ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

3ನೇ ‘ಬುಡಕಟ್ಟು ಗೌರವ ದಿವಸʼಮತ್ತು ‘ನಮ್ಮ ಸಂಕಲ್ಪ ವಿಕಸಿತ ಭಾರತ’ಅಂಗವಾಗಿ  ‘ವಿಕಸಿತ ಭಾರತ ಸಂಕಲ್ಪ ಯಾತ್ರೆʼಗೆ  ಕರ್ನಾಟಕದ ಮೈಸೂರು, ಚಾಮರಾಜನಗರ ಹಾಗೂ ಚಿಕ್ಕಮಗಳೂರಿನಲ್ಲಿ ಚಾಲನೆ


ಮೈಸೂರಿನಲ್ಲಿ ರಾಜ್ಯಪಾಲ ಶ್ರೀ ತಾವರಚಂದ್ ಗೆಹ್ಲೋಟ್ ಅವರಿಂದ ಯಾತ್ರೆಗೆ ಹಸಿರು ನಿಶಾನೆ

Posted On: 15 NOV 2023 9:51PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಕೈಗೊಂಡಿರುವ ಬೃಹತ್ ಕಾರ್ಯಕ್ರಮ 'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಗೆ ಇಂದು ಕರ್ನಾಟಕದಲ್ಲೂ ಚಾಲನೆ ದೊರೆತಿದೆ. ಕರ್ನಾಟಕದ ರಾಜ್ಯಪಾಲ ಶ್ರೀ ತಾವರಚಂದ್ ಗೆಹ್ಲೋಟ್ ಅವರು ಬುಧವಾರ ಮೈಸೂರು ಜಿಲ್ಲೆಯಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆʼ(ಐಇಸಿ) ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು.

ಶ್ರೀ ತಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಮೈಸೂರು ಜಿಲ್ಲೆಯಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆʼ(ಐಇಸಿ) ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು.

ಈ ಸಂದರ್ಭದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರತಿಜ್ಞೆಯನ್ನು ಬೋಧಿಸಲಾಯಿತು.

ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳವಾದ ಜಾರ್ಖಂಡ್‌ ನ ಖುಂಟಿಯಲ್ಲಿ ಪ್ರಧಾನ ಮಂತ್ರಿಯವರು ಇಂದು 'ವಿಕಸಿತ ಭಾರತ ಸಂಕಲ್ಪಯಾತ್ರೆ'ಗೆ ಚಾಲನೆ ನೀಡುವ ಮೂಲಕ ಗಮನಾರ್ಹ ಸಂಖ್ಯೆಯಲ್ಲಿರುವ ಬುಡಕಟ್ಟು ಜನರೊಂದಿಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ  ರಾಷ್ಟ್ರವ್ಯಾಪಿ ಆರಂಭ ಸಿಕ್ಕಿದೆ.

ಕರ್ನಾಟಕದಲ್ಲಿ ಆರಂಭದಲ್ಲಿ, ಹೆಚ್ಚಿನ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ಮೈಸೂರು, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಯಾತ್ರೆಯು ಒಳಗೊಂಡಿದೆ. ಈ ಯಾತ್ರೆಯು ವಿವಿಧ ಯೋಜನೆಗಳಿಗೆ ಅರ್ಹರಿದ್ದರೂ ಇದುವರೆಗೆ ಪ್ರಯೋಜನ ಪಡೆಯದ ದುರ್ಬಲ ಜನರನ್ನು ತಲುಪುವ ಗುರಿಯನ್ನು ಹೊಂದಿದೆ.

ಚಿಕ್ಕಮಗಳೂರು :ಚಿಕ್ಕಮಗಳೂರಿನಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಶ್ರೀ ಎಂ ಜೆ ದಿನೇಶ್ ಅವರು 'ವಿಕಸಿತ ಭಾರತ ಸಂಕಲ್ಪಯಾತ್ರೆ'ಗೆ ಚಾಲನೆ ನೀಡಿದರು.

