ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

3ನೇ ಜಿ 20 ಭ್ರಷ್ಟಾಚಾರ ವಿರೋಧಿ ಕಾರ್ಯ ಪಡೆ ಸಭೆ ಮತ್ತು ಜಿ20 ಭ್ರಷ್ಟಾಚಾರ ವಿರೋಧಿ ಸಚಿವರ ಸಭೆಯು ಕೋಲ್ಕತ್ತಾದಲ್ಲಿ 9 ರಿಂದ 11 ಆಗಸ್ಟ್, 2023 ರವರೆಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿದೆ


G20 ಸದಸ್ಯರು, 10 ಆಹ್ವಾನಿತ ದೇಶಗಳು ಮತ್ತು ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳಿಂದ 154 ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

Posted On: 08 AUG 2023 4:28PM by PIB Bengaluru

ಭಾರತದ ಅಧ್ಯಕ್ಷತೆಯಲ್ಲಿ G20 ಭ್ರಷ್ಟಾಚಾರ ವಿರೋಧಿ ಕಾರ್ಯಪಡೆ (ACWG)ಯ ಮೂರನೇ ಮತ್ತು ಅಂತಿಮ ಸಭೆಯು ಆಗಸ್ಟ್ 9 ರಿಂದ 11 ರವರೆಗೆ ಕೋಲ್ಕತ್ತಾದಲ್ಲಿ ನಡೆಯಲಿದೆ. G20 ಸದಸ್ಯರು, 10 ಆಹ್ವಾನಿತ ದೇಶಗಳು ಮತ್ತು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ 154 ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. 

ಇದರ ನಂತರ ಆಗಸ್ಟ್  12, ರಂದು G20 ಭ್ರಷ್ಟಾಚಾರ-ವಿರೋಧಿ ಕುರಿತ ಸಚಿವರ ಸಭೆಯು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ), ಪ್ರಧಾನ ಮಂತ್ರಿ ಕಚೇರಿಯ ರಾಜ್ಯ ಸಚಿವ, ಸಿಬ್ಬಂದಿ ಸಚಿವಾಲಯ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ, ಇದು G20 ACWG ಯ ಎರಡನೇ ಸಚಿವರ ಸಭೆ ಮತ್ತು ಮೊದಲ ವೈಯಕ್ತಿಕ ACWG ಸಚಿವರ ಸಭೆಯಾಗಿದೆ. ಭ್ರಷ್ಟಾಚಾರವನ್ನು ಎದುರಿಸಲು ಅಂತಾರಾಷ್ಟ್ರೀಯ ಪ್ರಯತ್ನಗಳನ್ನು ಮುನ್ನಡೆಸುವಲ್ಲಿ ACWG ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ ಮಂತ್ರಿಗಳ ಮಟ್ಟದಲ್ಲಿನ ಚರ್ಚೆಗಳು, ಭ್ರಷ್ಟಾಚಾರವನ್ನು ಎದುರಿಸಲು ಮತ್ತಷ್ಟು ರಾಜಕೀಯ ಪ್ರಚೋದನೆಯನ್ನು ನೀಡುತ್ತದೆ.

ಭಾರತದ G20 ಅಧ್ಯಕ್ಷತೆಯ ಅಡಿಯಲ್ಲಿ ದೇಶ ಬಿಟ್ಟು ಪರಾರಿಯಾದ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಮತ್ತು ಸ್ವತ್ತುಗಳ ವಾಪಸಾತಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ-ವಿರೋಧಿ ಸಹಕಾರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲು ಸಮರ್ಥವಾಗಿದೆ, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018 ರಲ್ಲಿ G20 ರಾಷ್ಟ್ರಗಳಿಗೆ ಒಂಬತ್ತು ಅಂಶಗಳ ಕಾರ್ಯಸೂಚಿ ಮತ್ತು ಆಸ್ತಿ ಮರುಪಡೆಯುವಿಕೆ ಕುರಿತು ಮಾರ್ಗದರ್ಶನ ನೀಡಿದರು

