿಸಲಾಗಿದೆ, ಅದು 3.5 ದಶಲಕ್ಷ ಡಾಲರ್‌ಗಳನ್ನು ಮೀರಿದೆ. ಭಾರತೀಯ ಚಲನಚಿತ್ರಗಳಿಗೆ (ಎಸ್ಐಸಿ) ಗಮನಾರ್ಹವಾಗಿ 5% ಹೆಚ್ಚುವರಿ ಬೋನಸ್ ನೀಡಲಾಗಿದೆ. 'ಭಾರತದ ಗಾತ್ರ ಮತ್ತು ವಿಶಾಲ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಮಧ್ಯಮ ಮತ್ತು ದೊಡ್ಡ-ಬಜೆಟ್ ಅಂತಾರಾಷ್ಟ್ರೀಯ ಯೋಜನೆಗಳನ್ನು ಆಕರ್ಷಿಸಲು ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆಯಿದೆ'. 'ಚಲನಚಿತ್ರ ನಿರ್ಮಾಣಕ್ಕೆ ಉತ್ತೇಜನ ನೀಡುವ ಈ ಮಾದರಿ ಬದಲಾವಣೆಯು ಭಾರತದ ಬದ್ಧತೆ ಮತ್ತು ಕಲಾತ್ಮಕ ಬೆಂಬಲಕ್ಕೆ ಸಾಕ್ಷಿಯಾಗಿದೆ. ಅಭಿವ್ಯಕ್ತಿ ಮತ್ತು ಸಿನಿಮೀಯ ಪ್ರಯತ್ನಗಳಿಗೆ ಆದ್ಯತೆಯ ತಾಣವಾಗಿ ನಮ್ಮ ಸ್ಥಾನವನ್ನು ಬಲಪಡಿಸುತ್ತದೆ ಎಂದು ಸಚಿವರು ತಿಳಿಸಿದರು.

ನಾಳಿನ 75 ಸೃಜನಶೀಲ ಮನಸ್ಸುಗಳು

ಮೊಟ್ಟಮೊದಲ ಬಾರಿಗೆ ‘75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ’ ಕಾರ್ಯಕ್ರಮದಡಿ, ನೇಮಕಾತಿ ಅಭಿಯಾನ ನಡೆಸಲಾಗುವುದು. ಇದು ಅರಳುತ್ತಿರುವ ಪ್ರತಿಭೆಗಳು ಮತ್ತು ವೃತ್ತಿಜೀವನದ ಪಥಗಳಿಗೆ ಅಪಾರ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ. ಇದು 2021ರಲ್ಲಿ ಪ್ರಾರಂಭವಾಯಿತು, ಈಗ ಅದರ 3ನೇ ಆವೃತ್ತಿಯಲ್ಲಿ 10 ವಿಭಾಗಗಳಲ್ಲಿ ಸುಮಾರು 600 ನಮೂದುಗಳಲ್ಲಿ ಬಿಷ್ಣುಪುರ, ಜಗತ್‌ಸಿಂಗ್‌ಪುರ ಮತ್ತು ಸದರ್‌ಪುರದಂತಹ ದೂರದ ಪ್ರದೇಶಗಳು ಸೇರಿದಂತೆ 19 ರಾಜ್ಯಗಳಿಂದ 75 ಯುವ ಚಲನಚಿತ್ರ ನಿರ್ಮಾಪಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವರು ಘೋಷಿಸಿದರು.

