ಹಣಕಾಸು ಸಚಿವಾಲಯ
ಜಾಗತಿಕ ಕಡಲ ಭಾರತ ಶೃಂಗಸಭೆ (ಜಿಎಂಐಎಸ್) 2023 ರಲ್ಲಿ 'ಕಡಲ ಹಣಕಾಸು, ವಿಮೆ ಮತ್ತು ಮಧ್ಯಸ್ಥಿಕೆ' ಕುರಿತು ಅಧಿವೇಶನದ ಅಧ್ಯಕ್ಷತೆ ವಹಿಸಿದ ಹಣಕಾಸು ಸಚಿವರು.
ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ ಯುರೋಪ್ ತಲುಪಲು ಸಮುದ್ರ ಮಾರ್ಗವಾಗಿದೆ, ಇದು ಸಾಗಾಣಿಕೆ ವೆಚ್ಚವನ್ನು ಕಡಿತಗೊಳಿಸುತ್ತದೆ: ಕೇಂದ್ರ ಹಣಕಾಸು ಸಚಿವರು
ಭಾರತದಲ್ಲಿ ಕಡಲ ಮಧ್ಯಸ್ಥಿಕೆಯನ್ನು ಉತ್ತೇಜಿಸಲು ಪೂರ್ಣ ಪ್ರಮಾಣದ ಭಾರತೀಯ ಸ್ವಾಮ್ಯದ ಮತ್ತು ಭಾರತ ಆಧಾರಿತ ರಕ್ಷಣೆ ಮತ್ತು ಪರಿಹಾರ (ಪಿ&ಐ) ಘಟಕದ ಅಗತ್ಯವಿದೆ: ಕೇಂದ್ರ ಹಣಕಾಸು ಸಚಿವರು
Posted On:
19 OCT 2023 4:53PM by PIB Bengaluru
ಮುಂಬೈ, 19 ಅಕ್ಟೋಬರ್ 2023
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ದೇಶದ ಹಡಗು ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲು ಹಣಕಾಸು, ವಿಮೆ ಮತ್ತು ಮಧ್ಯಸ್ಥಿಕೆ ಮತ್ತು ಹೆಚ್ಚು ವೈವಿಧ್ಯಮಯ ಆಯ್ಕೆಗಳನ್ನು ರಚಿಸುವ ಅಗತ್ಯವಿದೆ ಎಂದು ಹೇಳಿದರು. ಇಂದು ಮುಂಬೈನಲ್ಲಿ ನಡೆದ ಜಾಗತಿಕ ಕಡಲ ಭಾರತ ಶೃಂಗಸಭೆ (ಜಿಎಂಐಎಸ್) 2023 ರಲ್ಲಿ 'ಕಡಲ ಹಣಕಾಸು, ವಿಮೆ ಮತ್ತು ಮಧ್ಯಸ್ಥಿಕೆ' ಕುರಿತ ಅಧಿವೇಶನದಲ್ಲಿ ಹಣಕಾಸು ಸಚಿವರು ಮಾತನಾಡಿದರು.
ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ ಕುರಿತು ಮಾತನಾಡಿದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, "ನಾವು ಯುರೋಪ್, ಮಧ್ಯ ಏಷ್ಯಾವನ್ನು ಸಮುದ್ರ ಮತ್ತು ಭೂ ಮಾರ್ಗದ ಮೂಲಕ ತಲುಪಲು ನೋಡುತ್ತಿದ್ದೇವೆ, ಇದು ಸಾಗಾಣಿಕೆ ವೆಚ್ಚವನ್ನು ಕಡಿತಗೊಳಿಸುತ್ತದೆ " ಎಂದು ಹೇಳಿದರು.
