ಕಲ್ಲಿದ್ದಲು ಸಚಿವಾಲಯ

ದೇಶೀಯ ಕಲ್ಲಿದ್ದಲು ಸಮರ್ಥ ಸಾಗಣೆಗಾಗಿ ರೈಲು-ಸಮುದ್ರ-ರೈಲು(ಆರ್ ಎಸ್ ಆರ್) ಸಾರಿಗೆ ಉತ್ತೇಜಿಸಲು ಉಪಕ್ರಮ


ಆರ್ ಎಸ್ ಆರ್ - ಕಲ್ಲಿದ್ದಲು ಸಾಗಣೆಯ ಪರ್ಯಾಯ ವಿಧಾನವು ತಡೆರಹಿತ ಮತ್ತು ನಿರಂತರ ವಿದ್ಯುತ್ ಸರಬರಾಜು ಖಚಿತಪಡಿಸುವ ಗುರಿ ಹೊಂದಿದೆ

ಆರ್ ಎಸ್ ಆರ್ ಬಳಕೆದಾರ(ಗ್ರಾಹಕ)ರಿಗೆ ವೆಚ್ಚ ಕಡಿಮೆ ಮಾಡುತ್ತದೆ, ಪರಿಸರ ಸ್ನೇಹಿಯಾಗಿದೆ

Posted On: 23 AUG 2023 2:37PM by PIB Bengaluru

 

 

 

ಕಲ್ಲಿದ್ದಲು ಸಚಿವಾಲಯವು ರೈಲು-ಸಮುದ್ರ-ರೈಲು ಸಾರಿಗೆ ಉತ್ತೇಜಿಸಲು ಉಪಕ್ರಮ ಕೈಗೊಂಡಿದೆ, ಇದು ದೇಶೀಯ ಕಲ್ಲಿದ್ದಲಿನ ಸಮರ್ಥ ಸಾಗಣೆಗಾಗಿ ರೈಲು-ಸಮುದ್ರ-ರೈಲು (ಆರ್ ಎಸ್ ಆರ್) ಸಾರಿಗೆ ಸಂಯೋಜಿಸುವ ಗುರಿ ಹೊಂದಿದೆ. ಈ ಬಹುವಿಧಾನದ ಸಾರಿಗೆ ವ್ಯವಸ್ಥೆಯು ಕಲ್ಲಿದ್ದಲನ್ನು ಗಣಿಗಳಿಂದ ಬಂದರುಗಳಿಗೆ ಮತ್ತು ನಂತರ ಬಳಕೆದಾರ(ಗ್ರಾಹಕರು)ರಿಗೆ ತಡೆರಹಿತ ಸಾಗಣೆಗೆ ಅನುವು ಮಾಡುತ್ತದೆ, ಸಾರಿಗೆ ವೆಚ್ಚ ಕಡಿಮೆ ಮಾಡುವ ಜತೆಗೆ, ಸರಕು ಸಾಗಣೆಯ ದಕ್ಷತೆ ಸುಧಾರಿಸುತ್ತದೆ.

2023ರ ಹಣಕಾಸು ವರ್ಷದಲ್ಲಿ ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್‌ನಂತಹ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ರಾಜ್ಯಗಳು, ಮಧ್ಯಪ್ರದೇಶದ ಕೆಲವು ಭಾಗಗಳು ಒಟ್ಟು ದೇಶೀಯ ಕಚ್ಚಾ ಕಲ್ಲಿದ್ದಲು ಉತ್ಪಾದನೆಯಲ್ಲಿ ಸರಿಸುಮಾರು 75% ಪಾಲು ಹೊಂದಿವೆ. ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವ ಅಗತ್ಯ ಗುರುತಿಸಿರುವ ಕಲ್ಲಿದ್ದಲು ಸಚಿವಾಲಯವು, ಭಾರತದಲ್ಲಿ 2030ರ ವೇಳೆಗೆ ಕಲ್ಲಿದ್ದಲು ಉತ್ಪಾದನೆಯನ್ನು(~7.7% ಸಂಯೋಜಿತ ವಾರ್ಷಿಕ ಬೆಳವಣಿಗೆ ದರ) 2 ಪಟ್ಟು ಹೆಚ್ಚಿಸಲು ಯೋಜಿಸಿದೆ.

