ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐ.ಎಫ್.ಎಫ್.ಐ)ದಲ್ಲಿ ಶ್ರೀಮತಿ ಮಾಧುರಿ ದೀಕ್ಷಿತ್ ಅವರಿಗೆ 'ಭಾರತೀಯ ಸಿನಿಮಾಗೆ ನೀಡಿದ ಕೊಡುಗೆಗಾಗಿ ವಿಶೇಷ ಮನ್ನಣೆ' ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

ಗೋವಾ, ನವೆಂಬರ್ 20, 2023

 

ಪ್ರಸಿದ್ಧ ನಟಿ ಶ್ರೀಮತಿ ಮಾಧುರಿ ದೀಕ್ಷಿತ್ ಅವರಿಗೆ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಭಾರತೀಯ ಚಲನಚಿತ್ರಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಮನ್ನಣೆ' ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗಮನಾರ್ಹ ನಾಲ್ಕು ದಶಕಗಳ ಕಾಲ ಚಲನಚಿತ್ರರಂಗದಲ್ಲಿ ಸುಪ್ರಸಿದ್ಧ ವೃತ್ತಿಜೀವನದೊಂದಿಗೆ, ಶ್ರೀಮತಿ ಮಾಧುರಿ ದೀಕ್ಷಿತ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅಳಿಸಲಾಗದ ಅವರದೇ ಆದ ವಿಶೇಷ ಛಾಪು ಮೂಡಿಸಿದ್ದಾರೆ. 


ಗೋವಾದ ಪಣಜಿಯಲ್ಲಿ ಇಂದು ನಡೆದ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವ ಡಾ. ಎಲ್. ಮುರುಗನ್ ಮತ್ತು ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಅವರ ಜೊತೆ ಜಂಟಿಯಾಗಿ ಈ ಪ್ರಶಸ್ತಿಯನ್ನು ಘೋಷಿಸಿದರು. 


"ಹಲವು ದಶಕಗಳಿಂದಲೂ ಮಾದರಿ ರೂಪದಲ್ಲಿ ಪ್ರಸಿದ್ದಾರಿರುವ ಶ್ರೀಮತಿ ಮಾಧುರಿ ದೀಕ್ಷಿತ್ ಅವರು ನಾಲ್ಕು ದಶಕಗಳಿಂದ ಅವರು ತಮ್ಮ ಅಪ್ರತಿಮ ಪ್ರತಿಭೆಯೊಂದಿಗೆ ನಮ್ಮ ಭಾರತೀಯ ಚಲನಚಿತ್ರ ಪರದೆಯನ್ನು ಅಲಂಕರಿಸಿದ್ದಾರೆ" ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ತಮ್ಮ  ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. 

   

ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬುವ ಅವರ ಕಲಾ ನೈಪುಣ್ಯತೆ ಹಾಗೂ ಸಾಮರ್ಥ್ಯವು ತಲೆಮಾರುಗಳಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದೆ. ಶ್ರೀಮತಿ ಮಾಧುರಿ ದೀಕ್ಷಿತ್ ಅವರ ಅಸಾಧಾರಣ ವೃತ್ತಿಪರ ಸಾಧನೆಗಳು ಮತ್ತು ಭಾರತೀಯ ಚಿತ್ರರಂಗದ ಮೇಲೆ ಅವರ ನಿರಂತರ ಪ್ರಭಾವಕ್ಕೆ ಗೌರವ ಮನ್ನಣೆಯಾಗಿ 'ಭಾರತೀಯ ಚಿತ್ರರಂಗದ ನೀಡಿದ ಕೊಡುಗೆಗಾಗಿ ವಿಶೇಷ ಮನ್ನಣೆ' ಎಂಬ ಈ ವಿಶೇಷ ಪ್ರಶಸ್ತಿಯು ಸಾಕ್ಷಿಯಾಗಿದೆ. 

 

1980 ರ ದಶಕ, 90 ರ ದಶಕ ಮತ್ತು 2000 ರ ದಶಕದ ಆರಂಭದಲ್ಲಿ ಹಿಂದಿ ಚಲನಚಿತ್ರಗಳಲ್ಲಿ ಪ್ರಮುಖ ನಟಿ, ಶ್ರೀಮತಿ ಮಾಧುರಿ ದೀಕ್ಷಿತ್ ಆರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ಹದಿನಾಲ್ಕು ಬಾರಿ ನಾಮನಿರ್ದೇಶನಗೊಂಡಿದ್ದರು. ಶ್ರೀಮತಿ ಮಾಧುರಿ ದೀಕ್ಷಿತ್ ಅವರು 'ಅಬೋಧ್ (1984) ಎಂಬ ಚಲನಚಿತ್ರದಲ್ಲಿ ಅಭಿನಯ ಮೂಲಕ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ತೇಜಾಬ್ (1988) ಚಲನಚಿತ್ರ ಮೂಲಕ ವ್ಯಾಪಕ ಸಾರ್ವಜನಿಕ ಮನ್ನಣೆ ಹಾಗೂ ಪ್ರಸಿದ್ಧಿಯನ್ನು ಪಡೆದರು. 2014 ರಲ್ಲಿ ಅವರು ಭಾರತದ ಯುನಿಸೆಫ್ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡರು. 

***

iffi reel

(Release ID: 1978367) Visitor Counter : 178