ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ನಾಗರಿಕ ಜೀವನವನ್ನು ಪರಿವರ್ತಿಸಲು ತಂತ್ರಜ್ಞಾನ ಬಳಸುವುದರಲ್ಲಿ ಭಾರತ ಯಶಸ್ಸು ಸಾಧಿಸಿರುವುದು ಅಧ್ಯಯನದಿಂದ ಬಹಿರಂಗ: ರಾಜ್ಯ ಸಚಿವರಾದ ರಾಜೀವ್‌ ಚಂದ್ರಶೇಖರ್


ಹಲವು ವರ್ಷಗಳಿಂದ ಭಾರತ ಕುರಿತಾದ ನಿರೂಪಣೆಯು ಜನರನ್ನು ತಲುಪಲು ವಿಫಲವಾದ ನಿಷ್ಕ್ರಿಯ ಆಡಳಿತದ ಸುತ್ತಲೇ ಸುತ್ತುತ್ತಿತ್ತು ; ರಾಜೀವ್‌ ಚಂದ್ರಶೇಖರ್‌

ಡಿಜಿಟಲ್‌ ಇಂಡಿಯಾ ಚೌಕಟ್ಟು ಹೊಸ ತಲೆಮಾರಿನ ಯುವ ಭಾರತೀಯರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದೆ; ರಾಜ್ಯ ಸಚಿವರಾದ ರಾಜೀವ್‌ ಚಂದ್ರಶೇಖರ್‌

ರಾಜ್ಯ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಅವರು ವಿಶ್ವ ಬ್ಯಾಂಕ್‌ ನ ಡಿಜಿಟಲ್‌ ಆರ್ಥಿಕತೆ ಸಮಾವೇಶ ೨೦೨೩ ಉದ್ದೇಶಿಸಿ ಮಾತನಾಡಿದರು.

Posted On: 03 AUG 2023 8:16PM by PIB Bengaluru

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ಶ್ರೀ ರಾಜೀವ್‌ ಚಂದ್ರಶೇಖರ್‌ ವಿಶ್ವ ಬ್ಯಾಂಕ್‌ ಡಿಜಿಟಲ್‌ ಆರ್ಥಿಕತೆ ಸಮಾವೇಶ ೨೦೨೩ ಉದ್ದೇಶಿಸಿ ಮಾತನಾಡಿದರು. ಅಲ್ಲಿ ಅವರು ನಾಗರಿಕ ಜೀವನವನ್ನು ಪರಿವರ್ತಿಸಲು ತಂತ್ರಜ್ಞಾನ ಬಳಸುವುದರಲ್ಲಿ ಭಾರತ ಯಶಸ್ಸು ಸಾಧಿಸಿರುವ ಕುರಿತಾದ ಅಧ್ಯಯನವನ್ನು ಬಹಿರಂಗಪಡಿಸಿದರು. ಕಳೆದ ೯ ವರ್ಷಗಳಲ್ಲಿ ಡಿಜಿಟಲ್‌ ಇಂಡಿಯಾಗೆ ಒತ್ತು ನೀಡಿ ಸಾಧಿಸಿರುವ ಮೈಲಿಗಲ್ಲಿನ ಸಾಧನೆಯನ್ನು ಉಲ್ಲೇಖಿಸಿ, ಬರುವ ೨೦೨೬ ರ ವೇಳೆಗೆ ಭಾರತ ಐದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನು ತ್ವರಿತವಾಗಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.    

“೨೦೧೫ ರಲ್ಲಿ ಡಿಜಿಟಲ್‌ ಇಂಡಿಯಾ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸಂಪ್ರದಾಯಿಕವಾಗಿ ಮೂರು ವಿಸ್ತಾರವಾದ ಗುರಿಗಳನ್ನು ನಿಗದಿಪಡಿಸಿದರು. ತಂತ್ರಜ್ಞಾನದ ಮೂಲಕ ನಾಗರಿಕರ ಬದುಕು ಸುಧಾರಣೆ, ಆಡಳಿತದ ಮೇಲೆ ಪರಿಣಾಮ ಬೀರುವ ವ್ಯವಸ್ಥೆ ಮತ್ತಷ್ಟು ವಿಸ್ತರಣೆ, ನಾವೀನ್ಯತೆಯ ಆರ್ಥಿಕತೆಯ ವಾಸ್ತುಶಿಲ್ಪ ರಚನೆಯ ಅಗತ್ಯವನ್ನು ಪ್ರತಿಪಾದಿಸಿದ್ದರು. ಕಳೆದ ೯ ವರ್ಷಗಳಲ್ಲಿ ಮೂಕ ಪ್ರೇಕ್ಷಕರು ಮತ್ತು ತಂತ್ರಜ್ಞಾನದ ಗ್ರಾಹಕರು ಎಂಬುದಕ್ಕೆ ವಿರುದ್ಧವಾಗಿ ತಂತ್ರಜ್ಞಾನ ರಚಿಸುವಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಸರ್ಕಾರಿ ಸೇವೆಗಳ ಡಿಜಿಟಲೀಕರಣ ಈಗ ಡಿಜಿಟಲ್‌ ಪಾವತಿ ಮತ್ತು ಸೂಕ್ಷ್ಮ ಸಾಲ ಸೌಲಭ್ಯದಂತಹ ಅನೌಪಚಾರಿಕ ವಲಯ ಇದೀಗ ಔಪಚಾರಿಕ ವಲಯವಾಗಿ ಪರಿವರ್ತನೆಯಾಗಿರುವುದನ್ನು ಎತ್ತಿದರು. ಭಾರತದ ಸಂಗ್ರಹದಲ್ಲಿರುವ ಈ ಸೇವೆಗಳ ಆಡಳಿತದ ಡಿಜಿಟಲೀಕರಣ ವ್ಯವಸ್ಥೆಯನ್ನು ಉತ್ಸುಕವಾಗಿರುವ ಇತರೆ ದೇಶಗಳಿಗೆ ಒದಗಿಸಲಾಗುವುದು ಎಂದರು.  