ಹೆಚ್ಚುತ್ತಿರುವ ಬೇಡಿಕೆ ಪೂರೈಸಲು, ಉತ್ತಮವಾಗಿ ಯೋಜಿಸಿದ ಮತ್ತು ಪರಿಣಾಮಕಾರಿ ಕಲ್ಲಿದ್ದಲು ಸಾಗಣೆ ವ್ಯವಸ್ಥೆ ಅಗತ್ಯವಿದೆ. ಆದ್ದರಿಂದ, ಕಲ್ಲಿದ್ದಲು ಸಚಿವಾಲಯವು ಕಲ್ಲಿದ್ದಲು ಸಚಿವಾಲಯ, ರೈಲ್ವೆ ಸಚಿವಾಲಯ ಮತ್ತು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಒಳಗೊಂಡಿರುವ ಅಂತರ-ಸಚಿವಾಲಯ ಸಮಿತಿ(ಐಎಂಸಿ) ರಚಿಸಿದೆ. ಈ ಸಮಿತಿಯು ದೇಶದಲ್ಲಿ ಕಲ್ಲಿದ್ದಲು ಸಾಗಣೆಯ ದೀರ್ಘಾವಧಿಯ ಯೋಜನೆಯನ್ನು ಸಿದ್ಧಪಡಿಸುವ ಉದ್ದೇಶ ಹೊಂದಿದೆ. ಪ್ರಸ್ತುತ, ರೈಲ್ವೇಯು ಸುಮಾರು 55% ಕಲ್ಲಿದ್ದಲು ಸಾಗಣೆ ಮಾಡುತ್ತಿದೆ. 2030ರ ವೇಳೆಗೆ ಈ ಪಾಲನ್ನು 75%ಗೆ ಹೆಚ್ಚಿಸುವ ಗುರಿ ಹೊಂದಿದೆ. 2030ರ ವೇಳೆಗೆ ರೈಲು-ಸಾಗರ/ರೈಲು-ಸಾಗರ-ರೈಲು ಸಾರಿಗೆ ಮಾದರಿಯ  ದಟ್ಟಣೆ ತಪ್ಪಿಸಲು ಕಲ್ಲಿದ್ದಲು ಸಾಗಣೆ ಹೆಚ್ಚಿಸುವ ಮತ್ತು ಸ್ಥಳಾಂತರಿಸುವ ಪರ್ಯಾಯ ಮಾರ್ಗಗಳನ್ನು ಹೆಚ್ಚಿಸುವ ಅಗತ್ಯಕ್ಕೆ ಕಲ್ಲಿದ್ದಲು ಸಚಿವಾಲಯ ಒತ್ತು ನೀಡುತ್ತಿದೆ. ಅಸ್ತಿತ್ವದಲ್ಲಿರುವ 40 ಮೆಟ್ರಿಕ್ ಟನ್ ನಿಂದ 2030ರ ವೇಳೆಗೆ 112 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಆರ್ ಎಸ್ ಆರ್ ಸಾರಿಗೆ ಮೂಲಕ ಸಾಗಣೆ ಉತ್ತೇಜಿಸಲು ಸಮಿತಿಯು ಹಲವಾರು ಕ್ರಮಗಳನ್ನು ಶಿಫಾರಸು ಮಾಡಿದೆ. ಈ ಕಾರ್ಯತಂತ್ರವು ಬಹುಮುಖಿ ಪ್ರಯೋಜನಗಳನ್ನು ನೀಡುತ್ತದೆ. ಮೊದಲನೆಯದಾಗಿ, ಕಲ್ಲಿದ್ದಲು ಸ್ಥಳಾಂತರಿಸುವಿಕೆಯ ಹೆಚ್ಚುವರಿ ಪರ್ಯಾಯ ವಿಧಾನವನ್ನು ಒದಗಿಸುವ ಮೂಲಕ ಎಲ್ಲಾ ರೈಲು ಮಾರ್ಗಗಳಲ್ಲಿ ದಟ್ಟಣೆ ಕಡಿಮೆ ಮಾಡುವ ಸಾಧ್ಯತೆಯಿದೆ. ಎರಡನೆಯದಾಗಿ, ಇದು ಭವಿಷ್ಯದಲ್ಲಿ ರಫ್ತಿಗೆ ಬಳಸಿಕೊಳ್ಳಬಹುದಾದ ಮೂಲಸೌಕರ್ಯವನ್ನು ನಿರ್ಮಿಸುವ ಮೂಲಕ ರಫ್ತು ಅವಕಾಶಗಳನ್ನು ಸೃಷ್ಟಿಸುತ್ತದೆ. ಕೊನೆಯದಾಗಿ, ಎಆರ್ ಆರ್ ಗೆ ಹೋಲಿಸಿದರೆ ಆರ್ ಎಸ್ ಆರ್  ಗಣನೀಯವಾಗಿ ಕಡಿಮೆ ಇಂಗಾಲ ಹೊರಸೂಸುವಿಕೆ ನಿಯಂತ್ರಿಸುವ ಹೆಜ್ಜೆಗುರುತು ಹೊಂದಿದೆ.

ಸರಕು ಸಾಗಣೆಗೆ ಆರ್ಥಿಕ ಮತ್ತು ಪರಿಸರ-ಸ್ನೇಹಿ ವ್ಯವಸ್ಥೆಯಾಗಿರುವ ಕರಾವಳಿ ಹಡಗು ಸಾರಿಗೆಯು ಭಾರತದ ಸರಕು ಸಾಗಣೆ ಉದ್ಯಮವನ್ನು ಕ್ರಾಂತಿಕಾರಿಗೊಳಿಸುವ ಸಾಮರ್ಥ್ಯ ಹೊಂದಿದೆ. ಆರ್ ಎಸ್/ಆರ್ ಎಸ್ ಆರ್ ನಂತಹ ಕಲ್ಲಿದ್ದಲು ಸಾಗಣೆ ಸಾರಿಗೆ ಹೆಚ್ಚಿಸಲು ನಡೆಯುತ್ತಿರುವ ಪ್ರಯತ್ನಗಳು ದಕ್ಷಿಣ ಮತ್ತು ಪಶ್ಚಿಮ ಕರಾವಳಿಯ ಬಂದರುಗಳ ಸಂಪೂರ್ಣ ಸಾಮರ್ಥ್ಯ ಬಳಕೆ ಮಾಡಿಕೊಳ್ಳಲು ನೆರವಾಗುತ್ತದೆ. ಇದು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಗೋವಾ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಹೆಚ್ಚು ಕಲ್ಲಿದ್ದಲನ್ನು ಸಮರ್ಥವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ. ಆರ್ ಎಸ್ ಆರ್ ಮೂಲಕ ಕಲ್ಲಿದ್ದಲು ಸಾಗಣೆ ವೆಚ್ಚ ಅತ್ಯುತ್ತಮವಾಗಿಸಲು ಉಪಕ್ರಮಗಳು ನಡೆಯುತ್ತಿವೆ. ರೈಲು-ಸಮುದ್ರ-ರೈಲು ಸಾರಿಗೆ ಆಯ್ಕೆ ಮಾಡುವುದರಿಂದ ದಕ್ಷಿಣ ಭಾರತದಲ್ಲಿ ನೆಲೆಗೊಂಡಿರುವ ಬಳಕೆದಾರರಿಗೆ ಸರಕು ಸಾಗಣೆ ವೆಚ್ಚದಲ್ಲಿ ಪ್ರತಿ ಟನ್‌ಗೆ ಸುಮಾರು 760-1300 ರೂ. ಉಳಿಸಬಹುದು.. ಪ್ರಸ್ತುತ, ಎಂಸಿಎಲ್(ಪಾರಾದೀಪ್) ಘಟಕದಿಂದ ಪಾಶ್ಚಿಮಾತ್ಯ/ಉತ್ತರ ಟಿಪಿಪಿಗಳಿಗೆ ಕಲ್ಲಿದ್ದಲು ಪೂರೈಕೆಗಾಗಿ ಒಟ್ಟು ವೆಚ್ಚವು ಕಲ್ಲಿದ್ದಲು ತರಿಸಲು ತಗುಲುವ ವೆಚ್ಚ-ಎಆರ್ ಆರ್ ಗಿಂತ ಪ್ರತಿ ಟನ್ ಗೆ ಸುಮಾರು 2500 ರೂ. ಹೆಚ್ಚಾಗುತ್ತಿದೆ. ಆದರೆ ಇದು ಆಮದು ಕಲ್ಲಿದ್ದಲು ಇಳಿಸಲು ತಗುಲುವ ವೆಚ್ಚಕ್ಕಿಂತ ಅಗ್ಗವಾಗಿದೆ.

