ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 5

ಐ ಎಫ್‌ ಎಫ್‌ ಐ - ಪ್ರಪಂಚದ ಮತ್ತು ಭಾರತದ ಅತ್ಯುತ್ತಮ ಚಲನಚಿತ್ರಗಳ ವಾರ್ಷಿಕ ಸಿನಿಮಾ ಸಂಭ್ರಮ ನವೆಂಬರ್ 20 ರಂದು ಆರಂಭವಾಗುತ್ತದೆ


ಐ ಎಫ್‌ ಎಫ್‌ ಐ 54 ರಲ್ಲಿ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲು ಹಾಲಿವುಡ್ ನಟ ಮತ್ತು ನಿರ್ಮಾಪಕ ಮೈಕೆಲ್ ಡಗ್ಲಾಸ್ ಬರಲಿದ್ದಾರೆ

ಉತ್ಸವದ 4 ಸ್ಥಳಗಳಲ್ಲಿ 270 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು

ಐ ಎಫ್‌ ಎಫ್‌ ಐ 54- 105 ದೇಶಗಳಿಂದ 2926 ಪ್ರವೇಶಗಳನ್ನು ಪಡೆದಿದೆ; ಇದು ಕಳೆದ ವರ್ಷಕ್ಕಿಂತ 3 ಪಟ್ಟು ಹೆಚ್ಚು ಅಂತಾರಾಷ್ಟ್ರೀಯ ಸಲ್ಲಿಕೆಗಳಾಗಿದೆ

ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಗಾಗಿ 15 ಒಟಿಟಿ ಪ್ಲಾಟ್‌ ಫಾರ್ಮ್‌ ಗಳಿಂದ 10 ಭಾಷೆಗಳಲ್ಲಿ 32 ಪ್ರವೇಶಗಳನ್ನು ಸ್ವೀಕರಿಸಲಾಗಿದೆ

ಪ್ರಪಂಚದಾದ್ಯಂತದ ಸಾಕ್ಷ್ಯಚಿತ್ರಗಳನ್ನು ಒಳಗೊಂಡಿರುವ ಡಾಕ್ಯುಮೆಂಟ್-ಮಾಂಟೇಜ್ ವಿಭಾಗದ ಪ್ರದರ್ಶನ ಈ ವರ್ಷ ಐ ಎಫ್‌ ಎಫ್‌ ಐ ನಲ್ಲಿರುತ್ತದೆ

54 ನೇ ಐ ಎಫ್‌ ಎಫ್‌ ಐ ನಲ್ಲಿ ಪರಿಚಯಿಸಲಾದ ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್ ಅಡಿಯಲ್ಲಿ ಎನ್‌ ಎಫ್‌ ಡಿ ಸಿ-NFAI ಮೂಲಕ ವಿಶ್ವ ದರ್ಜೆಯ ಮರುಸ್ಥಾಪನೆಗಳ 7 ವಿಶ್ವ ಪ್ರಥಮ ಪ್ರದರ್ಶನಗಳನ್ನು ಒಳಗೊಂಡಿರುವ ಮರುಸ್ಥಾಪಿತ ಕ್ಲಾಸಿಕ್ಸ್ ವಿಭಾಗ

