ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ

ಭಾರತೀಯ ಸ್ಪರ್ಧಾತ್ಮಕ ಆಯೋಗದಿಂದ ಅಕ್ಟೋಬರ್ 11-13, 2023 ರಂದು ನವದೆಹಲಿಯಲ್ಲಿ 8 ನೇ ಬ್ರಿಕ್ಸ್ ಅಂತರಾಷ್ಟ್ರೀಯ ಸ್ಪರ್ಧಾತ್ಮಕ ಸಮ್ಮೇಳನದ ಆಯೋಜನೆ

Posted On: 10 OCT 2023 5:02PM by PIB Bengaluru

ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) 8ನೇ ಬ್ರಿಕ್ಸ್‌ ಅಂತರಾಷ್ಟ್ರೀಯ ಸ್ಪರ್ಧಾತ್ಮಕ ಸಮ್ಮೇಳನ (ಬ್ರಿಕ್ಸ್ ಐಸಿಸಿ) 2023 ಅನ್ನು ಆಯೋಜಿಸಲಿದೆ, 'ಸ್ಪರ್ಧೆಯ ಕಾನೂನು ಮತ್ತು ನೀತಿಯಲ್ಲಿನ ಹೊಸ ಸಮಸ್ಯೆಗಳು - ಆಯಾಮಗಳು, ದೃಷ್ಟಿಕೋನಗಳು, ಸವಾಲುಗಳು'. ಅಕ್ಟೋಬರ್ 11 ರಿಂದ 13 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಸಮ್ಮೇಳನವು ಬ್ರಿಕ್ಸ್ ಗೆ ಸೇರಿದ ಮತ್ತು ಬ್ರಿಕ್ಸ್ ಗೆ ಸೇರಿಲ್ಲದ ರಾಷ್ಟ್ರಗಳ ಸ್ಪರ್ಧಾ ಪ್ರಾಧಿಕಾರಗಳು, ಸ್ಪರ್ಧಾತ್ಮಕ ಕಾನೂನು ತಜ್ಞರು, ಸರ್ಕಾರೇತರ ಸಲಹೆಗಾರರು ಮತ್ತು ಭಾರತದ ಆಹ್ವಾನಿತರಿಂದ 600 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

https://static.pib.gov.in/WriteReadData/userfiles/image/image001DSVV.jpg

 

ಇಂದು ನಡೆದ ಪ್ರಾರಂಭದ ಕಾರ್ಯಕ್ರಮದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಿಸಿಐ ಅಧ್ಯಕ್ಷರಾದ ಶ್ರೀಮತಿ ರವನೀತ್ ಕೌರ್ ಅವರು ಬ್ರಿಕ್ಸ್ ಐಸಿಸಿ ಒಂದು ದಶಕದ ನಂತರ ಭಾರತದಲ್ಲಿ ನಡೆಯಲಿರುವ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದ್ದಾರೆ. ಸಮ್ಮೇಳನದ ಉದ್ದೇಶದ ಬಗ್ಗೆ ಮಾತನಾಡುತ್ತಾ ಅವರು, “ಸಮ್ಮೇಳನವು ಬ್ರಿಕ್ಸ್ ದೇಶಗಳಲ್ಲಿ ಸ್ಪರ್ಧೆಯ ಜಾರಿಯಲ್ಲಿ ವಿವಿಧ ಉದಯೋನ್ಮುಖ ಸಮಸ್ಯೆಗಳು ಮತ್ತು ಸವಾಲುಗಳನ್ನು ಚರ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಬ್ರಿಕ್ಸ್ ಸ್ಪರ್ಧೆಯ ಅಧಿಕಾರಿಗಳ ನಡುವೆ ಸಹಕಾರದ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ” ಎಂದು ಹೇಳಿದರು.

 

ಲೆನಿಯನ್ಸಿ ಪ್ರೋಗ್ರಾಂ ಮತ್ತು ಡಿಜಿಟಲ್ ಎಕಾನಮಿ ಕುರಿತು ಜಂಟಿ ವರದಿಗಳನ್ನು ಬಿಡುಗಡೆ ಮಾಡಿ ಚರ್ಚಿಸಲಾಗುವುದು ಎಂದು ಶ್ರೀಮತಿ ಕೌರ್ ತಿಳಿಸಿದರು. ಅಕ್ಟೋಬರ್ 12ರಂದು ಬ್ರಿಕ್ಸ್ ಐಸಿಸಿಯ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌.ಸಿ.ಎಲ್‌.ಎ.ಟಿ) ಅಧ್ಯಕ್ಷ ಗೌರವಾನ್ವಿತ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು. ಅಕ್ಟೋಬರ್‌ 13ರಂದು ಬ್ರಿಕ್ಸ್ ಸ್ಪರ್ಧೆಯ ಅಧಿಕಾರಿಗಳ ಮುಖ್ಯಸ್ಥರು ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಜಂಟಿ ಹೇಳಿಕೆಗೆ ಸಹಿ ಮಾಡಲಿದ್ದಾರೆ ಎಂದು ಅವರು ಹೇಳಿದರು.

