ಗೃಹ ವ್ಯವಹಾರಗಳ ಸಚಿವಾಲಯ
ಆಡಳಿತ ಸುಧಾರಣೆಗಳು ಹಾಗೂ ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ (ಡಿಎಆರ್‌ಪಿಜಿ) ಡಿಜಿಟಲ್ ಟ್ರಾನ್ಸ್‌ಫರ್ಮೇಶನ್ ಶ್ರೇಣಿ-1ರ ಸುವರ್ಣ ಪ್ರಶಸ್ತಿಯನ್ನು ಭಾಜನವಾಗಿರುವ ʼರಾಷ್ಟ್ರೀಯ ಯಾಂತ್ರೀಕೃತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆʼ (ಎನ್‌ಎಏಫ್‌ಐಎಸ್) ತಂಡಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಅಭಿನಂದನೆ ಸಲ್ಲಿಸಿದ್ದಾರೆ
ಎನ್‌ಎಎಫ್‌ಐಎಸ್‌ನ ಇಡೀ ತಂಡವು ಶ್ರಮವಹಿಸಿ ಪರಿಣಾಮಕಾರಿಯಾದ ಬೆರಳಚ್ಚು ಗುರುತಿಸುವ ವ್ಯವಸ್ಥೆಯನ್ನು ಸೃಷ್ಟಿಸಿ ಇ- ಆಡಳಿತ ಸೇವೆಯನ್ನು ಇನ್ನಷ್ಟು ಉತ್ಕೃಷ್ಠಗೊಳಿಸುವಲ್ಲಿನ ಪ್ರಯತ್ನಕ್ಕೆ ಈ ಪ್ರಶಸ್ತಿ ಸಂದಿದ್ದು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಸುರಕ್ಷಿತ ಭಾರತ ನಿರ್ಮಾಣ ದೂರದರ್ಶಿತ್ವದ ಆಶಯವನ್ನು ಸಾಕಾರಗೊಳಿಸಲು ಪೂರಕವಾಗಿದೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಗೃಹ ಸಚಿವಾಲಯವು ಎನ್‌ಎಎಫ್‌ಐಎಸ್ ಅಭಿವೃದ್ಧಿಪಡಿಸಿರುವ ಸುಧಾರಿತ ಸಾಧನವನ್ನು ಎಲ್ಲಾ ಜಿಲ್ಲೆಗಳು, ಪೊಲೀಸ್ ಕಮಿಷನರೇಟ್‌ಗಳು, ಕೇಂದ್ರ ಮತ್ತು ರಾಜ್ಯ ಫಿಂಗರ್‌ಪ್ರಿಂಟ್ ಬ್ಯೂರೋಗಳು ಮತ್ತು ಎನ್‌ಐಎ, ಸಿಬಿಐ ಹಾಗೂ ಎನ್‌ಸಿಬಿಯಂತಹ ಕೇಂದ್ರೀಯ ತನಿಖಾ ಏಜೆನ್ಸಿಗಳಿಗೆ ಒದಗಿಸಿದೆ
ಅಪರಾಧಗಳ ನಿಯಂತ್ರಣ ಪ್ರಕ್ರಿಯೆಯಲ್ಲಿ ಎನ್‌ಎಎಫ್‌ಐಎಸ್ ಬೆರಳಚ್ಚು ಗುರುತಿಸುವಿಕೆ ಸಾಧನವನ್ನು ಅಭಿವೃದ್ಧಿಪಡಿಸುವ ಮೂಲಕ ಕ್ರಾಂತಿಕಾರಕ ವ್ಯವಸ್ಥೆಯನ್ನು ರೂಪಿಸಿದೆ. ಈ ವ್ಯವಸ್ಥೆಯಿಂದ ದೇಶಾದ್ಯಂತ ಅಪರಾಧ ಕೃತ್ಯಗಳಲ್ಲಿ ತೊಡಗುವ ಅಂತಾರಾಜ್ಯ ಅಪರಾಧಿಗಳನ್ನು ತ್ವರಿತವಾಗಿ, ನಿಖರವಾಗಿ, ದಕ್ಷತೆಯಿಂದ ಪತ್ತೆ ಹಚ್ಚಲು ನೆರವಾಗಲಿದೆ.
