ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಅಟಲ್ ವಯೋ ಅಭ್ಯುದಯ ಯೋಜನೆ: ಗೌರವಯುತ ಜೀವನಕ್ಕಾಗಿ ಹಿರಿಯರ ಸಬಲೀಕರಣ

Posted On: 12 JUL 2023 5:44PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತನ್ನ ಎಲ್ಲಾ ನಾಗರಿಕರನ್ನು  ಒಳಗೊಳ್ಳುವ ಮತ್ತು ಸಮಾನ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕಳೆದ 9 ವರ್ಷಗಳಲ್ಲಿ, ವಿದ್ಯಾರ್ಥಿವೇತನಗಳು, ಹಿರಿಯ ನಾಗರಿಕರು, ಸಫಾಯಿ ಕರ್ಮಚಾರಿಗಳು ಮತ್ತು ತೃತೀಯ ಲಿಂಗಿಗಳ ಮೂಲಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ನಿರ್ಲಕ್ಷಿತ ವರ್ಗಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಸಚಿವಾಲಯವು ಹಲವಾರು ಯೋಜನೆಗಳು ಮತ್ತು ಉಪಕ್ರಮಗಳನ್ನು ಪ್ರಾರಂಭಿಸಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪರಿಚಯಿಸಿದ ಅಟಲ್ ವಯೋ ಅಭ್ಯುದಯ ಯೋಜನೆ (AVYAY), ಭಾರತದಲ್ಲಿ ಹಿರಿಯ ನಾಗರಿಕರನ್ನು ಸಬಲೀಕರಣಗೊಳಿಸುವ ಉದಾತ್ರ ಗುರಿ ಹೊಂದಿರುವ ಸಮಗ್ರ ಉಪಕ್ರಮವಾಗಿದೆ. ಈ ಯೋಜನೆಯು ವೃದ್ಧರು(ವಯಸ್ಸಾದವರು) ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸುತ್ತದೆ. ಜತೆಗೆ, ಅವರ ಯೋಗಕ್ಷೇಮ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಚಿತಪಡಿಸಲು ಪ್ರಯತ್ನಿಸುತ್ತದೆ. ಸಮಾಜಕ್ಕೆ ಹಿರಿಯರ ಅಮೂಲ್ಯ ಕೊಡುಗೆಗಳನ್ನು ಗುರುತಿಸುವ ಮೂಲಕ, ಸರ್ಕಾರವು ಅವರನ್ನು ಸಬಲೀಕರಣಗೊಳಿಸಲು ಮತ್ತು ಉನ್ನತೀಕರಿಸುವ ಗುರಿ ಹೊಂದಿದೆ, ಜೀವನದ ಎಲ್ಲಾ ವಿಚಾರಗಳಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ ಮತ್ತು ಸೇರ್ಪಡೆಯನ್ನು ಖಚಿತಪಡಿಸುತ್ತದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಹಿರಿಯ ನಾಗರಿಕರ ಕಲ್ಯಾಣದ ನೋಡಲ್ ಇಲಾಖೆಯಾಗಿದ್ದು, ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹಿರಿಯ ನಾಗರಿಕರಿಗಾಗಿ ರಾಷ್ಟ್ರೀಯ ಕ್ರಿಯಾಯೋಜನೆಯನ್ನು ಪರಿಷ್ಕರಿಸಲಾಗಿದೆ, ಇದನ್ನು ಅಟಲ್ ವಯೋ ಅಭ್ಯುದಯ ಯೋಜನೆ (AVYAY) ಎಂದು ಮರುನಾಮಕರಣ ಮಾಡಿ, 2021 ಏಪ್ರಿಲ್ ನಿಂದ ಇದು ಜಾರಿಗೆ ಬಂದಿದೆ.