ಗುರುಗ್ರಾಮ್ ಮತ್ತು ಹೃಷಿಕೇಶದಲ್ಲಿ ಕ್ರಮವಾಗಿ ನಡೆದ 1 ಮತ್ತು 2 ನೇ ACWG ಸಭೆಗಳಲ್ಲಿ, ಪ್ರಮುಖ ಮತ್ತು ಸೂಕ್ಷ್ಮ ವಿಷಯಗಳ ಕುರಿತು ಮೂರು ಫಲಿತಾಂಶ ದಾಖಲೆಗಳನ್ನು (ಉನ್ನತ ಮಟ್ಟದ ತತ್ವಗಳು) ಅಂತಿಮಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಭ್ರಷ್ಟಾಚಾರ-ವಿರೋಧಿ ಕಾರ್ಯಸೂಚಿಯನ್ನು ಮುನ್ನಡೆಸಲು ಭಾರತವು G20 ನಲ್ಲಿ ಒಮ್ಮತವನ್ನು ರೂಪಿಸಲು ಸಾಧ್ಯವಾಯಿತು.

ಈ ಪ್ರಾಯೋಗಿಕ ಮತ್ತು ಕ್ರಮ-ಆಧಾರಿತ ಉನ್ನತ ಮಟ್ಟದ ಬದ್ಧತೆಗಳು ಭ್ರಷ್ಟಾಚಾರ ಅಪರಾಧಗಳ ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ಕಾನೂನು ಕ್ರಮಕ್ಕೆ ಕೊಡುಗೆ ನೀಡುತ್ತವೆ, ದೇಶೀಯ ಭ್ರಷ್ಟಾಚಾರ-ವಿರೋಧಿ ಸಾಂಸ್ಥಿಕ ಚೌಕಟ್ಟುಗಳನ್ನು ಬಲಪಡಿಸುವುದು, ಪರಾರಿಯಾದ ಆರ್ಥಿಕ ಅಪರಾಧಿಗಳ ಹಸ್ತಾಂತರ ಮತ್ತು ವಿದೇಶಿ ನ್ಯಾಯವ್ಯಾಪ್ತಿಯಿಂದ ಅಂತಹ ಅಪರಾಧಿಗಳ ಆಸ್ತಿಗಳನ್ನು ಮರುಪಡೆಯುವುದು ಸೇರಿದೆ.

ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಎದುರಿಸಲು ಜವಾಬ್ದಾರರಾಗಿರುವ ಸಾರ್ವಜನಿಕ ಸಂಸ್ಥೆಗಳು ಮತ್ತು ಅಧಿಕಾರಗಳ ಸಮಗ್ರತೆ ಮತ್ತು ಪರಿಣಾಮಕಾರಿತ್ವವನ್ನು ಉತ್ತೇಜಿಸುವ ಉನ್ನತಮಟ್ಟದ ತತ್ವಗಳು ಭ್ರಷ್ಟಾಚಾರ-ವಿರೋಧಿ ಸಂಸ್ಥೆಗಳ ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ಮಾರ್ಗದರ್ಶಿ ಚೌಕಟ್ಟನ್ನು ಒದಗಿಸುತ್ತದೆ. ಸಾಂಸ್ಥಿಕ ದೌರ್ಬಲ್ಯ ಮತ್ತು ಹೊಣೆಗಾರಿಕೆಯ ಕೊರತೆ ಸೇರಿದಂತೆ ಭ್ರಷ್ಟಾಚಾರದ ಮೂಲ ಕಾರಣವನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ.

