ಉಪರಾಷ್ಟ್ರಪತಿಗಳ ಕಾರ್ಯಾಲಯ
ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಧ್ಯಕ್ಷರ ಇಂದಿನ ಭಾಷಣದ ಪಠ್ಯ
Posted On:
19 SEP 2023 3:54PM by PIB Bengaluru
ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೇರಿಸುವ ಹೊಸ್ತಿಲಲ್ಲಿ ನಿಂತಿರುವ ಈ ಮಹತ್ವದ ಸಂದರ್ಭದಲ್ಲಿ, ನಮ್ಮ ಅಭೂತಪೂರ್ವ ಬೆಳವಣಿಗೆಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.
ನಮ್ಮ ಸಂಸತ್ತಿನ ಸಭಾಂಗಣಗಳು ಮತ್ತು ಈ ಭವ್ಯವಾದ ಸೆಂಟ್ರಲ್ ಹಾಲ್ ಎರಡನ್ನೂ ಹೊಂದಿರುವ ಈ ಭವ್ಯವಾದ ಸಂಸತ್ ಭವನಕ್ಕೆ ನಾವು ವಿದಾಯ ಹೇಳುತ್ತಿರುವಾಗ ಮತ್ತು ನಾವು ಹೊಸ ಕಟ್ಟಡಕ್ಕೆ ತೆರಳುತ್ತಿರುವಾಗ ಈ ಇತಿಹಾಸವನ್ನು ವೀಕ್ಷಿಸಲು ನಾವೆಲ್ಲರೂ ನಿಜವಾಗಿಯೂ ಭಾಗ್ಯಶಾಲಿಯಾಗಿದ್ದೇವೆ.
ಅಮೃತ ಕಾಲದಲ್ಲಿ ಸಂವಿಧಾನ್ ಸಭಾದಿಂದ ಇಂದಿನವರೆಗೆ ಏಳು ದಶಕಗಳ ಪ್ರಯಾಣದಲ್ಲಿ, ಈ ಪವಿತ್ರ ಆವರಣಗಳು ಅನೇಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ.
ಆಗಸ್ಟ್ 15, 1947 ರ ಮಧ್ಯರಾತ್ರಿಯ 'ಟ್ರಿಸ್ಟ್ ವಿತ್ ಡೆಸ್ಟಿನಿ' ಯಿಂದ 30 ಜೂನ್, 2017 ರ ಮಧ್ಯರಾತ್ರಿಯ ನವೀನ ಭವಿಷ್ಯಮುಖಿ ಜಿಎಸ್ಟಿ ಆಡಳಿತದ ಅನಾವರಣ ಮತ್ತು ಇಂದಿನವರೆಗೆ, ಇದೇ ಸೆಂಟ್ರಲ್ ಹಾಲ್ ನಲ್ಲಿ, ಸಂವಿಧಾನ ಸಭೆಯ ಸದಸ್ಯರು ಭಾರತದ ಸಂವಿಧಾನವನ್ನು ರಚಿಸುವ ಕ್ಲಿಷ್ಟಕರ ಕಾರ್ಯವನ್ನು ಪೂರ್ಣಗೊಳಿಸಲು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.
ಸಂವಿಧಾನ ಸಭೆಯ ಈ ಚೇಂಬರ್ ನಲ್ಲಿ ನಡೆದ ಚರ್ಚೆಗಳು ಸಭ್ಯತೆ ಮತ್ತು ಆರೋಗ್ಯಕರ ಚರ್ಚೆಗೆ ಉದಾಹರಣೆಯಾಗಿದೆ. ವಿವಾದಾತ್ಮಕ ವಿಷಯಗಳ ಕುರಿತು ಪಾಂಡಿತ್ಯಪೂರ್ಣ ಚರ್ಚೆಗಳು ಮತ್ತು ಉತ್ಸಾಹಭರಿತ ಚರ್ಚೆಗಳೊಂದಿಗೆ ಒಮ್ಮತದ ಉತ್ಸಾಹದಲ್ಲಿ ಮಾತುಕತೆಗಳನ್ನು ನಡೆಸಲಾಯಿತು. ನಮ್ಮ ಸಂಸ್ಥಾಪಕರ ಮಾದರಿ ನಡವಳಿಕೆಯನ್ನು ನಾವು ಅನುಸರಿಸಬೇಕು.
ಸಂಸತ್ತಿನ ಹೊಸ ಕಟ್ಟಡ, ಆತ್ಮ ನಿರ್ಭರ ಭಾರತದ ಉದಯಕ್ಕೆ ಸಾಕ್ಷಿಯಾಗಿದೆ, ಇದು ಕೇವಲ ವಾಸ್ತುಶಿಲ್ಪದ ಅದ್ಭುತವಲ್ಲದೆ ಅದಕ್ಕೂ ಮೀರಿದ್ದಾಗಿದೆ - ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯ ಪ್ರತಿಬಿಂಬವಾಗಿದೆ - ಇದು ರಾಷ್ಟ್ರದ ಹೆಮ್ಮೆ, ಏಕತೆ ಮತ್ತು ಗುರುತಿನ ಸಂಕೇತವಾಗಿದೆ.
