ಪ್ರಧಾನ ಮಂತ್ರಿಯವರ ಕಛೇರಿ
ದೇಶ ವಿಭಜನೆಯ ಹುತಾತ್ಮರನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ
Posted On:
14 AUG 2023 10:06AM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರವು 'ವಿಭಜನ್ ವಿಭಿಷಿಕ ಸ್ಮೃತಿ ದಿವಸ್'(ದೇಶ ವಿಭಜನೆಯ ಭಯಾನಕ ನೆನಪಿನ ದಿನ) ಆಚರಿಸುತ್ತಿರುವ ಸಂದರ್ಭದಲ್ಲಿ ದೇಶ ವಿಭಜನೆಯಲ್ಲಿ ಹುತಾತ್ಮರಾದವರನ್ನು ಸ್ಮರಿಸಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನ ಮಂತ್ರಿಗಳು, ಇದೇ ಸಂದರ್ಭದಲ್ಲಿ ತಮ್ಮ ತಾಯ್ನಾಡಿನಿಂದ ಹೊರಹಾಕಲ್ಪಟ್ಟವರ ಅಂದಿನ ಕಷ್ಟದ ನೋವಿನ ಬದುಕನ್ನು ಸ್ಮರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು,
“ಇಂದು ವಿಭಜನ ವಿಭಿಷಿಕ ಸ್ಮರಣೆ ದಿನ ದೇಶ ವಿಭಜನೆಯಲ್ಲಿ ಪ್ರಾಣಾರ್ಪಣೆ ಮಾಡಿದ ಭಾರತೀಯರನ್ನು ಗೌರವದಿಂದ ಸ್ಮರಿಸುವ ಸಂದರ್ಭವಾಗಿದೆ. ವಿಭಜನೆ ಸಂದರ್ಭದಲ್ಲಿ ದೇಶದಿಂದ ಒತ್ತಾಯಪೂರ್ವಕವಾಗಿ ಹೊರದೂಡಲ್ಪಟ್ಟವರ ನೋವು ಮತ್ತು ಹೋರಾಟವನ್ನು ನಮಗೆ ನೆನಪಿಸುತ್ತದೆ. ಅವರೆಲ್ಲರಿಗೂ ನಾನು ಗೌರವದಿಂದ ತಲೆಬಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.
***
(Release ID: 1948486)
Visitor Counter : 148
Read this release in:
Malayalam
,
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu