ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಜ್ಯಸಭೆಯಲ್ಲಿಂದು ಉಪರಾಷ್ಟ್ರಪತಿಗಳಿಂದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನುಮದಿನದ ಶುಭ ಹಾರೈಕೆ

प्रविष्टि तिथि: 21 JUL 2023 5:11PM by PIB Bengaluru

ಇಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಸಭೆಯ ಸದಸ್ಯರಾದ ಶ್ರೀ.ಜೋಗಿನಿಪಲ್ಲಿ ಸಂತೋಷ್ ಕುಮಾರ್ ಅವರ ಜನುಮ ದಿನ. ಈ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾಧ್ಯಕ್ಷ ಶ್ರೀ ಜಗದೀಪ್ ಧನ್ ಕರ್ ಸಂಸತ್ತಿನಲ್ಲಿಂದು ನಾಯಕದ್ವಯರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ನಂತರ ಉಪರಾಷ್ಟ್ರಪತಿಗಳ ಕಾರ್ಯಾಲಯ ಟ್ವೀಟ್ ನಲ್ಲಿ ಹೀಗೆ ಹೇಳಿದೆ:

“ಮಾನ್ಯ ರಾಜ್ಯಸಭಾಧ್ಯಕ್ಷರಾದ, ಶ್ರೀ ಜಗದೀಪ್ ಧನ್ ಕರ್ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಸತ್ತಿನಲ್ಲಿಂದು ಜನುಮ ದಿನದ ಶುಭ ಕೋರಿದರು. ತಮ್ಮ ಸಂದೇಶದಲ್ಲಿ, ರಾಜ್ಯಸಭಾಧ್ಯಕ್ಷರು, ರಾಜ್ಯಸಭಾ ಸದಸ್ಯರಾದ ಶ್ರೀ ಜೋಗಿನಿಪಲ್ಲಿ ಸಂತೋಷ್ ಕುಮಾರ್ ಅವರಿಗೂ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ರಾಜ್ಯಸಭೆಯ ಪರವಾಗಿ ಸನ್ಮಾನ್ಯ ರಾಜ್ಯ ಸಭಾಧ್ಯಕ್ಷರು, ತಮ್ಮ ಸಂದೇಶದಲ್ಲಿ ಇಬ್ಬರು ಸದಸ್ಯರಿಗೂ ಆರೋಗ್ಯಕರ ಜೀವನ ಮತ್ತು ದೀರ್ಘಾಯಸ್ಸು ಕೋರಿದ್ದಾರೆ.

****


(रिलीज़ आईडी: 1941550) आगंतुक पटल : 151
इस विज्ञप्ति को इन भाषाओं में पढ़ें: English , Urdu , हिन्दी , Tamil