ನಾವು ಜಿ-20 ಅನ್ನು ಪರಿಣಾಮಕಾರಿಯಾಗಿ ಸಂಘಟಿಸಿದ್ದೇವೆ, ಇದು ಭಾರತದ ಜಾಗತಿಕ ಶಕ್ತಿಯ ಪ್ರದರ್ಶನಕ್ಕೆ ಕಾರಣವಾಯಿತು.
ಹೊಸ ಸಂಸತ್ತಿನ ಕಟ್ಟಡ, ಭಾರತ ಮಂಟಪಂ ಮತ್ತು ಯಶೋಭೂಮಿ ವಿಶ್ವದ ಅತ್ಯುತ್ತಮ ಕಟ್ಟಡಗಳೊಂದಿಗೆ ಸ್ಪರ್ಧಿಸುವ ಮೂಲಭೂತ ಸೌಕರ್ಯಗಳ ಇತ್ತೀಚಿನ ಅತ್ಯುತ್ತಮ ಕಟ್ಟಡಗಳಾಗಿವೆ. ಈ ಐಕಾನಿಕ್ ಸ್ಥಳಗಳು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿವೆ.
ನಮ್ಮ ರಾಷ್ಟ್ರವು ಹಿಂದೆಂದಿಗಿಂತಲೂ ವೇಗವಾಗಿ ಪ್ರಗತಿ ಹೊಂದುತ್ತಿದೆ ಮತ್ತು ಈ ಪ್ರಗತಿಯನ್ನು ತಡೆಯಲಾಗದು ಎಂದು ಜಗತ್ತು ಈಗ ಅರಿತುಕೊಳ್ಳುತ್ತಿದೆ.
ಭಾರತವು ಜಾಗತಿಕ ಸಂವಾದವನ್ನು ವ್ಯಾಖ್ಯಾನಿಸುತ್ತಿದೆ, ಅವುಗಳ ಫಲಿತಾಂಶವನ್ನು ರೂಪಿಸುತ್ತಿದೆ ಮತ್ತು ರಾಷ್ಟ್ರಗಳ ಸಹಭಾಗಿತ್ವದಲ್ಲಿ ಮಹತ್ವದ ನಾಯಕನಾಗಿ ಹೊರಹೊಮ್ಮಿದೆ. ಇದು ಜಾಗತಿಕ ಶಾಂತಿ, ಹವಾಮಾನ ಬದಲಾವಣೆ ಮತ್ತು ಆರ್ಥಿಕ ಅಭಿವೃದ್ಧಿಗೆ ಇತರ ಪ್ರಮುಖ ದೇಶಗಳೊಂದಿಗೆ ಸಮಾನವಾಗಿ ಕಾರ್ಯಸೂಚಿಯನ್ನು ಮಾಡುವ ಪ್ರಾಬಲ್ಯ ಹೊಂದಿದೆ.
ಸುತ್ತಲೂ ಭರವಸೆ ಮತ್ತು ಆಶಾವಾದವನ್ನು ಹುಟ್ಟುಹಾಕುತ್ತಿರುವ ಈ ಪ್ರೋತ್ಸಾಹದಾಯಕ ಸನ್ನಿವೇಶದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಕ್ಷ, ಜನಕೇಂದ್ರಿತ ದೃಷ್ಟಿ, ಉತ್ಸಾಹ ಮತ್ತು ಅನುಕರಣೀಯ ಕಾರ್ಯವೈಖರಿಯನ್ನು ಅಭಿನಂದಿಸಲು ಮತ್ತು ಅವರೊಡನೆ ನೀತಿಗಳ ಅನುಷ್ಠಾನಕ್ಕಾಗಿ ಎಲ್ಲಾ ಮಟ್ಟದ ಅಧಿಕಾರವರ್ಗದವರನ್ನು ಗೌರವಿಸಲು ಮತ್ತು ಮತ್ತು ಪ್ರಶಂಸಿಸಲು ಇದು ಸೂಕ್ತಕಾಲವೆಂದು ಭಾವಿಸುತ್ತೇನೆ
ಪ್ರಜಾಪ್ರಭುತ್ವದ ದೇವಾಲಯಗಳಲ್ಲಿ ನೀತಿ ಉಲ್ಲಂಘನೆ ಮತ್ತು ನಿಯಮಗಳ ಘೋರ ನಿರ್ಲಕ್ಷ್ಯವನ್ನು ಸಮರ್ಥಿಸಲು ಹಿಂದಿನ ಪೂರ್ವನಿದರ್ಶನಗಳನ್ನು ಉಲ್ಲೇಖಿಸುವ ಪ್ರಮೇಯವನ್ನು ಶಾಶ್ವತವಾಗಿ ಕೈಬಿಡಬೇಕಾದ ಸಮಯ ಈಗ ಬಂದಿದೆ.