​"ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್‌ ಎಫ್‌ ಐ) ವಿಶ್ವದ 14 ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ 'ಅಂತಾರಾಷ್ಟ್ರೀಯ ಸ್ಪರ್ಧೆಯ ಫೀಚರ್‌ ಚಲನಚಿತ್ರೋತ್ಸವಗಳಲ್ಲಿ' ಒಂದಾಗಿದೆ, ಇದು ಜಾಗತಿಕವಾಗಿ ಚಲನಚಿತ್ರೋತ್ಸವಗಳನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಸಂಸ್ಥೆಯಾದ ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಒಕ್ಕೂಟದ (FIAPF) ಮಾನ್ಯತೆ ಪಡೆದಿದೆ. ಕಾನ್‌, ಬರ್ಲಿನ್ ಮತ್ತು ವೆನಿಸ್‌ ನಂತಹ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು FIAPF ನಿಂದ ಮಾನ್ಯತೆ ಪಡೆದ ಇತರ ಪ್ರತಿಷ್ಠಿತ ಉತ್ಸವಗಳಾಗಿವೆ. ವಾರ್ಷಿಕ ಸಿನಿಮೀಯ ಸಂಭ್ರಮವು ಪ್ರಪಂಚದ ಮತ್ತು ಭಾರತದ ಅತ್ಯುತ್ತಮ ಚಲನಚಿತ್ರಗಳಿಗೆ ನೆಲೆಯಾಗಿದೆ, ಭಾರತದ ಚಲನಚಿತ್ರೋದ್ಯಮದ ದಿಗ್ಗಜರು ಮತ್ತು ಪ್ರಪಂಚದಾದ್ಯಂತದ ಪ್ರತಿನಿಧಿಗಳು, ಅತಿಥಿಗಳು ಮತ್ತು ಭಾಷಣಕಾರರು ಇದನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರ ವಿಭಾಗದ ಕಾರ್ಯದರ್ಶಿ ಹಾಗೂ ಎನ್‌ ಎಫ್‌ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪೃಥುಲ್ ಕುಮಾರ್ ಹೇಳಿದ್ದಾರೆ. ಅವರು ಇಂದು ಪಣಜಿಯಲ್ಲಿ ನಡೆದ 54ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕರ್ಟನ್ ರೈಸರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಇ ಎಸ್‌ ಜಿ ಉಪಾಧ್ಯಕ್ಷೆ ಶ್ರೀಮತಿ ದೇಲಿಲಾ ಎಂ ಲೋಬೊ, ಇ ಎಸ್‌ ಜಿ ಸಿಇಒ ಅಂಕಿತಾ ಮಿಶ್ರಾ, ಪಶ್ಚಿಮ ವಲಯದ ಪಿಐಬಿ ಮಹಾನಿರ್ದೇಶಕರಾದ ಮೊನಿದೀಪ ಮುಖರ್ಜಿ ಮತ್ತು ಪಿಐಬಿ ಮಹಾನಿರ್ದೇಶಕರಾದ ಡಾ.ಪ್ರಜ್ಞಾ ಪಲಿವಾಲ್ ಗೌರ್ ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/GoaNTOQ.JPG

ಈ ವರ್ಷದ ಚಲನಚಿತ್ರೋತ್ಸವದ ಬಗ್ಗೆ ವಿವರಿಸಿದ ಶ್ರೀ ಪೃಥುಲ್ ಕುಮಾರ್ ಅವರು, “ಐ ಎಫ್‌ ಎಫ್‌ ಐ ನ ಪ್ರಮುಖ ಅಂಶಗಳಲ್ಲಿ ಒಂದಾದ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ (ಎಸ್‌ ಆರ್‌ ಎಲ್‌ ಟಿ ಎ) ಯನ್ನು ವಿಶ್ವ ಸಿನಿಮಾದಲ್ಲಿನ ಶ್ರೇಷ್ಠತೆಗಾಗಿ ನೀಡಲಾಗುತ್ತದೆ. ಹಾಲಿವುಡ್ ನಟ ಮತ್ತು ನಿರ್ಮಾಪಕ ಮೈಕೆಲ್ ಡಗ್ಲಾಸ್ ಪ್ರಸ್ತುತ ವಿಶ್ವ ಚಿತ್ರರಂಗದ ಶ್ರೇಷ್ಠ ಅಂತಾರಾಷ್ಟ್ರೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ಅವರ ಪತ್ನಿ ಮತ್ತು ನಟಿ ಕ್ಯಾಥರೀನ್ ಝೀಟಾ-ಜೋನ್ಸ್ ಅವರೊಂದಿಗೆ ಐ ಎಫ್‌ ಎಫ್‌ ಐ ನಲ್ಲಿ ಇರುತ್ತಾರೆ.

