ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಉಜ್ವಲ ಯೋಜನೆಯ ವಿಸ್ತರಣೆಗೆ ಸಂಪುಟದ ಅನುಮೋದನೆ
3 ವರ್ಷಗಳಲ್ಲಿ 75 ಲಕ್ಷ ಹೆಚ್ಚುವರಿ ಎಲ್ ಪಿ ಜಿ ಸಂಪರ್ಕಗಳನ್ನು ನೀಡಲಾಗುವುದು
ಇದು ಪಿಎಂಯುವೈ ಫಲಾನುಭವಿಗಳ ಒಟ್ಟು ಸಂಖ್ಯೆಯನ್ನು 10.35 ಕೋಟಿಗೆ ಹೆಚ್ಚಿಸುತ್ತದೆ
Posted On:
13 SEP 2023 6:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2023-24 ರಿಂದ 2025-26 ರವರೆಗೆ ಮೂರು ವರ್ಷಗಳಲ್ಲಿ 75 ಲಕ್ಷ ಎಲ್ ಪಿ ಜಿ ಸಂಪರ್ಕಗಳನ್ನು ನೀಡುವ ಮೂಲಕ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ವಿಸ್ತರಣೆಗೆ ಅನುಮೋದನೆ ನೀಡಿದೆ. 75 ಲಕ್ಷ ಹೆಚ್ಚುವರಿ ಉಜ್ವಲ ಸಂಪರ್ಕಗಳನ್ನು ಒದಗಿಸುವುದರಿಂದ ಪಿಎಂಯುವೈ ಫಲಾನುಭವಿಗಳ ಒಟ್ಟು ಸಂಖ್ಯೆಯು 10.35 ಕೋಟಿಗೆ ತಲುಪುತ್ತದೆ.
2014 vs 2023 ರಲ್ಲಿನ ಪ್ರಮುಖ ಎಲ್ ಪಿ ಜಿ ವಿವರಗಳು
|
(ಘಟಕ)
|
01.04.2014
|
01.04.2016
|
01.04.2023
|
ರಾಷ್ಟ್ರೀಯ ಎಲ್ ಪಿ ಜಿ ವ್ಯಾಪ್ತಿ
|
%
|
55.90%
|
61.9%
|
ಸಂಪೂರ್ಣತೆಗೆ ಹತ್ತಿರ
|
ಒಎಂಸಿಗಳ ಬಾಟ್ಲಿಂಗ್ ಘಟಕಗಳ ಸಂಖ್ಯೆ
|
ಸಂಖ್ಯೆಗಳಲ್ಲಿ
|
186
|
188
|
208
|
ಭಾರತದಲ್ಲಿ ಎಲ್ ಪಿ ಜಿ ವಿತರಕರ ಸಂಖ್ಯೆ
|
ಸಂಖ್ಯೆಗಳಲ್ಲಿ
|
13896
|
17916
|
25386
|
ಭಾರತದಲ್ಲಿನ ದೇಶೀಯ ಸಕ್ರಿಯ ಎಲ್ ಪಿ ಜಿ ಗ್ರಾಹಕರು
|
ಲಕ್ಷದಲ್ಲಿ
|
1451.76
|
1662.5
|
3140.33
|
ಉಜ್ವಲ 2.0 ರ ಅಸ್ತಿತ್ವದಲ್ಲಿರುವ ವಿಧಾನದ ಪ್ರಕಾರ, ಉಜ್ವಲ ಫಲಾನುಭವಿಗಳಿಗೆ ಮೊದಲ ಮರುಪೂರಣ (ರೀಫಿಲ್) ಮತ್ತು ಸ್ಟೌವ್ ಅನ್ನು ಸಹ ಉಚಿತವಾಗಿ ನೀಡಲಾಗುತ್ತದೆ.
