ಕಲ್ಲಿದ್ದಲು ಸಚಿವಾಲಯ

ಅರಣ್ಯ ಪ್ರದೇಶಗಳ ಬಳಿ ಕಲ್ಲಿದ್ದಲು ನಿಕ್ಷೇಪಗಳನ್ನು ಗುರುತಿಸಲು ಕೈಗೊಂಡ ಮಾನದಂಡಗಳು ಮತ್ತು ಸುರಕ್ಷತಾ ಕ್ರಮಗಳು

Posted On: 24 JUL 2023 2:40PM by PIB Bengaluru

ಕಲ್ಲಿದ್ದಲು ಸಚಿವಾಲಯವು 2018 ರಿಂದ 90 ಕಲ್ಲಿದ್ದಲು ನಿಕ್ಷೇಪಗಳನ್ನು ಯಶಸ್ವಿಯಾಗಿ ಹರಾಜು ಹಾಕಿದೆ. 2018 ರಿಂದ ಯಶಸ್ವಿಯಾಗಿ ಹರಾಜು ಮಾಡಲಾದ ಕಲ್ಲಿದ್ದಲು ಗಣಿಗಳ ವರ್ಷವಾರು ವಿವರಗಳು ಕೆಳಗಿನಂತಿವೆ:-

ವರ್ಷ

2018-19

2019-20

2020-21

2021-22

2022-23

         ಹರಾಜು ಹಾಕಲಾದ ಕಲ್ಲಿದ್ದಲು ನಿಕ್ಷೇಪಗಳು

0

4

20

19

47

ಕಲ್ಲಿದ್ದಲು ಸಚಿವಾಲಯವು ಹರಾಜಿಗಾಗಿ ಕಲ್ಲಿದ್ದಲು ನಿಕ್ಷೇಪಗಳನ್ನು ಗುರುತಿಸುವಾಗ, ಸಾಮಾನ್ಯವಾಗಿ ಕೆಳಗಿನ ಮಾನದಂಡಗಳು ಮತ್ತು ಸುರಕ್ಷತಾ ಕ್ರಮಗಳನ್ನು ಪರಿಗಣಿಸಲಾಗುತ್ತದೆ:-

 

i. ಕಲ್ಲಿದ್ದಲು ನಿಕ್ಷೇಪಗಳು ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು, ಇಎಸ್ ಝಡ್, ವನ್ಯಜೀವಿ ಕಾರಿಡಾರ್ ಗಳಲ್ಲಿ ಇರಬಾರದು

ii. ಎಂ.ಒ.ಇ.ಎಫ್. ಮತ್ತು ಸಿ.ಸಿ. (MoEF&CC) ಯ ನಿರ್ಧಾರ ಬೆಂಬಲ ವ್ಯವಸ್ಥೆಯ (DSS) ವಿಶ್ಲೇಷಣೆ.

• (iii)  ಅನ್ವೇಷಣಾ  ಚಟುವಟಿಕೆಗಳು ಚಾಲ್ತಿಯಲ್ಲಿರುವ  ಅಥವಾ ಸಕ್ರಿಯ ಸಿಬಿಎಂ ಬ್ಲಾಕ್ ಗಳೊಂದಿಗೆ ಚಾಚಿಕೊಂಡಿರುವ/ ಅತಿಕ್ರಮಣ ಹೊಂದಿರುವ ಗಣಿಗಳನ್ನು ಇದರಿಂದ ಹೊರಗಿಡಲಾಗುತ್ತದೆ.

• (iv) ಪ್ರಸ್ತುತ ವ್ಯಾಜ್ಯದಲ್ಲಿರುವ ಬ್ಲಾಕ್ ಗಳು/ ಗಣಿಗಳನ್ನು ಹೊರಗಿಡಲಾಗುತ್ತದೆ.

