ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್ ಕುರಿತು ಬೆಂಗಳೂರಿನ ಯುವ ಭಾರತೀಯರೊಂದಿಗೆ ನಾಳೆ ಸಂವಾದ ನಡೆಸಲಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್
Posted On:
11 AUG 2023 6:08PM by PIB Bengaluru
ಬೆಂಗಳೂರಿನಲ್ಲಿ ಯುವ ಭಾರತೀಯರೊಂದಿಗೆ ನಾಳೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಸಂವಾದ ನಡೆಸಲಿದ್ದಾರೆ. ಈ ಸಂವಾದವು ಇತ್ತೀಚೆಗೆ ಅಂಗೀಕರಿಸಲ್ಪಟ್ಟ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯ ಕುರಿತು ಕೇಂದ್ರೀಕೃತವಾಗಿರುತ್ತದೆ.
"ಸಂಸದ್ ಧ್ವನಿ" ಎಂದು ಹೆಸರಿಸಲಾದ ಕಾರ್ಯಕ್ರಮವು ಬೆಂಗಳೂರು ದಕ್ಷಿಣದ ಸಂಸದ ಮತ್ತು ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯ ಒಂದು ಉಪಕ್ರಮವಾಗಿದೆ. ಇದು ಬಸವನಗುಡಿಯ ಬಿ.ಎಂ.ಎಸ್..ಸಿ.ಇ. ಆಡಿಟೋರಿಯಂನಲ್ಲಿ ನಡೆಯಲಿದೆ.
ಸಂಸತ್ತಿನ ಉಭಯ ಸದನಗಳಿಂದ ಅಂಗೀಕರಿಸಲ್ಪಟ್ಟ ಮಸೂದೆ ಮತ್ತು ಅದರ ನಿಬಂಧನೆಗಳ ಸಂಕೀರ್ಣ ವಿವರಗಳನ್ನು ಈ ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಿ, ಪರಿಶೀಲಿಸಿ, ಮಾಹಿತಿ ವಿನಿಮಯ ಮಾಡಲಾಗುತ್ತದೆ. ಸಂಸದರಾಗಿ, ಅರ್ಜಿದಾರರಾಗಿ ಮತ್ತು ಮಾಜಿ ಟೆಕ್ ವಾಣಿಜ್ಯೋದ್ಯಮಿಯಾಗಿ ವಿವಿಧ ಪಾತ್ರಗಳನ್ನು ಹೊಂದಿರುವ ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಭಾರತದಲ್ಲಿನ ದತ್ತಾಂಶ ವಿಶ್ವಾಸಾರ್ಹರಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಮಾಡಿದ ಪ್ರಯತ್ನಗಳನ್ನು ವಿವರಿಸಲಿದ್ದಾರೆ. ಡಿಜಿಟಲ್ ನಾಗರಿಕರ ಡೇಟಾ ಸಂಸ್ಕರಣೆಯಲ್ಲಿ ಒಪ್ಪಿಗೆಗೆ ಆದ್ಯತೆ ನೀಡುವ ನೀತಿ ಚೌಕಟ್ಟನ್ನು ನಿರ್ಮಿಸುವ ನಿಟ್ಟಿನಲ್ಲಿ 2017 ರಿಂದ ಆಗಿರುವ ವಿಕಸನ ಕಾರ್ಯಗಳನ್ನು ಅವರು ಪರಿಶೀಲಿಸಲಿದ್ದಾರೆ. ಈ ಪ್ರಯತ್ನವು ರಾಷ್ಟ್ರದ ಡಿಜಿಟಲ್ ಗೌಪ್ಯತೆ ಕ್ಷೇತ್ರಕ್ಕೆ ಬಲವಾದ ಅಡಿಪಾಯವನ್ನು ಹಾಕಿದೆ.
ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್ ಎಲ್ಲಾ "ಡಿಜಿಟಲ್ ನಾಗರಿಕ್" ಗಳಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಆನ್ಲೈನ್ ಪರಿಸರವನ್ನು ಖಾತ್ರಿಪಡಿಸುವ ಚೌಕಟ್ಟನ್ನು ನಿರ್ಮಿಸುವ ಭಾರತದ ಪ್ರಯಾಣದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ.
ಈ ಸಂವಾದಾತ್ಮಕ ಅಧಿವೇಶನದಲ್ಲಿ, ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಭಾರತೀಯ ನಾಗರಿಕರ ಜೀವನವನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸಿ ಹಾಗೂ ದೊಡ್ಡ ದತ್ತಾಂಶ ಕಳ್ಳತನದ ಶೋಷಣೆಯಿಂದ ವಿಶೇಷವಾಗಿ ಯುವಜನರ ಡಿಜಿಟಲ್ ವ್ಯವಹಾರಗಳನ್ನು ರಕ್ಷಿಸುವ ವಿಷಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಹಾಗೂ ಉಪಕ್ರಮಗಳ ಮಾಹಿತಿ ನೀಡಲಿದ್ದಾರೆ. ಈ ಡಿಜಿಟಲ್ ಹಂತವು , ದತ್ತಾಂಶ ರಕ್ಷಣೆಯನ್ನು ಹಿನ್ನೆಲೆಗೆ ಇಳಿಸಿದಾಗ, ಪ್ರಮುಖ ಸಂಸ್ಥೆಗಳು ಪರಿಶೀಲನೆ ಅಥವಾ ಹೊಣೆಗಾರಿಕೆಯಿಲ್ಲದೆ ಬೃಹತ್ ಡೇಟಾಬೇಸ್ಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತಿದ್ದ ಈ ಹಿಂದಿನ ಸರ್ಕಾರಗಳ ನಿರ್ಣಯಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ,
****
(Release ID: 1947939)