ನಾವು ಹೊಸ ಸಂಸತ್ ಭವನದತ್ತ ಸಾಗುತ್ತಿರುವಾಗ, ನಾವು ಸಹಕಾರ ಮತ್ತು ಒಮ್ಮತದ ವಿಧಾನವನ್ನು ಹೆಚ್ಚಿಸಿಕೊಳ್ಳಬೇಕು. ಈಗ ನಾವು ಮುಖಾಮುಖಿ ವಿಧಾನಕ್ಕೆ ವಿದಾಯ ಹೇಳುವ ಸಮಯ ಬಂದಿದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರಮುಖವಾಗಿಡಲು ಇರಿಸಿಕೊಳ್ಳಲು ನಿರ್ಧರಿಸುವ ಸಮಯ.
ಸಂಸತ್ತಿನ ಕಾರ್ಯಚಟುವಟಿಕೆಗಳಲ್ಲಿ ಅಶಾಂತಿ ಮತ್ತು ಅಡ್ಡಿಪಡಿಸುವ ತಂತ್ರವನ್ನು ಕೊನೆಗಾಣಿಸುವ ಸಮಯ, ಇದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಮತ್ತು ಇದಕ್ಕೆ ನಮ್ಮ ಅಂತಿಮ ಪ್ರಭುಗಳಾದ ಜನರ ಅನುಮೋದನೆಯನ್ನು ಎಂದಿಗೂ ಪಡೆಯಲು ಸಾಧ್ಯವಿಲ್ಲ.
ನನ್ನ ಭಾಷಣವನ್ನು ಮುಗಿಸುವ ಮೊದಲು, ನಾನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ತಮ್ಮ ಅಂತಿಮ ಭಾಷಣದಲ್ಲಿ ಹೇಳಿದ ಮಾತನ್ನು ಉಲ್ಲೇಖಿಸುತ್ತೇನೆ “ನಾವು ಪ್ರಜಾಪ್ರಭುತ್ವವನ್ನು ರೂಪದಲ್ಲಿ ಮಾತ್ರವಲ್ಲದೆ ವಾಸ್ತವದಲ್ಲಿಯೂ ಉಳಿಸಿಕೊಳ್ಳಬೇಕಾದರೆ, ನಾವು ಏನು ಮಾಡಬೇಕು? ನನ್ನ ದೃಷ್ಟಿಯಲ್ಲಿ ನಾವು ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳನ್ನು ಸಾಧಿಸಲು ಸಾಂವಿಧಾನಿಕ ಮಾರ್ಗಗಳನ್ನು ದೃಢವಾಗಿ ಅಳವಡಿಸಿಕೊಳ್ಳುವುದು.'' ಅವರ ಸ್ಪಷ್ಟ ಕರೆಗೆ ಕಿವಿಗೊಡೋಣ.
ಈ ನಿರ್ಣಾಯಕ ಕ್ಷಣದಲ್ಲಿ ನಾವು ಭಾರತದ ಪರಿವರ್ತನೆಗೆ ಸಾಕ್ಷಿಯಾಗುತ್ತಿರುವಾಗ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಮತ್ತು ಶತಕೋಟಿಗೂ ಹೆಚ್ಚು ಹೃದಯಗಳ "ಆಧುನಿಕತೆಯೊಂದಿಗೆ ಒಕ್ಕೂಟ" ವನ್ನು ಫಲಪ್ರದಗೊಳಿಸುವುದಕ್ಕಾಗಿ ಮೆಚ್ಚುಗೆಗಳು. ಮಾನವೀಯತೆಯ ಆರನೇ ಒಂದು ಭಾಗದ ಭವಿಷ್ಯವನ್ನು ರೂಪಿಸುವ ಈ ಅವಿಸ್ಮರಣೀಯ ಕಾರ್ಯದಲ್ಲಿ ಅವರ ಪಾತ್ರವು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ.
ಗೌರವಾನ್ವಿತ ಸದಸ್ಯರೇ, ಅಮೃತ ಕಾಲದಲ್ಲಿ ಸಂಸತ್ತಿನ ಹೊಸ ಕಟ್ಟಡಕ್ಕೆ ಈ ಐತಿಹಾಸಿಕ ನಡಿಗೆ, ವಿಶ್ವಗುರುವಾಗಿ ಭಾರತ @ 2047 ಕ್ಕೆ ಮೆರವಣಿ ನಡೆಯಲಿ.
ನಾವೆಲ್ಲರೂ ಒಟ್ಟಾಗಿ ಸಂಸತ್ತಿನ ಹೊಸ ಸದನಗಳನ್ನು ಪ್ರಜಾಪ್ರಭುತ್ವದ ದೇವಾಲಯದ ಪವಿತ್ರ ಕ್ಷೇತ್ರವನ್ನಾಗಿ ಮಾಡೋಣ.
ಜೈ ಹಿಂದ್!
****
(Release ID: 1958881)
Visitor Counter : 118