ಛತ್ರಿ ಯೋಜನೆಯಡಿ, ಅಟಲ್ ವಯೋ ಅಭ್ಯುದಯ ಯೋಜನೆ (AVYAY), ಹಿರಿಯ ನಾಗರಿಕರ ಸಮಗ್ರ ಕಾರ್ಯಕ್ರಮ (IPSrC) ಹಿರಿಯ ನಾಗರಿಕರ ಜೀವನದ ಗುಣಮಟ್ಟ ಸುಧಾರಿಸಲು ಹಿರಿಯ ನಾಗರಿಕರ ಮನೆಗಳು,ನಿರಂತರ ಆರೈಕೆ ಕೇಂದ್ರಗಳ ನಿರ್ವಹಣೆ ಮತ್ತು ನಿಭಾವಣೆಗಾಗಿ ಅರ್ಹ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡುತ್ತದೆ. ವಿಶೇಷವಾಗಿ ನಿರ್ಗತಿಕ ಹಿರಿಯ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ, ಮನರಂಜನಾ ಅವಕಾಶಗಳು ಮತ್ತು ಉತ್ಪಾದಕ ಮತ್ತು ಸಕ್ರಿಯ ವಯಸ್ಸಾದವರನ್ನು ಪ್ರೋತ್ಸಾಹಿಸುವ ಮೂಲಕ ಎಲ್ಲಾ ಸಹಾಯ ಒದಗಿಸುತ್ತದೆ.

IPSrC ಅಡಿ, ವಿವಿಧ ಚಟುವಟಿಕೆಗಳ ಮೂಲಕ, ಪ್ರಸ್ತುತ ಒಟ್ಟು 552 ಹಿರಿಯ ನಾಗರಿಕರ ಮನೆಗಳು, 14 ನಿರಂತರ ಆರೈಕೆ ಕೇಂದ್ರಗಳು, 19 ಮೊಬೈಲ್ ಮೆಡಿಕೇರ್ ಘಟಕಗಳು ಮತ್ತು 5 ಭೌತಚಿಕಿತ್ಸೆಯ ಚಿಕಿತ್ಸಾಲಯಗಳಿಗೆ ದೇಶಾದ್ಯಂತ ವಿವಿಧ ಎನ್ ಜಿಒಗಳು ಸಹಾಯ ಮಾಡುತ್ತಿವೆ ಮತ್ತು ನಿರ್ವಹಿಸುತ್ತಿವೆ. ಸುಮಾರು 1.5 ಲಕ್ಷ ಫಲಾನುಭವಿಗಳು ಹಿರಿಯ ನಾಗರಿಕರ ಮನೆಗಳಲ್ಲಿ ಉಳಿದುಕೊಂಡಿದ್ದಾರೆ. ದೇಶಾದ್ಯಂತ 361 ಜಿಲ್ಲೆಗಳು ಇದರ ವ್ಯಾಪ್ತಿಗೆ ಒಳಪಟ್ಟಿವೆ. ಕಳೆದ 3 ಆರ್ಥಿಕ ವರ್ಷಗಳಲ್ಲಿ ಒಟ್ಟು 288.08 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಫಲಾನುಭವಿಗಳ ಸಂಖ್ಯೆ 3,63,570 ಇದೆ.

 

AVYAY ಯೋಜನೆಯಡಿ ಇರುವ ಮತ್ತೊಂದು ವಿಭಾಗವೆಂದರೆ, ರಾಷ್ಟ್ರೀಯ ವಯೋಶ್ರೀ ಯೋಜನೆ (RVY). ವಯಸ್ಸಿಗೆ ಸಂಬಂಧಿಸಿದ ಯಾವುದೇ ಅಂಗವೈಕಲ್, ದೌರ್ಬಲ್ಯದಿಂದ ಬಳಲುತ್ತಿರುವ ಅರ್ಹ ಹಿರಿಯ ನಾಗರಿಕರಿಗೆ ಸಹಾಯ ಮಾಡುವ ಜೀವನ ಸಾಧನಗಳೊಂದಿಗೆ ಅವರ ದೈಹಿಕ ಕಾರ್ಯಗಳಲ್ಲಿ ಸಾಮಾನ್ಯ ಸ್ಥಿತಿಗೆ ಮರಳಲು, ಅಂಗವೈಕಲ್ಯ ಅಥವಾ ದೌರ್ಬಲ್ಯಗಳನ್ನು ನಿವಾರಿಸುತ್ತದೆ. ಅದರಲ್ಲೂ ಸ್ಪಷ್ಟವಾಗಿ ಕಡಿಮೆ ದೃಷ್ಟಿ, ಶ್ರವಣ ದೋಷ, ಹಲ್ಲುಗಳ ನಷ್ಟ ಮತ್ತು ಲೊಕೊ-ಮೋಟಾರ್ ಅಸಾಮರ್ಥ್ಯ ಇತ್ಯಾದಿ. ಫಲಾನುಭವಿಗಳಿಗೆ ಆರ್ಥಿಕ ಮಾನದಂಡಗಳೆಂದರೆ, ಹಿರಿಯ ನಾಗರಿಕರು ‘ಬಡತನ ರೇಖೆಗಿಂತ ಕೆಳಗಿರುವ’ (ಬಿಪಿಎಸ್) ವರ್ಗಕ್ಕೆ ಸೇರಿದವರು ಅಥವಾ ಅವರ, ಅವಳ ತಿಂಗಳ ವರಮಾನ 15,000 ರೂ. (ರೂಪಾಯಿ ಹದಿನೈದು ಸಾವಿರ) ಒಳಗೆ ಇರಬೇಕು..

