ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಎಫ್ಎಫ್ಐನಲ್ಲಿ ನಾಳೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು 'ನಾಳಿನ 75 ಸೃಜನಶೀಲ ಮನಸ್ಸುಗಳು' 3ನೇ ಆವೃತ್ತಿಯ ಭಾಗವಾಗಿ 48 ತಾಸುಗಳ 'ಫಿಲ್ಮ್ ಚಾಲೆಂಜ್' ಆರಂಭಿಸಲಿದ್ದಾರೆ
ನಾಳಿನ ಸೃಜನಶೀಲ ಮನಸ್ಸುಗಳು: ನಾಳಿನ ಪ್ರಮುಖ ಚಲನಚಿತ್ರ ನಿರ್ಮಾಪಕರು ಮತ್ತು ಕಲಾವಿದರಾಗಿ ತಮ್ಮನ್ನು ತಾವು ಮಾರ್ಪಡಿಸಿಕೊಳ್ಳಲು ಯುವ ಕಲಾವಿದರಿಗೆ ಸೂಕ್ತ ವೇದಿಕೆಯಾಗಲಿದೆ
ಗೋವಾ, 20 ನವೆಂಬರ್ 2023
ಭಾರತದಾದ್ಯಂತದ 75 ಯುವ ಸೃಜನಶೀಲ ಪ್ರತಿಭೆಗಳು ಐಎಫ್ಎಫ್ಐ 54ರಲ್ಲಿ 48 ತಾಸುಗಳಲ್ಲಿ 'ಫಿಲ್ಮ್ ಚಾಲೆಂಜ್' ಅನ್ನು ಕಿರುಚಿತ್ರ ಮಾಡಲು ಸಿದ್ಧರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಗೋವಾದಲ್ಲಿ ನಾಳೆ (ನವೆಂಬರ್ 21, 2023) 'ನಾಳಿನ 75 ಕ್ರಿಯೇಟಿವ್ ಮೈಂಡ್ಸ್ ಸವಾಲು' ಅನ್ನು ಪ್ರಾರಂಭಿಸಲಿದ್ದಾರೆ. 54ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ (ಐಎಫ್ಎಫ್ಐ) ನೇಪಥ್ಯದಲ್ಲಿ ಆಯೋಜಿಸಲಾಗಿರುವ ಸ್ಪರ್ಧೆಯ 3ನೇ ಆವೃತ್ತಿಯು ಯುವ ಸೃಜನಶೀಲ ಪ್ರತಿಭೆಗಳ ನಾವೀನ್ಯತೆ ಮತ್ತು ಕಥೆ ಹೇಳುವ ಸಾಮರ್ಥ್ಯದ ಕ್ರಿಯಾತ್ಮಕ ಆಚರಣೆಗೆ ಸಾಕ್ಷಿಯಾಗಿದೆ.
ಈ ವಿಶಿಷ್ಟ ಉಪಕ್ರಮವು ಆಯ್ದ 75 ಪ್ರತಿನಿಧಿಗಳಿಗೆ ಕೇಂದ್ರ ಸಚಿವ ಶ್ರೀ ಠಾಕೂರ್ ಅವರೊಂದಿಗೆ ಸಂವಾದ ನಡೆಸುವ ಅವಕಾಶ ಒದಗಿಸುತ್ತದೆ. ಅವರು ಐಎಫ್ಎಫ್ಐ ನಲ್ಲಿರುವ ಜಾಗತಿಕ ಚಲನಚಿತ್ರ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸುತ್ತಾರೆ, ಜತೆಗೆ ಫಿಲ್ಮ್ ಬಜಾರ್‌ನಲ್ಲಿ ಸಿನಿಮಾ ಉದ್ಯಮ ವ್ಯವಹಾರ ವೀಕ್ಷಿಸುವ ಅವಕಾಶ ಹೊಂದಿರುತ್ತಾರೆ. "ನಾಳೆಯ ಸೃಜನಶೀಲ ಮನಸ್ಸು" ಉಪಕ್ರಮವು ಕಲಿಯುವವರಿಗೆ ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಮತ್ತು ನಾಳಿನ ಪ್ರಮುಖ ಚಲನಚಿತ್ರ ನಿರ್ಮಾಪಕರು ಮತ್ತು ಕಲಾವಿದರಾಗಲು ಯುವ ಸಮುದಾಯಕ್ಕೆ ವೇದಿಕೆ ಒದಗಿಸುತ್ತದೆ.
600ಕ್ಕೂ ಹೆಚ್ಚು ಅರ್ಜಿಗಳಿಂದ ಆಯ್ಕೆಯಾದ ಈ 75 ಯುವ ಚಲನಚಿತ್ರ ನಿರ್ಮಾಪಕರು ಮತ್ತು ಕಲಾವಿದರು ವಿವಿಧ ಹಿನ್ನೆಲೆಗಳಿಂದ ಮತ್ತು ಬಿಷ್ಣುಪುರ (ಮಣಿಪುರ), ಜಗತ್‌ಸಿಂಗ್‌ಪುರ (ಒಡಿಶಾ), ಮತ್ತು ಸದರ್‌ಪುರ (ಮಧ್ಯಪ್ರದೇಶ) ಸೇರಿದಂತೆ ದೇಶದ ವಿವಿಧ ಸ್ಥಳಗಳಿಂದ ಬಂದವರಾಗಿದ್ದಾರೆ. ಈ ಪ್ರತಿನಿಧಿಗಳು ಭಾರತದ 19 ವಿವಿಧ ರಾಜ್ಯಗಳಾದ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ಪಂಜಾಬ್, ರಾಜಸ್ಥಾನ , ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರಾಗಿದ್ದಾರೆ. ಗಣ್ಯ ವ್ಯಕ್ತಿಗಳನ್ನು ಒಳಗೊಂಡಿರುವ ಆಯ್ದ ತೀರ್ಪುಗಾರರು ಮತ್ತು ಉನ್ನತ ತೀರ್ಪುಗಾರರ ಸಮಿತಿಯಿಂದ ಅವರನ್ನು ಆಯ್ಕೆ ಮಾಡಲಾಗಿದೆ.
ಎಲ್ಲಾ ಪ್ರತಿನಿಧಿಗಳು ಅಥವಾ ಸ್ಪರ್ಧಿಗಳು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಅತ್ಯಂತ ಕಿರಿಯ ಪ್ರತಿನಿಧಿಗಳು ಸಂಗೀತ ಸಂಯೋಜನೆ/ಧ್ವನಿ ವಿನ್ಯಾಸ ವಿಭಾಗದಲ್ಲಿ ಮಹಾರಾಷ್ಟ್ರದ ಮುಂಬೈನಿಂದ 18 ವರ್ಷ ವಯಸ್ಸಿನ ಶಾಶ್ವತ್ ಶುಕ್ಲಾ ಆಯ್ಕೆಯಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ಪ್ರೊಡಕ್ಷನ್ ಹೌಸ್‌ಗಳು, ಎವಿಜಿಸಿ ಕಂಪನಿಗಳು ಮತ್ತು ಸ್ಟುಡಿಯೊಗಳು ಸೇರಿದಂತೆ ಭಾರತದ ಮಾಧ್ಯಮ ಮತ್ತು ಮನರಂಜನಾ ವಲಯದ ಪ್ರಮುಖ ಕಂಪನಿಗಳ ಪ್ರತಿನಿಧಿಗಳೊಂದಿಗೆ ಭಾಗವಹಿಸಲು ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲು ಸೆಂಒಟಿ CMOT ಟ್ಯಾಲೆಂಟ್ ಕ್ಯಾಂಪ್ ಅನ್ನು ಈ ವರ್ಷ ಆಯೋಜಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ, ಪ್ರತಿನಿಧಿಗಳ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ. ಅವರು ತಮ್ಮ ಹಿಂದಿನ ಕೆಲಸವನ್ನು ಉದ್ಯಮದ ಪ್ರಮುಖ ಸಾಧಕರಿಗೆ ಪ್ರಸ್ತುತಪಡಿಸುತ್ತಾರೆ.
