ಸಂಸದೀಯ ವ್ಯವಹಾರಗಳ ಸಚಿವಾಲಯ

​​​​​​​ಆಸ್ಟ್ರೇಲಿಯಾ, ಯುಎಇ ಮತ್ತು ಬಾಂಗ್ಲಾದೇಶದ ಸಂಸತ್ತಿನ ಸ್ಪೀಕರ್‌ ಗಳು 9 ನೇ ಪಿ 20 ಶೃಂಗಸಭೆಯ ನೇಪಥ್ಯದಲ್ಲಿ ಲೋಕಸಭಾ ಸ್ಪೀಕರ್ ಜತೆ ಸಮಾಲೋಚನೆ


ಆಫ್ರಿಕನ್ ಯೂನಿಯನ್ ಅನ್ನು G20 ಗೆ ಸೇರಿಸಿದ್ದಕ್ಕಾಗಿ ಶ್ರೀ ಬಿರ್ಲಾ ಅಭಿನಂದಿಸಿದರು

Posted On: 12 OCT 2023 7:36PM by PIB Bengaluru

ಪಾರ್ಲಿಮೆಂಟರಿ ಫೋರಮ್ ಆನ್ ಲೈಫ್ (ಮಿಷನ್ ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್) ಅನ್ನು ಇಂದು ಅಕ್ಟೋಬರ್ 12, 2023 ರಂದು, ಒಂಬತ್ತನೇ G20 ಸಂಸದೀಯ ಸ್ಪೀಕರ್‌ ಗಳ ಶೃಂಗಸಭೆಯ (P20) ಭವ್ಯ ಉದ್ಘಾಟನೆಯ ಮುನ್ನಾ ದಿನದಂದು ಆಯೋಜಿಸಲಾಗಿದೆ. ಇದು ಭಾರತವು ಆಯೋಜಿಸುವ ಮೊದಲ P20 ಶೃಂಗಸಭೆಯಾಗಿದೆ. 

ಸಂಸದೀಯ ವೇದಿಕೆಯನ್ನು ಅನುಸರಿಸಿ, ಆಸ್ಟ್ರೇಲಿಯನ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ನ ಸ್ಪೀಕರ್ ಮಿಲ್ಟನ್ ಡಿಕ್; ಬಾಂಗ್ಲಾದೇಶದ ರಾಷ್ಟ್ರೀಯ ಸಂಸದ್ ಸ್ಪೀಕರ್ ಶ್ರೀಮತಿ ಶಿರಿನ್ ಶರ್ಮಿನ್ ಚೌಧರಿ, ಫೆಡರಲ್ ನ್ಯಾಷನಲ್ ಕೌನ್ಸಿಲ್ UAE ನ ಸ್ಪೀಕರ್ ಶ್ರೀ ಸಕರ್ ಘೋಬಾಶ್, ಆಫ್ರಿಕನ್ ಸಂಸತ್ತಿನ ಹಂಗಾಮಿ ಅಧ್ಯಕ್ಷ ಡಾ. ಅಶೆಬಿರ್ ವೊಲ್ಡೆಗಿಯೊರ್ಗಿಸ್ ಗಯೋ ಅವರು ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದರು.

ಜಿ20 ಶೃಂಗಸಭೆಯಲ್ಲಿ ಭಾರತದ ಆದ್ಯತೆಗಳು ಮತ್ತು ಉಪಕ್ರಮಗಳನ್ನು ಬೆಂಬಲಿಸಿದ್ದಕ್ಕಾಗಿ ಲೋಕಸಭೆ ಸ್ಪೀಕರ್ ಆಸ್ಟ್ರೇಲಿಯಾಕ್ಕೆ ಕೃತಜ್ಞತೆ ಸಲ್ಲಿಸಿದರು. ಆಫ್ರಿಕನ್ ಒಕ್ಕೂಟವನ್ನು ಜಿ 20 ಗೆ ಸೇರ್ಪಡೆಗೊಳಿಸುವ ಭಾರತದ ಉಪಕ್ರಮವನ್ನು ಬೆಂಬಲಿಸಿದ್ದಕ್ಕಾಗಿ ಅವರು ಆಸ್ಟ್ರೇಲಿಯಾವನ್ನು ಶ್ಲಾಘಿಸಿದರು. ಎರಡೂ ದೇಶಗಳ ಪ್ರಧಾನ ಮಂತ್ರಿಗಳ ಇತ್ತೀಚಿನ ಭೇಟಿಗಳು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಆಯಾಮವನ್ನು ನೀಡಿವೆ ಮತ್ತು ಪರಸ್ಪರ ಸಹಕಾರವು ಮತ್ತಷ್ಟು ಆಳವಾಗಿದೆ ಮತ್ತು ಹೊಸ ಶಕ್ತಿಯನ್ನು ತುಂಬಿದೆ. ಎರಡೂ ಸಂಸತ್ತುಗಳು ಸಂಸದೀಯ ಸಹಕಾರದ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಶ್ರೀ ಬಿರ್ಲಾ ತಿಳಿಸಿದರು.