ಪಿಎಂಯುವೈ ಗ್ರಾಹಕರಿಗೆ 14.2 ಕೆಜಿ ಎಲ್ ಪಿ ಜಿ ಸಿಲಿಂಡರ್ ಗೆ ವರ್ಷಕ್ಕೆ 12 ರೀಫಿಲ್ ಗಳಿಗೆ ರೂ.200 ರ ಸಬ್ಸಿಡಿಯನ್ನು ಒದಗಿಸಲಾಗುತ್ತಿದೆ. ಪಿಇಎಂಯುವೈ ಮುಂದುವರಿಕೆ ಇಲ್ಲದೆ, ಅರ್ಹ ಬಡ ಕುಟುಂಬಗಳು ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಸ್ವಚ್ಛವಾದ ಅಡುಗೆಯ ಮೂಲಕ ಮಹಿಳೆಯರ ಜೀವನ ಸುಲಭ
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯು ಹೆಚ್ ಒ) ಪ್ರಕಾರ, ಪ್ರಪಂಚದಾದ್ಯಂತ ಸುಮಾರು 2.4 ಶತಕೋಟಿ ಜನರು (ಇದು ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗ), ಅಡುಗೆಗಾಗಿ ತೆರೆದ ಬೆಂಕಿಯ ಒಲೆ ಅಥವಾ ಸೀಮೆಎಣ್ಣೆ, ಬಯೋಮಾಸ್ (ಸೌದೆ, ಪ್ರಾಣಿಗಳ ಸಗಣಿ ಮತ್ತು ಬೆಳೆ ತ್ಯಾಜ್ಯ ಮುಂತಾದವುಗಳ) ಮತ್ತು ಕಲ್ಲಿದ್ದಲಿನಂತಹ ಅದಕ್ಷ ಒಲೆಗಳ ಮೇಲೆ ಅವಲಂಬಿತವಾಗಿದೆ. ಇದು ಮನೆಯ ಹಾನಿಕಾರಕ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ, 2020 ರಲ್ಲಿ 237,000 ಕ್ಕೂ ಹೆಚ್ಚು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವುಗಳು ಸೇರಿದಂತೆ ವಾರ್ಷಿಕವಾಗಿ ಅಂದಾಜು 3.2 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆ. ಸುಸ್ಥಿರ ಮತ್ತು ಮಾಲಿನ್ಯ-ಮುಕ್ತ ಭವಿಷ್ಯವನ್ನು ಸಾಧಿಸಲು ಮನೆಯ ವಾಯು ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸುವ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಯಾತನೆಯನ್ನು ತಡೆಯುವ ಅಗತ್ಯವಿದೆ.
ಹಿಂದೆ, ಭಾರತದಲ್ಲಿನ ಬಡ ಸಮುದಾಯಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಸೌದೆ, ಕಲ್ಲಿದ್ದಲು ಮತ್ತು ಬೆರಣಿಯಂತಹ ಸಾಂಪ್ರದಾಯಿಕ ಇಂಧನಗಳನ್ನು ಆರೋಗ್ಯದ ದುಷ್ಪರಿಣಾಮಗಳ ಬಗ್ಗೆ ಅರಿವಿಲ್ಲದೆ ಬಳಸುತ್ತಿದ್ದರು. ಪರಿಣಾಮವಾಗಿ, ಅವರು ಮೂಲ ಕಾರಣವನ್ನು ತಿಳಿಯದೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದದರು. ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್, ಹೃದಯದ ಕಾಯಿಲೆ ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳಂತಹ ರೋಗಗಳಿಂದ ಉಂಟಾಗುವ ಮರಣದ ಅಪಾಯವು ವ್ಯಾಪಕವಾಗಿ ವರದಿಯಾಗುತ್ತಿತ್ತು. ಅಡುಗೆಗಾಗಿ ಬಳಸುವ ನವೀಕರಿಸಲಾಗದ ಮರದ ಇಂಧನಗಳು ಗಿಗಾಟನ್ ಸಿಒ2 ಹೊರಸೂಸುವಿಕೆಗೆ ಕಾರಣವಾಗುತ್ತವೆ ಮತ್ತು ಮನೆಗಳಲ್ಲಿ ಘನ ಇಂಧನಗಳನ್ನು ಸುಡುವುದು ಕಪ್ಪು ಇಂಗಾಲದ ಹೊರಸೂಸುವಿಕೆಯ 58 ಪ್ರತಿಶತವನ್ನು ಒಳಗೊಂಡಿರುತ್ತದೆ. ಘನ ಬಯೋಮಾಸ್ ಅಪೂರ್ಣ ದಹನವು ಮನೆಯ ವಾಯು ಮಾಲಿನ್ಯಕ್ಕೆ (ಹೆಚ್ ಎ ಪಿ) ಗಮನಾರ್ಹ ಕೊಡುಗೆ ನೀಡುತ್ತದೆ.
