ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ ಕೇಂದ್ರ ಯುವಜನ ವ್ಯವಹಾರಗಳ ಇಲಾಖೆಯು ವೈ20 ಶೃಂಗಸಭೆಯನ್ನು 17 ರಿಂದ 20 ಆಗಸ್ಟ್, 2023 ರವರೆಗೆ ವಾರಣಾಸಿಯ ಜಿ20 ಶೃಂಗಸಭೆಯ ಜೊತೆಗೆ ಆಯೋಜಿಸಲಿದೆ

Posted On: 17 AUG 2023 1:40PM by PIB Bengaluru

ಭಾರತದ ಜಿ20 ಅಧ್ಯಕ್ಷತೆಯ ಚೌಕಟ್ಟಿನ ಅಡಿಯಲ್ಲಿ ಯುವ20 (ವೈ20) ಶೃಂಗಸಭೆ-2023, ಇಂದು ವಾರಣಾಸಿಯಲ್ಲಿ ಪ್ರಾರಂಭವಾಯಿತು.

ವಾರಣಾಸಿಯಲ್ಲಿ ನಡೆಯಲಿರುವ ವೈ20 ಶೃಂಗಸಭೆಯ ಪೂರ್ವಭಾವಿ ಕಾರ್ಯಕ್ರಮದ ಅಂಗವಾಗಿ ಶ್ರೀ ಪಂಕಜ್ ಕುಮಾರ್ ಸಿಂಗ್, ನಿರ್ದೇಶಕರು (ಕೇಂದ್ರ ಯುವ ವ್ಯವಹಾರಗಳ ಇಲಾಖೆ) , ಶ್ರೀ ಎಸ್. ರಾಜಲಿಂಗಂ, ಜಿಲ್ಲಾ ನ್ಯಾಯಾಧೀಶರು, ವಾರಣಾಸಿ; ಹಾಗೂ ವೈ20 ಅಧ್ಯಕ್ಷರಾದ ಶ್ರೀ ಅನ್ಮೋಲ್ ಸೋವಿಟ್ ಅವರು ಆಗಸ್ಟ್ 16, 2023 ರಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

 ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಯುವ ವ್ಯವಹಾರಗಳ ಇಲಾಖೆಯ ನಿರ್ದೇಶಕ ಶ್ರೀ ಪಂಕಜ್ ಕುಮಾರ್ ಸಿಂಗ್, “ಭಾರತದ ಜಿ20 ಅಧ್ಯಕ್ಷತೆಯ ಚೌಕಟ್ಟಿನಡಿಯಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿರುವ ಕೇಂದ್ರ ಯುವ ವ್ಯವಹಾರಗಳ ಇಲಾಖೆಯು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆಗಸ್ಟ್ 17 ರಿಂದ 20, 2023 ರವರೆಗೆ ಯುವ (ವೈ)20 ಶೃಂಗಸಭೆ-2023 ಅನ್ನು ಆಯೋಜಿಸುತ್ತಿದೆ. ಯುವ (ವೈ)20 ಶೃಂಗಸಭೆಯಲ್ಲಿ ಪ್ರಮುಖ ತಜ್ಞರು, ನಿರ್ಧಾರ ತೆಗೆದುಕೊಳ್ಳುವವರು, ಜಿ20 ದೇಶಗಳ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರತಿನಿಧಿಗಳು / ಪ್ರತಿನಿಧಿಗಳು, ಜ್ಞಾನ ಪಾಲುದಾರರು (ಐ.ಐ.ಎಂ. ರಾಯ್‌ಪುರ), ಶೈಕ್ಷಣಿಕ ಪಾಲುದಾರರು (ವಿಶ್ವವಿದ್ಯಾಲಯಗಳು / ಸಂಸ್ಥೆಗಳು) ಒಂದುಕಡೆ ಸೇರಲಿದ್ದಾರೆ “ ಎಂದು ಹೇಳಿದರು.

“ವಾರಣಾಸಿಯಲ್ಲಿ ನಡೆಯಲಿರುವ ಯುವ (ವೈ)20 ಶೃಂಗಸಭೆಯು ಜಿ20 ದೇಶಗಳ ಎಲ್ಲಾ ಪಾಲುದಾರರನ್ನು ಒಟ್ಟುಗೂಡಿಸುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ಚರ್ಚೆಗಳ  ಹಾಗೂ ಸಂಶೋಧನೆಗಳ ಆಧಾರದಲ್ಲಿ ರೂಪಿಸಲಾದ “ವೈ 20 ಸಂವಹನ(ಕಮ್ಯುನಿಕ್)” ಅನ್ನು ಪರಾಮರ್ಶಿಸಿ ಅಂತಿಮಗೊಳಿಸಲಾಗುವುದು ಮತ್ತು ಸಹಿ ಹಾಕಲಾಗುವುದು” ಎಂದು ಅವರು ವಿವರಿಸಿದರು 

“ಈ ವೈ 20 ಸಂವಹನವು(ಕಮ್ಯುನಿಕ್)  ಐದು ಗುರುತಿಸಲಾದ ವಿಷಯಗಳ ಕುರಿತು ನಮ್ಮ ಸಾಮಾನ್ಯ ವಿಧಾನದ ಸಾರವನ್ನು ಪ್ರತಿಬಿಂಬಿಸುತ್ತದೆ ಮತ್ತು ಉನ್ನತ ಮಟ್ಟದಲ್ಲಿ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವವರು, ಸಾಮಾನ್ಯವಾಗಿ ಯುವಜನರ ಧ್ವನಿಯನ್ನು ಕೇಳುತ್ತಾರೆ” ಎಂದು ಅವರು ಹೇಳಿದರು.

