ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಅರಿಶಿನ ಮಂಡಳಿಯಲ್ಲಿ ಸ್ಥಾಪಿಸುವ ಮೂಲಕ ನಮ್ಮ ಅರಿಶಿನ ಬೆಳೆಯುವ ರೈತರ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳುವ ಗುರಿ ನಮ್ಮದು: ಪ್ರಧಾನಮಂತ್ರಿ
Posted On:
02 OCT 2023 8:48AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಿದೆ ಎಂದು ಪುನರುಚ್ಚರಿಸಿದ್ದಾರೆ.
ಪ್ರಧಾನಮಂತ್ರಿ ಅವರು ನಿನ್ನೆ ಘೋಷಿಸಿದ ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆಯ ಪ್ರಯೋಜನಗಳ ಕುರಿತು ನಿಜಾಮಾಬಾದ್‌ನ ಸಂಸದರಾದ ಶ್ರೀ ಅರವಿಂದ್ ಧರ್ಮಪುರಿ ಅವರ ಪೋಸ್ಟ್‌ಗೆ ಪ್ರಧಾನಮಂತ್ರಿ ಅವರು ಪ್ರತಿಕ್ರಿಯಿಸಿ X ನಲ್ಲಿ ಪೋಸ್ಟ್ ಮಾಡಿದ್ದಾರೆ:
“ನಮ್ಮ ರೈತರ ಯೋಗಕ್ಷೇಮ ಮತ್ತು ಸಮೃದ್ಧಿ ಸದಾ ನಮ್ಮ ಮೊದಲ ಆದ್ಯತೆಯಾಗಿದೆ.
ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ಸ್ಥಾಪಿಸುವ ಮೂಲಕ, ನಾವು ನಮ್ಮ ಅರಿಶಿನ ರೈತರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ ಮತ್ತು ಅವರಿಗೆ ಸೂಕ್ತ ಅಗತ್ಯ ಬೆಂಬಲವನ್ನು ನೀಡುತ್ತೇವೆ.
ನಿಜಾಮಾಬಾದ್‌ಗೆ ವಿಶೇಷವಾಗಿ ಅಪಾರ ಪ್ರಯೋಜನಗಳಾಗಲಿವೆ.
ನಮ್ಮ ಅರಿಶಿನ ರೈತರಿಗೆ ಉಜ್ವಲ ಭವಿಷ್ಯ ಖಾತ್ರಿಪಡಿಸಿಕೊಳ್ಳಲು ನಾವು ಏನು ಬೇಕಾದರೂ ಮಾಡುತ್ತೇವೆ’’
(Release ID: 1963262)
Visitor Counter : 126
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam