ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಡಿಸ್ನಿ ಹಾಟ್ ಸ್ಟಾರ್ ಆಗಸ್ಟ್ 12 ರಿಂದ ಫಿಟ್ ಇಂಡಿಯಾ ಕ್ವಿಜ್ 2022 ರ ರಾಷ್ಟ್ರೀಯ ಸುತ್ತುಗಳನ್ನು ಪ್ರಸಾರ ಮಾಡಲಿದೆ
Posted On:
10 AUG 2023 7:06PM by PIB Bengaluru
ಫಿಟ್ ಇಂಡಿಯಾ ಕ್ವಿಜ್ ಎರಡನೇ ಆವೃತ್ತಿಯ ರಾಷ್ಟ್ರೀಯ ಸುತ್ತುಗಳು ಆಗಸ್ಟ್ 12 ರಿಂದ ಜನಪ್ರಿಯ ಒಟಿಟಿ ಪ್ಲಾಟ್ ಫಾರ್ಮ್ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 8 ಗಂಟೆಗೆ ಒಟ್ಟು 13 ಕಂತುಗಳು ಪ್ರಸಾರವಾಗಲಿವೆ. ಅವುಗಳನ್ನು ನಿರೂಪಕರಾದ ತನಯ್ ತಿವಾರಿ ಮತ್ತು ತಾನ್ಯಾ ಪುರೋಹಿತ್ ನಡೆಸಿಕೊಡಲಿದ್ದಾರೆ.
ಒಟ್ಟು 72 ವಿದ್ಯಾರ್ಥಿಗಳು (36 ಶಾಲೆಗಳ ತಲಾ ಇಬ್ಬರು ವಿದ್ಯಾರ್ಥಿಗಳು) ರಾಜ್ಯ ಸುತ್ತುಗಳಲ್ಲಿ ಆಯಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಉನ್ನತ ಗೌರವಗಳನ್ನು ಗೆದ್ದಿದ್ದಾರೆ. ಕಳೆದ ತಿಂಗಳು ಮುಂಬೈನಲ್ಲಿ ಗೌರವಾನ್ವಿತ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ರಾಜ್ಯ ಸುತ್ತುಗಳಲ್ಲಿ ವಿಜೇತರಾದ 36 ಶಾಲೆಗಳಿಗೆ ತಲಾ 2.5 ಲಕ್ಷ ರೂ.ಗಳ ನಗದು ಬಹುಮಾನವನ್ನು ಪ್ರದಾನ ಮಾಡಿದರು. ಶಾಲೆಯ ಇಬ್ಬರು ವಿದ್ಯಾರ್ಥಿಗಳ ತಂಡಕ್ಕೆ ಒಟ್ಟು 25,000 ರೂ. ನೀಡಲಾಯಿತು.
ರಾಷ್ಟ್ರೀಯ ಸುತ್ತುಗಳ ವಿಜೇತರಿಗೆ ಒಟ್ಟು ಬಹುಮಾನದ ಮೊತ್ತ ಈಗ 25 ಲಕ್ಷ ರೂ.ಗಳಾಗಿದ್ದು, ವಿದ್ಯಾರ್ಥಿಗಳು ಒಟ್ಟು 2.5 ಲಕ್ಷ ರೂ.ಗಳನ್ನು ಪಡೆಯುತ್ತಿದ್ದಾರೆ. 1ನೇ ಹಾಗೂ 2ನೇ ರಾಷ್ಟ್ರೀಯ ರನ್ನರ್ ಅಪ್ ಶಾಲೆಗೆ ಕ್ರಮವಾಗಿ 15 ಲಕ್ಷ ಮತ್ತು 10 ಲಕ್ಷ ರೂ. ನೀಡಲಾಗುತ್ತಿದೆ.
ಫಿಟ್ ಇಂಡಿಯಾ ರಸಪ್ರಶ್ನೆಯ ಎರಡನೇ ಆವೃತ್ತಿಯನ್ನು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಯೋಗದೊಂದಿಗೆ ನಡೆಸುತ್ತಿದೆ. ಈ ರಸಪ್ರಶ್ನೆ ಭಾರತದ ಶ್ರೀಮಂತ ಕ್ರೀಡಾ ಇತಿಹಾಸ, ಫಿಟ್ನೆಸ್ ಮತ್ತು ಪೌಷ್ಠಿಕಾಂಶಕ್ಕೆ ಸಂಬಂಧಿಸಿದ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದೆ.
ಈ ರಸಪ್ರಶ್ನೆಯನ್ನು ಕಳೆದ ವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಮುನ್ನಾದಿನದಂದು ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಗೌರವಾನ್ವಿತ ಯುವ ವ್ಯವಹಾರಗಳು ಮತ್ತು ಕ್ರೀಡಾ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಶ್ರೀ ನಿಸಿತ್ ಪ್ರಾಮಾಣಿಕ್ ಅವರು ಗೌರವಾನ್ವಿತ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಉಪಸ್ಥಿತಿಯಲ್ಲಿ ಪ್ರಾರಂಭಿಸಿದರು.
ಒಟ್ಟು 348 ಶಾಲೆಗಳು ಮತ್ತು 418 ವಿದ್ಯಾರ್ಥಿಗಳನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಆಯ್ಕೆ ಮಾಡಲಾಗಿದೆ. ಈ ವಿದ್ಯಾರ್ಥಿಗಳಲ್ಲಿ ಶೇ.39ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಆಯ್ಕೆಯಾದ ಶಾಲೆಗಳು ಇಬ್ಬರು ವಿದ್ಯಾರ್ಥಿಗಳ ತಂಡವನ್ನು ರಚಿಸಿದವು, ಅವರು ವೆಬ್ ಸುತ್ತುಗಳ ಸರಣಿಯ ಮೂಲಕ ರಾಜ್ಯ / ಕೇಂದ್ರಾಡಳಿತ ಪ್ರದೇಶ ಚಾಂಪಿಯನ್ ಷಿಪ್ ಗೆ ಸ್ಪರ್ಧಿಸಿದರು. 36 ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಚಾಂಪಿಯನ್ ಗಳನ್ನು ಗುರುತಿಸಲು ಒಟ್ಟು 120 ಸುತ್ತುಗಳನ್ನು ನಡೆಸಲಾಯಿತು.
ಫಿಟ್ ಇಂಡಿಯಾ ರಸಪ್ರಶ್ನೆಯ ಮೊದಲ ಆವೃತ್ತಿಯ ಯಶಸ್ಸಿನ ನಂತರ, ಎರಡನೇ ಆವೃತ್ತಿಯು ಭಾರಿ ಪ್ರತಿಕ್ರಿಯೆಯನ್ನು ಪಡೆಯಿತು. ರಸಪ್ರಶ್ನೆಯ 2 ನೇ ಆವೃತ್ತಿಯಲ್ಲಿ ಭಾರತದ 702 ಜಿಲ್ಲೆಗಳ 16,702 ಶಾಲೆಗಳ 61,981 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಫಿಟ್ ಇಂಡಿಯಾ ಕ್ವಿಜ್ ನ ಮೊದಲ ಆವೃತ್ತಿಯಲ್ಲಿ 13,502 ಶಾಲೆಗಳ ಒಟ್ಟು 36,299 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲ ಆವೃತ್ತಿಗೆ ಹೋಲಿಸಿದರೆ ರಸಪ್ರಶ್ನೆಗಾಟ್ ಸ್ಟಾರ್ ನಲ್ಲಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇದು ಶೇ.70 ರಷ್ಟು ಹೆಚ್ಚಳವಾಗಿದೆ.
*****
(Release ID: 1947664)
Visitor Counter : 103