ಛತ್ತೀಸ್ ಗಢದ ಹಸ್ಡಿಯೋ ಅರಂದ್ ಅರಣ್ಯಗಳಲ್ಲಿನ ತಾರಾ ಬ್ಲಾಕ್ ಮತ್ತು ಮಧ್ಯಪ್ರದೇಶದ ಮಹಾನ್ ಕಲ್ಲಿದ್ದಲು ಬ್ಲಾಕ್ ಗಳನ್ನು ಎಂಒಇಎಫ್ ಮತ್ತು ಸಿಸಿಯೊಂದಿಗೆ ಸಮಾಲೋಚಿಸಿ ಹರಾಜಿಗೆ ಗುರುತಿಸಲಾಗಿದೆ. ಪರಿಸರದ ಮೇಲಿನ ಪರಿಣಾಮವನ್ನು ಪರಿಗಣಿಸಿ, ಮಹಾನ್ ಕಲ್ಲಿದ್ದಲು ಬ್ಲಾಕ್ ನ್ನು ಅದರ ಮೇಲಿನ ಪರಿಸರ ಸೂಕ್ಷ್ಮ ಪ್ರದೇಶವನ್ನು ರಕ್ಷಿಸಲು ಭೂಗತ ಗಣಿಗಾರಿಕೆ ವಿಧಾನಕ್ಕಾಗಿ ಹರಾಜಿಗೆ ಪರಿಗಣಿಸಲಾಗಿದೆ, ಆದರೆ ಹಸ್ಡಿಯೋ-ಅರಂದ್ ಕಲ್ಲಿದ್ದಲು ನಿಕ್ಷೇಪ (ಕೋಲ್ ಫೀಲ್ಡ್ )ದಲ್ಲಿನ ಜೀವವೈವಿಧ್ಯ ಅಧ್ಯಯನದ ಶಿಫಾರಸುಗಳ ಆಧಾರದ ಮೇಲೆ ತಾರಾ ಬ್ಲಾಕ್ ಅನ್ನು ಹರಾಜಿಗೆ ಪರಿಗಣಿಸಲಾಗಿದೆ.  ಈ ಅಧ್ಯಯನವನ್ನು  ಡೆಹ್ರಾಡೂನ್ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ (ಐಸಿಎಫ್ ಆರ್ ಇ) ಸಂಸ್ಥೆ ನಡೆಸಿದೆ.

ಇದಲ್ಲದೆ, ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳಿಗೆ ಅನುಮತಿ ನೀಡುವಲ್ಲಿ ಅನುಸರಿಸುವ ಪ್ರಕ್ರಿಯೆಗಳಾದ ಅರಣ್ಯ ಅನುಮತಿ/ಮಂಜೂರಾತಿ (ಎಫ್,ಸಿ) ಮತ್ತು ಪರಿಸರ ಅನುಮತಿ (ಇಸಿ) ಗಳನ್ನು ಎಂಒಇಎಫ್ ಮತ್ತು ಸಿಸಿ, ನಿರ್ದಿಷ್ಟವಾಗಿ ಅದರ ತಜ್ಞರ ಮೌಲ್ಯಮಾಪನ ಸಮಿತಿಗಳು ಮತ್ತು ಅರಣ್ಯ ಸಲಹಾ ಸಮಿತಿ (ಎಫ್ಎಸಿ) ಎಂದು ಕರೆಯಲ್ಪಡುವ ಶಾಸನಬದ್ಧ ಸಂಸ್ಥೆ ನಿಯಂತ್ರಿಸುತ್ತದೆ. ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ಅನುಮತಿ ನೀಡುವ ಮೊದಲು ಪರಿಸರ ಪರಿಣಾಮ ಮೌಲ್ಯಮಾಪನ, ಅರಣ್ಯ ಮತ್ತು ವನ್ಯಜೀವಿ ಪರಿಣಾಮ, ಸಾಮಾಜಿಕ-ಆರ್ಥಿಕ ಪರಿಣಾಮ, ವಾಯು ಮತ್ತು ನೀರಿನ ಗುಣಮಟ್ಟ, ಪರಿಸರ ನಿಯಮಗಳ ಅನುಸರಣೆ, ಸಾರ್ವಜನಿಕ ಸಮಾಲೋಚನೆ, ಮೇಲ್ವಿಚಾರಣೆ ಮತ್ತು ಅನುಸರಣೆ ಕಾರ್ಯವಿಧಾನದಂತಹ ಹಲವಾರು ಅಂಶಗಳನ್ನು ಭಾರತದಲ್ಲಿ ಎಂಒಇ ಮತ್ತು ಎಫ್.ಸಿ.ಸಿ.ಗಳು  ಪರಿಗಣಿಸುತ್ತವೆ. ಯೋಜನೆಯ ಪ್ರಮಾಣ/ವ್ಯಾಪ್ತಿ, ಸ್ಥಳ ಮತ್ತು ಸಂಭಾವ್ಯ ಪರಿಣಾಮಗಳನ್ನು ಅವಲಂಬಿಸಿ ನಿರ್ದಿಷ್ಟ ಅಂಶಗಳು ಮತ್ತು ಪರಿಗಣನೆಗಳು ಬದಲಾಗಬಹುದು ಎಂಬುದನ್ನು ಗಮನಿಸುವುದು ಮುಖ್ಯ.

