ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

2024ರ ಜನವರಿ 17ರಿಂದ 20ರವರೆಗೆ ಹರ್ಯಾಣದ ಫರಿದಾಬಾದ್ ನಲ್ಲಿ 9ನೇ ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳ (ಐಐಎಸ್ ಎಫ್) ಆಯೋಜನೆ 


ಈ ಆವೃತ್ತಿಯ ಘೋಷ ವಾಕ್ಯ “ಅಮೃತಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಜನರಿಗೆ ತಲುಪಿಸುವುದು’’ ಎಂಬುದಾಗಿದೆ

Posted On: 15 NOV 2023 11:07AM by PIB Bengaluru

9ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳ (ಐಐಎಸ್ ಎಫ್) 2024ರ ಜನವರಿ 17ರಿಂದ 20ರವರೆಗೆ ಹರ್ಯಾಣದ ಫರಿದಾಬಾದ್ ನಲ್ಲಿ ನಡೆಯಲಿದೆ.

ಭಾರತದ ಅತಿ ದೊಡ್ಡ ವಿಜ್ಞಾನ ಮೇಳವಾದ ಇದು ಫರಿದಾಬಾದ್ ನ ಟ್ರಾನ್ಸ್‌ಲೇಶನಲ್ ಹೆಲ್ತ್ ಸೈನ್ಸ್ ಅಂಡ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ (ಟಿಎಚ್ ಎಸ್ ಟಿಐ) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಾದೇಶಿಕ ಕೇಂದ್ರ (ಆರ್ ಬಿಸಿ) ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಈ ಆವೃತ್ತಿಯ ಘೋಷ ವಾಕ್ಯ “ಅಮೃತಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಜನರಿಗೆ ತಲುಪಿಸುವುದು’’ ಎಂಬುದಾಗಿದೆ, ಐಐಎಸ್ ಎಫ್ 2023 ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಸಂಶೋಧಕರು, ಉದ್ಯಮ ವೃತ್ತಿಪರರು, ಉದ್ಯಮಿಗಳು ಮತ್ತು ವಿಜ್ಞಾನ ಸಂವಹನಕಾರರಂತಹ ವೈವಿಧ್ಯಮಯ ಆಸಕ್ತಿಗಳನ್ನು ಹೊಂದಿರುವ ಗಣ್ಯ ವ್ಯಕ್ತಿಗಳನ್ನು ಮತ್ತು  ಸಾರ್ವಜನಿಕರಿಗೆ ಸ್ಪೂರ್ತಿ ನೀಡುವ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಐಐಎಸ್ ಎಫ್ 2023ಯಲ್ಲಿ ಒಟ್ಟು 17 ವಿಷಯಗಳ ವೈಜ್ಞಾನಿಕ ಸಾಧನೆಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿದ್ದು, ಇದು ಮೇಳದಲ್ಲಿ ಭಾಗವಹಿಸುವವರಿಗೆ ಮತ್ತು ಸಾರ್ವಜನಿಕರಿಗೆ ಹಲವು ರೀತಿಯ ಅನುಕೂಲಗಳನ್ನು ಒದಗಿಸಲಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞರಿಂದ ವಿಚಾರ ಸಂಕಿರಣಗಳು, ಭಾಷಣಕಾರರೊಂದಿಗೆ ಸಂವಾದಗಳು, ವಸ್ತು ಪ್ರದರ್ಶನ, ಸ್ಪರ್ಧೆಗಳು, ಕಾರ್ಯಾಗಾರಗಳು, ಜ್ಞಾನ ವಿನಿಮಯ ಚಟುವಟಿಕೆಗಳು, ತಾಂತ್ರಿಕ ಪ್ರದರ್ಶನಗಳು ಸೇರಿ ಮತ್ತಿತರ ಹಲವು ಚಟುವಟಿಕೆಗಳಿಗೆ ಎಲ್ಲ ಭಾಗಿದಾರರನ್ನು ಮುಖಾಮುಖಿಯಾಗಲು ಅವಕಾಶ ಮಾಡಿಕೊಡುತ್ತದೆ.

ಐಐಎಸ್ ಎಫ್ ಸಮೃದ್ಧ ಭಾರತದ ಪ್ರಗತಿಗಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ಬದ್ಧವಾಗಿದೆ. ಈ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಭೂ ವಿಜ್ಞಾನ ಸಚಿವಾಲಯದ ಸಹಭಾಗಿತ್ವದ ಪ್ರಯತ್ನಗಳ ಮೂಲಕ ವಿಜ್ಞಾನ ಭಾರತಿ ಸಹಯೋಗದೊಂದಿಗೆ ಆರಂಭಿಸಲಾಗಿದೆ.

2015ರಿಂದೀಚೆಗೆ ಭಾರತದ ನಾನಾ ಭೌಗೋಳಿಕ ಪ್ರದೇಶಗಳಲ್ಲಿ ಐಐಎಸ್ ಎಫ್‌ ಎಂಟು ಆವೃತ್ತಿಯ ಮೇಳಗಳನ್ನು ಆಯೋಜಿಸಿದೆ ಮತ್ತು ಬೃಹತ್ ವಿಜ್ಞಾನ ಮೇಳವನ್ನಾಗಿ ವಿಸ್ತರಿಸಿದೆ. 2021ರಲ್ಲಿ ಬಾಹ್ಯಾಕಾಶ ಇಲಾಖೆ ಮತ್ತು ಅಣು ಇಂಧನ ಇಲಾಖೆ ಕೂಡ ಐಐಎಸ್ ಎಫ್ ನ ಅವಿಭಾಜ್ಯ ಅಂಗವಾಗಿ ಸೇರ್ಪಡೆಯಾದವು.

****


(Release ID: 1977104) Visitor Counter : 154


Read this release in: Tamil , English , Hindi , Urdu , Telugu