INOX Panjim, Maquinez Palace, INOX Porvorim, Z Square Samrat Ashok – ಈ 4 ಸ್ಥಳಗಳಲ್ಲಿ ಉತ್ಸವದ ಸಮಯದಲ್ಲಿ 270 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. 54 ನೇ ಐ ಎಫ್‌ ಎಫ್‌ ಐ ನ 'ಅಂತಾರಾಷ್ಟ್ರೀಯ ವಿಭಾಗ' 198 ಚಲನಚಿತ್ರಗಳನ್ನು ಹೊಂದಿರುತ್ತದೆ, ಇದು 53 ನೇ ಐ ಎಫ್‌ ಎಫ್‌ ಐ ಗಿಂತ 18 ಹೆಚ್ಚು. ಇದು 13 ವಿಶ್ವ ಪ್ರೀಮಿಯರ್‌ ಗಳು, 18 ಅಂತಾರಾಷ್ಟ್ರೀಯ ಪ್ರೀಮಿಯರ್‌ ಗಳು, 62 ಏಷ್ಯಾ ಪ್ರೀಮಿಯರ್‌ ಗಳು ಮತ್ತು 89 ಇಂಡಿಯಾ ಪ್ರೀಮಿಯರ್‌ ಗಳನ್ನು ಹೊಂದಿರುತ್ತದೆ. ಈ ವರ್ಷ ಐ ಎಫ್‌ ಎಫ್‌ ಐ 105 ದೇಶಗಳಿಂದ ದಾಖಲೆಯ 2926 ಪ್ರವೇಶಗಳನ್ನು ಸ್ವೀಕರಿಸಿದೆ, ಇದು ಕಳೆದ ವರ್ಷಕ್ಕಿಂತ 3 ಪಟ್ಟು ಹೆಚ್ಚು ಅಂತಾರಾಷ್ಟ್ರೀಯ ಸಲ್ಲಿಕೆಯಾಗಿದೆ. ‘ಇಂಡಿಯನ್ ಪನೋರಮಾ’ವಿಭಾಗವು ಭಾರತದಿಂದ 25 ಚಲನಚಿತ್ರಗಳು ಮತ್ತು 20 ನಾನ್‌ ಫೀಚರ್ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಫೀಚರ್ ವಿಭಾಗದಲ್ಲಿ ಮಲಯಾಳಂ ಚಲನಚಿತ್ರ “ಆಟ್ಟಂ”ಮತ್ತು ನಾನ್‌ ಫೀಚರ್ ವಿಭಾಗದಲ್ಲಿ ಮಣಿಪುರದ “ಆಂಡ್ರೋ ಡ್ರೀಮ್ಸ್”ಚಲನಚಿತ್ರಗಳು ಆರಂಭಿಕ ಚಿತ್ರಗಳಾಗಿರುತ್ತವೆ.

ಐ ಎಫ್ ಎಫ್ ಐ ನ ಈ 54 ನೇ ಆವೃತ್ತಿಯ ಪ್ರಮುಖ ಉಪಕ್ರಮಗಳ ಕುರಿತು ಮಾತನಾಡಿದ ಶ್ರೀ ಪೃಥುಲ್ ಕುಮಾರ್, ಈ ವರ್ಷ ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಯನ್ನು ಪರಿಚಯಿಸಲಾಗಿದೆ ಎಂದು ಹೇಳಿದರು. ಇದು ಒಟಿಟಿ ಪ್ಲಾಟ್‌ ಫಾರ್ಮ್‌ ಗಳ ಪ್ರವರ್ಧಮಾನಕ್ಕೆ ಬರುತ್ತಿರುವ ಕಂಟೆಂಟ್ ಮತ್ತು ಅದರ ರಚನೆಕಾರರನ್ನು ಪ್ರೋತ್ಸಾಹಿಸುವ ಮತ್ತು ಗೌರವಿಸುವ ಗುರಿಯನ್ನು ಹೊಂದಿದೆ. 15 ಒಟಿಟಿ ಪ್ಲಾಟ್‌ ಫಾರ್ಮ್‌ ಗಳಿಂದ 10 ಭಾಷೆಗಳಲ್ಲಿ 32 ಪ್ರವೇಶಗಳನ್ನು ಸ್ವೀಕರಿಸಲಾಗಿದೆ. ವಿಜೇತ ಸರಣಿಗೆ ಪ್ರಶಸ್ತಿ ಮೊತ್ತವಾಗಿ ಪ್ರಮಾಣಪತ್ರಗಳು ಮತ್ತು 10 ಲಕ್ಷ ನಗದು ಬಹುಮಾನವನ್ನು ನೀಡಲಾಗುವುದು, ಪ್ರಶಸ್ತಿಗಳನ್ನು ಸಮಾರೋಪ ಸಮಾರಂಭದಲ್ಲಿ ಪ್ರಕಟಿಸಲಾಗುವುದು.