ವೈ20 ಶೃಂಗಸಭೆಯಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆಗಳ ರಾಜ್ಯ ಖಾತೆ ಸಚಿವ (ಎಂ.ಒ.ಎಸ್) ಶ್ರೀ ನಿಸಿತ್ ಪ್ರಮಾಣಿಕ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.

ಜಿ20 ದೇಶಗಳು, ಅತಿಥಿ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸುಮಾರು 150 ಪ್ರತಿನಿಧಿಗಳು ವೈ20 ನ ಐದು ಗುರುತಿಸಲಾದ  ವಿಷಯಗಳ ಕುರಿತು ಚರ್ಚಿಸಲಿದ್ದಾರೆ: ವಿಶೇಷ ಕಾರ್ಯ ಯೋಜನೆಗಳೆಂದರೆ - ಉದ್ಯಮ 4.0, ನಾವೀನ್ಯತೆ ಮತ್ತು 21 ನೇ ಶತಮಾನದ ಕೌಶಲ್ಯಗಳು, ಶಾಂತಿ ನಿರ್ಮಾಣ ಮತ್ತು ಸಮನ್ವಯ: ಯುದ್ಧವಿಲ್ಲದ ಯುಗ, ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ಕಡಿತ: ಸುಸ್ಥಿರತೆಯನ್ನು ಜೀವನದ ಮಾರ್ಗವಾಗಿ ಮಾಡುವುದು, ಹಂಚಿಕೆಯ ಭವಿಷ್ಯ: ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವಕರು, ಆರೋಗ್ಯ, ಯೋಗಕ್ಷೇಮ ಮತ್ತು ಕ್ರೀಡೆ: ಯುವಕರಿಗಾಗಿ ಕಾರ್ಯಸೂಚಿ, ಮುಂತಾದವು ಕಾರ್ಯಯೋಜನೆಯಲ್ಲಿರುತ್ತವೆ.

ಮುಖ್ಯ ವೈ20 ಶೃಂಗಸಭೆ ಪೂರ್ವಭಾವಿಯಾಗಿ, ವರ್ಷವಿಡೀ ನಡೆದಿವೆ. ಗುವಾಹಟಿಯಲ್ಲಿ ವೈ20 ಶೃಂಗಸಭೆಯ ಆರಂಭದ ಸಭೆ, ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದ 14 ಯುವ-20 ಸಮಾಲೋಚನೆಗಳು, ಲೇಹ್, ಲಡಾಖ್‌ನಲ್ಲಿ ಪೂರ್ವಭಾವಿ  ಶೃಂಗಸಭೆ, ಚಿಂತನ-ಮಂಥನ ಅಧಿವೇಶನಗಳು, ವೈ20 ಸಮುದಾಯ (ಚೌಪಲ್)ಗಳು ಮತ್ತು ದೇಶಾದ್ಯಂತ ನಡೆಸಿದ ವಿವಿಧ ಜನ ಭಾಗಿದರಿ ಕಾರ್ಯಕ್ರಮಗಳ ವೈ20 ಶೃಂಗಸಭೆಯನ್ನು ಸಮೃದ್ಧಗೊಳಿಸಿದೆ. 

ಈ ಶೃಂಗಸಭೆಯು ಇತರ ಮಧ್ಯಸ್ಥಗಾರರೊಂದಿಗೆ ಸಹಯೋಗ ಮತ್ತು ನೆಟ್‌ವರ್ಕಿಂಗ್‌ಗೆ ಅವಕಾಶಗಳನ್ನು ಒದಗಿಸುವ ಗುರಿಯನ್ನು ಕೂಡಾ ಹೊಂದಿದೆ, ಯುವಜನರ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಮತ್ತು ಜಾಗತಿಕ ವೇದಿಕೆಯಲ್ಲಿ ಯುವ ಕಾರ್ಯಸೂಚಿಯನ್ನು ಚರ್ಚಿಸುತ್ತದೆ.  

ಜಿ20 ನ ಅಧಿಕೃತ ಎಂಗೇಜ್‌ಮೆಂಟ್ ಗುಂಪುಗಳಲ್ಲಿ ಯುವ20 ಒಂದಾಗಿದೆ. ಯುವ20 (ವೈ20) ಎಂಗೇಜ್‌ಮೆಂಟ್ ಗ್ರೂಪ್ ಉತ್ತಮ ನಾಳೆಗಾಗಿ ವಿಚಾರಗಳ ಕುರಿತು ರಾಷ್ಟ್ರದ ಯುವಜನರನ್ನು ಸಮಾಲೋಚಿಸಲು ಮತ್ತು ಕಾರ್ಯಾತ್ಮಕ ಕ್ರಿಯೆಗಾಗಿ ಕಾರ್ಯಸೂಚಿಯನ್ನು ರೂಪಿಸಲು ಭಾರತದಾದ್ಯಂತ ಚರ್ಚೆಗಳು ಮತ್ತು ಸಮಾಲೋಚನೆಗಳನ್ನು ಆಯೋಜಿಸಿದೆ. ಜಿ20 ಯ ಆದ್ಯತೆಗಳಲ್ಲಿ ತಮ್ಮ ದೃಷ್ಟಿಕೋನಗಳು ಮತ್ತು ಆಲೋಚನೆ ಹಾಗೂ ಚಿಂತನೆಗಳನ್ನು ವ್ಯಕ್ತಪಡಿಸಲು ಯುವಜನರಿಗೆ ವೈ20 ಒಂದು ಜಾಗತಿಕ ವೇದಿಕೆಯಾಗಿದೆ ಎಂದು ಸಾಬೀತಾಗಿದೆ.

*****



(Release ID: 1949867) Visitor Counter : 122


Read this release in: English , Urdu , Hindi , Tamil , Telugu