Posted On:
12 AUG 2023 4:38PM by PIB Bengaluru
ಆಡಳಿತ ಸುಧಾರಣೆಗಳು ಹಾಗೂ ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ (ಡಿಎಆರ್‌ಪಿಜಿ) ಡಿಜಿಟಲ್ ಟ್ರಾನ್ಸ್‌ಫರ್ಮೇಶನ್ ಶ್ರೇಣಿ-1ರ ಸುವರ್ಣ ಪ್ರಶಸ್ತಿಯನ್ನು ಭಾಜನವಾಗಿರುವ ʼರಾಷ್ಟ್ರೀಯ ಯಾಂತ್ರೀಕೃತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆʼ (ಎನ್‌ಎಏಫ್‌ಐಎಸ್) ತಂಡಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಶ್ರೀ ಅಮಿತ್ ಶಾ ಅವರು, "ಎನ್‌ಎಎಫ್‌ಐಎಸ್‌ನ ಇಡೀ ತಂಡವು ಶ್ರಮವಹಿಸಿ ಪರಿಣಾಮಕಾರಿಯಾದ ಬೆರಳಚ್ಚು ಗುರುತಿನ ವ್ಯವಸ್ಥೆಯನ್ನು ರೂಪಿಸಿ ಇ- ಆಡಳಿತ ಸೇವೆಯನ್ನು ಇನ್ನಷ್ಟು ಉತ್ಕೃಷ್ಠಗೊಳಿಸುವಲ್ಲಿನ ಪ್ರಯತ್ನಕ್ಕೆ ಈ ಪ್ರಶಸ್ತಿ ಸಂದಿದ್ದು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಸುರಕ್ಷಿತ ಭಾರತ ನಿರ್ಮಾಣ ದೂರದರ್ಶಿತ್ವದ ಆಶಯವನ್ನು ಸಾಕಾರಗೊಳಿಸಲು ಪೂರಕವಾಗಿದೆ" ಎಂದು ಶ್ಲಾಘಿಸಿದ್ದಾರೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಗೃಹ ಸಚಿವಾಲಯವು ಎನ್‌ಎಎಫ್‌ಐಎಸ್ ಅಭಿವೃದ್ಧಿಪಡಿಸಿರುವ ಸುಧಾರಿತ ಸಾಧನವನ್ನು ಎಲ್ಲಾ ಜಿಲ್ಲೆಗಳು, ಪೊಲೀಸ್ ಕಮಿಷನರೇಟ್‌ಗಳು, ಕೇಂದ್ರ ಮತ್ತು ರಾಜ್ಯ ಫಿಂಗರ್‌ಪ್ರಿಂಟ್ ಬ್ಯೂರೋಗಳು, ಎನ್‌ಐಎ, ಸಿಬಿಐ ಹಾಗೂ ಎನ್‌ಸಿಬಿಯಂತಹ ಕೇಂದ್ರೀಯ ತನಿಖಾ ಏಜೆನ್ಸಿಗಳಿಗೆ ಒದಗಿಸಿದೆ. ಅಪರಾಧಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಎನಿಸಿದ ಬೆರಳಚ್ಚು ಗುರುತಿಸುವಿನ ವ್ಯವಸ್ಥೆಯಂತಹ ಕ್ರಾಂತಿಕಾರಕ ಸಾಧನವನ್ನು ಒದಗಿಸಲಾಗಿದ್ದು, ಈ ಸುಧಾರಿತ ವ್ಯವಸ್ಥೆಯನ್ನು ಬಳಸಿಕೊಂಡು ದೇಶಾದ್ಯಂತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಅಂತಾರಾಜ್ಯ ಅಪರಾಧಿಗಳನ್ನು ತ್ವರಿತವಾಗಿ, ನಿಖರವಾಗಿ ಪತ್ತೆ ಹಚ್ಚಲು ಸಹಕಾರಿಯಾಗಲಿದೆ.
ಎನ್‌ಎಎಫ್‌ಐಎಸ್ ಸಂಸ್ಥೆಯು ಅಪರಾಧಿಗಳ ಬೆರಳಚ್ಚು ವಿವರಗಳ ಕೇಂದ್ರೀಯ ದತ್ತಾಂಶವನ್ನು ಸಿದ್ಧಪಡಿಸಿದ್ದು, ಅದನ್ನು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರೀಯ ತನಿಖಾ ಸಂಸ್ಥೆಗಳು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಅಪರಾಧಿಗಳ ಪತ್ತೆ ಹಾಗೂ ತನಿಖಾ ಪ್ರಕ್ರಿಯೆಯಲ್ಲಿ ದಕ್ಷತೆ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಯಲ್ಲಿ ಗುಣಾತ್ಮಕ ಸುಧಾರಣೆಗಳ ಫಲಿತಾಂಶ ಕಾಣಲು ಸಹಕಾರಿಯಾಗಲಿದೆ
****
(Release ID: 1948276)
Visitor Counter : 126