ಈ ಕ್ಷೇತ್ರದಲ್ಲಿ ಭಾರತದ ಆಸ್ಕರ್ ಪ್ರವೇಶವನ್ನು ಗುರುತಿಸಲು ಮತ್ತು ಚಲನಚಿತ್ರ ತಯಾರಿಕೆಯಲ್ಲಿ ಸಾಕ್ಷ್ಯಚಿತ್ರಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ಪ್ರಪಂಚದಾದ್ಯಂತದ ಬಲವಾದ ಸಾಕ್ಷ್ಯಚಿತ್ರಗಳನ್ನು ಒಳಗೊಂಡಿರುವ ಡಾಕ್ಯು-ಮಾಂಟೇಜ್ ವಿಭಾಗವನ್ನು ಈ ವರ್ಷ ಪರಿಚಯಿಸಲಾಗಿದೆ.

ಇದರ ಹೊರತಾಗಿ, ಭಾರತೀಯ ಕ್ಲಾಸಿಕ್ಸ್‌ ನ ಹಾನಿಗೊಳಗಾದ ಸೆಲ್ಯುಲಾಯ್ಡ್ ರೀಲ್‌ ಗಳಿಂದ ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್ (NFHM) ಅಡಿಯಲ್ಲಿ ಎನ್‌ ಎಫ್‌ ಡಿ ಸಿ-NFAI ಮಾಡಿದ ವಿಶ್ವ ದರ್ಜೆಯ ಮರುಸ್ಥಾಪನೆಗಳ 7 ವಿಶ್ವ ಪ್ರೀಮಿಯರ್‌ ಗಳನ್ನು ಒಳಗೊಂಡಿರುವ ಮರುಸ್ಥಾಪಿತ ಕ್ಲಾಸಿಕ್ಸ್ ವಿಭಾಗವನ್ನು ಸಹ ಪರಿಚಯಿಸಲಾಗಿದೆ. ಇದಲ್ಲದೆ, ಈ ವಿಭಾಗದಲ್ಲಿ 3 ಅಂತಾರಾಷ್ಟ್ರೀಯ ಮರುಸ್ಥಾಪಿತ ಚಲನಚಿತ್ರಗಳನ್ನು ಸಹ ಪ್ರದರ್ಶಿಸಲಾಗುತ್ತದೆ.

ಪ್ರಖ್ಯಾತ ಚಲನಚಿತ್ರ ನಿರ್ಮಾಪಕರು, ಛಾಯಾಗ್ರಾಹಕರು ಮತ್ತು ನಟರೊಂದಿಗೆ 20 ಕ್ಕೂ ಹೆಚ್ಚು 'ಮಾಸ್ಟರ್‌ ಕ್ಲಾಸ್‌ಗಳು' ಮತ್ತು 'ಸಂವಾದ' ಅಧಿವೇಶಗಳೊಂದಿಗೆ, ಐ ಎಫ್ ಎಫ್ ಐ ಈ ವರ್ಷ ಒಂದು ರೋಮಾಂಚಕಾರಿ ವಾರದ ಭರವಸೆ ನೀಡುತ್ತದೆ. ಅಧಿವೇಶನಗಳು ಗೋವಾದ ಪಣಜಿಯ ಫೆಸ್ಟಿವಲ್ ಮೈಲ್‌ ನಲ್ಲಿರುವ ನವೀಕರಿಸಿದ ಕಲಾ ಅಕಾಡೆಮಿಯಲ್ಲಿ ನಡೆಯಲಿದೆ. ಮೈಕೆಲ್ ಡಗ್ಲಾಸ್, ಬ್ರೆಂಡನ್ ಗಾಲ್ವಿನ್, ಬ್ರಿಲಾಂಟೆ ಮೆಂಡೋಜಾ, ಸನ್ನಿ ಡಿಯೋಲ್, ರಾಣಿ ಮುಖರ್ಜಿ, ವಿದ್ಯಾ ಬಾಲನ್, ಜಾನ್ ಗೋಲ್ಡ್ ವಾಟರ್, ವಿಜಯ್ ಸೇತುಪತಿ, ಸಾರಾ ಅಲಿ ಖಾನ್, ಪಂಕಜ್ ತ್ರಿಪಾಠಿ, ನವಾಜುದ್ದೀನ್ ಸಿದ್ಧಿಕಿ, ಕೇಕೇ ಮೆನನ್, ಕರಣ್ ಜೋಹರ್, ಮಧುರ್ ಭಂಡಾರ್ಕರ್, ಮನೋಜ್ ಬಾಜ್‌ಪೇಯಿ, ಕಾರ್ತಿಕಿ, ಗೋನ್ಸಾಲ್ವಿಸ್‌, ಬೋನಿ ಕಪೂರ್, ಅಲ್ಲು ಅರವಿಂದ್, ಥಿಯೋಡರ್ ಗ್ಲಕ್, ಗುಲ್ಶನ್ ಗ್ರೋವರ್ ಮತ್ತಿತರರು ಈ ವರ್ಷ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ.