ಉನ್ನತ ಮಟ್ಟದ ತೀರ್ಪುಗಾರರ ಪಟ್ಟಿ:
ಶ್ರೇಯಾ ಘೋಷಾಲ್ (ಹಿನ್ನೆಲೆ ಗಾಯನ)
ಶ್ರೀಕರ್ ಪ್ರಸಾದ್ (ಸಂಪಾದನೆ)
ಮನೋಜ್ ಜೋಶಿ (ನಟನೆ)
ವೀರ ಕಪೂರ್ (ವೇಷಭೂಷಣ ಮತ್ತು ಮೇಕಪ್)
ಪ್ರಿಯಾ ಸೇಠ್ (ಛಾಯಾಗ್ರಹಣ)
ಸರಸ್ವತಿ ವಾಣಿ ಬಲ್ಗಮ್ (ಅನಿಮೇಷನ್, ವಿಎಫ್ಎಕ್ಸ್, ಎಆರ್-ವಿಆರ್)
ಸಲೀಲ್ ಕುಲಕರ್ಣಿ (ಸಂಗೀತ ಸಂಯೋಜನೆ)
ಉಮೇಶ್ ಶುಕ್ಲಾ (ನಿರ್ದೇಶನ)
ಸಾಬು ಸಿರಿಲ್ (ಕಲಾ ನಿರ್ದೇಶನ)
ಅಸೀಮ್ ಅರೋರಾ (ಸ್ಕ್ರಿಪ್ಟ್ ರೈಟಿಂಗ್)
ಆಯ್ಕೆ ತೀರ್ಪುಗಾರರ ಪಟ್ಟಿ:
ಮನೋಜ್ ಸಿಂಗ್ ಟೈಗರ್ (ನಟನೆ)
ನಿಧಿ ಹೆಗ್ಡೆ (ನಟನೆ)
ಅಭಿಷೇಕ್ ಜೈನ್ (ನಿರ್ದೇಶನ)
ಮನೀಶ್ ಶರ್ಮಾ (ನಿರ್ದೇಶನ)
ಚಾರುದತ್ತ್ ಆಚಾರ್ಯ (ಸ್ಕ್ರಿಪ್ಟ್ ರೈಟಿಂಗ್)
ದೀಪಕ್ ಕಿಂಗ್ರಾನಿ (ಸ್ಕ್ರಿಪ್ಟ್ ರೈಟಿಂಗ್)
ಚಾರುವಿ ಅಗರವಾಲ್ (ಅನಿಮೇಷನ್, ವಿಎಫ್ಎಕ್ಸ್, ಎಆರ್-ವಿಆರ್)
ದೀಪಕ್ ಸಿಂಗ್ (ಅನಿಮೇಷನ್, ವಿಎಫ್ಎಕ್ಸ್, ಎಆರ್-ವಿಆರ್)
ನವೀನ್ ನೂಲಿ (ಸಂಪಾದನೆ)
ಸುರೇಶ್ ಪೈ (ಸಂಪಾದನೆ)
ಧರಮ್ ಗುಲಾಟಿ (ಛಾಯಾಗ್ರಹಣ)
ಸುಭ್ರಾಂಶು ದಾಸ್ (ಛಾಯಾಗ್ರಹಣ)
ನಚಿಕೇತ್ ಬರ್ವೆ (ವೇಷಭೂಷಣ ಮತ್ತು ಮೇಕಪ್)
ಬಿಶಾಖ್ ಜ್ಯೋತಿ (ಹಿನ್ನೆಲೆ ಗಾಯನ)
ಅನ್ಮೋಲ್ ಭಾವೆ (ಸಂಗೀತ ಸಂಯೋಜನೆ)
ಸಬ್ಯಸಾಚಿ ಬೋಸ್ (ಕಲಾ ನಿರ್ದೇಶನ)
10 ವಿಭಾಗಗಳಲ್ಲಿ 75 ಯುವ ಕಲಾವಿದರ ಪಟ್ಟಿಯನ್ನು ಐಎಫ್ಎಫ್ಐ ವೆಬ್‌ಸೈಟ್‌ನಲ್ಲಿ ನೋಡಬಹುದು.
https://iffigoa.org/selected-75-creative-minds-2023/en#
* * *
(Release ID: 1978529)
Visitor Counter : 73