ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಮುಂಬರುವ ಏಷ್ಯನ್ ಪ್ಯಾರಾ ಕ್ರೀಡಾಕೂಟಕ್ಕಾಗಿ 303 ಕ್ರೀಡಾಪಟುಗಳು ಮತ್ತು 143 ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡಿದೆ
Posted On:
17 OCT 2023 6:16PM by PIB Bengaluru
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು (ಎಂವೈಎಎಸ್) ಮುಂಬರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾಗವಹಿಸಲು 17 ಕ್ರೀಡಾ ವಿಭಾಗಗಳಲ್ಲಿ ಒಟ್ಟು 303 ಕ್ರೀಡಾಪಟುಗಳನ್ನು ಅಂತಿಮಗೊಳಿಸಿದೆ. ಏಷ್ಯನ್ ಪ್ಯಾರಾ ಕ್ರೀಡಾಕೂಟ ತಂಡದ ಭಾಗವಾಗಲು ಸಚಿವಾಲಯವು ಒಟ್ಟು 143 ತರಬೇತುದಾರರು, ಎಸ್ಕಾರ್ಟ್ಗಳು, ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ನಿಯೋಜನೆಗೂ ಒಪ್ಪಿಗೆ ನೀಡಿದೆ.
ಅಥ್ಲೀಟ್ಗಳ ಪಟ್ಟಿಯು 191 ಪುರುಷ ಮತ್ತು 112 ಮಹಿಳಾ ಅಥ್ಲೀಟ್ಗಳನ್ನು ಒಳಗೊಂಡಿದೆ. ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು 123 ಅಥ್ಲೀಟ್ಗಳ ದೊಡ್ಡ ತಂಡವನ್ನು ರೂಪಿಸಲಾಗಿದೆ. 2018ರಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಕೊನೆಯ ಆವೃತ್ತಿಯಲ್ಲಿ 13 ಕ್ರೀಡೆಗಳಲ್ಲಿ ಒಟ್ಟು 190 ಕ್ರೀಡಾಪಟುಗಳು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಭಾರತವು 15 ಚಿನ್ನ ಸೇರಿದಂತೆ ಒಟ್ಟು 72 ಪದಕಗಳನ್ನು ಮುಡಿಗೇರಿಸಿಕೊಂಡಿತ್ತು.
ಮುಂಬರುವ ಏಷ್ಯನ್ ಪ್ಯಾರಾ ಕ್ರೀಡಾಕೂಟ 2022ಕ್ಕೆ ಭಾರತೀಯ ತಂಡದ ಭಾಗವಾಗಿರುವ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ಪಟ್ಟಿಯ ವಿವರಕ್ಕಾಗಿ ಕೆಳಗಿನ ಲಿಂಕ್ನಲ್ಲಿ ಪಡೆಯಬಹುದು.
Click here for the complete list
***
(Release ID: 1968673)