ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಜೀವನ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸಾಕ್ಷ್ಯಾಧಾರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಧಾನಮಂತ್ರಿ ಗತಿಶಕ್ತಿಯ ಪಾತ್ರ ಬಹಳ ಪ್ರಾಮುಖ್ಯವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ  ಪಿಯೂಷ್ ಗೋಯಲ್ ಅವರು ಹೇಳಿದರು


​​​​​​​ಸಾಗಣೆ(ಲಾಜಿಸ್ಟಿಕ್ಸ್ ) ದಕ್ಷತೆಯನ್ನು ಉತ್ತೇಜಿಸಲು ಕಸ್ಟಮ್ಸ್ ಕಾರ್ಯಾಚರಣೆಯನ್ನು ಸುಗಮಗೊಳಿಸಲು ಪಿ.ಎಂ. ಗತಿಶಕ್ತಿಯ ಅನುಷ್ಠಾನಕ್ಕಾಗಿ  'ಪಿ.ಎಂ. ಗತಿಶಕ್ತಿಯಲ್ಲಿ ಸಿಬಿಐಸಿ ಪಾತ್ರ' ಕುರಿತು ತರಬೇತಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ  ಸಚಿವ ಶ್ರೀ  ಪಿಯೂಷ್ ಗೋಯಲ್ ಅವರು ಚಾಲನೆ ನೀಡಿದರು

ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನಲ್ಲಿ ಸಾಮರ್ಥ್ಯ ವೃದ್ಧಿಗಾಗಿ ಡಿಜಿಟಲ್ ಕಲಿಕಾ ಸಂಪನ್ಮೂಲಗಳ ಅಭಿವೃದ್ಧಿ ಕಾರ್ಯಾಗಾರವನ್ನು ಡಿಪಿಐಐಟಿ ನಡೆಸುತ್ತಿದೆ

Posted On: 19 OCT 2023 4:30PM by PIB Bengaluru

ಯೋಜನಾ ಆದ್ಯತೆ, ಗರಿಷ್ಠತಮ(ಆಪ್ಟಿಮೈಸೇಶನ್) ಮತ್ತು ಸಾಕ್ಷ್ಯಾಧಾರಿತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಪಿಎಂ ಗತಿಶಕ್ತಿ ಯೋಜನೆಯ ಪಾತ್ರವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಮತ್ತು ಜವಳಿ ಖಾತೆ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ವಿವರಿಸಿದರು.  ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ)ಯು ಸಾಮರ್ಥ್ಯ ವೃದ್ಧಿ ಆಯೋಗದ (ಸಿಬಿಸಿ) ಸಹಯೋಗದಲ್ಲಿ ನಿನ್ನೆ ಆಯೋಜಿಸಿದ್ದ ‘ಪ್ರಧಾನಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ನಲ್ಲಿ ಸಾಮರ್ಥ್ಯ ವೃದ್ಧಿಗಾಗಿ ಡಿಜಿಟಲ್ ಕಲಿಕಾ ಸಂಪನ್ಮೂಲಗಳ ಅಭಿವೃದ್ಧಿ’ ಎಂಬ ಕಾರ್ಯಾಗಾರವನ್ನು ಉದ್ದೇಶಿಸಿ ಕೇಂದ್ರ ಸಚಿವರು ಮಾತನಾಡುತ್ತಿದರು. “ಮಲ್ಟಿಮೋಡಲ್ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಗತಿಶಕ್ತಿ ತತ್ವಗಳ ವ್ಯಾಪಕ ಅಳವಡಿಕೆಯನ್ನು ಖಚಿತಪಡಿಸಿಕೊಳ್ಳಲು ಡೇಟಾ-ಚಾಲಿತ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣವು ಮುಖ್ಯವಾಗಿದೆ” ಎಂದು ಅವರು ಹೇಳಿದರು.