ಜಿಎಂಐಎಸ್ 2023 ಬಹು ಮುಖ್ಯವಾಗಿದೆ ಏಕೆಂದರೆ ಜಗತ್ತಿನಲ್ಲಿ ಸಾಕಷ್ಟು ಸವಾಲುಗಳಿರುವ ಸಂದರ್ಭದಲ್ಲಿ ಅಂದರೆ ಪೂರೈಕೆಯ ಸುರಕ್ಷತೆಯಲ್ಲಿ, ಪೂರೈಕೆಯ ಅಡ್ಡಿಯಲ್ಲಿ, ಮೌಲ್ಯ ಸರಪಳಿಗಳು ಮುರಿದುಹೋಗುವ ಸಮಯದಲ್ಲಿ ಇದನ್ನು ನಡೆಸಲಾಗುತ್ತಿದೆ ಎಂದು ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದರು. ಪ್ರಮುಖ ಸರಕುಗಳ ಸಾಗಣೆಗಳು ಕೆಲವೊಮ್ಮೆ ಅಪಾಯದಲ್ಲಿರುತ್ತವೆ ಮತ್ತು ಆಹಾರದ ಅಭದ್ರತೆ ಮತ್ತು ಇಂಧನ ಅಭದ್ರತೆಗಳೆಲ್ಲವೂ ಈ ಕಾರಣದಿಂದಾಗಿ ಉಂಟಾಗುತ್ತವೆ ಪರಿಣಾಮವಾಗಿ ಹಣದುಬ್ಬರವನ್ನು ಹೆಚ್ಚಿಸುತ್ತವೆ. ಕೋವಿಡ್ ಸಂಕಷ್ಟದಿಂದ ಹೊರಬರುತ್ತಿರುವ ಆರ್ಥಿಕತೆಗಳು ಈ ಸವಾಲನ್ನು ಎದುರಿಸುತ್ತಿವೆ ಎಂದು ಅವರು ಹೇಳಿದರು.
ಕೋವಿಡ್ ನ ನಂತರ ಕಡಲ ವ್ಯಾಪಾರವನ್ನು ಬೆಂಬಲಿಸಲು ಐಆರ್‌ಡಿಎಐ ಮತ್ತು ದೇಶೀಯ ವಿಮಾ ಕಂಪನಿಗಳ ವಿಮಾದಾರರಾದ ಜನರಲ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಜಿಐಸಿರಿ) ನೊಂದಿಗೆ "ಮೆರೈನ್ ಕಾರ್ಗೋ ಪೂಲ್" ಅನ್ನು ರಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್ ಡಿಎಐ) ಕಡಲ ಮರುವಿಮೆಯೊಂದಿಗೆ ಭಾರತದ ನೀಲಿ ಆರ್ಥಿಕ ಸೇವೆಗಳಲ್ಲಿ ಬೆಳವಣಿಗೆಯ ಮಾರ್ಗಗಳನ್ನು ಬೆಂಬಲಿಸಲು ಮತ್ತು ಭಾರತದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಹೆಚ್ಚಿನ ಸಂಖ್ಯೆಯ ಮರುವಿಮಾದಾರರನ್ನು ತರಲು ಮರುವಿಮಾ ವಲಯದಲ್ಲಿ ಹಲವಾರು ಮಾರ್ಪಾಡುಗಳನ್ನು ಅನುಮೋದಿಸಿದೆ ಎಂದು ಹಣಕಾಸು ಸಚಿವರು ಹೇಳಿದರು.
ಮಧ್ಯಸ್ಥಿಕೆ ಕುರಿತು ಮಾತನಾಡಿದ ಹಣಕಾಸು ಸಚಿವರು ನಿರ್ಮಲಾ ಸೀತಾರಾಮನ್, ಭಾರತವು ಮಧ್ಯಸ್ಥಿಕೆ ಮಸೂದೆಯನ್ನು ಅಂಗೀಕರಿಸಿದೆ, ಮಧ್ಯಸ್ಥಿಕೆ ಕೇಂದ್ರವನ್ನು ಪಡೆದುಕೊಂಡಿದೆ ಮತ್ತು ಮಧ್ಯಸ್ಥಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಸುಧಾರಿಸುತ್ತಿದೆ ಎಂದು ಮಾಹಿತಿ ನೀಡಿದರು. ಇವುಗಳಿಗಾಗಿ ಪೂರ್ಣ ಪ್ರಮಾಣದ ಭಾರತೀಯ ಸ್ವಾಮ್ಯದ ಮತ್ತು ಭಾರತ ಆಧಾರಿತ ರಕ್ಷಣೆ ಮತ್ತು ಪರಿಹಾರ (ಫಿ&ಐ) ಘಟಕವನ್ನು ಹೊಂದುವ ಅವಶ್ಯಕತೆಯಿದೆ ಎಂದು ಹಣಕಾಸು ಸಚಿವರು ಹೇಳಿದರು:
1) ಹಡಗು ಸಾಗಣೆಯ ಕಾರ್ಯದಲ್ಲಿ ಅಂತಾರಾಷ್ಟ್ರೀಯ ನಿರ್ಬಂಧಗಳು ಮತ್ತು ಒತ್ತಡಗಳಿಗೆ ಭಾರತದ ದುರ್ಬಲತೆಯನ್ನು ಕಡಿಮೆ ಮಾಡಲು ಮತ್ತು ಬೇಕಾದಂತೆ ಹೊಂದಿಕೊಳ್ಳುವ ಹೆಚ್ಚಿನ ಕಾರ್ಯತಂತ್ರವನ್ನು ಒದಗಿಸಲು. 2) ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ಕರಾವಳಿ ನೀರಿನಲ್ಲಿ ಮತ್ತು ಒಳನಾಡಿನ ನೀರಿನಲ್ಲಿ ಕಾರ್ಯನಿರ್ವಹಿಸುವ ಹಡಗುಗಳಿಗೆ ಹೊಣೆಗಾರಿಕೆಗಳ ರಕ್ಷಣೆಯನ್ನು ಒದಗಿಸಲು 3) ಸಧ್ಯಕ್ಕೆ ಭಾರತವು ಯಾವುದೇ ಉಪಸ್ಥಿತಿಯನ್ನು ಹೊಂದಿಲ್ಲದಿರುವ ಮತ್ತು ಕೆಲವೇ ಕಲವು ವಿದೇಶಿಯರ ಪ್ರಾಬಲ್ಯ ಹೊಂದಿರುವ ರಕ್ಷಣೆ ಮತ್ತು ಪರಿಹಾರದ (ಪಿ&ಐ) ವ್ಯವಹಾರದ ವಿಶೇಷ ವಿಭಾಗದಲ್ಲಿ ಭಾರತಕ್ಕೆ ಸಧೃಡ ಸ್ಥಾನವನ್ನು ಒದಗಿಸುವುದು, ಮತ್ತು 4) ಭಾರತೀಯ ರಕ್ಷಣೆ ಮತ್ತು ನಷ್ಟ ಪರಿಹಾರ (ಪಿ&ಐ) ಸೇವೆಗಳು ದೇಶದಲ್ಲಿ ಕಡಲ ಮಧ್ಯಸ್ಥಿಕೆಯನ್ನು ಉತ್ತೇಜಿಸುವಲ್ಲಿ ಮತ್ತು ಹೆಚ್ಚಿಸುವಲ್ಲಿ ಸಹ ಸಹಾಯ ಮಾಡಬಹುದು.
ಹಾರ್ಮೋನೈಸ್ಡ್ ಮಾಸ್ಟರ್ ಲಿಸ್ಟ್ (ಎಚ್ ಎಂ ಎಲ್ – ಸಮನ್ವಯಗೊಳಿಸಿದ ಸಮಗ್ರ ಪಟ್ಟಿ) ಅನ್ನು ಮರುಪರಿಶೀಲಿಸಲು ಮತ್ತು ಎಲ್ಲಾ ಹಣಕಾಸು/ನಿಯಂತ್ರಕ ಸಂಸ್ಥೆಗಳ ನಡುವೆ ಮೂಲಸೌಕರ್ಯಗಳ ಮಾಹಿತಿಯನ್ನು ಸರಳೀಕರಿಸಲು ತಜ್ಞರ ಸಮಿತಿಯನ್ನು ಸಹ ರಚಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಈ ಸಮಿತಿಯು ಅಭಿವೃದ್ಧಿಪಡಿಸುತ್ತಿರುವ ಚೌಕಟ್ಟನ್ನು ಕಾಲಕಾಲಕ್ಕೆ ಎಚ್‌ಎಂಎಲ್ ಅನ್ನು ನವೀಕರಿಸಲು ಸೂಕ್ತ ವಲಯಗಳನ್ನು ಮೂಲಸೌಕರ್ಯ ಎಂದು ವರ್ಗೀಕರಿಸಲು ಸಹಕಾರಿಯಾಗುತ್ತದೆ.
