ಗಣಿ ಸಚಿವಾಲಯ
2023 ರ ಏಪ್ರಿಲ್ ನಲ್ಲಿ ಖನಿಜಗಳ ಉತ್ಪಾದನೆ 5.1 % ಕ್ಕೆ ಏರಿಕೆ
ಪ್ರಮುಖ 9 ಖನಿಜಗಳ ಉತ್ಪಾದನೆಯಲ್ಲಿ ಸಕಾರಾತ್ಮಕ ಬೆಳವಣಿಗೆ
Posted On:
21 JUL 2023 4:41PM by PIB Bengaluru
ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ವಲಯದ ಖನಿಜ ಉತ್ಪಾದನೆಯ ಸೂಚ್ಯಂಕ 2023 ರ ಏಪ್ರಿಲ್ ತಿಂಗಳಲ್ಲಿ (ಮೂಲ: 2011-12=100) 122.5 ರಷ್ಟಿದ್ದು, ಇದು 2022 ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ 5.1 % ರಷ್ಟು ಹೆಚ್ಚಾಗಿದೆ. ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ನ [ಐಬಿಎಂ] ತಾತ್ಕಾಲಿಕ ಅಂಕಿ ಅಂಶಗಳ ಪ್ರಕಾರ, 2022 – 23 ನೇ ಸಾಲಿನ ಏಪ್ರಿಲ್ ನಿಂದ ಏಪ್ರಿಲ್ ವರೆಗಿನ ಅವಧಿಯ ಸಂಚಿತ ಬೆಳವಣಿಗೆ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 5.8 ರಷ್ಟಿದೆ.
2023 ರ ಏಪ್ರಿಲ್ ನಲ್ಲಿ ಪ್ರಮುಖ ಖನಿಜಗಳ ಉತ್ಪಾದನೆ ಈ ರೀತಿ ಇದೆ; ಕಲ್ಲಿದ್ದಲು 731 ಲಕ್ಷ ಟನ್ ಗಳು, ಲಿಗ್ನೈಟ್ 32 ಲಕ್ಷ ಟನ್ ಗಳು, ನೈಸರ್ಗಿಕ ಅನಿಲ [ಬಳಕೆಯಾಗಿದೆ] 2671 ದಶಲಕ್ಷ ಕ್ಯೂಬಿಕ್ ಮೀಟರ್, ಪೆಟ್ರೋಲಿಯಂ [ಕಚ್ಚಾ] 24 ಲಕ್ಷ ಟನ್ ಗಳು, ಕಬ್ಬಿಣದ ಅದಿರು 247 ಲಕ್ಷ ಟನ್ ಗಳು, ಸುಣ್ಣದ ಕಲ್ಲು 386 ಲಕ್ಷ ಟನ್ ಗಳು ಮತ್ತು ಬಾಕ್ಸೈಟ್ 1562000, ಕ್ರೋಮೈಟ್ 273000, ಕಾಪರ್ ಕಾನ್ 9000, ಲೀಡ್ ಕಾನ್, 29000, ಮ್ಯಾಂಗನೀಸ್ ಅದಿರು 265000, ಝಿಂಕ್ ಕಾನ್ 0000, ಪ್ರೋಸ್ಪೈಟ್ 162000, ಮ್ಯಾಗ್ನಸೈಟ್ 10000 ಟನ್ ಗಳು, ಚಿನ್ನ 102 ಕೆ.ಜಿ ಮತ್ತು ವಜ್ರ 2 ಕ್ಯಾರೆಟ್ ನಷ್ಟು.
2022 ರ ಏಪ್ರಿಲ್ ಗೆ ಹೋಲಿಸಿದರೆ 2023 ರ ಏಪ್ರಿಲ್ ನಲ್ಲಿ ಪ್ರಮುಖ ಖನಿಜ ಉತ್ಪನ್ನಗಳ ಉತ್ಪಾದನೆಯಲ್ಲಿ ಏರಿಕೆಯಾಗಿದೆ. ಅವುಗಳೆಂದರೆ
ಪ್ರೋಸ್ಪರೈಟ್ (29.1%), ಮ್ಯಾಗ್ನಸೈಟ್ (27.7%), ಕಬ್ಬಿಣದ ಅದಿರು (13.1%), ಸುಣ್ಣದ ಕಲ್ಲು (12.7%), ತಾಮ್ರ (12%), ಕಾಪರ್ ಕಾನ್ .(10.6%), ಕಲ್ಲಿದ್ದಲು (8.8%), ಮ್ಯಾಂಗನೀಸ್ ಅದಿರು (6.9%) ಮತ್ತು ಝಿಂಕ್ ಕಾನ್(4.1%). ಇತರೆ ಪ್ರಮುಖ ಅದಿರುಗಳು ಸಕಾರಾತ್ಮಕ ಬೆಳವಣಿಗೆ ದಾಖಲಿಸಿವೆ. ಅವುಗಳೆಂದರೆ ಪೆಟ್ರೋಲಿಯಂ [ಕಚ್ಚಾ] (-3.6%), ನೈಸರ್ಗಿಕ ಅನಿಲ (ಯು) (-2.8%),ಚಿನ್ನ (-8.1%), ಲಿಗ್ನೈಟ್ (-21.2%), ಬಾಕ್ಸೈಟ್ (-24.7%) ಮತ್ತು ಕ್ರೋಮೈಟ್ (-40.1%).
****
(Release ID: 1941548)