ಇಂಧನ ಸಚಿವಾಲಯ

ಗೋವಾದಲ್ಲಿ ಜುಲೈ 19-20, 2023ರಂದು ಭಾರತದ ಜಿ20 ಅಧ್ಯಕ್ಷತೆ ಅಡಿಯಲ್ಲಿ 4 ನೇ ಪರಿವರ್ತನೆ ಕಾರ್ಯಗುಂಪು(ETWG) ಸಭೆ 

Posted On: 18 JUL 2023 2:19PM by PIB Bengaluru

ಭಾರತದ ಜಿ20 ಅಧ್ಯಕ್ಷತೆಯ ಅಡಿಯಲ್ಲಿ 4 ನೇ ಪರಿವರ್ತನೆ ಕಾರ್ಯಗುಂಪು(ETWG) ಸಭೆ ಗೋವಾದಲ್ಲಿ ನಾಳೆ ಅಂದರೆ ಜುಲೈ 19 ಮತ್ತು 20ರಂದು ಎರಡು ದಿನಗಳ ಕಾಲ ನಡೆಯಲಿದೆ. ಎರಡು ದಿನಗಳ ಸಭೆಯು ಜಿ20 ಸದಸ್ಯ ರಾಷ್ಟ್ರಗಳು, ವಿಶೇಷ ಆಹ್ವಾನಿತ ದೇಶಗಳು ಮತ್ತು ಹಲವಾರು ಅಂತಾರಾಷ್ಟ್ರೀಯ ಸಂಘಟನೆಗಳಿಂದ 100ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಒಟ್ಟುಗೂಡಿಸುತ್ತದೆ. 

4 ನೇ ಇಟಿಡಬ್ಲ್ಯುಜಿ ಸಭೆಯ ಅಧ್ಯಕ್ಷತೆಯನ್ನು ಭಾರತ ಸರ್ಕಾರದ ಇಂಧನ ಸಚಿವಾಲಯದ ಇಟಿಡಬ್ಲ್ಯೂಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಗಳಾಗಿರುವ ಪವನ್ ಅಗರ್ವಾಲ್ ಅವರು ವಹಿಸಲಿದ್ದಾರೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಭೂಪಿಂದರ್ ಸಿಂಗ್ ಭಲ್ಲಾ, ಗಣಿ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಮತ್ತು ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ ಅವರು ಸಭೆಯ ಭಾಗವಾಗಿ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಭಾರತದ ಜಿ20 ಅಧ್ಯಕ್ಷತೆಯಡಿಯಲ್ಲಿ ಆರು ಆದ್ಯತೆಯ ಕ್ಷೇತ್ರಗಳನ್ನು ವಿವರಿಸಲಾಗಿದೆ. ಈ ಆದ್ಯತೆಯ ಕ್ಷೇತ್ರಗಳು ಇಂಧನ ಪರಿವರ್ತನೆಯ ವಿವಿಧ ಅಂಶಗಳ ಮೇಲೆ ಭಾರತದ ಆದ್ಯತೆಯನ್ನು ಪ್ರತಿಬಿಂಬಿಸುತ್ತವೆ. ಸುಸ್ಥಿರ ಮತ್ತು ಶುದ್ಧ ಇಂಧನ ಅಭಿವೃದ್ಧಿಯ ಕಡೆಗೆ ಜಾಗತಿಕ ಸಹಕಾರವನ್ನು ನಿರ್ಮಿಸುತ್ತವೆ. ಆರು ಆದ್ಯತೆಯ ಕ್ಷೇತ್ರಗಳೆಂದರೆ (i) ತಂತ್ರಜ್ಞಾನದ ಅಂತರವನ್ನು ಪರಿಹರಿಸುವ ಮೂಲಕ ಶಕ್ತಿ ಪರಿವರ್ತನೆಗಳು (ii) ಶಕ್ತಿ ಪರಿವರ್ತನೆಗಳಿಗೆ ಕಡಿಮೆ-ವೆಚ್ಚದಲ್ಲಿ ಹಣಕಾಸು (iii) ಶಕ್ತಿ ಭದ್ರತೆ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳು (iv) ಶಕ್ತಿ ದಕ್ಷತೆ, ಕೈಗಾರಿಕಾ ಕಡಿಮೆ ಇಂಗಾಲದ ಪರಿವರ್ತನೆಗಳು ಮತ್ತು ಜವಾಬ್ದಾರಿಯುತ ಬಳಕೆ, (v ) ಭವಿಷ್ಯಕ್ಕಾಗಿ ಇಂಧನಗಳು (3F) ಮತ್ತು (vi) ಶುದ್ಧ ಇಂಧನಕ್ಕೆ ಸಾರ್ವತ್ರಿಕ ಲಭ್ಯತೆ ಮತ್ತು ಕೈಗೆಟಕುವ ಮತ್ತು ಅಂತರ್ಗತ ಇಂಧನ ಪರಿವರ್ತನೆಯ ಮಾರ್ಗಗಳಾಗಿವೆ. ಈ ಆದ್ಯತೆಯ ಕ್ಷೇತ್ರಗಳು ನಮ್ಮ ‘ಒಂದು ಭೂಮಿ’ ಪರಿಕಲ್ಪನೆಯತ್ತ ಗಮನಹರಿಸುತ್ತವೆ, ನಮ್ಮ ‘ಒಂದು ಕುಟುಂಬ’ದಲ್ಲಿ ಸಾಮರಸ್ಯವನ್ನು ಸೃಷ್ಟಿಸಿ ‘ಒಂದು ಭವಿಷ್ಯ’ದ ಭರವಸೆಯನ್ನು ನೀಡುತ್ತವೆ.