ಕಾಫಿ ಮಂಡಳಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕಾಫಿ ಮಂಡಳಿ ಅಧ್ಯಕ್ಷ ಶ್ರೀ ದಿನೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆಗಳನ್ನು ವಿವರಿಸಿದರು. ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಜನರ ಸಹಭಾಗಿತ್ವ ಮತ್ತು ಅಧಿಕಾರಿಗಳ ಸಹಕಾರವನ್ನು ಕೋರಿದರು.

ಉಜ್ವಲಾ, ಮುದ್ರಾ, ಜನಧನ್ ಮುಂತಾದ ಯೋಜನೆಗಳ ಫಲಾನುಭವಿಗಳು ʼಮೇರಿ ಕಹಾನಿ ಮೇರಿ ಜುಬಾನಿʼಯ ಭಾಗವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಶ್ರೀ ಎಂ ಜೆ ದಿನೇಶ್ ರವರು ಭಾಗವಹಿಸಿದ ಎಲ್ಲರಿಗೂ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ, ಆರ್‌ ಸಿ ಎಫ್ ಕೃಷಿ ಚಟುವಟಿಕೆಗಳಲ್ಲಿ ಡ್ರೋನ್ ಬಳಕೆಯನ್ನು ಪ್ರದರ್ಶಿಸಿತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಶ್ರೀ ಎಂ.ಜೆ.ದಿನೇಶ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು.

 

ಚಾಮರಾಜನಗರ: ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀಮತಿ ಸುರೇಖಾ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ  ಚಾಮರಾಜನಗರ ಜಿಲ್ಲೆಯಲ್ಲಿ ಚಾಲನೆ ನೀಡಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀಮತಿ ಸುರೇಖಾ ಅವರು
ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಮರಾಜನಗರ ಜಿಲ್ಲೆಯಲ್ಲಿ  ಚಾಲನೆ ನೀಡಿದರು.

ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ವಾಹನಗಳು ಜನಪ್ರಿಯ ಕೇಂದ್ರ ಯೋಜನೆಗಳನ್ನು ರಾಷ್ಟ್ರದ ಬೆಳವಣಿಗೆ ಮತ್ತು ಸಮೃದ್ಧಿಗೆ ಹಂಚಿಕೆಯ ಬದ್ಧತೆಯೊಂದಿಗೆ ಹೆಚ್ಚು ಅಂತರ್ಗತ ಮತ್ತು ಅಭಿವೃದ್ಧಿ ಹೊಂದಿದ ಭಾರತದತ್ತ ಮಹತ್ವದ ಹೆಜ್ಜೆಯಾಗಿ ಪ್ರಚಾರ ಮಾಡುತ್ತವೆ.

ಐಇಸಿ ವಾಹನಗಳನ್ನು ಹಿಂದಿ ಮತ್ತು ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ಆಡಿಯೊ ದೃಶ್ಯಗಳು, ಕರಪತ್ರಗಳು, ಕಿರುಪುಸ್ತಕಗಳು ಮತ್ತು ಫ್ಲ್ಯಾಗ್‌ ಶಿಪ್ ಸ್ಟಾಂಡಿಗಳ ಮೂಲಕ ಮಾಹಿತಿಯನ್ನು ಪ್ರಚುರಪಡಿಸಲು ಬ್ರಾಂಡ್ ಮಾಡಲಾಗಿದೆ ಮತ್ತು ರೂಪಿಸಲಾಗಿದೆ.