“ಸರ್ಕಾರಿ ಸೇವೆಗಳ ಡಿಜಟಲೀಕರಣದಿಂದ ಬೀದಿ ಬದಿ ವ್ಯಾಪಾರಿಗಳು ಇದೀಗ ಡಿಜಿಟಲ್‌ ಪಾವತಿ ಮಾಡುತ್ತಿದ್ದಾರೆ ಮತ್ತು ಅವರು ಸೂಕ್ಷ್ಮ ಸಾಲ ಸೌಲಭ್ಯ ವ್ಯವಸ್ಥೆಯನ್ನು ಪಡೆದುಕೊಂಡಿದ್ದು, ಈ ಸೇವೆಗಳು ಅನೌಪಚಾರಿಕತೆಯಿಂದ ಔಪಚಾರಿಕತೆಯತ್ತ ಸಾಗಿವೆ. ಯುಪಿಐ ಮತ್ತು ಆಧಾರ್‌ ನಂತಹ ಉಪಕ್ರಮಗಳನ್ನು ಒಳಗೊಂಡಂತೆ ಭಾರತದ ಸಂಗ್ರಹದಿಂದ ತರಲಾಗಿದ್ದ ಸುಧಾರಣೆ ರೋಮಾಂಚಕ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ. ಜೀವನ ಸುಧಾರಣೆಯಲ್ಲಿ ತಂತ್ರಜ್ಞಾನ ಬಳಕೆಯ ಯಶಸ್ಸು ಇತರೆ ದೇಶಗಳಿಂದ ನಮ್ಮ ಆರ್ಥಿಕತೆ ಮತ್ತು ಆಡಳಿತವನ್ನು ಡಿಜಿಟಲೀಕರಣಗೊಳಿಸಲು ಆಸಕ್ತಿ ಮೂಡಿಸಿದೆ. ನವೀನ ಪರಿಸರ ವ್ಯವಸ್ಥೆಯೊಂದಿಗೆ ಭಾರತ ಇತರೆ ದೇಶಗಳೊಂದಿಗೆ ಪಾಲುದಾರಿಕೆಯಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.  

ವಿಶ್ವ ಬ್ಯಾಂಕ್‌ ನ ಕಾರ್ಯನಿರ್ವಾಹಕರೊಂದಿಗೆ ಸಚಿವರು ಸಂವಾದ ನಡೆಸಿದ  ಸಂದರ್ಭದಲ್ಲಿ ದೂರದ ದೇಶಗಳಲ್ಲಿ ವಾಸಿಸುವ ಜನರಿಗೆ ಸಂಪನ್ಮೂಲಗಳ ವಿತರಣೆಯನ್ನು ತಡೆಹಿಡಿಯುವ ನಿಷ್ಕ್ರೀಯ ಆಡಳಿತದಿಂದ ಸರ್ಕಾರವನ್ನು ಹೇಗೆ ಪುನಶ್ಚೇತನಗೊಳಿಸಬಹುದು ಎನ್ನುವ ಕುರಿತು ಮಾತನಾಡಿದರು.

“ಕೆಲವು ವರ್ಷಗಳಿಂದ ಭಾರತ ಕುರಿತಾದ ನಿರೂಪಣೆ ಶ್ರೀಮಂತವಾಗಿದೆ. ಪ್ರತಿಭಾವಂತ ಜನರನ್ನು ತಲುಪುವ ತಂತ್ರಜ್ಞಾನ ರಾಷ್ಟ್ರವಾಗಿದ್ದರೂ ಜನರನ್ನು ತಲುಪಲು ವಿಫಲವಾದ ನಿಷ್ಕ್ರಿಯ ಆಡಳಿತದ ಸುತ್ತಲೇ ಸುತ್ತುತ್ತಿದೆ. ಸರ್ಕಾರ ಎದುರಿಸಿದ ಸವಾಲುಗಳನ್ನು ಅವರು ಈ ಸಂದರ್ಭದಲ್ಲಿ ವ್ಯಾಖ್ಯಾನಿಸಿದರು. ೨೦೧೫ ರಲ್ಲಿ ಡಿಜಿಟಲ್‌ ಇಂಡಿಯಾ ಆರಂಭಿಸಿದಾಗ ತಂತ್ರಜ್ಞಾನದ ನಿರೀಕ್ಷೆಗಳು ಮತ್ತು ಫಲಿತಾಂಶಗಳಿಗಾಗಿ ವಾಸ್ತುಶಿಲ್ಪ ಮತ್ತು ಸೂಕ್ತ ಚೌಕಟ್ಟನ್ನು ಪರಿಚಯಿಸಲಾಯಿತು ಮತ್ತು ಅರ್ಥಮಾಡಿಕೊಳ್ಳಲಾಯಿತು. ಇದು ಡಿಜಿಟಲ್‌ ಇಂಡಿಯಾ ಚೌಕಟ್ಟು ಹೊಸ ತಲೆಮಾರಿನ ಯುವ ಭಾರತೀಯರಲ್ಲಿ ಗಣನೀಯವಾಗಿ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದರು.

****


(Release ID: 1945715) Visitor Counter : 165