ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 5

ಪ್ರತಿಷ್ಠಿತ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಲು ಹಾಲಿವುಡ್ ನಟ ಮತ್ತು ನಿರ್ಮಾಪಕ ಮೈಕೆಲ್ ಡೌಗ್ಲಾಸ್ 54 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿ

ಪಣಜಿ | 13 ಅಕ್ಟೋಬರ್ 2023

54ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ ಐ)ದಲ್ಲಿ ಪ್ರತಿಷ್ಠಿತ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಾಲಿವುಡ್ ನಟ ಮತ್ತು ನಿರ್ಮಾಪಕ ಮೈಕೆಲ್ ಡೌಗ್ಲಾಸ್ ಅವರಿಗೆ ನೀಡಲಾಗುವುದು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ತಮ್ಮ ಎಕ್ಸ್ X ಖಾತೆ ಮೂಲಕ ಈ ಘೋಷಣೆ ಮಾಡಿದ್ದಾರೆ.  ಜಾಗತಿಕ ಸಿನಿಮಾ ಕ್ಯಾಲೆಂಡರ್ ನಲ್ಲಿ 54 ನೇ ಐಎಫ್ ಎಫ್ ಐ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಖ್ಯಾತ ನಟರು, ಅವರ ಪತ್ನಿ, ಪ್ರಖ್ಯಾತ ನಟಿ ಮತ್ತು ಪರೋಪಕಾರಿ ಕ್ಯಾಥರೀನ್ ಝೀಟಾ ಜೋನ್ಸ್ ಮತ್ತು ಅವರ ಮಗ ಮತ್ತು ನಟ ಡೈಲನ್ ಡೌಗ್ಲಾಸ್ ಅವರೊಂದಿಗೆ ಭಾಗವಹಿಸಲಿದ್ದಾರೆ. ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ಪರ್ಸೆಪ್ಟ್ ಲಿಮಿಟೆಡ್‌ನ ಸಂಸ್ಥಾಪಕರು ಮತ್ತು ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ 25 ವರ್ಷಗಳನ್ನು ಆಚರಿಸಿಕೊಳ್ಳುತ್ತಿರುವ ಸನ್‌ಬರ್ನ್ ಸಂಗೀತ ಉತ್ಸವದ ಶೈಲೇಂದ್ರ ಸಿಂಗ್ ಸಹ ಪಾಲ್ಗೊಳ್ಳಲಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಈ ಘೋಷಣೆ ಮಾಡಿರುವ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್‌ ಅವರು ಮೈಕೆಲ್ ಡೌಗ್ಲಾಸ್, ಅವರ ಪತ್ನಿ ಕ್ಯಾಥರೀನ್ ಝೀಟಾ ಜೋನ್ಸ್ ಮತ್ತು ಪುತ್ರ ಡೈಲನ್ ಡೌಗ್ಲಾಸ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಭಾರತದ ಬಗ್ಗೆ ಮೈಕೆಲ್ ಡಗ್ಲಾಸ್ ಹೊಂದಿರುವ ಪ್ರೀತಿ ಎಲ್ಲರಿಗೂ ತಿಳಿದಿದೆ ಮತ್ತು ನಮ್ಮ ಶ್ರೀಮಂತ ಸಿನಿಮಾ ಸಂಸ್ಕೃತಿ ಮತ್ತು ವಿಶಿಷ್ಠ ಸಂಪ್ರದಾಯಗಳನ್ನು ಪ್ರದರ್ಶಿಸಲು ದೇಶವು ಉತ್ಸುಕವಾಗಿದೆ ಎಂದು ಅವರು ಹೇಳಿದರು

1999ರಲ್ಲಿ ನಡೆದ 30ನೇ ಐಎಫ್ಎಫ್ ಐನಲ್ಲಿ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಸಿನಿಮಾ ಜಗತ್ತಿಗೆ ಅಸಾಧಾರಣ ಕೊಡುಗೆ ನೀಡಿ ಶ್ರೀಮಂತಗೊಳಿಸಿದ ಮತ್ತು ಉನ್ನತ ಮಟ್ಟಕ್ಕೆ ಕೊಂಡೊಯ್ದ ವ್ಯಕ್ತಿಗಳಿಗೆ ಪ್ರಶ್ನಿಸಿಯನ್ನು ನೀಡಲಾಗುವುದು.  ಚಲನಚಿತ್ರೋದ್ಯಮದಲ್ಲಿ ದಿಗ್ಗಜರಾಗಿರುವ ಮೈಕೆಲ್ ಡೌಗ್ಲಾಸ್ ತಮ್ಮ ಅಪ್ರತಿಮ ಪ್ರತಿಭೆ ಮತ್ತು ಅವರ ಚಿತ್ರಕಲೆ ಯ ಬದ್ಧತೆಯಿಂದ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ.