ಇದು ಲಿಂಗ ಸಮಸ್ಯೆ ಕೂಡ ಆಗಿದೆ ಎಂದು ಸಂಶೋಧನೆ ಹೇಳುತ್ತದೆ: ಹೆಣ್ನು ಮಕ್ಕಳು ಮತ್ತು ಮಹಿಳೆಯರು ಘನ ಇಂಧನಗಳಿಗೆ ಹೆಚ್ಚಾಗಿ ಒಡ್ಡಿಕೊಳ್ಳುತ್ತಾರೆ. ಘನ ಇಂಧನಗಳೊಂದಿಗೆ ಅಡುಗೆ ಮಾಡುವುದು ವಿಶ್ವಸಂಸ್ತೆಯ ಐದು ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯನ್ನು ವಿಳಂಬಗೊಳಿಸುತ್ತದೆ.
ಪಿಎಂಯುವೈ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸಿದೆ. ಎಲ್ ಪಿ ಜಿ ಯ ಸುಲಭ ಲಭ್ಯತೆಯಿಂದಾಗಿ, ಮಹಿಳೆಯರಿಗೆ ಸೌದೆ ಅಥವಾ ಇತರ ಸಾಂಪ್ರದಾಯಿಕ ಇಂಧನಗಳನ್ನು ಸಂಗ್ರಹಿಸುವ ಕಾರ್ಯವು ಹೊರೆಯಾಗುವುದಿಲ್ಲ, ಇದಕ್ಕೆ ಸಾಮಾನ್ಯವಾಗಿ ದೀರ್ಘ ಮತ್ತು ಪ್ರಯಾಸಕರವಾದ ಓಡಾಟದ ಅಗತ್ಯವಿರುತ್ತದೆ. ಈ ಹೊಸ ಸೌಕರ್ಯವು ಸಮುದಾಯ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಮತ್ತು ಇತರ ಆದಾಯ-ಉತ್ಪಾದಿಸುವ ಅವಕಾಶಗಳಲ್ಲಿ ಭಾಗಿಯಾಗಲು ಅನುವು ಮಾಡಿಕೊಡುತ್ತದೆ.
ಇದಲ್ಲದೆ, ಉಜ್ವಲ ಯೋಜನೆಯು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಕೊಡುಗೆ ನೀಡಿದೆ, ಏಕೆಂದರೆ ಅವರು ಇನ್ನು ಮುಂದೆ ಸೌದೆ ಅಥವಾ ಇಂಧನವನ್ನು ಸಂಗ್ರಹಿಸಲು ನಿರ್ಜನ ಮತ್ತು ಸಂಭಾವ್ಯ ಅಸುರಕ್ಷಿತ ಪ್ರದೇಶಗಳಿಗೆ ಹೋಗಬೇಕಾದ ಅಗತ್ಯವಿಲ್ಲ.