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಆಸ್ತಿ ಮರುಪಡೆಯುವಿಕೆ ಕಾರ್ಯವಿಧಾನಗಳನ್ನು ಬಲಪಡಿಸುವ ಉನ್ನತಮಟ್ಟದ ತತ್ವಗಳು, ಅಪರಾಧದ ಆದಾಯವನ್ನು ತ್ವರಿತವಾಗಿ ಮರುಪಡೆಯಲು ದೃಢವಾದ ಮತ್ತು ಪರಿಣಾಮಕಾರಿ ಚೌಕಟ್ಟನ್ನು ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ. ಈ ತತ್ವಗಳು ವಿದೇಶಿ ನ್ಯಾಯವ್ಯಾಪ್ತಿಯಲ್ಲಿ ಆಶ್ರಯ ಪಡೆಯುವ ಆರ್ಥಿಕ ಅಪರಾಧಿಗಳನ್ನು ತಡೆಯುತ್ತದೆ.

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕಾನೂನು ಜಾರಿ ಸಂಬಂಧಿತ ಅಂತಾರಾಷ್ಟ್ರೀಯ ಸಹಕಾರ ಮತ್ತು ಮಾಹಿತಿ ಹಂಚಿಕೆಯನ್ನು ಬಲಪಡಿಸುವ ಉನ್ನತ ಮಟ್ಟದ ತತ್ವಗಳು ಕಾನೂನು ಜಾರಿ ಸಂಸ್ಥೆಗಳು ಮತ್ತು ದೇಶಗಳ ನಡುವೆ ಮಾಹಿತಿ ಹಂಚಿಕೆಯ ಮೂಲಕ ಅಂತರ-ಏಜೆನ್ಸಿ ಸಹಕಾರ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು 6-ಅಂಶಗಳ ಯೋಜನೆಯಾಗಿದೆ. ಇದು ಭ್ರಷ್ಟಾಚಾರದ ಅಪರಾಧಗಳ ವಿರುದ್ಧ ಸಕಾಲಿಕ ಮತ್ತು ಪರಿಣಾಮಕಾರಿ ಕ್ರಮವನ್ನು ಖಚಿತಪಡಿಸುತ್ತದೆ, ಅಪರಾಧಿಗಳ ಕಾನೂನು ಕ್ರಮ ಮತ್ತು ಇತರೆ ವಿಷಯಗಳು ಸೇರಿದೆ.

ACWG ಭ್ರಷ್ಟಾಚಾರವನ್ನು ನಿಭಾಯಿಸುವಲ್ಲಿ ಆಡಿಟ್ ಸಂಸ್ಥೆಗಳ ಪಾತ್ರದ ಮೇಲೆ ಕೇಂದ್ರೀಕರಿಸಿದೆ. ವರ್ಷದ ಹಿಂದೆ, ಸಾರ್ವಜನಿಕ ಆಡಳಿತ ಮತ್ತು ಸಾರ್ವಜನಿಕ ಸೇವೆಗಳ ವಿತರಣೆ ಮತ್ತು ಭ್ರಷ್ಟಾಚಾರದ ಸಮಸ್ಯೆಗಳನ್ನು ಕಡಿಮೆ ಮಾಡಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ (ICT) ಬಳಕೆಯನ್ನು ಪ್ರಮುಖ, ಮಾಡಲು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಾರತದ ಅಧ್ಯಕ್ಷತೆಯಲ್ಲಿ ಮಹಿಳೆಯರ ಮೇಲೆ ಭ್ರಷ್ಟಾಚಾರ ಪ್ರಭಾವದ ಕುರಿತ ಚರ್ಚೆಯು ಭ್ರಷ್ಟಾಚಾರ-ವಿರೋಧಿ ಕಾರ್ಯತಂತ್ರಗಳಲ್ಲಿ ಲಿಂಗ-ಸೂಕ್ಷ್ಮ ಮತ್ತು ಲಿಂಗ-ಪ್ರತಿಕ್ರಿಯಾತ್ಮಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಾಮೂಹಿಕ ಉಪಕ್ರಮಗಳ ಬಗ್ಗೆಯೂ ಒತ್ತು ನೀಡಬೇಕಾಗಿದೆ.