ಜಾಗತಿಕ ಇಂಧನ ಬಿಕ್ಕಟ್ಟಿನ ಪ್ರಸ್ತುತ ಸಮಯದಲ್ಲಿ ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಸರ್ಕಾರ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ ಆದರೆ ಕಲ್ಲಿದ್ದಲು ಹೊಂದಿರುವ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ನೆಡುತೋಪು ಮತ್ತು ಗಣಿಗಾರಿಕೆ ನಡೆದ ಭೂಮಿಯನ್ನು ಪುನಃಸ್ಥಾಪಿಸುವುದು ಸೇರಿದಂತೆ ವಿವಿಧ ಮಾಲಿನ್ಯ ತಗ್ಗಿಸುವ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರದ ಬಗ್ಗೆ ಆಳವಾದ ಸೂಕ್ಷ್ಮತೆ ಮತ್ತು ಜಾಗರೂಕತೆಯನ್ನು ತೋರಿಸಿದೆ. ಕಲ್ಲಿದ್ದಲು ಸಚಿವಾಲಯವು ಕೈಗೊಂಡ ಪ್ರಮುಖ ಉಪಕ್ರಮಗಳನ್ನು ಕೆಳಗೆ ನೀಡಲಾಗಿದೆ:-

  1. ಕಲ್ಲಿದ್ದಲು ಕ್ಷೇತ್ರದಲ್ಲಿ/ವಲಯದಲ್ಲಿ  ಹಸಿರೀಕರಣ ಉಪಕ್ರಮಗಳು: ಕಲ್ಲಿದ್ದಲು ಸಚಿವಾಲಯವು 2022-23ನೇ ಸಾಲಿಗೆ 50 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಕಲ್ಲಿದ್ದಲು ಕ್ಷೇತ್ರಗಳು ಮತ್ತು ಸುತ್ತಮುತ್ತಲಿನ 2400 ಹೆಕ್ಟೇರ್ ಪ್ರದೇಶವನ್ನು ಹಸಿರು ಹೊದಿಕೆಗೆ ತರಲು ಕಲ್ಲಿದ್ದಲು ಕಂಪನಿಗಳಿಗೆ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಿದೆ. ಕಲ್ಲಿದ್ದಲು ವಲಯದ ಹಸಿರೀಕರಣ ಉಪಕ್ರಮಗಳು 2030 ರ ವೇಳೆಗೆ ಹೆಚ್ಚುವರಿ ಅರಣ್ಯ ಮತ್ತು ಮರಗಳ ಹೊದಿಕೆಯ ಮೂಲಕ 2.5 ರಿಂದ 3 ಬಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಗೆ ಸಮಾನವಾದ ಹೆಚ್ಚುವರಿ ಇಂಗಾಲದ ಸಿಂಕ್  (ಹೀರುವಿಕೆಯನ್ನು) ಅನ್ನು ರಚಿಸುವ ಭಾರತದ ರಾಷ್ಟ್ರೀಯ ನಿರ್ಧಾರ ಕೊಡುಗೆ (ಎನ್ಡಿಸಿ) ಬದ್ಧತೆಯನ್ನು ಬೆಂಬಲಿಸುತ್ತವೆ.
  2. ಪರಿಹಾರ ಅರಣ್ಯೀಕರಣವು ಮಾನವಜನ್ಯ ಚಟುವಟಿಕೆಗಳಿಂದ ಹಾನಿಗೊಳಗಾದ ಭೂಮಿಯನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಸಾಬೀತಾದ ಮಾರ್ಗವಾಗಿದೆ ಮತ್ತು ಗಣಿಗಾರಿಕೆ ಮಾಡಿದ ಭೂದೃಶ್ಯದ ತೃಪ್ತಿಕರ ಪುನರ್ಸ್ಥಾಪನೆಯನ್ನು   ಸಾಧಿಸಲು ಇದು ಅತ್ಯಗತ್ಯ. ಇದು ಕಲ್ಲಿದ್ದಲು ಗಣಿಗಾರಿಕೆಯ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮಣ್ಣಿನ ಸವೆತವನ್ನು ತಡೆಯುತ್ತದೆ, ಹವಾಮಾನವನ್ನು ಸ್ಥಿರಗೊಳಿಸುತ್ತದೆ, ವನ್ಯಜೀವಿಗಳನ್ನು ಸಂರಕ್ಷಿಸುತ್ತದೆ ಮತ್ತು ಗಾಳಿ ಹಾಗು ಜಲಾನಯನ ಪ್ರದೇಶಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ.
  3.  ದೇಶದಲ್ಲಿ ಪರಿಸರ ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆಯನ್ನು ಉತ್ತೇಜಿಸಲು ಕಲ್ಲಿದ್ದಲು ಸಚಿವಾಲಯವು 'ಸುಸ್ಥಿರತೆ ಮತ್ತು ಪರಿವರ್ತನೆ (ಜಸ್ಟ್ ಟ್ರಾನ್ಸಿಷನ್')  ವಿಭಾಗವನ್ನು ಸ್ಥಾಪಿಸಿದೆ.
  4.  ಗಣಿಗಾರಿಕೆ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವುದು
  5.  ಭೂಗತ ಕಲ್ಲಿದ್ದಲು ಗಣಿಗಾರಿಕೆಗೆ ಉತ್ತೇಜನ

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು.

****



(Release ID: 1942089) Visitor Counter : 75


Read this release in: English , Urdu , Tamil , Telugu