2022 ರಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ನಗದೀಕರಣ ಯೋಜನೆ (ಎನ್ ಎಂಪಿ) ಅಡಿಯಲ್ಲಿ 2022-25 ಕ್ಕೆ ಒಟ್ಟು ಅಂದಾಜು 14,483 ಕೋಟಿ ರೂಪಾಯಿಗಳ ನಗದೀಕರಣಕ್ಕಾಗಿ 9 ಪ್ರಮುಖ ಬಂದರುಗಳಲ್ಲಿ 31 ಯೋಜನೆಗಳನ್ನು ಗುರುತಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು,
ಪರ್ಯಾಯ ವಿವಾದ ಪರಿಹಾರ (ಎಡಿಆರ್) ಕಾರ್ಯವಿಧಾನವನ್ನು ಒದಗಿಸುವ ‘ಎಸ್‌ಎಆರ್‌ಒಡಿ-ಪೋರ್ಟ್ಸ್’ (ವಿವಾದಗಳ ಮಿತವ್ಯಯ ಪರಿಹಾರದ ಸಂಸ್ಥೆ - ಬಂದರುಗಳು) ಸ್ಥಾಪನೆಯ ಬಗ್ಗೆಯೂ ಹಣಕಾಸು ಸಚಿವರು ಮಾಹಿತಿ ನೀಡಿದರು.
ಅಂತರರಾಷ್ಟ್ರೀಯ ಸಾಗಣೆ ವಿಭಾಗದಲ್ಲಿ ಭಾರತವು 2014 ರಲ್ಲಿ 44 ನೇ ಸ್ಥಾನದಿಂದ 2023 ರಲ್ಲಿ 22 ನೇ ಸ್ಥಾನಕ್ಕೆ ಏರಿದೆ ಎಂದು ಹಣಕಾಸು ಸಚಿವರು ತಿಳಿಸಿದರು. ವಿಶ್ವ ಬ್ಯಾಂಕ್‌ನ ಸಾಗಾಣಿಕೆ ಕಾರ್ಯಕ್ಷಮತೆ ಸೂಚ್ಯಂಕ ವರದಿ 2023, ಭಾರತೀಯ ಬಂದರುಗಳ "ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯ" ಈಗ 0.9 ದಿನ ಆಗಿದೆ ಎಂದು ಅವರು ಹೇಳಿದರು., ಇದು ಸಿಂಗಾಪುರ್ (1 ದಿನ), ಯುಎಇ (1.1 ದಿನಗಳು), ಜರ್ಮನಿ (1.3 ದಿನಗಳು), ಅಮೆರಿಕ (1.5 ದಿನಗಳು), ಆಸ್ಟ್ರೇಲಿಯಾ (1.7 ದಿನಗಳು), ರಷ್ಯಾ (1.8 ದಿನಗಳು) ಮತ್ತು ದಕ್ಷಿಣ ಆಫ್ರಿಕಾ (2.8 ದಿನಗಳು) ದೇಶಗಳಿಗಿಂತ ಕಡಿಮೆ ಇದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗಿಫ್ಟ್ ಸಿಟಿಯಲ್ಲಿರುವ ಐಎಫ್‌ಎಸ್‌ಸಿಎ ಬಗ್ಗೆ ಮಾತನಾಡುತ್ತಾ, ಇದು 'ಹಡಗು ಗುತ್ತಿಗೆ' ಅನ್ನು ಹಣಕಾಸಿನ ಉತ್ಪನ್ನವಾಗಿ ಸೂಚಿಸಿದೆ ಮತ್ತು 'ಫ್ರೇಮ್‌ವರ್ಕ್ ಫಾರ್ ಶಿಪ್ ಲೀಸಿಂಗ್' ಮೂಲಕ ಹಡಗು ಹಣಕಾಸು ಮತ್ತು ಕಾರ್ಯಾಚರಣೆಯ ಗುತ್ತಿಗೆಗಳನ್ನು ಸಕ್ರಿಯಗೊಳಿಸಲು ಚೌಕಟ್ಟನ್ನು ಒದಗಿಸಿದೆ. 