ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಎನ್‌ಇಜಿಡಿ (NeGD) ವಿಭಾಗದಿಂದ ಎಂಇಐಟಿವೈ ಅಡಿಯಲ್ಲಿ ಸೈಬರ್‌ ಸುರಕ್ಷಿತ ಭಾರತ ಉಪಕ್ರಮದ ಭಾಗವಾಗಿ 39ನೇ ಸಿಐಎಸ್‌ಒ (CISO) ಡೀಪ್-ಡೈವ್ ತರಬೇತಿ ಕಾರ್ಯಕ್ರಮ ಆಯೋಜನೆ

Posted On: 07 AUG 2023 7:35PM by PIB Bengaluru

ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂಇಐಟಿವೈ) ಸೈಬರ್‌ ಅಪರಾಧ ತಡೆಗೆ ವ್ಯಾಪಕ ಅರಿವು ಮೂಡಿಸುವ ಪರಿಕಲ್ಪನೆಯಡಿ ʼಸೈಬರ್‌ ಸುರಕ್ಷಿತ ಭಾರತʼ ಅಭಿಯಾನ ರೂಪಿಸಿದೆ. ಮುಖ್ಯ ಮಾಹಿತಿ ಭದ್ರತಾ ಅಧಿಕಾರಿಗಳು ಹಾಗೂ ಸರ್ಕಾರದ ಎಲ್ಲ ಇಲಾಖೆಗಳ ಐಟಿ ಅಧಿಕಾರಿಗಳ ಸಾಮರ್ಥ್ಯ ವೃದ್ಧಿ ಜತೆಗೆ ಸೈಬರ್‌ ಅಪರಾಧ ಹಾನಿ ನಿಯಂತ್ರಣಕ್ಕೆ ಹೆಚ್ಚುವರಿ ಸುರಕ್ಷತಾ ಕ್ರಮಗಳ ಅಳವಡಿಕೆಗೆ ಪೂರಕ ಕ್ರಮ ವಹಿಸುವುದು ಇದರ ಉದ್ದೇಶ. ಆ ಮೂಲಕ ಸರ್ಕಾರಿ ಸಂಸ್ಥೆಗಳು ತಮ್ಮ ಡಿಜಿಟಲ್‌ ಮೂಲಸೌಕರ್ಯದ ಸಂರಕ್ಷಣೆ ಮಾಡಿಕೊಳ್ಳುವುದು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಸೈಬರ್‌ ದಾಳಿಗಳನ್ನುಸಮರ್ಥವಾಗಿ ಎದುರಿಸಲು ಸಜ್ಜುಗೊಳಿಸುವ ಗುರಿಯನ್ನೂ ಹೊಂದಿದೆ.

ರಾಷ್ಟ್ರೀಯ ಇ- ಆಡಳಿತ ವಿಭಾಗವು (ಎನ್‌ಇಜಿಡಿ) ಡಿಜಿಟಲ್‌ ತಂತ್ರಜ್ಞಾನದ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದ ಭಾಗವಾಗಿ 39ನೇ ಸಿಐಎಸ್‌ಒ (CISO) ಡೀಪ್-ಡೈವ್ ತರಬೇತಿ ಕಾರ್ಯಕ್ರಮವನ್ನು ಆಗಸ್ಟ್‌ 7ರಿಂದ 11ರವರೆಗೆ ಆಯೋಜಿಸಿದೆ. ನವದೆಹಲಿಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ಆಯೋಜನೆಯಾಗಿರುವ ತರಬೇತಿ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಮುಂಚೂಣಿ ಸಚಿವಾಲಯಗಳ 25 ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ.