ಅತ್ಯುತ್ತಮ ವೆಬ್ ಸರಣಿ (ಒಟಿಟಿ) ವಿಭಾಗದಲ್ಲಿ ಹೊಸ ಪ್ರಶಸ್ತಿ ಸ್ಥಾಪಿಸಲಾಗಿದೆ

ಉತ್ಸವದ 54ನೇ ಆವೃತ್ತಿಯಲ್ಲಿ ಅನೇಕ 'ಪ್ರಥಮ'ಗಳನ್ನು ಪ್ರಕಟಿಸಿದ ಶ್ರೀ ಅನುರಾಗ್ ಠಾಕೂರ್, ಮೊದಲ ಬಾರಿಗೆ ಮತ್ತು ಇಲ್ಲಿಂದ, ಐಎಫ್ಎಫ್ಐ "ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿ" ನೀಡಲಿದೆ. ಭಾರತದಲ್ಲಿ ಹೊಸ ವಿಷಯಗಳ ಮೇಲೆ ಚಿತ್ರ ತಯಾರಿಸುವ ನಿರ್ಮಾಪಕರ ಪರಿವರ್ತನೀಯ ಪಾತ್ರ, ಜತೆಗೆ ಅವರು ಉದ್ಯೋಗ ಮತ್ತು ನಾವೀನ್ಯತೆಗೆ ನೀಡುವ ಕೊಡುಗೆಗಳನ್ನು ಗುರುತಿಸಿ ಗೌರವಿಸುತ್ತದೆ. ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಗಾಗಿ 15 ಒಟಿಟಿ ವೇದಿಕೆಗಳಿಂದ 10 ಭಾಷೆಗಳಲ್ಲಿ ಒಟ್ಟು 32 ನಮೂದು(ಎಂಟ್ರೀಸ್)ಗಳನ್ನು ಸ್ವೀಕರಿಸಲಾಗಿದೆ.

ಫಿಲ್ಮ್ ಬಜಾರ್ ಮತ್ತು ವಿಎಫ್ಎಕ್ಸ್ & ಟೆಕ್ ಪೆವಿಲಿಯನ್

ಚಲನಚಿತ್ರ ಜಗತ್ತಿನ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸಲು ಉತ್ತಮವಾದ "ವಿಎಫ್‌ಎಕ್ಸ್ ಮತ್ತು ಟೆಕ್ ಪೆವಿಲಿಯನ್" ಪರಿಚಯಿಸುವ ಮೂಲಕ ಮೊದಲ ಬಾರಿಗೆ, ಐಎಫ್‌ಎಫ್‌ಐ ಫಿಲ್ಮ್ ಬಜಾರ್‌ನ ವ್ಯಾಪ್ತಿ ಹೆಚ್ಚಿಸಿದೆ ಎಂದು ಸಚಿವರು ಘೋಷಿಸಿದರು. ಕಾಲ್ಪನಿಕ ಕಥೆ ಹೇಳುವಿಕೆ(ನಾನ್-ಫಿಕ್ಷನ್ ಸ್ಟೋರಿ ಟೆಲ್ಲಿಂಗ್) ಬೆಂಬಲಿಸಲು ಸಾಕ್ಷ್ಯಚಿತ್ರ ವಿಭಾಗವನ್ನು ಕೋ-ಪ್ರೊಡಕ್ಷನ್ ವಿಭಾಗಕ್ಕೆ ಸೇರಿಸಲಾಗಿದೆ ಎಂದರು.

ಸಿನಿ-ಮೇಳ

ಈ ವರ್ಷ ಮೊದಲ ಬಾರಿಗೆ ಪ್ರಾದೇಶಿಕ ಚಲನಚಿತ್ರಗಳು, ಆಹಾರ, ಸಂಗೀತ, ಸಂಸ್ಕೃತಿ ಮತ್ತು ಮತ್ತಿತರ ಕ್ಷೇತ್ರಗಳ ಮೂಲಕ ಭಾರತದ ಶ್ರೀಮಂತ ವೈವಿಧ್ಯತೆಯ ಅತಿರಂಜಿತ ಆಚರಣೆಯನ್ನು ಪ್ರದರ್ಶಿಸುವ ಸಿನಿ-ಮೇಳ ನಡೆಯಲಿದೆ.

ಕ್ಲಾಸಿಕ್ಸ್ ವಿಭಾಗದ ಮರುಸ್ಥಾಪನೆ

ಇಂಡಿಯನ್ ಕ್ಲಾಸಿಕ್ಸ್‌ನ ಹಾನಿಗೊಳಗಾದ ಸೆಲ್ಯುಲಾಯ್ಡ್ ರೀಲ್‌ಗಳಿಂದ ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್ (ಎನ್ಎಫ್ಎಚ್ಎಂ) ಅಡಿ, ಎನ್ಎಫ್ ಡಿಸಿ/ಎನ್ಎಫ್ಎಐ ಮೂಲಕ ನಿಖರವಾಗಿ ಮರುಸ್ಥಾಪಿಸಲಾದ ಮೇರುಕೃತಿಗಳ 7 ವಿಶ್ವ ಪ್ರಥಮ ಪ್ರದರ್ಶನಗಳನ್ನು ಒಳಗೊಂಡಿರುವ ಮರುಸ್ಥಾಪಿತ ಕ್ಲಾಸಿಕ್ಸ್ ವಿಭಾಗವನ್ನು ಪರಿಚಯಿಸಲಾಗಿದೆ.