ಮೈಕೆಲ್ ಡೌಗ್ಲಾಸ್ ಅವರು ಎರಡು ಅಕಾಡೆಮಿ ಪ್ರಶಸ್ತಿಗಳು, ಐದು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ಮತ್ತು ಎಮ್ಮಿ ಪ್ರಶಸ್ತಿಗಳನ್ನು ಗಳಿಸಿ ಗಮನಾರ್ಹ ವೃತ್ತಿಜೀವನ ಆನಂದಿಸಿದ್ದಾರೆ. "ವಾಲ್ ಸ್ಟ್ರೀಟ್ (1987)", "ಬೇಸಿಕ್ ಇನ್‌ಸ್ಟಿಂಕ್ಟ್ (1992)", "ಫಾಲಿಂಗ್ ಡೌನ್ (1993)", "ದಿ ಅಮೇರಿಕನ್ ಪ್ರೆಸಿಡೆಂಟ್ (1995)", "ಟ್ರಾಫಿಕ್ (2000)" ಮತ್ತು "ಬಿಹೈಂಡ್ ದಿ ಕ್ಯಾಡೆಲ್ ಬ್ರಾ(2013)” ಮುಂತಾದ ಮೇರು ಸಿನಿಮಾಗಳಲ್ಲಿ ಅವರ ಪಾತ್ರಗಳು ಚಲನಚಿತ್ರ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ. ಅಲ್ಲದೆ, ಅವರು "ಒನ್ ಫ್ಲೈ ಓವರ್ ದಿ ಕುಕೋಸ್‌ ನೆಸ್ಟ್ (1975)", "ದಿ ಚೈನಾ ಸಿಂಡ್ರೋಮ್ (1979)", ಮತ್ತು "ದಿ ಗೇಮ್ (1999)" ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಹಲವು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಪರಮಾಣು ಪ್ರಸರಣ ತಡೆ ಮತ್ತು ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಲಘು ಶಸ್ತ್ರಾಸ್ತ್ರಗಳ ಅಕ್ರಮ ವ್ಯಾಪಾರವನ್ನು ನಿಲ್ಲಿಸುವುದು ಸೇರಿದಂತೆ ನಿಶ್ಯಸ್ತ್ರೀಕರಣ ಸಮಸ್ಯೆಗಳ ಕುರಿತ ಅವರ ಬದ್ಧತೆಗಾಗಿ ಅವರನ್ನು 1998ರಲ್ಲಿ ವಿಶ್ವಸಂಸ್ಥೆಯ ಶಾಂತಿ ಸಂದೇಶವಾಹಕರನ್ನಾಗಿ ನೇಮಕ ಮಾಡಲಾಗಿತ್ತು.   ವರ್ಷದ ಆರಂಭದಲ್ಲಿ ನಡೆದ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಅವರು ಗೌರವ ಪಾಮ್ ಡಿ'ಓರ್ ಪ್ರಶಸ್ತಿಯನ್ನು ಪಡೆದಿರುವುದು ಗಮನಾರ್ಹವಾದುದು. ಇದು ಜಾಗತಿಕ ಚಲನಚಿತ್ರೋದ್ಯಮದ ಮೇಲೆ ಅವರ ನಿರಂತರ ಪ್ರಭಾವಕ್ಕೆ ಸಾಕ್ಷಿಯಾಗಿದೆ.

ಕ್ಯಾಥರೀನ್ ಝೀಟಾ ಜೋನ್ಸ್, ತನ್ನದೇ ಆದ ರೀತಿಯಲ್ಲಿ  ಹೆಸರಾಂತ ನಟಿಯಾಗಿದ್ದು, ಅವರು ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಮತ್ತು ಪರೋಪಕಾರದ ಬದ್ಧತೆಯಿಂದಾಗಿ ಅವರು ಹೆಸರಾಗಿದ್ದಾರೆ. ಅವರ ಗಮನಾರ್ಹ ವೃತ್ತಿಜೀವನವು "ಟ್ರಾಫಿಕ್ (200)", "ಚಿಕಾಗೊ (2002)", ಮತ್ತು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಹಲವಾರು ಪುರಸ್ಕಾರಗಳನ್ನು ಗಳಿಸಿದ "ದಿ ಮಾಸ್ಕ್ ಆಫ್ ಜೊರೊ (1998) ಮತ್ತಿತರ ಚಲನಚಿತ್ರಗಳಲ್ಲಿ ಮರೆಯಲಾಗದ ಅಭಿನಯವನ್ನು ಒಳಗೊಂಡಿದೆ, ಅವರು ಅಕಾಡೆಮಿ ಪ್ರಶಸ್ತಿ ಮತ್ತು ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ (ಬಿಎಎಫ್ ಟಿಎ) ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ವರ್ಷದ ಆರಂಭದಲ್ಲಿ ಒಂದು ಮಹತ್ವದ ಕಾರ್ಯಕ್ರಮದಲ್ಲಿ, ಚಲನಚಿತ್ರ ಉದ್ಯಮದಲ್ಲಿ ಅವರು ಬೀರಿರುವ ಜಾಗತಿಕ ಪ್ರಭಾವವನ್ನು ಗುರುತಿಸಿ ಕ್ಯಾನ್ಸ್ ಚಲನಚಿತ್ರೋತ್ಸವದ ಸಮಯದಲ್ಲಿ ಇಂಡಿಯಾ ಪೆವಿಲಿಯನ್‌ನಲ್ಲಿ ಮಾರ್ಚೆ ಡು ಫಿಲ್ಮ್‌ನಲ್ಲಿ  ಮೈಕೆಲ್ ಡೌಗ್ಲಾಸ್ ಅವರನ್ನು ಗೌರವಿಸಲಾಗಿತ್ತು.

