ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಸಚಿವಾಲಯವು ಜಿಇಎಂ ಪೋರ್ಟಲ್ ಮೂಲಕ ಸಂಗ್ರಹಣೆಗಾಗಿ "ಅತ್ಯುತ್ತಮ ಎಂಗೇಜ್ ಮೆಂಟ್ " ಪ್ರಶಸ್ತಿಯನ್ನು ಪಡೆದುಕೊಂಡಿದೆ
Posted On:
20 JUL 2023 5:20PM by PIB Bengaluru
ಕಲ್ಲಿದ್ದಲು ಸಚಿವಾಲಯವು ಇ-ಪ್ರೊಕ್ಯೂರ್ಮೆಂಟ್ ಪರಿಸರ ವ್ಯವಸ್ಥೆಯಲ್ಲಿ ಹೊಸ ಮಾನದಂಡಗಳನ್ನು ಯಶಸ್ವಿಯಾಗಿ ಅಳವಡಿಸಿದೆ. ಮಧ್ಯಸ್ಥಗಾರರಿಗೆ ಉತ್ತಮ ವೇದಿಕೆಯನ್ನು ಸೃಷ್ಟಿಸುತ್ತದೆ ಮತ್ತು ನ್ಯಾಯಯುತ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. ಸಚಿವಾಲಯವು ಸತತವಾಗಿ ಎರಡು ಹಣಕಾಸು ವರ್ಷಗಳವರೆಗೆ ಜಿಇಎಂ ಪ್ಲಾಟ್ಫಾರ್ಮ್ನಲ್ಲಿ ಸ್ಥಿರವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
2023-24 ರ ಹಣಕಾಸು ವರ್ಷದಲ್ಲಿ, ಕಲ್ಲಿದ್ದಲು ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್ಯು) 21,500 ಕೋಟಿ ರೂ ಮೌಲ್ಯದ ಬಿಡ್ಗಳ ಮೂಲಕ ಜಿಇಎಂನಲ್ಲಿ ಅಚಲವಾದ ವಿಶ್ವಾಸವನ್ನು ಮೂಡಿಸಿವೆ. ಈ ಉತ್ಸಾಹಪೂರ್ಣ ಭಾಗವಹಿಸುವಿಕೆಯು ಡಿಜಿಟಲ್ ವಿಧಾನವನ್ನು ಉತ್ತೇಜಿಸಲು ಕಲ್ಲಿದ್ದಲು ಸಚಿವಾಲಯಬದ್ಧತೆಯನ್ನು ತೋರಿಸುತ್ತದೆ ಮತ್ತು ಎಲ್ಲಾ ಮಧ್ಯಸ್ಥಗಾರರ ಅನುಕೂಲಕ್ಕಾಗಿ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಪೂರ್ವಭಾವಿಯಾಗಿ ಉತ್ತಮ ರೀತಿಯಲ್ಲಿ ಪ್ರದರ್ಶಿಸಿದೆ. ಕಲ್ಲಿದ್ದಲು ಸಚಿವಾಲಯವು ಇತ್ತೀಚೆಗೆ ವಾಣಿಜ್ಯ ಸಚಿವಾಲಯದಿಂದ ಜಿಇಎಂ ಮೂಲಕ ಇ-ಪ್ರೊಕ್ಯೂರ್ಮೆಂಟ್ನಲ್ಲಿನ ಸಾಧನೆಗಳಿಗಾಗಿ ಪ್ರಶಸ್ತಿಯನ್ನು ನೀಡಿದೆ. ಕಲ್ಲಿದ್ದಲು ಸಚಿವಾಲಯವು "ಬೆಸ್ಟ್ ಎಂಗೇಜ್ಮೆಂಟ್" ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಗೆ "ರೈಸಿಂಗ್ ಸ್ಟಾರ್" ಮತ್ತು ಎನ್ಎಲ್ಸಿ ಇಂಡಿಯಾ ಲಿಮಿಟೆಡ್ಗೆ "ಟೈಮ್ಲಿ ಪೇಮೆಂಟ್ಸ್" ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.
ಇದಲ್ಲದೆ, 10 ರಿಂದ 16 ಜುಲೈ 2023 ರ ಅವಧಿಯಲ್ಲಿ GeM ಪೋರ್ಟಲ್ನಲ್ಲಿ ರೂ.5,372.60 ಕೋಟಿ ಮೌಲ್ಯದ ಹೆಚ್ಚಿನ ಮೌಲ್ಯದ ಟೆಂಡರ್ಗಳನ್ನು ಕರೆಯಲಾಗಿದೆ. 17ನೇ ಜುಲೈ 2023 ರಂತೆ, ಈ ಹಣಕಾಸು ವರ್ಷದಲ್ಲಿ GeM ಮೂಲಕ ಸಂಗ್ರಹಣೆಯು 3,909 ಕೋಟಿ ರೂ. ತಲುಪಿದೆ. ಸಚಿವಾಲಯವು ಕಳೆದ ವರ್ಷದ ಗುರಿಯನ್ನು ಮೀರಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 100 ದಿನಗಳ ಅವಧಿಯಲ್ಲೇ 4000 ಕೋಟಿ ರೂ. ಗಡಿ ದಾಟಿದೆ. ಇದು ಇತರ ಸಚಿವಾಲಯಗಳು ಮತ್ತು PSUಗಳಿಗೂ ಮಾದರಿಯಾಗಿದೆ.
ಜಿಇಎಂ ಪೋರ್ಟಲ್ ಮೂಲಕ ಇ-ಸಂಗ್ರಹಣೆಯಲ್ಲಿ ಕಲ್ಲಿದ್ದಲು ಸಚಿವಾಲಯದ ಪ್ರಗತಿಯು ಅಸಾಧಾರಣ ಫಲಿತಾಂಶಗಳನ್ನು ನೀಡಲು ಮತ್ತು ರಾಷ್ಟ್ರದ ಬೆಳವಣಿಗೆಗೆ ಚಾಲನೆ ನೀಡುವ ತನ್ನ ಬದ್ಧತೆಯನ್ನುತೋರಿಸಿದೆ. ಹೆಚ್ಚಿನ ಮೈಲಿಗಲ್ಲುಗಳನ್ನು ಸಾಧಿಸುವ ಮೂಲಕ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವ ಜಿಇಎಂ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಸಚಿವಾಲಯವು ಬದ್ಧವಾಗಿದೆ.
****
(Release ID: 1941135)
Visitor Counter : 121