ಕೇಂದ್ರ ಹಣಕಾಸು ಸಚಿವಾಲಯಕ್ಕಾಗಿ ಅಭಿವೃದ್ಧಿಪಡಿಸಿದ ‘ಪಿಎಂ ಗತಿಶಕ್ತಿಯಲ್ಲಿ ಸಿಬಿಐಸಿ ಪಾತ್ರ’ ಕುರಿತು ತರಬೇತಿ ಮಾಡ್ಯೂಲ್ ಗೆ ಸಚಿವರು ಚಾಲನೆ ನೀಡಿದರು. ಇದು ಸಾಗಣೆ(ಲಾಜಿಸ್ಟಿಕ್ಸ್) ದಕ್ಷತೆಯನ್ನು ಉತ್ತೇಜಿಸಲು ಕಸ್ಟಮ್ಸ್ ಕಾರ್ಯಾಚರಣೆಯನ್ನು ಸುಗಮಗೊಳಿಸಲು ಪಿಎಂ ಗತಿಶಕ್ತಿ ಯೋಜನೆಯ ಅನುಷ್ಠಾನವನ್ನು ಸರಿಯಾಗಿ ಮಾಡಲು ಸಹಾಯ ಮಾಡುತ್ತದೆ. ಕಾರ್ಯಾಗಾರದಲ್ಲಿ ಸಿಬಿಸಿ ಅಧ್ಯಕ್ಷರಾದ ಶ್ರೀ ಆದಿಲ್ ಜೈನುಲ್ಭಾಯಿ, ಡಿಪಿಐಐಟಿ ವಿಶೇಷ ಕಾರ್ಯದರ್ಶಿ (ಲಾಜಿಸ್ಟಿಕ್ಸ್) ಶ್ರೀಮತಿ ಸುಮಿತಾ ದಾವ್ರಾ ಮತ್ತು ಸಿಬಿಸಿ, ಸದಸ್ಯ ಶ್ರೀ ಪ್ರವೀಣ್ ಪರದೇಶಿ ಹಾಜರಿದ್ದರು.

ಇದು ಸಚಿವಾಲಯಗಳು / ಇಲಾಖೆಗಳು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ದೊಡ್ಡ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಸಮರ್ಥವಾಗಿ ಯೋಜಿಸಲು ಅನುವು ಮಾಡಿಕೊಟ್ಟಿದೆ. ರೂ. 10 ಲಕ್ಷ ಕೋಟಿಗಳ ಒಟ್ಟಾರೆ ಬಂಡವಾಳ ಹೂಡಿಕೆಗೆ ಬೃಹತ್ ಹೆಚ್ಚುವರಿ ಹಣಕಾಸು ನೆರವಿನ(ಕ್ಯಾಪೆಕ್ಸ್ ಪುಶ್) ಮೂಲಕ ಸಂಪನ್ಮೂಲಗಳ ಪರಿಣಾಮಕಾರಿವಾಗಿ ಅನುಷ್ಠಾನ ಗೊಳಿಸಲಾಗುವುದು, ಮತ್ತು ಸಮಗ್ರ ಯೋಜನೆಯ ಮೂಲಕ ಜನರ ಕೇಂದ್ರಿತ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಸಂದರ್ಭದಲ್ಲಿ, ಡಿಪಿಐಐಟಿ ವಿಶೇಷ ಕಾರ್ಯದರ್ಶಿ (ಲಾಜಿಸ್ಟಿಕ್ಸ್) ಅವರು ಪ್ರಧಾನ ಮಂತ್ರಿ ಗತಿಶಕ್ತಿ ಉಪಕ್ರಮದ ಪರಿವರ್ತಕ ವಿಧಾನವನ್ನು ವಿವರಿಸಿದರು.

