ಕಲ್ಲಿದ್ದಲು ಸಚಿವಾಲಯ
azadi ka amrit mahotsav

​​​​​​​ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಮತ್ತು ಎಂಡಿಒಗಳಿಗೆ ಕಸ್ಟಮೈಸ್ಡ್‌ ಮಾಡಿದ ಸಾಲ ಹಣಕಾಸು ಕುರಿತ ಕಾರ್ಯಾಗಾರ


​​​​​​​ಕಲ್ಲಿದ್ದಲು ಗಣಿಗಾರಿಕೆಗೆ ಸಾಲ ಲಭ್ಯತೆ ಸುಲಭಗೊಳಿಸುವಂತೆ ಕಲ್ಲಿದ್ದಲು ಕಾರ್ಯದರ್ಶಿ ಬ್ಯಾಂಕು ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳಿಗೆ ಕರೆ

Posted On: 02 NOV 2023 2:02PM by PIB Bengaluru

ಆರ್ ಇಸಿ ಲಿಮಿಟೆಡ್ ಇತ್ತೀಚೆಗೆ ದೆಹಲಿಯಲ್ಲಿ “ವಾಣಿಜ್ಯ ಗಣಿಗಾರಿಕೆ ಮತ್ತು ಎಂಒಡಿಗಳಿಗೆ ಕಸ್ಟಮೈಸ್ಡ್ರ್ ಮಾಡಿದ ಸಾಲ ಹಣಕಾಸು ಕುರಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಕಾರ್ಯಗಾರಕ್ಕೆ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರಿ ಅಮೃತ್ ಲಾಲ್ ಮೀನಾ, ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಿಯೋಜಿತ ಪ್ರಾಧಿಕಾರದ ಶ್ರೀ ಎಂ.ನಾಗರಾಜು, ಆರ್‌ ಇಸಿ ಲಿಮಿಟೆಡ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿವೇಕ್ ಕುಮಾರ್, ಕಲ್ಲಿದ್ದಲು ಉದ್ಯಮ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು.

ಕಾರ್ಯಾಗಾರವು ಶ್ರೀ ವಿವೇಕ್ ಕುಮಾರ್ ದೇವಾಂಗನ್ ರವರ ಆತ್ಮೀಯ ಸ್ವಾಗತದಿಂದ ಆರಂಭವಾಯಿತು. ಶ್ರೀ ದೇವಾಂಗನ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಆರ್ ಇಸಿ  ದೇಶದಲ್ಲಿ ಗಣಿ ಉದ್ಯಮದ ಬೆಳವಣಿಗೆಯ ಪಯಣದಲ್ಲಿ ಪಾಲುದಾರರಾಗಲು ಸಿದ್ಧವಿದೆ ಎಂದು ಆಶಯವನ್ನು ವ್ಯಕ್ತಪಡಿಸಿದರು.

