ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಪ್ರಸ್ತುತ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ನ ಅಡಿಯಲ್ಲಿ 103 ಪತ್ಯೇಕ ಕ್ರೀಡಾಪಟುಗಳು ಹಾಗೂ ಪುರುಷರು ಮತ್ತು ಮಹಿಳೆಯರ 2 ಪ್ರತ್ಯೇಕ ಹಾಕಿ ತಂಡಗಳನ್ನು ಪ್ರಮುಖ ಗುಂಪುಗಳಾಗಿ ಆಯ್ಕೆ ಮಾಡಲಾಗಿದೆ.

​​​
ಭಾರತೀಯ ಕ್ರೀಡಾ ಪ್ರಾಧಿಕಾರವು ಕಳೆದ ಐದು ವರ್ಷಗಳಲ್ಲಿ 612.51 ಕೋಟಿ ರೂ.ಗಳ 29 ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ

Posted On: 25 JUL 2023 5:25PM by PIB Bengaluru

ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟ, ಏಷ್ಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳ ಸಿದ್ಧತೆ ಹಾಗೂ ಈ ಸ್ಪರ್ಧೆಗಳಲ್ಲಿ ನಮ್ಮ ಕ್ರೀಡಾಪಟುಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಭಾರತೀಯ ಕ್ರೀಡಾ ಪ್ರಾಧಿಕಾರದ ಮೂಲಕ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ ನಲ್ಲಿ ಭಾರತದ ಪ್ರದರ್ಶನವನ್ನು ಸುಧಾರಿಸುವ ಸಲುವಾಗಿ, ಸಚಿವಾಲಯವು 2014ರಲ್ಲಿ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ಅನ್ನು ಜಾರಿಗೆ ತಂದಿದೆ. ಟಾಪ್ಸ್ ನ ಅಡಿಯಲ್ಲಿ, ವಿದೇಶಿ ತರಬೇತಿ, ಅಂತರರಾಷ್ಟ್ರೀಯ ಸ್ಪರ್ಧೆ, ಉಪಕರಣಗಳು, ದೈಹಿಕ ತರಬೇತುದಾರ, ಕ್ರೀಡಾ ಮನಶ್ಶಾಸ್ತ್ರಜ್ಞ, ಮಾನಸಿಕ ತರಬೇತುದಾರ ಮತ್ತು ಫಿಸಿಯೋಥೆರಪಿಸ್ಟ್ ನಂತಹ ಸಹಾಯಕ ಸಿಬ್ಬಂದಿ ಮತ್ತು ಪ್ರಮುಖ ಸಿಬ್ಬಂದಿಯ ಸೇವೆಗಳು ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಗುರುತಿಸಲಾದ ಸಂಭಾವ್ಯ ಕ್ರೀಡಾಪಟುಗಳಿಗೆ ಸರ್ಕಾರವು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತದೆ. ಇದಲ್ಲದೆ ಪ್ರಮುಖ ಗುಂಪಿನ ಕ್ರೀಡಾಪಟುಗಳಿಗೆ ತಿಂಗಳಿಗೆ ರೂ. 50,000/- ಮತ್ತು ಡೆವಲಪ್ಮೆಂಟ್ ಗುಂಪಿನ ಕ್ರೀಡಾಪಟುಗಳಿಗೆ ತಿಂಗಳಿಗೆ ರೂ.25,000/- ಭತ್ಯೆಯನ್ನು ಕೂಡಾ ನೀಡಲಾಗುತ್ತದೆ.  ಪ್ರಸ್ತುತ, 103 ಪ್ರತ್ಯೇಕ ಕ್ರೀಡಾಪಟುಗಳು ಮತ್ತು ಪುರುಷರು ಮತ್ತು ಮಹಿಳೆಯರ 2 ಹಾಕಿ ತಂಡಗಳನ್ನು ಪ್ರಮುಖ ಗುಂಪಾಗಿ ಟಾಪ್ಸ್ ನ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ. ಇದಲ್ಲದೆ, ಒಲಿಂಪಿಕ್ ಸಿದ್ಧತೆಯಲ್ಲಿ ಭಾರತದ ಕೇಂದ್ರೀಕೃತ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಟಾಪ್ಸ್ ನ ಅಭಿವೃದ್ಧಿ ಗುಂಪಿನ ಅಡಿಯಲ್ಲಿ 166 ಅತ್ಯುತ್ತಮ ಕ್ರೀಡಾ ಪ್ರತಿಭೆಗಳ ಪ್ರತಿಭೆಯನ್ನು ಗುರುತಿಸುವ ಕಾರ್ಯವನ್ನು ಕೂಡಾ ಪೂರೈಸಲಾಗಿದೆ.

ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಕ್ರೀಡೆಯ ಅಭಿವೃದ್ಧಿಗಾಗಿ, ದೇಶಾದ್ಯಂತದ ಯುವಕರಿಗೆ ಪ್ರಯೋಜನ ಹಾಗೂ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ, ಅವುಗಳೆಂದರೆ (i) ಖೇಲೋ ಇಂಡಿಯಾ ಯೋಜನೆ;  (ii) ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಗಳಿಗೆ ನೆರವು;  (iii) ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಮತ್ತು ಅವರ ತರಬೇತುದಾರರಿಗೆ ವಿಶೇಷ ಪ್ರಶಸ್ತಿಗಳು;  (iv) ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು;  (v) ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪಿಂಚಣಿ;  (vi) ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕ್ರೀಡಾ ಕಲ್ಯಾಣ ನಿಧಿ;  (vii) ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ (NSDF); (viii) ಭಾರತೀಯ ಕ್ರೀಡಾ ಪ್ರಾಧಿಕಾರದ ಮೂಲಕ ಕ್ರೀಡಾ ತರಬೇತಿ ಕೇಂದ್ರಗಳನ್ನು ನಡೆಸುವುದು, ಇತ್ಯಾದಿ.
ಮೇಲೆ ವಿವರಿಸಲಾದ ಯೋಜನೆಗಳ ಹೆಚ್ಚಿನ ವಿವರಗಳನ್ನು ಸಚಿವಾಲಯ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ವೆಬ್ಸೈಟ್ ಗಳಾದ www.yas.nic.in/sports ಮತ್ತು www.sportsauthorityofindia.nic.in ಸಾರ್ವಜನಿಕ ಡೊಮೇನ್ ಗಳಿಂದ ಪಡೆಯಬಹುದು.

'ಕ್ರೀಡೆ' ಎಂಬುದು ರಾಜ್ಯದ ವಿಷಯವಾಗಿರುವುದರಿಂದ, ಕ್ರೀಡಾ ಮೂಲಸೌಕರ್ಯಗಳ ರಚನೆ ಮತ್ತು ಬೆಳವಣಿಗೆಯ ಜವಾಬ್ದಾರಿಯು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಮೇಲಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿನ ಕ್ರೀಡಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ, ಭಾರತೀಯ ಕ್ರೀಡಾ ಪ್ರಾಧಿಕಾರವು ಕಳೆದ ಐದು ವರ್ಷಗಳಲ್ಲಿ 612.51 ಕೋಟಿ ರೂ.ಗಳ 29 ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು ಕೈಗೊಂಡಿದೆ.

ಖೇಲೋ ಇಂಡಿಯಾ ಯೋಜನೆಯಡಿ, ವಿವಿಧೋದ್ದೇಶ ಸಭಾಂಗಣ, ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, ಫುಟ್ಬಾಲ್ ಟರ್ಫ್, ಹಾಕಿ ಟರ್ಫ್, ಈಜುಕೊಳ ಮುಂತಾದ ಮೂಲಭೂತ ಕ್ರೀಡಾ ಮೂಲಸೌಕರ್ಯಗಳನ್ನು ರಚಿಸಲು ಆರ್ಥಿಕ ನೆರವು ನೀಡಲಾಗುವುದು. ರಾಜಸ್ಥಾನ ರಾಜ್ಯದಲ್ಲಿ 48 ಯೋಜನೆಗಳು ಸೇರಿದಂತೆ ದೇಶಾದ್ಯಂತ ಒಟ್ಟು 297 ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಇದು ಎಲ್ಲಾ ವರ್ಗದ ಆಟಗಾರರಿಗೆ ಅನ್ವಯಿಸುತ್ತದೆ.

ಇದಲ್ಲದೆ, ಭಾರತೀಯ ಕ್ರೀಡಾ ಪ್ರಾಧಿಕಾರವು ಭಾರತದಾದ್ಯಂತದ ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರಗಳಲ್ಲಿ ಮಾತ್ರ ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳುತ್ತದೆ. ಪ್ರಸ್ತುತ, ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರಗಳಲ್ಲಿ ಹೊಸ ಕ್ರೀಡಾಂಗಣಗಳು ಮತ್ತು ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸುವ ಯಾವುದೇ ಪ್ರಸ್ತಾಪವಿಲ್ಲ.

ಕೇಂದ್ರ ಯುವ  ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ಲೋಕಸಭೆಯಲ್ಲಿ ಈ ಉತ್ತರವನ್ನು ನೀಡಿದರು.

f


(Release ID: 1942702) Visitor Counter : 112


Read this release in: English , Telugu , Urdu , Tamil