ಕಾರ್ಯಾಗಾರವು ಇವುಗಳನ್ನು ಒಳಗೊಂಡಿತ್ತು, ಅವುಗಳೆಂದರೆ: ಪ್ರಧಾನಮಂತ್ರಿ ಗತಿಶಕ್ತಿ ತತ್ವಗಳ ಮೇಲೆ ಸರ್ಕಾರಿ ಅಧಿಕಾರಿಗಳ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಸಾಂಸ್ಥಿಕೀಕರಿಸುವುದು ಮತ್ತು ಕ್ರಮಬದ್ಧಗೊಳಿಸುವುದು;  ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ನ ಯೋಜನೆ ಮತ್ತು ಅಭಿವೃದ್ಧಿಯಲ್ಲಿ ಪ್ರಧಾನಮಂತ್ರಿ ಗತಿಶಕ್ತಿ ವಿಧಾನದ ಅನುಷ್ಠಾನದ ಕುರಿತು ವಲಯ-ನಿರ್ದಿಷ್ಟ ತರಬೇತಿ ಮಾಡ್ಯೂಲ್ಗಳ ವಿಷಯ, ರಚನೆ ಮತ್ತು ವಿನ್ಯಾಸದ ಕುರಿತು ಚರ್ಚಿಸುವುದನ್ನು ಮುಂತಾದವುಗಳನ್ನು ಒಳಗೊಂಡಿತ್ತು.  ಈ ತರಬೇತಿ ಮಾಡ್ಯೂಲ್ ಗಳು, ಎಲ್ಲಾ ಸಿಟಿಐಗಳು ಮತ್ತು ರಾಜ್ಯ ಎಟಿಐಗಳ ಫೌಂಡೇಶನ್/ ಇಂಡಕ್ಷನ್/ ಮಿಡ್ ಕರಿಯರ್ ಕೋರ್ಸ್ಗಳಲ್ಲಿ ಒಳಗೊಂಡಿದ್ದು, ಸಾಗಣಿಕೆ ಕ್ಷೇತ್ರದಲ್ಲಿ (ಲಾಜಿಸ್ಟಿಕ್ಸ್ ಸೆಕ್ಟರ್ ) ನಲ್ಲಿ ಡೇಟಾ-ಚಾಲಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರಿಗಳನ್ನು ಸಹ ಒಳಗೊಂಡಿರುತ್ತದೆ.

 ಕಾರ್ಯಾಗಾರವನ್ನು ಸ್ಥೂಲವಾಗಿ ಎರಡು ಅವಧಿಗಳಾಗಿ ವಿಂಗಡಿಸಲಾಗಿದೆ. 

ಸೆಷನ್ 1) ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಸಿಟಿಐಗಳು ಮತ್ತು ರಾಜ್ಯ ಎಟಿಐಗಳ ಪಠ್ಯಕ್ರಮದಲ್ಲಿ ಪ್ರಧಾನಮಂತ್ರಿ ಗತಿಶಕ್ತಿ ವಿಧಾನದ ಮುಖ್ಯವಾಹಿನಿಯ ಕುರಿತು ಒಂದು ಪ್ಯಾನಲ್ ಚರ್ಚೆಯಾಗಿದೆ;  ಮತ್ತು 
ಸೆಷನ್ 2) ಕ್ಷೇತ್ರ(ಸೆಕ್ಟರ್)-ನಿರ್ದಿಷ್ಟ ತರಬೇತಿ ಅಗತ್ಯಗಳು ಮತ್ತು ಕೋರ್ಸ್ ವಿಷಯ ಮತ್ತು ಪರಿಣಾಮಕಾರಿ ವಿತರಣಾ ಕಾರ್ಯವಿಧಾನದ ಚೌಕಟ್ಟಿನ ಮೇಲೆ ಕೇಂದ್ರೀಕೃತ ಗುಂಪು ಚರ್ಚೆಗಾಗಿ 4 ಸಮಾನಾಂತರ ಬ್ರೇಕ್ ಔಟ್ ಗುಂಪುಗಳಲ್ಲಿ ಚರ್ಚೆ ಮತ್ತು ಸಂವಾದಗಳನ್ನು ನಡೆಸಿಕೊಟ್ಟಿದೆ.