ಕೋಲ್ಕತ್ತಾದಲ್ಲಿ ನಡೆದ 3ನೇ ACWG ಸಭೆಯು ACWG ಯ ಭವಿಷ್ಯದ ಕೆಲಸಗಳಿಗೆ ನಿರ್ದೇಶನವನ್ನು ನೀಡುತ್ತದೆ ಮತ್ತು ಕಾನೂನು ಜಾರಿ ಸಹಕಾರ, ಆಸ್ತಿ ಮರುಪಡೆಯುವಿಕೆ ಕಾರ್ಯವಿಧಾನಗಳನ್ನು ಬಲಪಡಿಸುವುದು ಮತ್ತು ಭಾರತದ G20 ಅಧ್ಯಕ್ಷತೆಯಲ್ಲಿ ಭ್ರಷ್ಟಾಚಾರ-ವಿರೋಧಿ ಅಧಿಕಾರಿಗಳ ಸಮಗ್ರತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಬದ್ಧತೆಗಳನ್ನು ನೀಡುತ್ತದೆ.

ಸಭೆಯು G20 ಸದಸ್ಯರು, ಆಹ್ವಾನಿತ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ (IOs) ವಿವಿಧ ವಲಯಗಳಲ್ಲಿ ಭ್ರಷ್ಟಾಚಾರವನ್ನು ಎದುರಿಸಲು ಸಂಬಂಧಿಸಿದ ಮೌಲ್ಯಯುತ ಒಳನೋಟಗಳು ಮತ್ತು ಉತ್ತಮ ಅಭ್ಯಾಸಗಳ ವಿನಿಮಯವನ್ನು ಸಕ್ರಿಯಗೊಳಿಸುತ್ತದೆ. ಸಿವಿಲ್ ಸೊಸೈಟಿ (C20), ಮಹಿಳಾ ಗುಂಪುಗಳು (W20), ಥಿಂಕ್ ಟ್ಯಾಂಕ್ಗಳು (T20), ಸುಪ್ರೀಂ ಆಡಿಟ್ ಸಂಸ್ಥೆಗಳು (SAI20) ಮತ್ತು ವ್ಯಾಪಾರ ಗುಂಪುಗಳು (B20) ಸೇರಿದಂತೆ G20 ಎಂಗೇಜ್ಮೆಂಟ್ ಗ್ರೂಪ್ ಗಳು (EG ಗಳು) ಭ್ರಷ್ಟಾಚಾರ-ವಿರೋಧಿ ಕೆಲಸಕ್ಕೆ ಸಂಬಂಧಿಸಿದ G20 ACWG ಅನ್ನು ನವೀಕರಿಸುತ್ತವೆ. 

ಈ ಚರ್ಚೆಗಳು ಭ್ರಷ್ಟಾಚಾರ ವಿರೋಧಿ ಕುರಿತ ಸಚಿವರ ಸಭೆಯಲ್ಲಿ ಪ್ರಮುಖವಾಗಿ ಬರಲಿವೆ. ಎರಡನೇ G20 ಭ್ರಷ್ಟಾಚಾರ ವಿರೋಧಿ ಸಚಿವರ ಸಭೆಯು 2010 ರಲ್ಲಿ ಪ್ರಾರಂಭವಾಗಿದ್ದು, ಇದು ಈಗ ಮಹತ್ವದ ಮೈಲಿಗಲ್ಲಾಗಿದೆ. ಇದು ಬಹುಮುಖಿ ಸವಾಲಾಗಿ ಭ್ರಷ್ಟಾಚಾರವನ್ನು ಗುರುತಿಸುವುದನ್ನು ಪ್ರತಿಬಿಂಬಿಸುತ್ತದೆ, ಜಾಗತಿಕ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಎದುರಿಸಲು ಅಂತಾರಾಷ್ಟ್ರೀಯ ಸಹಕಾರ ಮತ್ತು ಬಲವಾದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ

*****


(Release ID: 1946933) Visitor Counter : 227