ಸಂವಾದದಲ್ಲಿ;

54ನೇ ಐಎಫ್ ಎಫ್ ಐನ ಭಾಗವಾಗಿ, ಮೈಕೆಲ್ ಡೌಗ್ಲಾಸ್ ಮತ್ತು ಕ್ಯಾಥರೀನ್ ಝೀಟಾ ಜೋನ್ಸ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಶೈಲೇಂದ್ರ ಸಿಂಗ್ ಅವರು ಆಯೋಜಿಸಿರುವ ವಿಶೇಷ ಸಂವಾದಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಸಿಂಗ್ ಅವರು ಭಾರತೀಯ ಚಿತ್ರರಂಗಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ, ಅವರು, ಪರ್ಸೆಪ್ಟ್ ಲಿಮಿಟೆಡ್ ಮತ್ತು ಸನ್‌ಬರ್ನ್ ಸಂಗೀತ ಉತ್ಸವದ ಸಂಸ್ಥಾಪಕರಾಗಿದ್ದಾರೆ. "ಫಿರ್ ಮಿಲೇಂಗೆ" (2004) ಮತ್ತು "ಕಾಂಚಿವರಂ" (2008) ಸೇರಿದಂತೆ ಅವರ ನಿರ್ಮಾಣದ ವಿಮರ್ಶಾತ್ಮಕ ಮೆಚ್ಚುಗೆ ಪಡೆದ ಚಿತ್ರಗಳು ವ್ಯಾಪಕ ಜನಮನ್ನಣೆಯನ್ನು ಗಳಿಸಿವೆ ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ (ಕಾಂಚಿವರಂ) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದೆ.

ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯು ಈ ಹಿಂದೆ ದಿಗ್ಗಜರಾದ ಬೆರ್ನಾರ್ಡೊ ಬರ್ಟೊಲುಸಿ (ಐಎಫ್ ಎಫ್ ಐ 30), ಕಾರ್ಲೋಸ್ ಸೌರಾ ( ಐಎಫ್ ಎಫ್ ಐ 53), ಮಾರ್ಟಿನ್ ಸ್ಕೋರ್ಸೆಸೆ ( ಐಎಫ್ ಎಫ್ ಐ 52), ದಿಲೀಪ್ ಕುಮಾರ್ (ಐಎಫ್ ಎಫ್ ಐ 38), ಕ್ರಿಸ್ಜ್ಟೋಫ್ ಝನುಸ್ಸಿ ( ಐಎಫ್ ಎಫ್ ಐ 43) ಮತ್ತು ವಾಂಗ್ ಕರ್ -ವೈ ( ಐಎಫ್ ಎಫ್ ಐ 45) ಮತ್ತಿತರ ಪ್ರಮುಖ ಚಲನಚಿತ್ರರಂಗದ ಗಣ್ಯರಿಗೆ ನೀಡಿ ಗೌರವಿಸಲಾಗಿದೆ.  

54ನೇ ಐಎಫ್‌ಎಫ್‌ಐ, ಮೈಕೆಲ್ ಡೌಗ್ಲಾಸ್, ಕ್ಯಾಥರೀನ್ ಝೀಟಾ ಜೋನ್ಸ್ ಮತ್ತು ಶೈಲೇಂದ್ರ ಸಿಂಗ್ ಅವರ ಅಸಾಧಾರಣ ಸಾಧನೆಗಳಿಗೆ ಗೌರವ ಸಲ್ಲಿಸುವ ಮೂಲಕ ಸಿನಿಮಾದ ಶ್ರೇಷ್ಠತೆಯ ಭವ್ಯ ಆಚರಣೆಯಾಗಲಿದೆ ಎಂಬ ಭರವಸೆ ಇದೆ.

******

iffi reel

(Release ID: 1967367) Visitor Counter : 147