ಕಳೆದ ವರ್ಷ ಪ್ರಾರಂಭವಾದ ಗಾಲಾ ಪ್ರೀಮಿಯರ್ ಉಪಕ್ರಮವನ್ನು ಈ ವರ್ಷ 12 ಗಾಲಾ ಪ್ರೀಮಿಯರ್‌ ಗಳು ಮತ್ತು 2 ವಿಶೇಷ ವೆಬ್ ಸರಣಿ ಪ್ರೀಮಿಯರ್‌ ಗಳೊಂದಿಗೆ ವಿಸ್ತರಿಸಲಾಗುತ್ತಿದೆ. ಐ ಎಫ್‌ ಎಫ್‌ ಐ ನಲ್ಲಿನ ಪ್ರೀಮಿಯರ್‌ ಚಲನಚಿತ್ರಗಳ ನಟರು ಮತ್ತು ಪ್ರತಿಭೆಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಐ ಎಫ್‌ ಎಫ್‌ ಐ ರೆಡ್ ಕಾರ್ಪೆಟ್‌ ನಲ್ಲಿ ನಡೆಯುತ್ತಾರೆ.

ಎನ್‌ ಎಫ್‌ ಡಿ ಸಿ ಫಿಲ್ಮ್ ಬಜಾರ್‌ನ 217 ನೇ ಆವೃತ್ತಿಯು ವಿ ಎಫ್‌ ಎಕ್ಸ್‌ ಮತ್ತು ಟೆಕ್ ಪೆವಿಲಿಯನ್, ಸಾಕ್ಷ್ಯಚಿತ್ರ ಮತ್ತು ನಾನ್‌ ಫೀಚರ್‌ ಯೋಜನೆಗಳು/ಚಲನಚಿತ್ರಗಳ ಪರಿಚಯ, "ಜ್ಞಾನ ಸರಣಿ" ಮತ್ತು 'ಬುಕ್ ಟು ಬಾಕ್ಸ್ ಆಫೀಸ್' ಜೊತೆಗೆ ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಒಟ್ಟಾರೆಯಾಗಿ, ನಿರ್ಮಾಣ, ವಿತರಣೆ ಅಥವಾ ಮಾರಾಟಕ್ಕಾಗಿ ಫಿಲ್ಮ್ ಬಜಾರ್‌ ನ 17 ನೇ ಆವೃತ್ತಿಯಲ್ಲಿ ಈ ವರ್ಷ 300 ಕ್ಕೂ ಹೆಚ್ಚು ಅಂತಾರರಾಷ್ಟ್ರೀಯ ಚಲನಚಿತ್ರ ಯೋಜನೆಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಪ್ರದರ್ಶಿಸಲಾಗುತ್ತದೆ.

ಈ ವರ್ಷ ಐ ಎಫ್ ಎಫ್ ಐ ಯ 54 ನೇ ಆವೃತ್ತಿಯಲ್ಲಿ 75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ (CMOT) ಅಭ್ಯರ್ಥಿಗಳು ವೃತ್ತಿಪರ ತರಗತಿಗಳನ್ನು ವಿಶೇಷವಾಗಿ ಸಿನೆಮಾದ ಮಾಸ್ಟರ್‌ಗಳಿಂದ ಸಂಗ್ರಹಿಸುತ್ತಾರೆ ಮತ್ತು ನೇಮಕಾತಿಗಾಗಿ "ಟ್ಯಾಲೆಂಟ್ ಕ್ಯಾಂಪ್" ಅನ್ನು 20 ಕ್ಕೂ ಹೆಚ್ಚು ಪ್ರಮುಖ ಕಂಪನಿಗಳೊಂದಿಗೆ ಆಯೋಜಿಸಲಾಗುತ್ತದೆ.

