ಕಲ್ಲಿದ್ದಲು ಸಚಿವಾಲಯ
azadi ka amrit mahotsav

​​​​​​​ವಿಶೇಷ ಅಭಿಯಾನ 3.0 ಅಡಿಯಲ್ಲಿ 10 ಉನ್ನತ ಕಾರ್ಯನಿರ್ವಹಣೆಯ ಸಚಿವಾಲಯಗಳಲ್ಲಿ ಕಲ್ಲಿದ್ದಲು ಸಚಿವಾಲಯವು ಒಂದಾಗಿದೆ


1,29,962 ರ ಗುರಿಯಲ್ಲಿ 42,738 ಭೌತಿಕ ಕಡತಗಳನ್ನು ಸಚಿವಾಲಯ ಪರಿಶೀಲಿಸಿದೆ

ಅಳಿದುಳಿದ ಅವಶೇಷಗಳ ವಿಲೇವಾರಿಯಿಂದ ರೂ. 18.08 ಕೋಟಿ ಆದಾಯಗಳಿಸಿದೆ 

ಅಕ್ಟೋಬರ್ 16 ರವರೆಗೆ 287 ಸೈಟ್‌ಗಳನ್ನು ಸ್ವಚ್ಛಗೊಳಿಸಲಾಗಿದೆ; ದೇಶಾದ್ಯಂತ 795 ಸೈಟ್‌ಗಳನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಲಾಗಿದೆ

Posted On: 18 OCT 2023 3:29PM by PIB Bengaluru

ವಿಶೇಷ ಅಭಿಯಾನ 3.0 ಅಡಿಯಲ್ಲಿ, ಬಾಕಿ ಉಳಿದಿರುವ ಉಲ್ಲೇಖಗಳನ್ನು ಪರಿಹರಿಸಲು ಮತ್ತು ಸಂಸತ್ ಸದಸ್ಯರು (ಸಂಸದರು), IMC ಉಲ್ಲೇಖಗಳು (ಕ್ಯಾಬಿನೆಟ್ ಪ್ರಸ್ತಾವನೆಗಳು) ಮತ್ತು ರಾಜ್ಯ ಸರ್ಕಾರಗಳ ಉಲ್ಲೇಖಗಳು ಸೇರಿದಂತೆ ವಿವಿಧ ಪಾಲುದಾರರ ವಿಚಾರಣೆಗಳಿಗೆ ಪ್ರತಿಕ್ರಿಯಿಸಲು ಕಲ್ಲಿದ್ದಲು ಸಚಿವಾಲಯವು ವಿವಿಧ ಕ್ರಮಗಳನ್ನು ಕೈಗೊಂಡಿದೆ.

ದಾಖಲೆಗಳ ನಿರ್ವಹಣೆಯ ಅಡಿಯಲ್ಲಿ ಸಚಿವಾಲಯವು 1,29,962 ಕಡತಗಳ ಗುರಿ ಹೊಂದಿದ್ದು ಈಗಾಗಲೇ 42,738 ಭೌತಿಕ ಕಡತಗಳ ಪರಿಶೀಲನೆ ಪೂರ್ತಿಗೊಳಿಸಿದೆ. ಪರಿಶೀಲನೆ ನಂತರ, ಇಲ್ಲಿಯವರೆಗೆ 5041 ಭೌತಿಕ ಕಡತಗಳನ್ನು ತೆಗೆದುಹಾಕಲಾಗಿದೆ ಮತ್ತು 10,459 ಕ್ಕೂ ಹೆಚ್ಚು ಇ-ಕಡತಗಳಿಗೆ ಆನ್‌ಲೈನ್‌ನಲ್ಲಿ ಪರಿಹಾರ ಒದಗಿಸಲಾಗಿದೆ. ವಿಶೇಷ ಅಭಿಯಾನವು ಇದುವರೆಗೆ ಸುಮಾರು 5,93,915 ಚದರ ಅಡಿಗಳಷ್ಟು ಕಛೇರಿ ಸ್ಥಳವನ್ನು ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಅಳಿದುಳಿದ ಅವಶೇಷಗಳ ವಿಲೇವಾರಿಯಿಂದ ಇದುವರೆಗೆ ರೂ. 18.08 ಕೋಟಿ ಆದಾಯಗಳಿಕೆಯಾಗಿದೆ.

