ಸಂಪುಟ

(i) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಾಡಿಗೆ  ನಿಯಂತ್ರಣ, 2023 (ii) ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಬಾಡಿಗೆ  ನಿಯಂತ್ರಣ, 2023 (iii) ಲಕ್ಷದ್ವೀಪ ಬಾಡಿಗೆ  ನಿಯಂತ್ರಣ, 2023 ನಿಯಮಾವಳಿಗಳ ಜಾರಿಗೆ ಸಂಪುಟ ನಿರ್ಧಾರ

Posted On: 04 OCT 2023 4:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, (i) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹಿಡುವಳಿ (ಬಾಡಿಗೆ)  ನಿಯಂತ್ರಣ, 2023 (ii) ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಹಿಡುವಳಿ (ಬಾಡಿಗೆ)  ನಿಯಂತ್ರಣ, 2023 (iii) ಲಕ್ಷದ್ವೀಪ ಹಿಡುವಳಿ (ಬಾಡಿಗೆ) ನಿಯಂತ್ರಣ, 2023 ಇವುಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು   ಜಾರಿಗೆ ತರುವುದಕ್ಕೆ    ಭಾರತದ  ಸಂವಿಧಾನದ ಅನುಚ್ಛೇದ 240 ರ ಅಡಿಯಲ್ಲಿ ತನ್ನ ಅನುಮೋದನೆ ನೀಡಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹಿಡುವಳಿ ನಿಯಂತ್ರಣ, 2023; ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಹಿಡುವಳಿ ನಿಯಂತ್ರಣ, 2023; ಮತ್ತು ಲಕ್ಷದ್ವೀಪ ಹಿಡುವಳಿ ನಿಯಂತ್ರಣ, 2023 ನಿಯಮಗಳು  ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಾಗು ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಮತ್ತು ಲಕ್ಷದ್ವೀಪಗಳಲ್ಲಿ  ಸ್ಥಳಾವಕಾಶವನ್ನು, ಭೂಮಿಯನ್ನು  ಬಾಡಿಗೆಗೆ ನೀಡಲು ಉತ್ತರದಾಯಿತ್ವವುಳ್ಳ  ಮತ್ತು ಪಾರದರ್ಶಕ ಪರಿಸರ ವ್ಯವಸ್ಥೆಯನ್ನು ರೂಪಿಸಲು  ಕಾನೂನು ಚೌಕಟ್ಟನ್ನು ಒದಗಿಸುತ್ತವೆ; ಭೂಮಾಲೀಕ ಹಾಗು  ಬಾಡಿಗೆದಾರರ ಹಿತಾಸಕ್ತಿಗಳು ಮತ್ತು ಹಕ್ಕುಗಳನ್ನು ಸಮತೋಲನದಲ್ಲಿರಿಸಲು ನೆರವಾಗುತ್ತವೆ.  

ಈ ನಿಯಂತ್ರಣ ನಿಯಮಗಳು ಬಾಡಿಗೆ/ಹಿಡುವಳಿ  ಮಾರುಕಟ್ಟೆಯಲ್ಲಿ ಖಾಸಗಿ ಹೂಡಿಕೆ ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುತ್ತವೆ, ವಲಸಿಗರು, ಔಪಚಾರಿಕ ಮತ್ತು ಅನೌಪಚಾರಿಕ ವಲಯದ ಕಾರ್ಮಿಕರು, ವೃತ್ತಿಪರರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ವಿವಿಧ ಆದಾಯ ವಿಭಾಗಗಳಿಗೆ ಸಾಕಷ್ಟು ಬಾಡಿಗೆ ವಸತಿ ಲಭ್ಯತೆಯನ್ನು (ದಾಸ್ತಾನು)  ಸೃಷ್ಟಿಸುತ್ತವೆ; ಇದು ಗುಣಮಟ್ಟದ ಬಾಡಿಗೆ ವಸತಿ ಲಭ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ; ಮತ್ತು ಬಾಡಿಗೆ ವಸತಿ ಮಾರುಕಟ್ಟೆಯು  ಕ್ರಮೇಣ ಔಪಚಾರಿಕೀಕರಣಗೊಳ್ಳುವುದಕ್ಕೆ  ಕಾರಣವಾಗುತ್ತದೆ, ಇದು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಮತ್ತು ಲಕ್ಷದ್ವೀಪಗಳಲ್ಲಿ ರೋಮಾಂಚಕ, ಸುಸ್ಥಿರ ಹಾಗು  ಅಂತರ್ಗತ ಬಾಡಿಗೆ ವಸತಿ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.

*****
 



(Release ID: 1964219) Visitor Counter : 87