ಈ ತರಬೇತಿ ಕಾರ್ಯಕ್ರಮವನ್ನು ಐಐಪಿಎ ಪ್ರಧಾನ ನಿರ್ದೇಶಕರಾದ ಶ್ರೀ ಎಸ್‌.ಎನ್‌. ತ್ರಿಪಾಠಿ ಅವರು ಉದ್ಘಾಟಿಸಲಿದ್ದಾರೆ. ಎಂಇಐಟಿವೈ ಸಚಿವಾಲಯದ ಸೈಬರ್‌ ಸುರಕ್ಷತೆಗೆ ವಿಭಾಗದ ವಿಜ್ಞಾನಿ- ಜಿ (ಹಿರಿಯ ನಿರ್ದೇಶಕರು) ಆದ ಸಮೂಹ ಸಮನ್ವಯಾಧಿಕಾರಿಯಾದ ಶ್ರೀಮತಿ ಸವಿತಾ ಉಟ್ರೇಜಾ, ಎನ್‌ಇಜಿಡಿ ವಿಭಾಗದ ಸಾಮರ್ಥ್ಯ ವೃದ್ಧಿ ಹಾಗೂ ಹಣಕಾಸು ವಿಭಾಗದ ನಿರ್ದೇಶಕ ಶ್ರೀ ರಜನೀಶ್‌ ಕುಮಾರ್‌, ಎಂಇಐಟಿವೈ ಸಚಿವಾಲಯದ ಸೈಬರ್‌ ಸುರಕ್ಷತೆಯ ವಿಭಾಗದ ವಿಜ್ಞಾನಿ- ಇ ಶ್ರೀ ವಿನೋದ್‌ ಕುಮಾರ್‌ ಚೌಹಾಣ್‌ ಹಾಗೂ ಐಐಪಿಎ ಕೋರ್ಸ್‌ ಕೋ-ಆರ್ಡಿನೇಟರ್‌ ಪ್ರೊ. ಚಾರು ಮಲ್ಹೋತ್ರಾ ಪಾಲ್ಗೊಂಡಿದ್ದರು.

ಸೈಬರ್‌ ಸುರಕ್ಷತೆ ಕುರಿತು ವ್ಯಾಪಕ ಅರಿವು ಮೂಡಿಸುವುದು, ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಸರಕಾರದ ಇಲಾಖೆಗಳು ಸೈಬರ್‌ ಅಪರಾಧಗಳನ್ನು ತಡೆಯಲು ಪೂರಕವಾದ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತವಾಗುವಂತೆ ಉತ್ತೇಜಿಸುವುದು ಈ ತರಬೇತಿ ಕಾರ್ಯಕ್ರಮದ ಮುಖ್ಯ ಉದ್ದೇಶ. ಹಾಗೆಯೇ ಸೈಬರ್‌ ಸುರಕ್ಷತೆ ಹಾಗೂ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದ ಮೂಲಕ ಸರಕಾರ ಒಗ್ಗೂಡಿತವಾಗಿ ನಾಗರಿಕ ಸೇವೆಗಳ ಒದಗಿಸುವ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಜತೆಗೆ ಸೈಬರ್‌ ಸುರಕ್ಷತೆ ಕುರಿತಂತೆ ಸುಧಾರಿತ ಮಾಹಿತಿ, ಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸರ್ಕಾರಿ ಇಲಾಖೆಗಳ ಸೈಬರ್‌ ಶ್ರೇಷ್ಠತೆ, ಸುರಕ್ಷತೆ ಹಾಗೂ ಭದ್ರತೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಆಶಯವನ್ನೂ ಒಳಗೊಂಡಿದೆ.

ಸಿಐಎಸ್‌ಒ 2018ರಲ್ಲಿ ಮೊದಲ ಬಾರಿಗೆ ಸರಕಾರಿ ಹಾಗೂ ಕೈಗಾರಿಕೆಗಳ ಸಹಯೋಗದಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. 2018ರ ಜೂನ್‌ನಿಂದ ಪ್ರಸಕ್ತ 2023ರ ಆಗಸ್ಟ್‌ವರೆಗೆ ಎನ್ಇಜಿಡಿ ವಿಭಾಗವು 39 ಸಿಐಎಸ್‌ಒ ಡೀಪ್‌-ಡೈವ್‌ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಬರೋಬ್ಬರಿ 1,489 ಸಿಐಎಸ್ಒಗಳು ಮತ್ತು ಮುಂಚೂಣಿಯಲ್ಲಿರುವ ಐಟಿ ಅಧಿಕಾರಿಗಳಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡಿದೆ

****



(Release ID: 1946594) Visitor Counter : 89


Read this release in: English , Urdu , Hindi , Telugu