ಎಲ್ಲರ ಒಳಗೊಳ್ಳುವಿಕೆ ಮತ್ತು ಮನರಂಜನೆ

54ನೇ ಐಎಫ್‌ಎಫ್‌ಐನಲ್ಲಿ ಎಲ್ಲರೂ ಒಳಗೊಳ್ಳುವಿಕೆಯು ಮಾರ್ಗದರ್ಶಿ ತತ್ವವಾಗಿ ಉಳಿದಿದೆ. ಏಕೆಂದರೆ ಈ ವರ್ಷದ ಉತ್ಸವದ ಎಲ್ಲಾ ಸ್ಥಳಗಳು ವಿಶೇಷಚೇತನರಿಗೆ ಸೇವೆ ಸಲ್ಲಿಸುವ ಸೌಲಭ್ಯಗಳೊಂದಿಗೆ ಸಜ್ಜುಗೊಂಡಿದೆ. ಎಂಬೆಡೆಡ್ ಆಡಿಯೊ ವಿವರಣೆಗಳು ಮತ್ತು ಸಂಕೇತ ಭಾಷೆಯ ನಿಬಂಧನೆಗಳೊಂದಿಗೆ ನಮ್ಮ ದಿವ್ಯಾಂಗ  ಪ್ರತಿನಿಧಿಗಳಿಗಾಗಿ 4 ವಿಶೇಷ ಪ್ರದರ್ಶನಗಳು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಮತ್ತೊಂದು ಆಯಾಮ ಸೇರಿಸುತ್ತದೆ' ಸಬ್ಕಾ ಸಾಥ್, ಸಬ್ಕಾ ವಿಕಾಸ್ —'ಸಬ್ಕಾ ಮನೋರಂಜನ್' ಅಂದರೆ 'ಎಲ್ಲರಿಗೂ ಮನರಂಜನೆ ಆಗಿದೆ'

 “54ನೇ ಐಎಫ್‌ಎಫ್‌ಐ 40 ಗಮನಾರ್ಹ ಮಹಿಳಾ ಚಲನಚಿತ್ರ ನಿರ್ಮಾಪಕರ ಚಲನಚಿತ್ರಗಳನ್ನು ಒಳಗೊಂಡಿದೆ. ಅವರ ಪ್ರತಿಭೆ, ಸೃಜನಶೀಲತೆ ಮತ್ತು ವಿಶಿಷ್ಟ ದೃಷ್ಟಿಕೋನಗಳು ಈ ‘ಕಲ್ಪನೆಗಳ ಮೆಲಾಂಜ್’ ಅನ್ನು ವೈವಿಧ್ಯಮಯ ಧ್ವನಿಗಳು ಮತ್ತು ನಿರೂಪಣೆಗಳ ಆಚರಣೆಯನ್ನಾಗಿ ಮಾಡಲು ಭರವಸೆ ನೀಡುತ್ತವೆ.

ಸಚಿವರು ಸಮಾರಂಭದಲ್ಲಿ 2023ರ ಪ್ರತಿಷ್ಠಿತ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ಘೋಷಿಸಿದರು – ಅಮೆರಿಕದ ಹಾಲಿವುಡ್ ನಟ-ನಿರ್ಮಾಪಕ ಮೈಕೆಲ್ ಡಗ್ಲಾಸ್ ಅವರಿಗೆ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಚಲನಚಿತ್ರ ಮತ್ತು ದೂರದರ್ಶನ ಉದ್ಯಮದಲ್ಲಿ 50 ವರ್ಷಗಳಿಂದ ಮೈಕೆಲ್ ಡೌಗ್ಲಾಸ್ ಅವರು 2 ಆಸ್ಕರ್‌, 5 ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು, ಪ್ರೈಮ್‌ಟೈಮ್ ಎಮ್ಮಿ ಪ್ರಶಸ್ತಿ ಸೇರಿದಂತೆ ಲೆಕ್ಕವಿಲ್ಲದಷ್ಟು ಗೌರವಗಳನ್ನು ಪಡೆದಿದ್ದಾರೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಶ್ರೀ ಎಲ್. ಮುರುಗನ್ ಮತ್ತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ, ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