ಉತ್ಸವದ ವಿಶೇಷ ಚೇತನ ಪ್ರತಿನಿಧಿಗಳು ಎಲ್ಲಾ ಸ್ಕ್ರೀನಿಂಗ್ ಮತ್ತು ಇತರ ಸ್ಥಳಗಳಿಗೆ ಸುಲಬವಾಗಿ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು ಉತ್ಸವದಲ್ಲಿ ಸೌಲಭ್ಯಗಳಿವೆ. ಉತ್ಸವವನ್ನು ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರವೇಶಿಸಬಹುದಾದ ಮಾರ್ಗವನ್ನಾಗಿ ಮಾಡುವುದು ಒಳಗೊಳ್ಳುವಿಕೆಯ ಕಡೆಗೆ ತೆಗೆದುಕೊಂಡ ಒಂದು ಹೆಜ್ಜೆಯಾಗಿದೆ.

ಐ ಎಫ್ ಎಫ್ ಐ ಕೇವಲ ಸಿನಿಮೀಯ ಶ್ರೇಷ್ಠತೆಯ ಪ್ರದರ್ಶನವಲ್ಲ, ಬದಲಿಗೆ ಸಾಂಸ್ಕೃತಿಕ ವೈವಿಧ್ಯತೆಯ ಆಚರಣೆಯಾಗಿದೆ. ಐ ಎಫ್ ಎಫ್ ಐ ಸಿನಿ-ಮೇಳದ ಉಪಕ್ರಮವು ಸಿನಿಮೀಯ ಉತ್ಸವಗಳಿಗೆ ಅದ್ಭುತವಾದ ಸೇರ್ಪಡೆಯಾಗಲಿದೆ, ಅಲ್ಲಿ ಐ ಎಫ್ ಎಫ್ ಐ ಪಾಲ್ಗೊಳ್ಳುವವರು ಮತ್ತು ಐ ಎಫ್ ಎಫ್ ಐ ಗೆ ನೋಂದಾಯಿಸದ ಸ್ಥಳೀಯರು ಮತ್ತು ಪ್ರವಾಸಿಗರು ಸಹ ಸಿನಿಮಾ, ಕಲೆ, ಸಂಸ್ಕೃತಿ, ಕರಕುಶಲತೆ ಮತ್ತು ಆಹಾರದ ಮಾಂತ್ರಿಕತೆಯನ್ನು ಆನಂದಿಸಬಹುದು. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ವತಿಯಿಂದ ವಸ್ತುಪ್ರದರ್ಶನವನ್ನು ಸ್ಥಾಪಿಸಲಾಗಿದೆ, ಇದು ಸಿನಿ ಉತ್ಸಾಹಿಗಳಿಗೆ ಸಂವಾದಾತ್ಮಕ ಪ್ರದರ್ಶನಗಳ ಮೂಲಕ ಚಲನಚಿತ್ರಗಳ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಎಲ್ಲರಿಗೂ ಪ್ರವೇಶ ಉಚಿತವಾಗಿರುತ್ತದೆ. ವಿಶ್ವಕ್ಕೆ ಭಾರತದ ಅತಿದೊಡ್ಡ ಸಾಂಸ್ಕೃತಿಕ ಸಂಭ್ರಮದಲ್ಲಿ ಒಂದಾಗಿರುವ ಐ ಎಫ್ ಎಫ್ ಐ ಅನ್ನು ಹೆಚ್ಚು ಸಂಭ್ರತಮಗೊಳಿಸಲು ಕ್ಯಾರವಾನ್‌ ಗಳು, ಶಿಗ್ಮೋತ್ಸವ್, ಗೋವಾ ಕಾರ್ನಿವಲ್, ಸೆಲ್ಫಿ ಪಾಯಿಂಟ್‌ ಗಳು, ಐ ಎಫ್ ಎಫ್ ಐ ಮರ್ಚಂಡೈಸ್ ಮತ್ತು ಇತರ ಉಪಕ್ರಮಗಳ ಜೊತೆಗೆ ಮೂರು ಸ್ಥಳಗಳಲ್ಲಿ ಸಾರ್ವಜನಿಕರಿಗೆ ಓಪನ್ ಏರ್ ಸ್ಕ್ರೀನಿಂಗ್‌ ಗಳನ್ನು ಸಹ ಆಯೋಜಿಸಲಾಗುತ್ತದೆ.

