ಗಣಿ ಸಚಿವಾಲಯ
azadi ka amrit mahotsav

ಆಂಧ್ರಪ್ರದೇಶದಲ್ಲಿ ಚಿನ್ನದ  ನಿಕ್ಷೇಪಗಳು

Posted On: 31 JUL 2023 4:20PM by PIB Bengaluru

ಇಂಡಿಯನ್ ಮಿನರಲ್ಸ್ ಇಯರ್ ಬುಕ್ 2021 ರ ಪ್ರಕಾರ, 01.04.2020 ರಂತೆ, ಆಂಧ್ರಪ್ರದೇಶವು 47.17 ಟನ್ಗಳ ಒಟ್ಟು ನಿಕ್ಷೇಪಗಳನ್ನು ಹೊಂದಿದೆ, ಅಂದರೆ 5.3 ಟನ್ಗಳಷ್ಟು  ಸಂಭವನೀಯ ನಿಕ್ಷೇಪಗಳು ಮತ್ತು 41.87 ಟನ್ಗಳಷ್ಟು ಉಳಿದಿರುವ ನಿಕ್ಷೇಪಗಳು ಚಿನ್ನವನ್ನು ಪ್ರಾಥಮಿಕ ಲೋಹವಾಗಿ ಹೊಂದಿದೆ.

ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ಐ)ಯು ನಡೆಸಿದ ಚಿನ್ನದ  ಅನ್ವೇಷಣೆಯ ಪ್ರಕಾರ, ರಾಮಗಿರಿ ಚಿನ್ನದ ವಲಯ, ಪೆನಕಚೆರ್ಲಾ ಚಿನ್ನದ ವಲಯ, ಜೋನಗಿರಿ ಶಿಸ್ಟ್ ಬೆಲ್ಟ್, ಚಿಗರಗುಂಟಾ-ಬಿಸನಟ್ಟಂ ಚಿನ್ನದ ವಲಯ  ದಕ್ಷಿಣಕ್ಕೆ ಬಿಸನತ್ತಂನಲ್ಲಿ ಚಿನ್ನದ ಲಭಿಸುವಿಕೆಯ ಸುಳಿವಿನ ವರದಿಯಾಗಿವೆ. ಜಿಎಸ್ಐ ಚಿಗರಗುಂಟಾ ಪ್ರದೇಶದಲ್ಲಿ ಸರಾಸರಿ 4.0 - 6.22 g/t Au 3.467 ದಶಲಕ್ಷ  ಟನ್ ಅದಿರು ನಿಕ್ಷೇಪದ ಬಗ್ಗೆ   ಅಂದಾಜು ಮಾಡಿದೆ.

ಎಂಎಂಡಿಆರ್ ಕಾಯಿದೆ, 2015 ರ ಅನುಷ್ಠಾನದ ನಂತರ, ಆಂಧ್ರಪ್ರದೇಶದ ಚಿಗರಗುಂಟಾ ಮತ್ತು ಬಿಸನಟ್ಟಂ ಚಿನ್ನದ ಗಣಿಗಳ ಕೋಲಾರ ಶಿಸ್ಟ್ ಬೆಲ್ಟ್ ಚಿತ್ತೂರ್ ಜಿಲ್ಲೆಯ ಭೂವೈಜ್ಞಾನಿಕ ವರದಿಗಳನ್ನು ಆಂಧ್ರಪ್ರದೇಶದ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಈ ಎರಡು ಬ್ಲಾಕ್ಗಳಲ್ಲಿನ ನಿಕ್ಷೇಪಗಳ ಅಂದಾಜು ಪ್ರಮಾಣವು ಈ ಕೆಳಗಿನಂತಿವೆ:

ಚಿಗರಗುಂಟಾ ಬ್ಲಾಕ್: ಚಿಗರಗುಂಟಾ ಗಣಿ-1 ರಲ್ಲಿ ಅಂದಾಜು ಮಾಡಲಾದ ಸಂಪನ್ಮೂಲವು ಸರಾಸರಿ 5.20 ಪಿಪಿಎಂ ಚಿನ್ನದೊಂದಿಗೆ 1.6573 ದಶಲಕ್ಷ ಟನ್ ಅದಿರು ಮತ್ತು ಚಿಗರಗುಂಟಾ ಬ್ಲಾಕ್ನಲ್ಲಿ ಅಂದಾಜು ಮಾಡಲಾದ ಒಟ್ಟು ನಿಕ್ಷೇಪವು 2.04 ಮಿಲಿಯನ್ ಟನ್ಗಳು ಸರಾಸರಿ 5.73 ಗ್ರಾಂ / ಟಿ ವರೆಗೆ 5 ನೇ ಹಂತದವರೆಗೆ (ಚಿಗರಗುಂಟಾ & 2 ಮೈನ್ )

ಬಿಸನಟ್ಟಂ ಬ್ಲಾಕ್: ಬಿಸನಟ್ಟಂ ಬ್ಲಾಕ್ನಲ್ಲಿ ಅಂದಾಜು ಮಾಡಲಾದ ನಿಕ್ಷೇಪವು 173478 ಟನ್ ಅದಿರು ಮತ್ತು ಸರಾಸರಿ ದರ್ಜೆಯ 4.70 ಗ್ರಾಂ/ಟ.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

***


(Release ID: 1944351)
Read this release in: English , Tamil , Telugu