ರೈಲು-ಸಮುದ್ರ-ರೈಲು ಸಾರಿಗೆ ಉತ್ತೇಜಿಸಲು ಕಲ್ಲಿದ್ದಲು ಸಚಿವಾಲಯದ ಪ್ರಯತ್ನಗಳು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತಿವೆ. ಏಕೆಂದರೆ ರೈಲು-ಸಮುದ್ರ-ರೈಲು ಮಾದರಿಯ ಕಲ್ಲಿದ್ದಲಿನ ಸಾಗಣೆಯು ಕಳೆದ 4 ವರ್ಷಗಳಲ್ಲಿ ಸುಮಾರು 125% ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಮುಂದಿನ 7 ವರ್ಷಗಳಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆಯು ಸುಮಾರು 2 ಪಟ್ಟು ಹೆಚ್ಚಾಗುವ ನಿರೀಕ್ಷೆಯೊಂದಿಗೆ, ಪರ್ಯಾಯ ಸಾರಿಗೆ ವಿಧಾನವಾಗಿ ರೈಲು-ಸಮುದ್ರ-ರೈಲು ಸಾರಿಗೆಯು ಭಾರತದಲ್ಲಿನ ಬಳಕೆ ಕೇಂದ್ರಗಳಿಗೆ ಸಮರ್ಥ ಕಲ್ಲಿದ್ದಲು ಸಾಗಣೆಗೆ ನಿರ್ಣಾಯಕವಾಗಿದೆ. ಇದು ತಡೆರಹಿತ ಮತ್ತು ನಿರಂತರ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸುತ್ತದೆ.

ಎಲ್ಲಾ ಸಚಿವಾಲಯಗಳಿರುವ ಅಂತರ್ ಸಚಿವಾಲಯ ಸಮಿತಿಯ ಶಿಫಾರಸುಗಳು ಗಮ್ಯಸ್ಥಾನಗಳಿಗೆ ಕಲ್ಲಿದ್ದಲನ್ನು ಸಮರ್ಥವಾಗಿ ಸ್ಥಳಾಂತರಿಸುವ ಸವಾಲುಗಳನ್ನು ಎದುರಿಸಲು "ಸಂಪೂರ್ಣ ಸರ್ಕಾರ" ಕಾರ್ಯ ವಿಧಾನದ ಭಾಗವಾಗಿದೆ.

ಕಲ್ಲಿದ್ದಲು ಸಚಿವಾಲಯವು ರೈಲು-ಸಮುದ್ರ-ರೈಲು ಸಾರಿಗೆ ಮೂಲಕ ಕಲ್ಲಿದ್ದಲು ಸ್ಥಳಾಂತರಿಸುವ ಕಾರ್ಯತಂತ್ರವನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದು ರಾಷ್ಟ್ರದ ಬೆಳೆಯುತ್ತಿರುವ ಇಂಧನ ಬೇಡಿಕೆಗಳನ್ನು ಸ್ಥಿರವಾಗಿ ಪೂರೈಸಲು ಒಂದು ಹೊಂದಾಣಿಕೆಯ ಮತ್ತು ಸಮರ್ಥ ಇಂಧನ ಪೂರೈಕೆ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ.

 

***

 



(Release ID: 1951436) Visitor Counter : 118