ಗೋವಾದಲ್ಲಿ ನಡೆದ 4ನೇ ಇಟಿಡಬ್ಲ್ಯುಜಿ ಸಭೆಯ ಚರ್ಚೆಗಳು ಬೆಂಗಳೂರು, ಗಾಂಧಿನಗರ ಮತ್ತು ಮುಂಬೈನಲ್ಲಿ ನಡೆಯುವ ಮೊದಲ ಮೂರು ಸಭೆಗಳಲ್ಲಿ ಮುಂದುವರಿಯಲಿದ್ದು, ಉತ್ತಮ ಅಭ್ಯಾಸಗಳು, ನೀತಿಗಳು ಮತ್ತು ಅಂತರ್ಗತ ಶಕ್ತಿಯ ಪರಿವರ್ತನೆಯನ್ನು ಬೆಂಬಲಿಸುವ ನವೀನ ವಿಧಾನಗಳನ್ನುಗುರುತಿಸಿ ಉತ್ತೇಜಿಸುತ್ತದೆ. 4 ನೇ ಇಟಿಡಬ್ಲ್ಬುಜಿ ಸಭೆಯ ಪ್ರಮುಖ ಅಂಶವೆಂದರೆ ಕರಡು ಸಚಿವಾಲಯ ಸಂವಹನದ ಕುರಿತು ವಿವರವಾದ ಚರ್ಚೆಗಳಾಗಿದ್ದು, ಇದು ಪ್ರಸ್ತುತ ಚರ್ಚೆಯ ಹಂತದಲ್ಲಿದ್ದು ಮತ್ತಷ್ಟು ಗಟ್ಟಿಯಾಗಲಿದೆ.

ಇಟಿಡಬ್ಲ್ಯುಜಿ ಸಭೆಯ ಬದಿಯಲ್ಲಿ ಅನೇಕ ಪೂರಕ ಕಾರ್ಯಕ್ರಮಗಳು ನಡೆಯಲಿವೆ. 'ಇ-ಮೊಬಿಲಿಟಿಯನ್ನು ವೇಗಗೊಳಿಸಲು ನೀತಿಗಳನ್ನು ಸಕ್ರಿಯಗೊಳಿಸುವುದು', 'ಸಾರ್ವತ್ರಿಕ ಇಂಧನ ಲಭ್ಯತೆಗೆ ಸೌರ ಶಕ್ತಿಯನ್ನು ಉತ್ತೇಜಿಸುವುದು', 'ಎಸ್ ಡಿಜಿ7 ಗುರಿಗಳನ್ನು ಸಾಧಿಸಲು ಡಿಆರ್ ಇ ಅಪ್ಲಿಕೇಶನ್‌ಗಳು', 'ಇಂಧನ ದಕ್ಷತೆಯಲ್ಲಿ ಒಟ್ಟುಗೂಡಿಸುವಿಕೆಯ ಮೂಲಕ ಜ್ಞಾನ ಮತ್ತು ಪರಿಹಾರಗಳು' ಮತ್ತು 'ಜಾಗತಿಕ ದಕ್ಷಿಣದಲ್ಲಿ ಇಂಧನ ಪ್ರಗತಿ - ಎಲ್ಲರಿಗೂ ಕೈಗೆಟಕುವ ದರದಲ್ಲಿ ಸುಲಭವಾಗಿ ಸಿಗುವ ಶುದ್ಧ ಇಂಧನ '' ಬಗ್ಗೆ ಚರ್ಚೆ, ಸಂವಾದ ನಡೆಯಲಿವೆ.