ಎಲ್ ಪಿ ಜಿ ವ್ಯಾಪ್ತಿಯನ್ನು ವಿಸ್ತರಿಸಲು ಉಪಕ್ರಮಗಳು
- ಪಹಲ್ (ಪ್ರತ್ಯಕ್ಷ್ ಹಸ್ತಾಂತರಿತ್ ಲಾಭ್): ಸಹಾಯಧನದ ದರದಲ್ಲಿ ಎಲ್ ಪಿ ಜಿ ಸಿಲಿಂಡರ್‌ಗಳನ್ನು ಒದಗಿಸುವ ಬದಲು, ಅವುಗಳನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಲಾಯಿತು ಮತ್ತು ಅನ್ವಯವಾಗುವ ಸಬ್ಸಿಡಿಯನ್ನು ನೇರವಾಗಿ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಯಿತು. ಇದು "ನಕಲಿ" ಖಾತೆಗಳನ್ನು ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಗೃಹಬಳಕೆಯ ಸಿಲಿಂಡರ್ ಗಳ ಅಕ್ರಮ ಬಳಕೆಯನ್ನು ಕಡಿಮೆ ಮಾಡಿತು. ಉದ್ದೇಶಿತ ಫಲಾನುಭವಿಗಳು ಮಾತ್ರ ಪ್ರಯೋಜನಗಳನ್ನು ಪಡೆಯುವುದನ್ನು ಖಾತ್ರಿಪಡಿಸಿತು.
ii ಗಿವ್ ಇಟ್ ಅಪ್: ಸಬ್ಸಿಡಿಗಳನ್ನು ಬಲವಂತವಾಗಿ ತೆಗೆದುಹಾಕುವ ಬದಲು, ಜನರು ತಮ್ಮ ಸಬ್ಸಿಡಿಗಳನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಡುವಂತೆ ಪ್ರೋತ್ಸಾಹಿಸಲಾಯಿತು. ವ್ಯಾಪಕ ಪ್ರಚಾರದ ಮೂಲಕ, ಲಕ್ಷಾಂತರ ಜನರು ಸಬ್ಸಿಡಿಗಳನ್ನು ಸ್ವಇಚ್ಛೆಯಿಂದ ತ್ಯಜಿಸಿದರು, ಇದು ಎಲ್ ಪಿ ಜಿ ಸಿಲಿಂಡರ್‌ಗಳನ್ನು ನಿಜವಾಗಿಯೂ ಸಹಾಯದ ಅಗತ್ಯವಿರುವವರಿಗೆ ಒದಗಿಸಲು ಸಹಾಯ ಮಾಡಿತು.
iii 2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ಲಾಕ್ ಡೌನ್ ಸಮಯದಲ್ಲಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಉಚಿತ ರೀಫಿಲ್ಲಿಂಗ್ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯಡಿಯಲ್ಲಿ, 14.17 ಕೋಟಿ ಎಲ್ ಪಿ ಜಿ ರೀಫಿಲ್ಲಿಂಗ್ ಗಳಿಗೆ ಬೆಂಬಲವಾಗಿ ಪಿಎಂಯುವೈ ಫಲಾನುಭವಿಗಳಿಗೆ 9670.41 ಕೋಟಿ ರೂಪಾಯಿಗಳ ಸಹಾಯವನ್ನು ನೀಡಲಾಗಿದೆ.
- 2018-19ರಲ್ಲಿ 3.01 ಇದ್ದ ಪಿಎಂಯುವೈ ಫಲಾನುಭವಿಗಳ ತಲಾ ಬಳಕೆಯು 2022-23ರಲ್ಲಿ 3.71ಕ್ಕೆ ಏರಿಕೆಯಾಗಿದೆ. ಪಿಎಂಯುವೈ ಫಲಾನುಭವಿಗಳು ಈಗ (2022-23) ವರ್ಷದಲ್ಲಿ 35 ಕೋಟಿ ಎಲ್ ಪಿ ಜಿ ರೀಫಿಲ್ ಗಳನ್ನು ಮಾಡಿಸಿದ್ದಾರೆ.
(Release ID: 1957151)
Visitor Counter : 132