10 ವರ್ಷಗಳವರೆಗೆ ತೆರಿಗೆ ರಜೆ, ತೆರಿಗೆ ಹಿಡುವಳಿಯಲ್ಲಿ ಯಾವುದೇ ಬಂಡವಾಳ ಲಾಭಗಳು, ಐದು ವರ್ಷಗಳ ಕಾಲ ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ ಇತ್ಯಾದಿ ಸೇರಿದಂತೆ ಐಎಫ್‌ಎಸ್ ಸಿ ಯಲ್ಲಿ ಹಡಗು ಗುತ್ತಿಗೆ ಘಟಕಗಳಿಗೆ ವಿವಿಧ ತೆರಿಗೆ ಪ್ರೋತ್ಸಾಹ ಮತ್ತು ವಿನಾಯಿತಿಗಳನ್ನು ನೀಡಲಾಗುತ್ತದೆ. ವಿದೇಶಿ ಘಟಕಗಳಿಗೆ ಹಡಗಿನ ಗುತ್ತಿಗೆಯ ಖಾತೆಯಲ್ಲಿ ಪಾವತಿಸಿದ ರಾಯಧನ ಅಥವಾ ಬಡ್ಡಿಯ ಮೂಲಕ ಉತ್ಪತ್ತಿಯಾಗುವ ಆದಾಯದ ಮೇಲೆ ಹೆಚ್ಚುವರಿ ವಿನಾಯಿತಿಗಳನ್ನು ನೀಡಲಾಗಿದೆ ಮತ್ತು 100% ತೆರಿಗೆ ವಿನಾಯಿತಿಯನ್ನು ಅನುಭವಿಸುತ್ತಿರುವ ಐಎಫ್ ಎಸ್ ಸಿ ಘಟಕದಿಂದ ಹಡಗಿನ ವರ್ಗಾವಣೆಗೆ 'ಯಾವುದೇ ಕ್ಯಾಪಿಟಲ್ ಗೇನ್ಸ್ ತೆರಿಗೆ ಇಲ್ಲ'. ಭಾರತ ಸರ್ಕಾರವು ಕೇಂದ್ರ ಬಜೆಟ್ 2022ರಲ್ಲಿ, ತ್ವರಿತ ವಿವಾದ ಪರಿಹಾರ ಪ್ರಕ್ರಿಯೆಯನ್ನು ಒದಗಿಸಲು ʼಗಿಫ್ಟ್ ನಗರʼದಲ್ಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು (ಐಎಸಿ) ಸ್ಥಾಪಿಸಲು ಮಂಜೂರು ಮಾಡಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಬಂದರು ಕೇಂದ್ರಿತ ಅಭಿವೃದ್ಧಿಗೆ ಹೇಗೆ ಆದ್ಯತೆ ನೀಡಿದೆ ಎಂಬುದರ ಕುರಿತು ಮಾತನಾಡುತ್ತಾ, ಹಣಕಾಸು ಸಚಿವರು ವಿವಿಧ ಕಡಲ ಸಂಬಂಧಿತ ನೀತಿಗಳು ಮತ್ತು ಕೇಂದ್ರವು ನೀಡಿದ ಆರ್ಥಿಕ ಬೆಂಬಲವನ್ನು ಎತ್ತಿ ತೋರಿಸಿದರು:
- 2000 ಮತ್ತು 2023 ರ ನಡುವೆ ಸಮುದ್ರ ಸಾರಿಗೆ ವಲಯದಲ್ಲಿ ಪಡೆದ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) 75% ಕಳೆದ 9 ವರ್ಷಗಳಲ್ಲಿ ಸಂಭವಿಸಿದೆ - ಸಮುದ್ರ ಸಾರಿಗೆ ವಲಯವು ಕಳೆದ 9 ವರ್ಷಗಳಲ್ಲಿ 4.2 ಶತಕೋಟಿ ಯು ಎಸ್ ಡಾಲರ್‌ಗಿಂತ ಹೆಚ್ಚಿನ ಎಫ್‌ಡಿಐ ಒಳಹರಿವನ್ನು ಸ್ವೀಕರಿಸಿದೆ
- ಭಾರತೀಯ ಬಂದರುಗಳ ಒಟ್ಟು ಸರಕು ನಿರ್ವಹಣೆ ಸಾಮರ್ಥ್ಯವು ಸುಮಾರು ದ್ವಿಗುಣಗೊಂಡಿದೆ - 2014ರಲ್ಲಿ ವರ್ಷಕ್ಕೆ ಸುಮಾರು 1,400 ಮಿಲಿಯನ್ ಟನ್‌ಗಳಿಂದ (ಎಂಟಿಪಿಎ) 2,600 ಎಂಟಿಪಿಎ ಗಿಂತ ಹೆಚ್ಚು.
- ಸರಕಿನ ಪ್ರಮಾಣವು 2014-15ರಲ್ಲಿ 74ಎಂಟಿಪಿಎನಿಂದ 2022-23ರಲ್ಲಿ 151ಎಂಟಿಪಿಎಗೆ ದ್ವಿಗುಣಗೊಂಡಿದೆ.
(Release ID: 1969203)
Visitor Counter : 110