ತಮ್ಮ ಪ್ರಧಾನ ಭಾಷಣದಲ್ಲಿ ಕಲ್ಲಿದ್ದಲು ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ, ವಾಣಿಜ್ಯ ಕಲ್ಲಿದ್ದಲು ಗಣಿಗಳಿಗೆ ಸಾಲ ಲಭ್ಯತೆಯ ಬಗ್ಗೆ ತಮ್ಮ ಮುಂದೆ ಇಟ್ಟಿರುವ ಪ್ರಸ್ತಾವನೆಗಳ ಮೇಲೆ ಕೆಲಸ ಮಾಡುವಾಗ ಬ್ಯಾಂಕುಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಂತೆ ಕರೆ ನೀಡಿದರು. ಕಲ್ಲಿದ್ದಲು ಗಣಿಗಾರಿಕೆಯು ಕಲ್ಲಿದ್ದಲು ಗಣಿಗಳ ಹಂಚಿಕೆಯಾಗಿ 3-4 ವರ್ಷಗಳು ಕಳೆದ ನಂತರ ಉತ್ತಮ ಮತ್ತು ಲಾಭದಾಯಕ ದೀರ್ಘಾವಧಿಯ ವ್ಯವಹಾರವಾಗಿದೆ ಎಂದು ಅವರು ಪುನರುಚ್ಚರಿಸಿದರು. ಶ್ರೀ ಮೀನಾ ಅವರು ಆರ್‌ಇಸಿಯ ಉಪಕ್ರಮವನ್ನು ಮತ್ತು ಇಎಸ್‌ಜಿ ಮಾನದಂಡಗಳಿಗೆ ಅನುಸಾರವಾಗಿ ಗಣಿಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ನಡುವೆ ಸಮತೋಲನ ಸಾಧಿಸುವ ಅದರ ಬದ್ಧತೆಯನ್ನು ಮತ್ತು ಗಣಿಗಾರಿಕೆ ಉದ್ಯಮದ ಬೆಳವಣಿಗೆಯ ಪಯಣದಲ್ಲಿ ಪಾಲುದಾರರಾಗಲು ಇಚ್ಛಿಸಿರುವ ಕ್ರಮವನ್ನು ಶ್ಲಾಘಿಸಿದರು.  ಕಲ್ಲಿದ್ದಲು ಗಣಿಗಳು ತಮ್ಮ ಕಾರ್ಯಾಚರಣೆ ಜೀವನದ ಅಂತಿಮ ಘಟ್ಟವನ್ನು ತಲುಪಿದ ನಂತರ ಸಮರ್ಥವಾಗಿ ಅವುಗಳನ್ನು ಮುಚ್ಚುವ ಅಗತ್ಯವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಪಂಪ್ಡ್ ಸ್ಟೋರೇಜ್ ಸೌಲಭ್ಯಗಳು, ಸೌರ ಪಾರ್ಕ್‌ಗಳು ಮುಂತಾದ ಸುಸ್ಥಿರ ಪ್ರಯತ್ನಗಳಿಗೆ ಅಂತಹ ಖಾಲಿಯಾದ ಗಣಿಗಳನ್ನು ಪುನಶ್ಚೇತನಗೊಳಿಸಬಹುದು ಎಂದು ಅವರು ಹೇಳಿದರು.

ಸುಸ್ಥಿರ ವಿಧಾನಗಳ ಗಣಿಗಾರಿಕೆಯ ಬದ್ಧತೆಯ ಬಗ್ಗೆ ಮರು ಭರವಸೆ ನೀಡಿದ ಕಾರ್ಯದರ್ಶಿ ಅವರು, ನೆಲದಾಳದ ಗಣಿಗಳಿಂದ ಉತ್ಪಾದನೆ ಹೆಚ್ಚಳಕ್ಕೆ ಕಲ್ಲಿದ್ದಲು ಸಚಿವಾಲಯ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಮಾಹಿತಿ ನೀಡಿದರು. ಕಲ್ಲಿದ್ದಲು ವಲಯ ಬೆಳವಣಿಗೆಯ ಹಂತದಲ್ಲಿದೆ ಎಂದು ಒತ್ತಿ ಹೇಳಿದ ಅವರು, ಹೆಚ್ಚುತ್ತಿರುವ ದೇಶೀಯ ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ಹೆಚ್ಚಳ ಮಾಡುವ ಮೂಲಕ ಕಲ್ಲಿದ್ದಲು ಆಮದು ಪ್ರಮಾಣವನ್ನು ತಗ್ಗಿಸಲು ಸಾಮೂಹಿಕ ಪ್ರಯತ್ನಗಳು ಆಗಬೇಕು ಎಂದು ಅವರು ಹೇಳಿದರು.

