ಆಯುಷ್

​​​​​​​ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಕೇಂದ್ರ ಆಯುಷ್ ಸಚಿವಾಲಯವು ಅಕ್ಟೋಬರ್ 1, 2023 ರಂದು “ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್” ಕಾರ್ಯಕ್ರಮವನ್ನು ಆಯೋಜಿಸಿದೆ


“ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್” ಗಾಗಿ 220 ಕ್ಕೂ ಹೆಚ್ಚು   ಕಾರ್ಯಚಟುವಟಿಕೆಗಳನ್ನು ಯೋಜಿಸಲಾಗಿದೆ.

Posted On: 27 SEP 2023 4:54PM by PIB Bengaluru

ಸ್ವಚ್ಛತಾ ಹಿ ಸೇವಾ ಅಭಿಯಾನದ ಭಾಗವಾಗಿ 1 ಅಕ್ಟೋಬರ್ 2023 ರಂದು ನಡೆಯಲಿರುವ "ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್" ಉಪಕ್ರಮದಲ್ಲಿ ಕೇಂದ್ರ ಆಯುಷ್ ಸಚಿವಾಲಯವು ಸಕ್ರಿಯವಾಗಿ ಭಾಗವಹಿಸಲಿದೆ.

"ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್" ಚಟುವಟಿಕೆಗಾಗಿ ಆಯುಷ್ ಸಚಿವಾಲಯವು ತನ್ನ ರಾಷ್ಟ್ರೀಯ ಸಂಸ್ಥೆಗಳು, ಸಂಶೋಧನಾ ಮಂಡಳಿಗಳು ಮತ್ತು ಅಧೀನ ಸಂಸ್ಥೆಗಳ ಮೂಲಕ 220 ಕ್ಕೂ ಹೆಚ್ಚು ಕಾರ್ಯಕ್ರಮಗಳ ಆಯೋಜನೆಯನ್ನು ದೃಢಪಡಿಸಿದೆ. ನ್ಯಾಷನಲ್ ಕಮಿಷನ್ ಆಫ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್  ಮತ್ತು ರಾಷ್ಟ್ರೀಯ ಹೋಮಿಯೋಪತಿ ಆಯೋಗ ತಮ್ಮ 750 ಕ್ಕೂ ಹೆಚ್ಚು ಕಾಲೇಜುಗಳ ಜಾಲದ ಮೂಲಕ ಈ ಅಭಿಯಾನದಲ್ಲಿ ಭಾಗವಹಿಸುತ್ತವೆ. ರಾಷ್ಟ್ರೀಯ ಆಯುಷ್ ಮಿಷನ್ ಮೂಲಕ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಶ್ರಮದಾನ ಚಟುವಟಿಕೆಯನ್ನು ನಡೆಸಲು ಕೇಂದ್ರ ಸಚಿವಾಲಯವು ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಮತ್ತೊಂದೆಡೆ, ಭಾರತದಾದ್ಯಂತ ಕೇಂದ್ರ ಆಯುಷ್ ಸಚಿವಾಲಯದ ಅಡಿಯಲ್ಲಿ 100 ಕ್ಕೂ ಹೆಚ್ಚು ಸಂಸ್ಥೆಗಳು/ಸಂಘಟನೆಗಳು ಈ ಉಪಕ್ರಮದಲ್ಲಿ ಭಾಗವಹಿಸುತ್ತವೆ.

ಕೇಂದ್ರ ಆಯುಷ್ ಸಚಿವಾಲಯವು ಇದನ್ನು ಯಶಸ್ಸುಗೊಳಿಸಲು ಗಂಭೀರ ಈ ಪ್ರಯತ್ನಗಳನ್ನುಮಾಡುತ್ತಿದೆ.  ಕೇಂದ್ರ ಆಯುಷ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವೈದ್ಯ ರಾಜೇಶ್ ಕೋಟೆಚಾ ಅವರು 25 ಸೆಪ್ಟೆಂಬರ್, 2023 ರಂದು ಆಯುಷ್ ಭವನದಲ್ಲಿ ನಡೆದ ಸಭೆಯಲ್ಲಿ ಇದುವರೆಗಿನ ಪ್ರಗತಿಯನ್ನು ಪರಿಶೀಲಿಸಿದರು. “ ಭಾಗವಹಿಸುವ ಕ್ರಮದಲ್ಲಿ ತಳಮಟ್ಟದ ವಾಸ್ತವಿಕ ಚಟುವಟಿಕೆಗಳನ್ನು ಆಧರಿಸಿದ ಪ್ರಚಾರವನ್ನು ಖಚಿತಪಡಿಸಿಕೊಳ್ಳಬೇಕು.” ಎಂದು ಅವರು ಅಧಿಕಾರಿಗಳು ಮತ್ತು ಸಂಸ್ಥೆಗಳ ಮುಖ್ಯಸ್ಥರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದರು.

1 ಅಕ್ಟೋಬರ್ 2023 ರಂದು ಭಾರತದಾದ್ಯಂತ ನಡೆಯಲಿರುವ ಅಭಿಯಾನದ ಕುರಿತು ಸಂಪೂರ್ಣ ಪ್ರಚಾರ ಮತ್ತು ಚಟುವಟಿಕೆಗಳ ಸಿದ್ಧತೆಯನ್ನು ಹಾಗೂ ಮೇಲ್ವಿಚಾರಣೆ ಮಾಡಲು ಜಂಟಿ ಕಾರ್ಯದರ್ಶಿ ಮಟ್ಟದ ನೋಡಲ್ ಅಧಿಕಾರಿಯನ್ನು ಸಚಿವಾಲಯ ನೇಮಿಸಿದೆ. ಎಸ್.ಹೆಚ್.ಎಸ್.‌  2023 ರ ಪರಿಕಲ್ಪನೆಯು  "ಕಸ ಮುಕ್ತ ಭಾರತ" ಆಗಿರುತ್ತದೆ.  

ಈ ಕಾರ್ಯಕ್ರಮವನ್ನು ಯೋಜಿಸುವುದರ ಹೊರತಾಗಿ, ಕೇಂದ್ರ ಆಯುಷ್ ಸಚಿವಾಲಯವು ರಾಷ್ಟ್ರೀಯ ಆಯುಷ್ ಮಿಷನ್ ಅಡಿಯಲ್ಲಿ ತನ್ನ ಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಮೂಲಕ ಭಾರತದಾದ್ಯಂತ ಸಾಪ್ತಾಹಿಕ ಆಯುಷ್ ಆರೋಗ್ಯ ಮೇಳವನ್ನು ಆಯೋಜಿಸುತ್ತಾ ಆಯುಷ್ಮಾನ್ ಭವ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಈ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ 580 ಕ್ಕೂ ಹೆಚ್ಚು ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದೆ, ಇದರಲ್ಲಿ 28,000 ಕ್ಕೂ ಹೆಚ್ಚು ಜನರಿಗೆ ಪ್ರಯೋಜನ ಪಡೆದಿದ್ದಾರೆ. ಈ ಅಭಿಯಾನವು ಇನ್ನೂ ನಡೆಯುತ್ತಿದೆ ಮತ್ತು ಸುಮಾರು 8000  ಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಇಂತಹ ಆರೋಗ್ಯ ಮೇಳಗಳನ್ನು ಆಯೋಜಿಸಲಾಗುತ್ತಿದೆ.

 

***



(Release ID: 1961481) Visitor Counter : 84