https://static.pib.gov.in/WriteReadData/userfiles/image/20-6-3MSC8.jpg

ಚಿತ್ರ: 2023ರ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಾಲಿವುಡ್ ನಟ-ನಿರ್ಮಾಪಕ ಮೈಕೆಲ್ ಡಗ್ಲಾಸ್ ಅವರಿಗೆ ಸಮಾರೋಪ ಸಮಾರಂಭದಲ್ಲಿ ನೀಡಲಾಗುತ್ತದೆ

 

ಗೋವಾವನ್ನು ಚಲನಚಿತ್ರ-ಸ್ನೇಹಿ ತಾಣವಾಗಿ ಉತ್ತೇಜಿಸಲು ಐಎಫ್ಎಫ್ಐ ಪ್ರಮುಖ ಪಾತ್ರ ವಹಿಸಲಿದೆ: ಗೋವಾ ಮುಖ್ಯಮಂತ್ರಿ

ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾವನ್ನು ಚಲನಚಿತ್ರ-ಸ್ನೇಹಿ ತಾಣವಾಗಿ ಪ್ರಚಾರ ಮಾಡಲು ಐಎಫ್‌ಎಫ್‌ಐ ಪ್ರಮುಖ ಪಾತ್ರ ವಹಿಸುತ್ತದೆ. "ಇತ್ತೀಚಿನ ವರ್ಷಗಳಲ್ಲಿ, ಗೋವಾದ ಚಲನಚಿತ್ರೋದ್ಯಮವು ಎಲ್ಲೆ ಮೀರಿ ಬೆಳೆದಿದೆ.  ಕೊಂಕಣಿ ಚಲನಚಿತ್ರವು ಐಎಫ್ಎಫ್ಐನಲ್ಲಿ ತನಗಾಗಿ ಒಂದು ಸ್ಥಾನ ಭದ್ರಪಡಿಸಿಕೊಂಡಿದೆ. ಈ ವರ್ಷ ಐಎಫ್‌ಎಫ್‌ಐಗೆ ಗೋವಾ ವಿಭಾಗದಡಿ ಬಂದ 20 ನಮೂದುಗಳ ಪೈಕಿ 7 ಚಲನಚಿತ್ರಗಳನ್ನು ತೀರ್ಪುಗಾರರು ಆಯ್ಕೆ ಮಾಡಿದ್ದಾರೆ. ಚಲನಚಿತ್ರ ತಯಾರಿಕೆ ಉದ್ಯಮದ ವಿಸ್ತರಣೆಗಾಗಿ ರಾಜ್ಯದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲು ಎಂಟರ್‌ಟೈನ್‌ಮೆಂಟ್ ಸೊಸೈಟಿ ಆಫ್ ಗೋವಾ ಆಸಕ್ತಿ ವ್ಯಕ್ತಪಡಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

https://static.pib.gov.in/WriteReadData/userfiles/image/20-6-49KIB.jpg

ಚಿತ್ರ: ಉದ್ಘಾಟನಾ ಸಮಾರಂಭ ಉದ್ದೇಶಿಸಿ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಮಾತನಾಡಿದರು.

 

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ತೀರ್ಪುಗಾರರನ್ನು ಸನ್ಮಾನಿಸಿದರು. ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತರಿದ್ದರು. 

https://static.pib.gov.in/WriteReadData/userfiles/image/20-6-5ZUR1.jpg

ಚಿತ್ರ: ವೇದಿಕೆಯಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರರನ್ನು ಸಚಿವರು ಸನ್ಮಾನಿಸಿದರು.

 

 

ಇನ್ನು 8 ದಿನಗಳ ಕಾಲ ಗೋವಾದಲ್ಲಿ ಏಷ್ಯಾದ ಅತಿ ದೊಡ್ಡ ಚಿತ್ರೋತ್ಸವ ವೈಭವ ರಂಗೇರಲಿದೆ. ನಾಟಕಗಳಿಂದ ಹಿಡಿದು ಚಿಂತನ-ಪ್ರಚೋದಕ ಸಾಕ್ಷ್ಯಚಿತ್ರಗಳು ಮತ್ತು ಪ್ರಯೋಗಾತ್ಮಕ ಚಲನಚಿತ್ರಗಳವರೆಗೆ, ಐಎಫ್ಎಫ್ಐ-2023 ಚಲನಚಿತ್ರೋತ್ಸವ ಸಿನಿಮಾ ಪ್ರಿಯರನ್ನು ಮತ್ತು ಉದ್ಯಮ ವೃತ್ತಿಪರರನ್ನು ಸಮಾನವಾಗಿ ಸೆರೆಹಿಡಿಯಲು ಸಜ್ಜಾಗಿದೆ. ಹೆಸರಾಂತ ಚಲನಚಿತ್ರ ನಿರ್ಮಾಪಕರು, ಪ್ರತಿಭಾವಂತ ನಟರು ಮತ್ತು ಸಿನಿಮಾ ಜಗತ್ತಿನ ದಾರ್ಶನಿಕರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರೆಲ್ಲರೂ ಚರ್ಚೆಗಳು, ಸಹಯೋಗಗಳು ಮತ್ತು ಕಥೆ ಹೇಳುವಿಕೆಯ ಹಂಚಿಕೆಯ ಉತ್ಸಾಹ ತೋರಲಿದ್ದಾರೆ.

https://static.pib.gov.in/WriteReadData/userfiles/image/20-6-69Y6F.jpg

 

ತಾರಾ ಬಳಗದಿಂದ ವೈಭವೋಪೇತವಾಗಿ ವಿಜೃಂಭಿಸುತ್ತಿರುವ ಉದ್ಘಾಟನಾ ಸಮಾರಂಭವು ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಮಾಧುರಿ ದೀಕ್ಷಿತ್ ಮತ್ತು ಶಾಹಿದ್ ಕಪೂರ್ ಅವರ ಅಭಿನಯಕ್ಕೆ ಸಾಕ್ಷಿಯಾಗಿದೆ. ಇತರ ಬಾಲಿವುಡ್ ತಾರೆಯರಾದ ಶ್ರಿಯಾ ಸರನ್, ನುಶ್ರತ್ ಭರುಚಾ, ಪಂಕಜ್ ತ್ರಿಪಾಠಿ, ಶಂತನು ಮೊಯಿತ್ರಾ, ಶ್ರೇಯಾ ಘೋಷಾಲ್ ಮತ್ತು ಸುಖ್ವಿಂದರ್ ಸಿಂಗ್ ಅವರು ಸಹ ಪ್ರದರ್ಶನ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಸಿನಿ ಪ್ರೇಕ್ಷಕರನ್ನು ರಂಜಿಸಿದರು.

 

https://static.pib.gov.in/WriteReadData/userfiles/image/20-6-7U8QC.jpg

 

ವೈವಿಧ್ಯತೆ ಮತ್ತು ಸೃಜನಶೀಲತೆ ಅಳವಡಿಸಿಕೊಂಡು, ಭಾರತದ 54ನೇ ಆವೃತ್ತಿಯ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಅದ್ಭುತವಾದ ಚಲನಚಿತ್ರಗಳ ಸರಣಿಯೊಂದಿಗೆ ಅದ್ಭುತ ಮತ್ತು ತಲ್ಲೀನಗೊಳಿಸುವ ಸಿನಿಮೀಯ ಅನುಭವ ನೀಡುತ್ತದೆ. ವಿಶ್ವಾದ್ಯಂತದ ಸಂಸ್ಕೃತಿಗಳು, ದೃಷ್ಟಿಕೋನಗಳು ಮತ್ತು ನಿರೂಪಣೆಗಳ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿದೆ.

 

* * *

 

iffi reel

(Release ID: 1978532) Visitor Counter : 97