ಯೋಜನೆಗಳ ಫಲಾನುಭವಿಗಳ ಅನುಭವ ಹಂಚಿಕೆ, ಪ್ರಗತಿಪರ ರೈತರೊಂದಿಗೆ ಸಂವಾದ, ಆಯುಷ್ಮಾನ್ ಕಾರ್ಡ್, ಜಲ ಜೀವನ್ ಮಿಷನ್, ಜನ್ ಧನ್ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಒಡಿಎಫ್ ಪ್ಲಸ್ ಸ್ಥಾನಮಾನದಂತಹ ಯೋಜನೆಗಳ ಶೇ.100ರಷ್ಟು ಸಂಪೂರ್ಣತೆಯನ್ನು ಸಾಧಿಸಿದ ಗ್ರಾಮ ಪಂಚಾಯಿತಿಗಳ ಸಾಧನೆಗಳ ಸಂಭ್ರಮಾಚರಣೆಯಂತಹ ಜನ ಭಾಗೀದಾರಿ ಕಾರ್ಯಕ್ರಮಗಳು. ರಸಪ್ರಶ್ನೆ ಸ್ಪರ್ಧೆಗಳು, ಡ್ರೋನ್ ಪ್ರದರ್ಶನ, ಆರೋಗ್ಯ ಶಿಬಿರಗಳು, ಮೇರಾ ಯುವ ಭಾರತ್ ಸ್ವಯಂ ದಾಖಲಾತಿ ಇತ್ಯಾದಿಗಳು ಚಟುವಟಿಕೆಗಳ ಭಾಗವಾಗಿವೆ.

ರಾಷ್ಟ್ರವ್ಯಾಪಿ ಅಭಿಯಾನ, ನಮ್ಮ ಸಂಕಲ್ಪ ವಿಕಸಿತ ಭಾರತ, ಇದುವರೆಗಿನ ಅತಿ ದೊಡ್ಡ ಉಪಕ್ರಮಗಳಲ್ಲಿ ಒಂದಾಗಿದೆ, ಕೇಂದ್ರೀಕೃತ ಚಟುವಟಿಕೆಗಳ ಮೂಲಕ ಜನರನ್ನು ತಲುಪುವ ಮತ್ತು ಜಾಗೃತಿ ಮೂಡಿಸುವ ಈ ಅಭಿಯಾನವು ನೈರ್ಮಲ್ಯ ಸೌಲಭ್ಯಗಳು, ಅಗತ್ಯ ಹಣಕಾಸು ಸೇವೆಗಳು, ವಿದ್ಯುತ್ ಸಂಪರ್ಕಗಳು, ಎಲ್‌ ಪಿ ಜಿ ಸಿಲಿಂಡರ್‌ ಲಭ್ಯತೆ, ಬಡವರಿಗೆ ವಸತಿ, ಆಹಾರ ಭದ್ರತೆ, ಸರಿಯಾದ ಪೋಷಣೆ, ವಿಶ್ವಾಸಾರ್ಹ ಆರೋಗ್ಯ ರಕ್ಷಣೆ, ಶುದ್ಧ ಕುಡಿಯುವ ನೀರು ಇತ್ಯಾದಿ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಒದಗಿಸುವುದರೊಂದಿಗೆ 2 ತಿಂಗಳ ಕಾಲ ಮುಂದುವರಿಯುತ್ತದೆ.

ಇದು ಅಂತಿಮವಾಗಿ 2024 ರ ಜನವರಿ 25 ರೊಳಗೆ ದೇಶದ ಪ್ರತಿ ಜಿಲ್ಲೆಯ 2.55 ಲಕ್ಷ ಗ್ರಾಮ ಪಂಚಾಯತ್‌ ಗಳು ಮತ್ತು 3,600 ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳನ್ನು ತಲುಪುವ ಗುರಿಯನ್ನು ಹೊಂದಿದೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಜಿಲ್ಲೆ ಮತ್ತು ಸ್ಥಳೀಯ ಆಡಳಿತಗಳೊಂದಿಗೆ ಸಂಪೂರ್ಣ ಸರ್ಕಾರದ ವಿಧಾನದ ಅಡಿಯಲ್ಲಿ ಇಡೀ ಅಭಿಯಾನವನ್ನು ಕಾರ್ಯಗತಗೊಳಿಸಲಾಗುತ್ತದೆ.

*****


(Release ID: 1977254) Visitor Counter : 93


Read this release in: English , Urdu , Hindi