ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಸಿ. ಆರ್. ಪಿ. ಎಫ್ ಮಹಿಳಾ ಶಕ್ತಿಯನ್ನು ಆಚರಿಸಲು "ಯಶಸ್ವಿನಿ" ಯೊಂದಿಗೆ ಕ್ರಾಸ್ ಕಂಟ್ರಿ ಬೈಕ್ ಯಾತ್ರೆಯನ್ನು ಆಯೋಜಿಸುತ್ತಿದೆ
ಅಕ್ಟೋಬರ್ 3 ರಂದು ನಡೆಯಲಿರುವ ರ‍್ಯಾಲಿಯಲ್ಲಿ ಒಟ್ಟು 150 ಮಹಿಳಾ ಸಿ. ಆರ್. ಪಿ. ಎಫ್ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ರ‍್ಯಾಲಿ 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಸುಮಾರು 10,000 ಕಿ.ಮೀ ಕ್ರಮಿಸಲಿದೆ
Posted On:
01 OCT 2023 4:16PM by PIB Bengaluru
ಕೇಂದ್ರ ಮೀಸಲು ಪೊಲೀಸ್ ಪಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ, ಮಹಿಳಾ ಶಕ್ತಿ ಅಥವಾ ದೇಶದ ನಾರಿ ಶಕ್ತಿಯನ್ನುಆಚರಿಸಲು ಸಿ. ಆರ್. ಪಿ. ಎಫ್ ಮಹಿಳಾ ಬೈಕ್ ಸವಾರರ ಗುಂಪಾದ "ಯಶಸ್ವಿನಿ" ಯೊಂದಿಗೆ ಕ್ರಾಸ್ ಕಂಟ್ರಿ ಬೈಕ್ ಯಾತ್ರೆಯನ್ನು ಆಯೋಜಿಸುತ್ತಿದೆ.
ಅಕ್ಟೋಬರ್ 3, 2023 ರಂದು, ಒಟ್ಟು 150 ಮಹಿಳಾ ಸಿ. ಆರ್. ಪಿ. ಎಫ್ ಅಧಿಕಾರಿಗಳು, ಮೂರು ತಂಡಗಳಾಗಿ ವಿಂಗಡಿಸಲ್ಪಟ್ಟು ಗಡಿಯಾಚೆಗಿನ ರ್ಯಾಲಿ ಪ್ರಾರಂಭಿಸಲಿದ್ದಾರೆ. 75 ರಾಯಲ್ ಎನ್ ಫೀಲ್ಡ್ (350 ಸಿಸಿ) ಮೋಟಾರ್ ಬೈಕ್ ಗಳನ್ನು ಸವಾರಿ ಮಾಡುವ ಈ ತಂಡಗಳು ಭಾರತದ ಉತ್ತರ (ಶ್ರೀನಗರ), ಪೂರ್ವ (ಶಿಲ್ಲಾಂಗ್) ಮತ್ತು ದಕ್ಷಿಣ (ಕನ್ಯಾಕುಮಾರಿ) ಪ್ರದೇಶಗಳಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಲಿವೆ. ಅಂತಿಮವಾಗಿ, ಅವರೆಲ್ಲರೂ 2023 ರ ಅಕ್ಟೋಬರ್ 31 ರಂದು ನಡೆಯಲಿರುವ ಗ್ರ್ಯಾಂಡ್ ಫಿನಾಲೆಗಾಗಿ ಗುಜರಾತ್ನ ಏಕ್ತಾ ನಗರ್ (ಕೆವಾಡಿಯಾ) ನಲ್ಲಿರುವ ಏಕತಾ ಪ್ರತಿಮೆಯಲ್ಲಿ ಒಟ್ಟುಗೂಡಲಿದ್ದಾರೆ. ಈ ರ್ಯಾಲಿ 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಸುಮಾರು 10,000 ಕಿ.ಮೀ ದೂರವನ್ನು ಕ್ರಮಿಸಲಿದೆ. ತಮ್ಮ ಪ್ರಯಾಣದ ಉದ್ದಕ್ಕೂ, ಅನೇಕ ಜಿಲ್ಲೆಗಳಲ್ಲಿ, ಶಾಲಾ ಮಕ್ಕಳು ಮತ್ತು ಕಾಲೇಜು ಹುಡುಗಿಯರು, ಮಹಿಳಾ ಸ್ವಸಹಾಯ ಗುಂಪುಗಳು, ಎನ್ಸಿಸಿಯ ಕೆಡೆಟ್ಗಳು, ಸಿಸಿಐಗಳ ಮಕ್ಕಳು, ಎನ್ವೈಕೆಎಸ್ ಸದಸ್ಯರು, ಹದಿಹರೆಯದ ಹುಡುಗಿಯರು ಮತ್ತು ಬಾಲಕರು, ಅಂಗನವಾಡಿ ಕಾರ್ಯಕರ್ತರು ಮುಂತಾದ "ಬೇಟಿ ಬಚಾವೋ ಬೇಟಿ ಪಡಾವೋ" (ಬಿಬಿಬಿಪಿ) ಗುರಿ ಗುಂಪುಗಳೊಂದಿಗೆ ಸಂವಾದ ಮತ್ತು ಬಿಬಿಬಿಪಿ ಚಾಂಪಿಯನ್ಗಳನ್ನು ಸನ್ಮಾನಿಸುವುದುಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.
"ದೇಶ್ ಕೆ ಹಮ್ ಹೈ ರಕ್ಷಕ್" ಎಂಬ ಸೇನೆಯ ಸಂದೇಶವನ್ನು ಉತ್ತೇಜಿಸುವುದರ ಜೊತೆಗೆ, ಮಹಿಳಾ ಬೈಕ್ ಸವಾರರು "ಬೇಟಿ ಬಚಾವೋ ಬೇಟಿ ಪಡಾವೋ" ಎಂಬ ಸಾಮಾಜಿಕ ಸಂದೇಶವನ್ನು ತಮ್ಮ ಅಭಿಯಾನದಲ್ಲಿ ಅಳವಡಿಸಿಕೊಂಡಿದ್ದಾರೆ. ಅವರು ಹೆಮ್ಮೆಯಿಂದ ತಮ್ಮ ಸಮವಸ್ತ್ರ ಮತ್ತು ಬ್ಯಾನರ್ ಗಳಲ್ಲಿ ಬಿಬಿಬಿಪಿ ಲೋಗೋವನ್ನು ಪ್ರದರ್ಶಿಸಲಿದ್ದಾರೆ, ಆ ಮೂಲಕ ದೇಶಾದ್ಯಂತ ಈ ಉದ್ದೇಶವನ್ನು ಅನುಮೋದಿಸುತ್ತಾರೆ.
*****
(Release ID: 1963318)
Visitor Counter : 98