ಈ ಅಭಿಯಾನದ ಹಂತದಲ್ಲಿ ಶೇಕಡಾ 100 ರಷ್ಟು ಪೂರ್ಣಗೊಳಿಸುವ ದೃಢವಾದ ಬದ್ಧತೆಯೊಂದಿಗೆ ಅಕ್ಟೋಬರ್ 16 ರವರೆಗೆ, 795 ಸ್ವಚ್ಛತಾ ತಾಣಗಳ ಗುರಿಯ ವಿರುದ್ಧ ದೇಶಾದ್ಯಂತ 287 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗಿದೆ. ಪ್ರಧಾನಮಂತ್ರಿ ಕಚೇರಿ ಉಲ್ಲೇಖಗಳ ನಿರ್ವಹಣೆಯಲ್ಲಿ ಶೇಕಡಾ 61.9 ರಷ್ಟು ಸಾಧನೆ ದರ ಸಾಧಿಸಲಾಗಿದೆ. 

ವಿಶೇಷ ಅಭಿಯಾನ 3.0 ರ ಐದು ನಿಯತಾಂಕಗಳಲ್ಲಿ ಕಲ್ಲಿದ್ದಲು ಸಚಿವಾಲಯವು ಉಚ್ಚಾಮಟ್ಟದ 10 ಪ್ರದರ್ಶಕರ ಪಟ್ಟಿಯಲ್ಲಿ ಉಲ್ಲೇಖಿತವಾಗಿದೆ.

ವಿಶೇಷ ಅಭಿಯಾನ 3.0 ಅಡಿಯಲ್ಲಿ 100% ಗುರಿ ಸಾಧನೆಗೆ ಸಚಿವಾಲಯವು ಕೈಗೊಂಡಿರುವ ಚಟುವಟಿಕೆಗಳ ಪ್ರಗತಿಯನ್ನು ಕಲ್ಲಿದ್ದಲು ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ ಅವರು ಪರಿಶೀಲಿಸಿದ್ದಾರೆ.

ಅಭಿಯಾನದ ಸಮಯದಲ್ಲಿ, SECL ನ ಜಮುನಾ ಕೋಟ್ಮಾ ಪ್ರದೇಶವು ಕಲ್ಲಿದ್ದಲು ಗಣಿಗಳ ಕೆಲಸಕ್ಕೆ ಬಾರದ ವಸ್ತುಗಳನ್ನು ವಿವಿಧ ಸೃಜನಶೀಲ ಶಿಲ್ಪಗಳಾಗಿ ಪರಿವರ್ತಿಸುವ ಉದ್ದೇಶದಿಂದ "ಸ್ಕ್ರ್ಯಾಪ್ ಟು ಸ್ಕಲ್ಪ್ಚರ್" (ಕಸದಿಂದ ರಸ) ಉಪಕ್ರಮವನ್ನು ಕೈಗೊಂಡಿದೆ. ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ಜಮುನಾ ಕೊತ್ಮಾ ಪ್ರದೇಶ, ಬಂಕಿಮ್ ವಿಹಾರ್ ನಲ್ಲಿ ಸಾರ್ವಜನಿಕರಿಗೆ ಅಳಿದುಳಿದ ವಸ್ತುಗಳಿಂದ ತಯಾರಿಸಿದ ಈ ಶಿಲ್ಪಗಳನ್ನು ಪ್ರದರ್ಶಿಸಲು ಕಲ್ಲಿದ್ದಲು ಗಣಿ ಪ್ರದೇಶದವರು ಸಾರ್ವಜನಿಕ ಉದ್ಯಾನವನವನ್ನು ಸ್ಥಾಪಿಸಿದ್ದಾರೆ 

****


(Release ID: 1968811) Visitor Counter : 105


Read this release in: English , Urdu , Hindi