ಬಾಂಗ್ಲಾದೇಶದ ರಾಷ್ಟ್ರೀಯ ಸಂಸದ್ನ ಅಧ್ಯಕ್ಷರಾದ ಶ್ರೀಮತಿ ಶಿರಿನ್ ಶರ್ಮಿನ್ ಚೌಧರಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಶ್ರೀ ಬಿರ್ಲಾ ಅವರು ಭಾರತ ಮತ್ತು ಬಾಂಗ್ಲಾದೇಶವು ಎರಡು ಸಂಸತ್ತುಗಳ ನಡುವಿನ ಸಹಕಾರವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು. ಉಭಯ ದೇಶಗಳ ನಡುವೆ ರಸ್ತೆ, ರೈಲು, ವಾಯು, ಜಲಮಾರ್ಗ ಮತ್ತು ಡಿಜಿಟಲ್ ವಲಯಗಳಲ್ಲಿ ಸಂಪರ್ಕವನ್ನು ಹೆಚ್ಚಿಸುವ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು.

ಯುಎಇಯ ಫೆಡರಲ್ ನ್ಯಾಷನಲ್ ಕೌನ್ಸಿಲ್ನ ಸ್ಪೀಕರ್ ಶ್ರೀ ಸಕರ್ ಘೋಬಾಶ್ ಅವರ ಜತೆ ನಡೆಸಿದ ಸಭೆಯಲ್ಲಿ, ಶ್ರೀ ಬಿರ್ಲಾ ಅವರು 'ಗ್ಲೋಬಲ್ ಜೈವಿಕ ಇಂಧನ ಒಕ್ಕೂಟ' ಮತ್ತು 'ಭಾರತ ಮಧ್ಯಪ್ರಾಚ್ಯ-ಯುರೋಪ್ ಎಕನಾಮಿಕ್ ಕಾರಿಡಾರ್' ನಂತಹ ಉಪಕ್ರಮಗಳು ಭಾರತ ಮತ್ತು ಯುಎಇಯನ್ನು ಹತ್ತಿರಕ್ಕೆ ತಂದಿವೆ ಎಂದು ತಿಳಿಸಿದರು.

ಆಫ್ರಿಕನ್ ಸಂಸತ್ತಿನ ಹಂಗಾಮಿ ಅಧ್ಯಕ್ಷರು ಡಾ. ಅಶೇಬಿರ್ ವೊಲ್ಡೆಜಿರ್ಜಿಸ್ ಗಯೋ ಅವರ ಜತೆ ಮಾತುಕತೆ ನಡೆಸಿದ ಶ್ರೀ ಬಿರ್ಲಾ, ಆಫ್ರಿಕನ್ ಒಕ್ಕೂಟ G20 ಗೆ ಸೇರಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ನಾಯಕರು ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು ಮತ್ತು ಎರಡು ಸಂಸತ್ತುಗಳ ನಡುವಿನ ಮತ್ತಷ್ಟು ಸಹಯೋಗಕ್ಕಾಗಿ ಅವಕಾಶಗಳಿವೆ ಎಂದು ಸ್ಪಷ್ಟಪಡಿಸಿದರು.

P20 ಶೃಂಗಸಭೆಯ ಕುರಿತು ಹೆಚ್ಚಿನ ಮಾಹಿತಿ:

1    ಒಂಬತ್ತನೇ G20 ಸಂಸದೀಯ ಸ್ಪೀಕರ್‌ ಗಳ ಶೃಂಗಸಭೆ (P20) ಮತ್ತು ಸಂಸದೀಯ ವೇದಿಕೆ
2    ಅಕ್ಟೋಬರ್ 13 ರಂದು ನವದೆಹಲಿಯಲ್ಲಿ 9 ನೇ G20 ಸಂಸದೀಯ ಸ್ಪೀಕರ್ಗಳ ಶೃಂಗಸಭೆಯನ್ನು (P-20) ಉದ್ಘಾಟಿಸಲಿರುವ ಪ್ರಧಾನಿ
3    9ನೇ P20 ಶೃಂಗಸಭೆಗಾಗಿ G20 ರಾಷ್ಟ್ರಗಳ ಅಧ್ಯಕ್ಷರು ಭಾರತಕ್ಕೆ ಆಗಮಿಸುತ್ತಿದ್ದಾರೆ
4    9 ನೇ P20 ಶೃಂಗಸಭೆಯು ಮಿಷನ್ ಲೈಫ್ನಲ್ಲಿ ಸಂಸದೀಯ ವೇದಿಕೆಯಿಂದ ನಡೆಯಲಿದೆ
5    ಪರಿಸರವನ್ನು ರಕ್ಷಿಸಲು ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸಲು ಮಿಷನ್ ಲೈಫ್ ಜಗತ್ತಿಗೆ ಹೊಸ ಸಮಗ್ರ ವಿಧಾನವನ್ನು ನೀಡಿದೆ: ಲೋಕಸಭಾ ಸ್ಪೀಕರ್

#Parliament20 ಎಂಬ ಹ್ಯಾಷ್ ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಸಂವಾದದಲ್ಲಿ ಭಾಗಿಯಾಗಬಹುದು.

****



(Release ID: 1967295) Visitor Counter : 86