 

ಬ್ರಿಕ್ಸ್ ಸ್ಪರ್ಧಾ ಪ್ರಾಧಿಕಾರಗಳು ದ್ವೈವಾರ್ಷಿಕವಾಗಿ ಆಯೋಜಿಸುವ ಈ ಸಮ್ಮೇಳನವು ಬ್ರಿಕ್ಸ್ ರಾಷ್ಟ್ರಗಳ ಸ್ಪರ್ಧಾ ಪ್ರಾಧಿಕಾರಗಳ ನಡುವೆ ಸಹಕಾರ, ಅನುಭವ ಹಂಚಿಕೆ ಮತ್ತು ಪರಸ್ಪರ ಕಲಿಕೆಯನ್ನು ಉತ್ತೇಜಿಸಲು ವೇದಿಕೆಯನ್ನು ಒದಗಿಸುತ್ತದೆ. ಸಮ್ಮೇಳನದ 8 ನೇ ಆವೃತ್ತಿಯು ಈ ಕೆಳಗಿನ ವಿಷಯಗಳ ಮೇಲೆ ಮೂರು ಸರ್ವ ಸದಸ್ಯರ ಅವಧಿಗಳು ಮತ್ತು ನಾಲ್ಕು ಬ್ರೇಕ್‌ ಔಟ್ ಅವಧಿಗಳನ್ನು ಒಳಗೊಂಡಿರುತ್ತದೆ:

 

  • ಬ್ರಿಕ್ಸ್ ಜಂಟಿ ದಾಖಲೆಗಳು (ಲೆನಿಯನ್ಸಿ ಪ್ರೋಗ್ರಾಂ ಮತ್ತು ಡಿಜಿಟಲ್ ಎಕಾನಮಿ ವರದಿಗಳು)
  • ಬ್ರಿಕ್ಸ್ ದೇಶಗಳಲ್ಲಿ ಸ್ಪರ್ಧಾತ್ಮಕ ಕಾನೂನು ಮತ್ತು ನೀತಿಯಲ್ಲಿನ ಹೊಸ ವಿಷಯಗಳು
  • ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ಪರ ಪರಿಸರವನ್ನು ರಚಿಸಲು ಸಾಫ್ಟ್ ಕಾನೂನು ಪರಿಕರಗಳನ್ನು ಉತ್ತೇಜಿಸುವುದು
  • ಡಿಜಿಟಲ್ ಆರ್ಥಿಕತೆಯಲ್ಲಿ ಸ್ಪರ್ಧೆಯ ವಿಶ್ಲೇಷಣೆ: ದೊಡ್ಡ ತಂತ್ರಜ್ಞಾನಗಳು ಮತ್ತು ಕ್ರಮಾವಳಿಗಳು
  • ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆ: ಸ್ಪರ್ಧೆಯ ಕಾನೂನಿನಲ್ಲಿ ಹೊಸ ಆಯಾಮಗಳು
  • ಭವಿಷ್ಯದ ಸ್ಪರ್ಧೆಯ ಸಮಸ್ಯೆಗಳಲ್ಲಿ ಮಾರುಕಟ್ಟೆ ಅಧ್ಯಯನಗಳ ಪಾತ್ರ
  • ವಿಲೀನ ನಿಯಂತ್ರಣದಲ್ಲಿನ ಸವಾಲುಗಳು: ಅಂತರರಾಷ್ಟ್ರೀಯ ದೃಷ್ಟಿಕೋನ

 

ಸಮ್ಮೇಳನದಲ್ಲಿ ಇತರರ ಜೊತೆ ಇರುವ ಪ್ರಮುಖ ಭಾಷಣಕಾರರು:

  • ಶ್ರೀಮತಿ. ರವನೀತ್ ಕೌರ್, ಅಧ್ಯಕ್ಷರು, ಸಿಸಿಐ
  • ಶ್ರೀ ವಿಕ್ಟರ್ ಒಲಿವೇರಾ ಫೆರ್ನಾಂಡಿಸ್, ಕಮಿಷನರ್, ಸಿಎಡಿಇ, ಬ್ರೆಜಿಲ್
  • ಶ್ರೀ ಮ್ಯಾಕ್ಸಿಮ್ ಶಾಸ್ಕೋಲ್ಸ್ಕಿ, ಮುಖ್ಯಸ್ಥರು, ಎಫ್‌ಎಎಸ್, ರಷ್ಯಾ
  • ಶ್ರೀಮತಿ ಗ್ಯಾನ್ ಲಿನ್, ಎಸ್‌ಎಎಂಆರ್‌ ನ ಉಪ ಮಂತ್ರಿ, ರಾಜ್ಯ ಏಕಸ್ವಾಮ್ಯ ನಿಗ್ರಹ ಆಡಳಿತದ ಆಡಳಿತಾಧಿಕಾರಿ, ಚೀನಾ
  • ಶ್ರೀಮತಿ ಡೋರಿಸ್ ಶೆಪೆ, ಕಮಿಷನರ್, ಸಿಸಿಎಸ್‌ಎ, ದಕ್ಷಿಣ ಆಫ್ರಿಕಾ

ಪ್ರಾರಂಭದ ಕಾರ್ಯಕ್ರಮದಲ್ಲಿ ಸಿಸಿಐ ಸದಸ್ಯರಾದ ಶ್ರೀ ಅನಿಲ್ ಅಗರವಾಲ್, ಶ್ರೀಮತಿ ಶ್ವೇತಾ ಕಕ್ಕಡ್ ಮತ್ತು ಶ್ರೀ ದೀಪಕ್ ಅನುರಾಗ್ ಸೇರಿದಂತೆ ಆಯೋಗದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

*****



(Release ID: 1966401) Visitor Counter : 82


Read this release in: English , Urdu , Hindi , Marathi