ಕಾರ್ಯಾಗಾರದ ಪ್ರಮುಖ ಅಂಶಗಳು ಹೀಗಿವೆ:

* ಪ್ರಧಾನಮಂತ್ರಿ ಗತಿಶಕ್ತಿ ಅನುಭವಕ್ಕಾಗಿ ಇಂಡಕ್ಷನ್-ಮಟ್ಟದಲ್ಲಿ ನಕಲಿ ಡೇಟಾ-ಆಧಾರಿತ ಅಪ್ಲಿಕೇಶನ್ ಮಾಡ್ಯೂಲ್ ಗಳಿಗೆ (ಯಶಸ್ವಿ ಕೇಸ್ ಸ್ಟಡೀಸ್ ಆಧರಿಸಿ) ಅವಕಾಶಗಳನ್ನು ಒದಗಿಸುವುದು.

*  ಸಿಮ್ಯುಲೇಶನ್ ಆಧಾರಿತ ಕಲಿಕೆಗಾಗಿ ಇಂಡಕ್ಷನ್ ಲ್ಯಾಬ್ ಗಳ ಸ್ಥಾಪನೆ.

* ಎಲ್ಲಾ ಅಧಿಕಾರಿಗಳ ತರಬೇತಿಗಾಗಿ ಪ್ರಧಾನಮಂತ್ರಿ ಗತಿಶಕ್ತಿ ತತ್ವಗಳನ್ನು ಸಂಯೋಜಿಸುವಾಗ ತರಬೇತಿ ಅಗತ್ಯವಿರುತ್ತದೆ.

* ಮೌಲ್ಯಮಾಪನದ ಆಧಾರದ ಮೇಲೆ ಸಂವಾದಾತ್ಮಕ ಡಿಜಿಟಲ್ ಪಠ್ಯಗಳ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವುದು.

* ಇಜಿಒಟಿ ವೇದಿಕೆಗಳಲ್ಲಿ ಸಿಟಿಐಗಳು ಮತ್ತು ರಾಜ್ಯ ಎಟಿಐಗಳಲ್ಲಿ ಅಸ್ತಿತ್ವದಲ್ಲಿರುವ ಪಠ್ಯಗಳನ್ನು ಡಿಜಿಟಲ್ ಪಠ್ಯಗಳಾಗಿ ಪರಿವರ್ತಿಸುವುದು.

ಎಐ, ಬ್ಲೊಕ್ ಚೈನ್ ಮತ್ತು ಇತರ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರಾದೇಶಿಕ ರೂಪಾಂತರ ಯೋಜನೆಗಳು/ ಮುನ್ಸೂಚಕ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಸಾಮರ್ಥ್ಯಗಳನ್ನು ನಿರ್ಮಿಸುವ ಸಾಧ್ಯತೆಯನ್ನು ಅನ್ವೇಷಿಸುವುದು

ಕೇಂದ್ರೀಯ ತರಬೇತಿ ಸಂಸ್ಥೆಗಳು (ಸಿಟಿಐ) ಮತ್ತು ರಾಜ್ಯ ಆಡಳಿತ ತರಬೇತಿ ಸಂಸ್ಥೆಗಳಲ್ಲಿ (ರಾಜ್ಯ ಎಟಿಐ) ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಮೂಲ ತತ್ವಗಳ ಕುರಿತು ಮುಖ್ಯವಾಹಿನಿಯಲ್ಲಿ ನಿಯಮಿತ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ ಪಠ್ಯಗಳಿಗೆ ಅವಕಾಶ ನೀಡಲಾಯಿತು, ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನಲ್ಲಿ ಸಾಮರ್ಥ್ಯ ವರ್ಧನೆಗಾಗಿ ನೂತನವಾದ ಡಿಜಿಟಲ್ ಕಲಿಕಾ ಸಂಪನ್ಮೂಲಗಳ ಅಭಿವೃದ್ಧಿ ಕುರಿತು ಜಂಟಿ ಕಾರ್ಯಾಗಾರ ಹಾಗೂ ಕೆಪಾಸಿಟಿ ಬಿಲ್ಡಿಂಗ್ ಕಮಿಷನ್ (ಸಿಬಿಸಿ) ಸಹಯೋಗದೊಂದಿಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಕಾರ್ಯಾಗಾರ ಕೂಡಾ ನಡೆಯಿತು.

ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ.ಬಿ.ಎಸ್..ಎನ್.ಎ.ಎ.), ಭಾರತೀಯ ರೈಲ್ವೆಯ ರಾಷ್ಟ್ರೀಯ ಅಕಾಡೆಮಿ ಸೇರಿದಂತೆ ಆಯ್ದ ಸಿಟಿಐಗಳ ಅಧಿಕಾರಿಗಳನ್ನು ಒಳಗೊಂಡ 70 ಕ್ಕೂ ಹೆಚ್ಚು ಭಾಗವಹಿಸುವವರು;  ಮಹಾರಾಷ್ಟ್ರ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್, ಹರಿಯಾಣ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ನಂತಹ ರಾಜ್ಯದ ಎಟಿಐಗಳು;  ಸಂಬಂಧಪಟ್ಟ ಲೈನ್ ಸಚಿವಾಲಯಗಳು/ ಇಲಾಖೆಗಳು ಮತ್ತು ಸಿಬಿಸಿ ಎಂಪನೆಲ್ಡ್ ಏಜೆನ್ಸಿಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯ ಯೋಜನೆಯಲ್ಲಿ ವ್ಯಾಪಕ ಅಳವಡಿಕೆಗಾಗಿ, ಪಿಎಂ ಗತಿಶಕ್ತಿಯನ್ನು ಮಹತ್ವಾಕಾಂಕ್ಷೆಯ ಬ್ಲಾಕ್ ಗಳ ಕಾರ್ಯಕ್ರಮದಲ್ಲಿ ಮತ್ತಷ್ಟು ವಿವರವಾಗಿ ಸಂಯೋಜಿಸಲಾಗಿದೆ.  ಸಿಟಿಐಗಳು ಮತ್ತು ರಾಜ್ಯ ಎಟಿಐಗಳು ಸಂಪನ್ಮೂಲ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸಮಗ್ರ ಪ್ರದೇಶ-ಅಭಿವೃದ್ಧಿ ಯೋಜನೆಗಾಗಿ ಪ್ರಧಾನಮಂತ್ರಿ ಗತಿಶಕ್ತಿ ಎನ್.ಎಂ.ಪಿ ಯ ಕಠಿಣ ಬಳಕೆಯಲ್ಲಿ ಸರ್ಕಾರಿ ಅಧಿಕಾರಿಯನ್ನು ಸೇರಿಸಿಕೊಳ್ಳಲಾಗುತ್ತದೆ.

ಕಾರ್ಯಾಗಾರವು ಸಾಗಣಿಕೆ(ಲಾಜಿಸ್ಟಿಕ್ಸ್) ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಸಾಮರ್ಥ್ಯ ನಿರ್ಮಾಣ ಕಾರ್ಯತಂತ್ರಕ್ಕಾಗಿ ಕೈಗೊಂಡ ಕ್ರಮಗಳಲ್ಲಿ ಒಂದಾಗಿದೆ.  ಕಾರ್ಯಾಕ್ರಮದಲ್ಲಿ ತೆಗೆದುಕೊಳ್ಳಲಾದ ಇತರ ಉಪಕ್ರಮಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

ಪಿಎಂ ಗತಿಶಕ್ತಿ ಕುರಿತ ಪಠ್ಯಗಳ ಏಕೀಕರಣದ ಕುರಿತು ಸಿಟಿಐಗಳು ಮತ್ತು ರಾಜ್ಯ ಎಟಿಐಗಳನ್ನು ಸಂವೇದನಾಶೀಲಗೊಳಿಸಲು, 4 ಆಗಸ್ಟ್ 2023 ರಂದು ಸಿಬಿಸಿ ಜೊತೆಗೆ ಎಲ್ಲಾ ಸಿಟಿಐಗಳು ಮತ್ತು ರಾಜ್ಯ ಎಟಿಐಗಳೊಂದಿಗೆ ವೆಬಿನಾರ್ ಅನ್ನು ನಡೆಸಲಾಯಿತು. ಇಂದಿನವರೆಗೆ, ಅದೇ ಅಧಿಕಾರಿಗಳು, 17 ಸಿಟಿಐಗಳು ಮತ್ತು 19 ರಾಜ್ಯ ಎಟಿಐಗಳು ನೋಡಲ್ ಅನ್ನು ನೇಮಿಸಿದ್ದಾರೆ.  

ಸಾಗಣಿಕೆ( ಲಾಜಿಸ್ಟಿಕ್ಸ್) ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಡಿಪಿಐಐಟಿ ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯದ ನಡುವೆ 4ನೇ ಅಕ್ಟೋಬರ್ 2023 ರಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು.

13 ಅಕ್ಟೋಬರ್, 2023 ರಂದು ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯನ್ನು ಅನ್ನು ಪ್ರಾರಂಭಿಸಿದಾಗಿನಿಂದ, ಭಾರತ ಸರ್ಕಾರದ 39 ಸಚಿವಾಲಯಗಳು ಮತ್ತು ಎಲ್ಲಾ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಧಾನಮಂತ್ರಿ ಗತಿಶಕ್ತಿ ವೇದಿಕೆಗಳಲ್ಲಿ ಅಳವಡಿಸಲಾಗಿದೆ. ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಲಾಗಿದೆ ಮತ್ತು ಪ್ರದರ್ಶಿಸಲಾಗಿದೆ.  ಕೆವಾಡಿಯಾದಲ್ಲಿ 3 ನೇ ಟ್ರೇಡ್ ಮತ್ತು ಇನ್ವೆಸ್ಟ್ಮೆಂಟ್ ವರ್ಕಿಂಗ್ ಗ್ರೂಪ್ ನಲ್ಲಿ ವ್ಯಾಪಾರ ಮೂಲಸೌಕರ್ಯ ಕುರಿತು ಜಿ-20 ಸೆಮಿನಾರ್, ಬಿ-20 ನಲ್ಲಿ ಪ್ರದರ್ಶನ, 2023 ಜಾರ್ಜಿಯಾದಲ್ಲಿ ಪ್ರಾದೇಶಿಕ ಸಹಕಾರ ಮತ್ತು ಏಕೀಕರಣ ಸಮ್ಮೇಳನ ಏರ್ಪಡಿಸಲಾಗಿದೆ ಮತ್ತು ಐದು ಪ್ರಾದೇಶಿಕ ಕಾರ್ಯಾಗಾರಗಳನ್ನು ಒಳಗೊಂಡು ದೇಶಾದ್ಯಂತ ಸಮ್ಮೇಳನ ಏರ್ಪಡಿಸಲಾಗಿದೆ.  

ಈ ಎಲ್ಲಾ ಪ್ರಮುಖ ಉಪಕ್ರಮವು ನೇಪಾಳ, ಜಪಾನ್ ಮತ್ತು ವಿಯೆಟ್ನಾಂನಂತಹ ವಿವಿಧ ದೇಶಗಳಿಂದ ಪ್ರಶಂಸೆ ಗಳಿಸಿದೆ. ಇದಲ್ಲದೆ, ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೆರಡರಿಂದಲೂ ಪ್ರಧಾನ ಮಂತ್ರಿ ಗತಿಶಕ್ತಿ ಬಳಕೆಯ ಯಶಸ್ಸಿನ ಕಥೆಗಳ ಕುರಿತು 'ಪಿಎಂ ಗತಿಶಕ್ತಿಯ ಸಂಕಲನ'ವನ್ನು ಕೂಡಾ ಪ್ರಕಟಿಸಲಾಗಿದೆ. 

*** **



(Release ID: 1969297) Visitor Counter : 75