ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದ ಪದಕ ವಿಜೇತ ಬಿಲ್ಲುಗಾರರಿಗೆ ಸನ್ಮಾನ

Posted On: 22 AUG 2023 8:35PM by PIB Bengaluru

ಬರ್ಲಿನ್ ನಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ ಮತ್ತು ಪ್ಯಾರಿಸ್ನಲ್ಲಿ ನಡೆದ ವಿಶ್ವಕಪ್ 2023 ರ ಹಂತ 4 ಕೂಟದಲ್ಲಿ ಪ್ರಶಸ್ತಿಗಳನ್ನು ಬಿಲ್ಲುಗಾರರನ್ನು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಮಂಗಳವಾರ ಸನ್ಮಾನಿಸಿದರು.

ಈ ಆಗಸ್ಟ್ನಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿಗಳು ನಡೆದವು. ರಿಕರ್ವ್ ಮತ್ತು ಕಾಂಪೌಂಡ್ ವಿಭಾಗದಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಗಳಿಸಿದ್ದರು.
ಪ್ಯಾರಿಸ್ನಲ್ಲಿ ಭಾರತ ಒಟ್ಟು 5 ಪದಕಗಳನ್ನು (2 ಚಿನ್ನ, 3 ಕಂಚು) ಪಡೆದರೆ, ಬರ್ಲಿನ್ ಸ್ಪರ್ಧೆಯಲ್ಲಿ ಒಟ್ಟು 4 ಪದಕಗಳನ್ನು (3 ಚಿನ್ನ, 1 ಕಂಚು) ಮುಡಿಗೇರಿಸಿಕೊಂಡವು.

ಮಂಗಳವಾರ ನಡೆದ ಸನ್ಮಾನ ಸಮಾರಂಭದಲ್ಲಿ ಇತಿಹಾಸ ನಿರ್ಮಿಸಿದ ಅದಿತಿ ಗೋಪಿಚಂದ್ ಸ್ವಾಮಿ ಮತ್ತು ಓಜಸ್ ಪ್ರವೀಣ್ ಡಿಯೋಟಾಲೆ ಸೇರಿದಂತೆ ಒಟ್ಟು 13 ಬಿಲ್ಲುಗಾರರು ಉಪಸ್ಥಿತರಿದ್ದರು. ಅದಿತಿ, ಖೇಲೋ ಇಂಡಿಯಾದ ಅಥ್ಲೀಟ್ ಆಗಿದ್ದು, ಕಿರಿಯ ಬಿಲ್ಲುಗಾರಿಕೆ ವಿಶ್ವ ಚಾಂಪಿಯನ್ ಆಗಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ, ಓಜಸ್ ಪ್ರವೀಣ್ ಡಿಯೋಟಾಲೆ ಆರ್ಚರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪುರುಷ ಬಿಲ್ಲುಗಾರರು.

ಪ್ರತಿಭಾವಂತ ಬಿಲ್ಲುಗಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್, “ನಿಮ್ಮ ಪ್ರದರ್ಶನಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸಲು ಬಯಸುತ್ತೇನೆ. ನಿಮ್ಮ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಿದೆ ಮತ್ತು ನಿಮ್ಮ ಉತ್ತಮ ಫಲಿತಾಂಶಗಳ ಪ್ರವೃತ್ತಿಯು ನಿರಂತರ ಮುಂದುವರಿಯುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದರು.

ಶಿಬಿರದಲ್ಲಿ ಬಿಲ್ಲುಗಾರರ ಅನುಭವದ ಬಗ್ಗೆ ಪ್ರಸ್ತಾಪಿಸಿದ ಶ್ರೀ ಠಾಕೂರ್, “ತಂಡದ ಮನೋಭಾವವು ಮುಖ್ಯವಾದುದು ಮತ್ತು ತರಬೇತುದಾರರು ಮಾತ್ರವಲ್ಲದೆ ಹಿರಿಯರೂ ಸಹ ಕಿರಿಯರಿಗೆ ಮಾನಸಿಕ ದೃಢತೆ ಮತ್ತು ಸನ್ನದ್ಧತೆಯನ್ನು ರೂಪಿಸುವಲ್ಲಿ ಸಹಾಯ ಮಾಡಿದ್ದಾರೆ ಎಂಬುದನ್ನು ಇಲ್ಲಿ ಹೇಳಲು ನನಗೆ ಹೆಮ್ಮೆಯಾಗುತ್ತದೆ. ಅಭಿಷೇಕ್ ವರ್ಮಾ ಅವರಂತಹ ಅನುಭವಿ ಹಿರಿಯರು ಸ್ಪರ್ಧೆಯ ಸಮಯದಲ್ಲಿ ಓಜಸ್ ಪ್ರವೀಣ್ ಅವರಂತಹ ಯುವಕರನ್ನು ಪ್ರೇರೇಪಿಸಿದರು ಮತ್ತು ಮಾರ್ಗದರ್ಶನ ನೀಡಿರುವುದು ಶ್ಲಾಘನೀಯ ಎಂದರು.
“ಏಷ್ಯನ್ ಗೇಮ್ಸ್, ಒಲಂಪಿಕ್ ಕ್ವಾಲಿಫೈಯರ್ ಈವೆಂಟ್ಗಳು ಮತ್ತು ಅಂತಿಮವಾಗಿ ಪ್ಯಾರಿಸ್ ಒಲಿಂಪಿಕ್ಸ್ಗೆ ಆಯ್ಕೆಯಾಗುವ ಹಾದಿಯು ದೀರ್ಘವಾಗಿದೆ. ಈ ಎಲ್ಲಾ ಪಂದ್ಯಾವಳಿಗಳು ಬಹಳ ಮುಖ್ಯ. ಪದಕವು ನಮ್ಮೆಲ್ಲರ ಭಾರತೀಯರ ಭಾವನೆಗಳನ್ನು ಮೇಳೈಸಿದೆ ಮತ್ತು ಅನೇಕ ಯಶಸ್ಸಿನ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ ಎಂದು ಸಚಿವರು ಹೇಳಿದರು.

ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ಅಥ್ಲೀಟ್ಗಳಾದ ಧೀರಜ್ ಬೊಮ್ಮದೇವರ, ಭಜನ್ ಕೌರ್, ಸಿಮ್ರಂಜೀತ್ ಕೌರ್ ಮತ್ತು ಅಂಕಿತಾ ಭಕತ್ ಇದ್ದರು.

****


(Release ID: 1951293) Visitor Counter : 130