ಉಪರಾಷ್ಟ್ರಪತಿಗಳ ಕಾರ್ಯಾಲಯ
ಸೆಪ್ಟೆಂಬರ್ 1, 2023 ರಂದು ಉಪರಾಷ್ಟ್ರಪತಿಯವರು ಮುಂಬೈಗೆ ಭೇಟಿ ನೀಡಲಿದ್ದಾರೆ
‘ಮಹೇಂದ್ರಗಿರಿ’ ಯುದ್ಧನೌಕೆಗೆ ಉಪರಾಷ್ಟ್ರಪತಿಯವರು ಚಾಲನೆ ನೀಡಲಿದ್ದಾರೆ
Posted On:
30 AUG 2023 3:34PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, ಡಾ. ಸುದೇಶ್ ಧನಕರ್ ಅವರೊಂದಿಗೆ ಸೆಪ್ಟೆಂಬರ್ 01, 2023 ರಂದು ಮುಂಬೈ ಮಹಾನಹರಕ್ಕೆ ಭೇಟಿ ನೀಡಲಿದ್ದಾರೆ. ಮುಂಬಯಿಯಲ್ಲಿ ಅವರು, ಮಜಗಾವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಎಂ.ಡಿ.ಎಲ್.) ನಲ್ಲಿ ನಿರ್ಮಿಸಲಾಗುತ್ತಿರುವ ಯುದ್ಧನೌಕೆ 'ಮಹೇಂದ್ರಗಿರಿ'ಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 'ಮಹೇಂದ್ರಗಿರಿ' ಯುದ್ಧನೌಕೆಯು ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 17ಎ ಅಡಿಯಲ್ಲಿ ನಿರ್ಮಿತ ಏಳನೇ ಸ್ಟೆಲ್ತ್ ಫ್ರಿಗೇಟ್ ಆಗಿದೆ ಮತ್ತು ಎಂ.ಡಿ.ಎಲ್. ನಿರ್ಮಿಸಿದ ನಾಲ್ಕನೆಯದಾಗಿದೆ.
ಉಪರಾಷ್ಟ್ರಪತಿಯವರು, ತಮ್ಮ ಮುಂಬಯಿಭೇಟಿಯ ಸಮಯದಲ್ಲಿ ಎಂ.ಡಿ.ಎಲ್.ನ ಹೆರಿಟೇಜ್ ಮ್ಯೂಸಿಯಂ 'ಧರೋಹರ್' ಗೆ ಭೇಟಿ ನೀಡಲಿದ್ದಾರೆ.
***
(Release ID: 1953515)
Visitor Counter : 152