ಕೃಷಿ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ವಿವಿಧ ಕ್ಷೇತ್ರಗಳಿಂದ ಆಯ್ದ  ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ


ಸ್ಪಂದನಶೀಲ ಗ್ರಾಮಗಳ ಸರಪಂಚರು, ಶಿಕ್ಷಕರು, ದಾದಿಯರು, ರೈತರು, ಮೀನುಗಾರರಿಗೆ  ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ 

ಮಹಾರಾಷ್ಟ್ರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇಬ್ಬರು ಫಲಾನುಭವಿಗಳು ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ಅತಿಥಿಗಳಾಗಿ ವೀಕ್ಷಿಸಲಿದ್ದಾರೆ.

Posted On: 11 AUG 2023 12:11PM by PIB Bengaluru

ಭಾರತದಾದ್ಯಂತದ ಸುಮಾರು 1,800 ವಿಶೇಷ ಅತಿಥಿಗಳು ಈ ವರ್ಷ ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ಭಾರತದ ಪ್ರಧಾನ ಮಂತ್ರಿಯವರು ನೆರವೇರಿಸಲಿರುವ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದಲ್ಲಿ  ಪಾಲ್ಗೊಳ್ಳಲಿದ್ದಾರೆ.

 ಈ ವರ್ಷ ಭಾರತವು ಸ್ವಾತಂತ್ರ್ಯದ 75 ವಸಂತಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ನಿರ್ಮಿಸಲು ಸಹಾಯ ಮಾಡಿದ ಸ್ಪಂದನಶೀಲ ಗ್ರಾಮಗಳ ಸರಪಂಚ್ ‌ಗಳು, ಶಿಕ್ಷಕರು,  ದಾದಿಯರು, ರೈತರು, ಮೀನುಗಾರರು, ಶ್ರಮಯೋಗಿಗಳು, ಅದೇ ರೀತಿ ಖಾದಿ ವಲಯದ ಕೆಲಸಗಾರರು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಾಲಾ ಶಿಕ್ಷಕರು, ಗಡಿ ರಸ್ತೆಗಳ ಸಂಘಟನೆಯ ಕಾರ್ಯಕರ್ತರು ಮತ್ತು ದೇಶದ ವಿವಿಧ ಭಾಗಗಳಲ್ಲಿ ಜಾರಿಗೊಳಿಸಲಾದ ಅಮೃತ್ ಸರೋವರ ಯೋಜನೆಗಳು ಮತ್ತು ಹರ್ ಘರ್ ಜಲ ಯೋಜನೆಗಳಿಗೆ ಸಹಾಯ ಮಾಡಿದ ಮತ್ತು ಕೆಲಸ ಮಾಡಿದ ಎಲ್ಲರನ್ನೂ ಈ ವರ್ಷ ನವದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ತಮ್ಮ ಬಾಳ ಸಂಗಾತಿಯೊಂದಿಗೆ ಬರುವಂತೆ ಆಹ್ವಾನಿಸಲಾಗಿದೆ.

 ಮಹಾರಾಷ್ಟ್ರ ರಾಜ್ಯದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM-KISAN) ಇಬ್ಬರು ಫಲಾನುಭವಿಗಳು ಆಗಸ್ಟ್ 15, 2023 ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಜರುಗಲಿರುವ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ಅತಿಥಿಗಳಾಗಿ ವೀಕ್ಷಿಸಲಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾಡಲಿರುವ ಭಾಷಣವನ್ನು ಕೇಳಲು ಯೋಜನೆಯ ಐವತ್ತು (50) ಫಲಾನುಭವಿಗಳು ಮತ್ತು ಅವರ ಕುಟುಂಬ ಸೇರಿದಂತೆ, ಸುಮಾರು 1,800 ಜನರನ್ನು ಆಹ್ವಾನಿಸಲಾಗಿದೆ. ಸರ್ಕಾರವು ತನ್ನ ‘ಜನ್ ಭಾಗೀದಾರಿ ’ ದೃಷ್ಟಿಕೋನದ ಹಿನ್ನೆಲೆಯಲ್ಲಿ ಭಾರತದಾದ್ಯಂತ ಎಲ್ಲಾ ವರ್ಗದ ಜನರನ್ನು ಆಹ್ವಾನಿಸುವ ಮತ್ತು ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉಪಕ್ರಮಕ್ಕೆ ಮುಂದಾಗಿದೆ.

ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಗೆ ಆಗಮಿಸುವಂತೆ ನೀಡಲಾದ ಆಹ್ವಾನದ ಕುರಿತು ಮಾತನಾಡಿದ, ಪುಣೆ ಜಿಲ್ಲೆಯ ಬಾರಾಮತಿಯ ಧೇಕಲ್ವಾಡಿಯ 54 ವರ್ಷ ವಯಸ್ಸಿನ ಅಶೋಕ್ ಸುದಾಮ್ ಘುಲೆ, “ನವದೆಹಲಿಯ  ಕೆಂಪು ಕೋಟೆಗೆ ಹೋಗಲು ಸಾಧ್ಯವಾಗುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಸ್ವಾತಂತ್ರ್ಯೋತ್ಸವದಂದು ಅಲ್ಲಿಗೆ ಹೋಗುವುದೆಂದರೆ ನನ್ನ ಕನಸು ನನಸಾದಂತೆ”  ಎಂದು ಹೇಳಿದರು. ಪಿಎಂ-ಕಿಸಾನ್ ಫಲಾನುಭವಿಯಾಗಿರುವ ಘುಲೆ ಅವರು 1.5 ಎಕರೆ ಭೂಮಿಯಲ್ಲಿ ಕಬ್ಬಿನ ಕೃಷಿ ಕೈಗೊಂಡಿದ್ದಾರೆ.

ಥಾಣೆ ಜಿಲ್ಲೆಯ ವೈಶಾಖ ರೆ, ಮುರ್ಬಾದ್ ‌ನ ವಿಜಯ್ ಗೋಟಿರಾಮ್ ಠಾಕರೆ ಮತ್ತೊಬ್ಬ ಫಲಾನುಭವಿಯಾಗಿದ್ದು ಸಾಂಪ್ರದಾಯಿಕ ಭತ್ತದ ಕೃಷಿಕರಾಗಿದ್ದಾರೆ ಜೊತೆಗೆ ತರಕಾರಿಗಳನ್ನು ಸಹ ಬೆಳೆಯುತ್ತಾರೆ. ಅವರು 2019 ರಿಂದ ಪಿಎಂ-ಕಿಸಾನ್ ‌ನ ಫಲಾನುಭವಿಯಾಗಿದ್ದಾರೆ.  ತಮ್ಮ ಪತ್ನಿಸಮೇತ ದೆಹಲಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವೀಕ್ಷಿಸಲು ವಿಶೇಷ ಅತಿಥಿಯಾಗಿ ಪ್ರಯಾಣಿಸುವ ಅವಕಾಶವನ್ನು ಪಡೆದಿರುವುದಕ್ಕೆ ಕೃತಜ್ಞರಾಗಿದ್ದಾರೆ.


ಪಿಎಂ-ಕಿಸಾನ್ ‌ ಕೇಂದ್ರ ವಲಯದ ಯೋಜನೆಗಳಲ್ಲಿ ಒಂದಾಗಿದ್ದು, ದೇಶಾದ್ಯಂತ ಕೆಲವು ಮಾನದಂಡಗಳಿಗನುಸಾರ  ಕೃಷಿಯೋಗ್ಯ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ.ಈ  ಯೋಜನೆಯಡಿ ರೂ 2,000/- ದಂತೆ ಮೂರು ಸಮಾನ ಕಂತುಗಳಲ್ಲಿ  ರೈತರ ಆಧಾರ್ ನೋಂದಾಯಿತ  ಬ್ಯಾಂಕ್ ಖಾತೆಗಳಿಗೆ ವಾರ್ಷಿಕವಾಗಿ ರೂ 6,000/- ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗುತ್ತದೆ.

****


(Release ID: 1947759) Visitor Counter : 123