ಇದಲ್ಲದೆ ಎನ್‌ ಎಫ್‌ ಡಿ ಸಿ ಮತ್ತು ಇಎ ಸ್‌ ಜಿ ಗಳು 54 ನೇ ಐ ಎಫ್‌ ಎಫ್‌ ಐ ನಲ್ಲಿ ಉತ್ಸವದ ಸ್ಥಳಗಳ ಸಂಪೂರ್ಣ ಅಲಂಕಾರ ಮತ್ತು ಬ್ರ್ಯಾಂಡಿಂಗ್‌ ಗಾಗಿ ಎನ್‌ ಐ ಡಿ, ಅಹಮದಾಬಾದ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿವೆ.

ಇ ಎಸ್‌ ಜಿ ಸಿಇಒ ಶ್ರೀಮತಿ ಅಂಕಿತಾ ಮಿಶ್ರಾ ಅವರು ಪ್ರತಿನಿಧಿಗಳು ಮತ್ತು ಸ್ಥಳೀಯ ವ್ಯಕ್ತಿಗಳಿಗೆ ಐ ಎಫ್‌ ಎಫ್‌ ಐ ಯ 54 ನೇ ಆವೃತ್ತಿಯ ಸುಗಮ ಕಾರ್ಯನಿರ್ವಹಣೆಗಾಗಿ ಮಾಡಲಾದ ವಿವಿಧ ವ್ಯವಸ್ಥೆಗಳ ಬಗ್ಗೆ ವಿವರಿಸಿದರು. ಇದು ಉದ್ಘಾಟನಾ ಸಮಾರಂಭಕ್ಕಾಗಿ ಪಾರ್ಕಿಂಗ್‌ ಸೌಲಭ್ಯಗಳು, ಉತ್ಸವದ ಸ್ಥಳಗಳ ನಡುವೆ ಉಚಿತ ಸಾರಿಗೆ ಮತ್ತು ವಿವಿಧ ಪ್ರದರ್ಶನಗಳು ಮತ್ತು ಸೆಷನ್‌ ಗಳನ್ನು ಕಾಯ್ದಿರಿಸುವ ಕಾರ್ಯವಿಧಾನಗಳನ್ನು ಒಳಗೊಂಡಿದೆ.

ಪಿಐಬಿ ಪಶ್ಚಿಮ ವಲಯದ ಮಹಾನಿರ್ದೇಶಕರಾದ ಶ್ರೀಮತಿ ಮೊನಿದೀಪ ಮುಖರ್ಜಿ ಅವರು ಲಭ್ಯವಿರುವ ವಿವಿಧ ಸೌಲಭ್ಯಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಐ ಎಫ್‌ ಎಫ್‌ ಐ ನ ಈ ಆವೃತ್ತಿಗಾಗಿ ಪಿಐಬಿ ತೆಗೆದುಕೊಂಡ ನವೀನ ಉಪಕ್ರಮಗಳ ಬಗ್ಗೆಯೂ ಅವರು ಮಾತನಾಡಿದರು. ಇದು ಮಾಧ್ಯಮಕ್ಕಾಗಿ ಚಲನಚಿತ್ರ ಮೆಚ್ಚುಗೆ ಕಾರ್ಯಾಗಾರದ ಸಂಘಟನೆ ಮತ್ತು ಐ ಎಫ್‌ ಎಫ್‌ ಐ ಕುರಿತ ಎಲ್ಲಾ ಪಿಐಬಿ ಮಾಧ್ಯಮ ಪ್ರಕಟಣೆಗಳಿಗೆ ಕೊಂಕಣಿ ಅನುವಾದದ ಪರಿಚಯವನ್ನು ಒಳಗೊಂಡಿದೆ.

ಇಎಸ್‌ಜಿ ಉಪಾಧ್ಯಕ್ಷರಾದ ಶ್ರೀಮತಿ ದೆಲಿಲಾ ಎಂ ಲೋಬೋ ಅವರು ಪ್ರಪಂಚದಾದ್ಯಂತದ ಅತ್ಯುತ್ತಮ ಚಲನಚಿತ್ರಗಳನ್ನು ಐ ಎಫ್‌ ಎಫ್‌ ಐ ನಲ್ಲಿ ಪ್ರದರ್ಶಿಸಲಾಗುವುದು ಎಂದರು ಮತ್ತು ಗೋವಾ ಜನರು ತಮ್ಮ ಮನೆ ಬಾಗಿಲಿನಲ್ಲಿ ನಡೆಯುವ ಉತ್ಸವದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

****

iffi reel

(Release ID: 1977908) Visitor Counter : 118