ಸಂಪುಟ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರೀಡಾ ಸಹಕಾರ ಕುರಿತು ತಿಳಿವಳಿಕೆ ಒಡಂಬಡಿಕೆಗೆ  ಸಂಪುಟದ ಅನುಮೋದನೆ

Posted On: 16 AUG 2023 4:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಗಣರಾಜ್ಯದ ಯುವಜನ  ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಆಸ್ಟ್ರೇಲಿಯಾ ಸರ್ಕಾರದ ಆರೋಗ್ಯ ಮತ್ತು ಹಿರಿಯರ (ವೃದ್ಧರ) ಆರೈಕೆ ಇಲಾಖೆ ನಡುವೆ ಕ್ರೀಡೆಯಲ್ಲಿ ಸಹಕಾರ ಕುರಿತ ತಿಳಿವಳಿಕಾ ಒಡಂಬಡಿಕೆಗೆ  (ಎಂ.ಓ.ಯು.) ತನ್ನ ಅನುಮೋದನೆ ನೀಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರೀಡಾ ಕ್ಷೇತ್ರದಲ್ಲಿನ ದ್ವಿಪಕ್ಷೀಯ ವಿನಿಮಯ ಕಾರ್ಯಕ್ರಮಗಳು ಕ್ರೀಡಾ ವಿಜ್ಞಾನ, ತಂತ್ರಜ್ಞಾನ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಜ್ಞಾನ ಮತ್ತು ಪರಿಣತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತವೆ. ಕ್ರೀಡಾಳು ಮತ್ತು ತರಬೇತುದಾರ ತರಬೇತಿ ಹಾಗೂ ಅಭಿವೃದ್ಧಿ; ಕ್ರೀಡಾ ಆಡಳಿತ ಮತ್ತು ಸಮಗ್ರತೆ; ಕ್ರೀಡೆಯಲ್ಲಿ ತಳಮಟ್ಟದ ಭಾಗವಹಿಸುವಿಕೆ; ಪ್ರಮುಖ ಕ್ರೀಡಾಕೂಟಗಳು; ಕ್ರೀಡೆಯಲ್ಲಿ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯಿಂದಾಗಿ  ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ನಮ್ಮ ಕ್ರೀಡಾಪಟುಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ ಮತ್ತು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುತ್ತದೆ.

ಆಸ್ಟ್ರೇಲಿಯಾದೊಂದಿಗಿನ ಕ್ರೀಡಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದಿಂದ ಉಂಟಾಗುವ ಪ್ರಯೋಜನಗಳು ಜಾತಿ, ಮತ, ಪ್ರದೇಶ, ಧರ್ಮ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ಕ್ರೀಡಾಪಟುಗಳಿಗೆ ಸಮಾನವಾಗಿ ಲಭ್ಯವಾಗಲಿವೆ.

****



(Release ID: 1949486) Visitor Counter : 103