ಹೆಚ್ಚುವರಿ ಕಾರ್ಯದರ್ಶಿ ಮತ್ತು ನಿಯೋಜಿತ ಪ್ರಾಧಿಕಾರ(ಕಲ್ಲಿದ್ದಲು) ಶ್ರೀ ಎಂ.ನಾಗರಾಜು ಅವರು ಕಲ್ಲಿದ್ದಲು ಬೇಡಿಕೆಯನ್ನು ಈಡೇರಿಸಲು ಸಚಿವಾಲಯ ಹಲವು ಕ್ರಮಗಳನ್ನು ಕೈಗೊಂಡಿದೆ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ 91 ಕಲ್ಲಿದ್ದಲು ಗಣಿಗಳನ್ನು ವಾಣಿಜ್ಯ ಬಳಕೆಗೆ ಹರಾಜು ಮಾಡಲಾಗಿದೆ ಎಂದರು. ಒಂದು ಕಲ್ಲಿದ್ದಲಿಉ ಗಣಿಗೆ ಹಣಕಾಸು ಒದಗಿಸುವುದು ಈಗಾಗಲೇ ಪೂರ್ಣಗೊಂಡಿದೆ ಮತ್ತು ಮತ್ತೆರಡು ಕಲ್ಲಿದ್ದಲು ಗಣಿಗಳಿಗೆ ನೆರವು ನೀಡುವ ಯೋಜನೆಗಳು ಮೌಲ್ಯಮಾಪನದ ಹಂತದಲ್ಲಿವೆ ಎಂದರು. ಸಾಲಗಾರರ ಹಿತಾಸಕ್ತಿಯನ್ನು ಕಾಯಲು ಒಪ್ಪಂದಗಳಲ್ಲಿ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ವಲಯ ಅತ್ಯಂತ ಉತ್ಕೃಷ್ಟವಾಗಿದೆ  ಮತ್ತು ಜವಾಬ್ದಾರಿಯುತವಾಗಿದೆ, ಆರ್ ಇಸಿ ಕಲ್ಲಿದ್ದಲು ಗಣಿಗಾರಿಕೆ ವಲಯದಲ್ಲಿ ಹೂಡಿಕೆ ಮಾಡಲು ಪರಶೀಲನೆ ನಡೆಸಬೇಕು ಮತ್ತು ಕಲ್ಲಿದ್ದಲು ಗಣಿಗಳಿಗೆ ಹಣಕಾಸು ನೆರವು ನೀಡುವುದರಿಂದ ಅವುಗಳು ಅತ್ಯಂತ ವೇಗವಾಗಿ ಕಾರ್ಯಾಚರಣೆ ಆರಂಭಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ದೇಶದ ತಲಾ ವಿದ್ಯುತ್ ಬಳಕೆಯು ವಿಶ್ವದ ಸರಾಸರಿಯ 1/3 ರಷ್ಟಿದೆ ಮತ್ತು ಗಣನೀಯವಾಗಿ ಹೆಚ್ಚಾಗಲಿದೆ ಎಂದು ತಿಳಿಸಲಾಯಿತು. ಇದರಲ್ಲಿ ಹೆಚ್ಚಿನ ಪ್ರಮಾಣವು ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳ ಕೊಡುಗೆಯಾಗಿದೆ.

ಕಾರ್ಯಾಗಾರದಲ್ಲಿ ಹಂಚಿಕೆಯಾದ ಕಲ್ಲಿದ್ದಲು ನಿಕ್ಷೇಪಗಳ ಪ್ರತಿನಿಧಿಗಳು ಮತ್ತು ಕಲ್ಲಿದ್ದಲು ಗಣಿಗಳ ಎಂಡಿಒಗಳು ಭಾಗವಹಿಸಿದ್ದರು. ಕಲ್ಲಿದ್ದಲು ವಲಯವನ್ನು ಆತ್ಮನಿರ್ಭರ ಭಾರತದೆಡೆಗೆ ಕೊಂಡೊಯ್ಯುವುದನ್ನು ಬೆಂಬಲಿಸುವಲ್ಲಿ ಕಲ್ಲಿದ್ದಲು ಸಚಿವಾಲಯ ಮತ್ತು ಆರ್‌ಇಸಿ ಕೈಗೊಂಡ ಉಪಕ್ರಮಗಳನ್ನು ಶ್ಲಾಘಿಸಿದರು.

***



(Release ID: 1974162) Visitor Counter : 80