ಶುದ್ಧ ಇಂಧನ ಸಚಿವಾಲಯ ಸಭೆ-CEM ನ 14 ನೇ ಆವೃತ್ತಿಯನ್ನು ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (BEE) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಗೋವಾದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಏಕಕಾಲದಲ್ಲಿ ಆಯೋಜಿಸುತ್ತಿದೆ. ಸಿಇಎಂ14/ಎಂಐ-8 ನ ವಿಷಯವೆಂದರೆ 'ಒಟ್ಟಾಗಿ ಶುದ್ಧ ಇಂಧನ ಮುನ್ನಡೆಸುವುದು' ಆಗಿದೆ. 

ಶುದ್ಧ ಇಂಧನ ಸಚಿವಾಲಯ ಸಭೆ-CEM14/MI-8 ನಲ್ಲಿ, ಶುದ್ಧ ಇಂಧನ ವಿಷಯಗಳ ವ್ಯಾಪ್ತಿಯನ್ನು ಕೇಂದ್ರೀಕರಿಸುವ 80 ಕ್ಕೂ ಹೆಚ್ಚು ಪೂರಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಪಂಚದಾದ್ಯಂತದ ಉನ್ನತ ವ್ಯಾಪಾರ ಮತ್ತು ಇಂಧನ ಕ್ಷೇತ್ರಗಳ ನಾಯಕರು ಈ ಸಭೆಗಳ ಭಾಗವಾಗಿ ಪಾಲ್ಗೊಳ್ಳಲಿದ್ದಾರೆ. ಸಿಇಎಂ14/MI-8 ಅಡಿಯಲ್ಲಿ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಪ್ರದರ್ಶನವನ್ನು ಗೋವಾದ ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ, ಇದು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಾದ ಎಲೆಕ್ಟ್ರಿಕ್ ವೆಹಿಕಲ್ಸ್, ಹೈಡ್ರೋಜನ್ ಮತ್ತು ಇತರ ಶುದ್ಧ ತಂತ್ರಜ್ಞಾನಗಳನ್ನು ಪ್ರಪಂಚದಾದ್ಯಂತ ಒದಗಿಸುತ್ತದೆ. ಇಲ್ಲಿಗೆ ಬರುವವರಿಗೆ ಒಂದು ಅನನ್ಯ ಅನುಭವ ನೀಡಲಿದೆ.

4 ನೇ ಇಟಿಡಬ್ಲ್ಯುಜಿ ಸಭೆಯು ಜುಲೈ 20ಕ್ಕೆ ಮುಕ್ತಾಯಗೊಳ್ಳುತ್ತದೆ. ಇಟಿಡಬ್ಲ್ಬುಜಿ ಸಭೆಗಳ ಮುಕ್ತಾಯ ಸಭೆಯು ಜುಲೈ 22 ರಂದು ಗೋವಾದಲ್ಲಿ ನಡೆಯಲಿದೆ. ಸಭೆಯಲ್ಲಿ ಸಚಿವರು, ಜಿ20 ಮತ್ತು ಇತರ ಆಹ್ವಾನಿತ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಆರ್.ಕೆ.ಸಿಂಗ್ ಅವರು ಜಿ20 ಇಂಧನ ಸಚಿವರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಭಾರತದ ಜಿ20 ಅಧ್ಯಕ್ಷತೆಯು ಶುದ್ಧ ಇಂಧನ ಪರಿವರ್ತನೆಯಲ್ಲಿ ಜಾಗತಿಕ ಸಹಕಾರವನ್ನು ಬಲಪಡಿಸಲು ಬದ್ಧವಾಗಿದೆ.

*****



(Release ID: 1940496) Visitor Counter : 116