ರಾಷ್ಟ್ರೀಯ ವಯೋಶ್ರೀ ಯೋಜನೆ (ಆರ್‌ವಿವೈ) ಅಡಿ, ವಿವಿಧ ಅನುಷ್ಠಾನ ಏಜೆನ್ಸಿಗಳ ಮೂಲಕ ಇಲ್ಲಿಯವರೆಗೆ ಒಟ್ಟು 269 ಶಿಬಿರಗಳನ್ನು ನಡೆಸಲಾಗಿದೆ. ಈ ಶಿಬಿರಗಳ ಫಲಾನುಭವಿಗಳ ಸಂಖ್ಯೆ 4 ಲಕ್ಷಕ್ಕೂ ಹೆಚ್ಚು. ಈ ಯೋಜನೆಯಡಿ ಒಟ್ಟು ಕಳೆದ 3 ಆರ್ಥಿಕ ವರ್ಷಗಳಲ್ಲಿ 140.34 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 130 ಶಿಬಿರಗಳಲ್ಲಿ 1,57,514 ಫಲಾನುಭವಿಗಳಿಗೆ ಒಟ್ಟು 8,48,841 ಸಾಧನಗಳನ್ನು ವಿತರಿಸಲಾಗಿದೆ.

 

ಹಿರಿಯ ನಾಗರಿಕರಿಗಾಗಿ ಎಲ್ಡರ್‌ಲೈನ್ ಎಂಬ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ ಇದೆ. ಹಿರಿಯ ನಾಗರಿಕರ ಜೀವನ ಗುಣಮಟ್ಟ ಸುಧಾರಿಸುವ ಸಲುವಾಗಿ ನಿಂದನೆ ಮತ್ತು ರಕ್ಷಣೆಯ ಪ್ರಕರಣಗಳಲ್ಲಿ ಉಚಿತ ಮಾಹಿತಿ, ಮಾರ್ಗದರ್ಶನ, ಭಾವನಾತ್ಮಕ ಬೆಂಬಲ ಮತ್ತು ಕ್ಷೇತ್ರ ಮಧ್ಯಸ್ಥಿಕೆ ಒದಗಿಸಲು ಟೋಲ್-ಫ್ರೀ ಸಂಖ್ಯೆ. 14567 ಅನ್ನು 2021  ಅಕ್ಟೋಬರ್  1ರಂದು ಪ್ರಾರಂಭಿಸಲಾಗಿದೆ. ಎಲ್ಡರ್‌ಲೈನ್ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕಾರ್ಯನಿ ರ್ವಹಿಸುತ್ತದೆ. ವಾರದ ಎಲ್ಲಾ 7 ದಿನಗಳು 31 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಇವು ಸಕ್ರಿಯವಾಗಿದೆ. ಎಲ್ಡರ್‌ಲೈನ್ ಯೋಜನೆಗೆ ಕಳೆದ 3 ಹಣಕಾಸು ವರ್ಷಗಳಲ್ಲಿ ಒಟ್ಟು 82.68 ಕೋಟಿ ರೂ. ಒದಗಿಸಲಾಗಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪ್ರಾರಂಭಿಸಿರುವ ಅಟಲ್ ವಯೋ ಅಭ್ಯುದಯ ಯೋಜನೆಯು ಭಾರತದ ಹಿರಿಯ ನಾಗರಿಕರ ಯೋಗಕ್ಷೇಮ ಮತ್ತು ಸಬಲೀಕರಣಕ್ಕೆ ಸರ್ಕಾರ ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ. ಅವರ ಆರ್ಥಿಕ, ಆರೋಗ್ಯ ಮತ್ತು ಸಾಮಾಜಿಕ ಅಗತ್ಯಗಳನ್ನು ಪರಿಹರಿಸುವ ಮೂಲಕ, ಯೋಜನೆಯು ವಯಸ್ಸಾದವರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದೆ, ಅವರ ಸಕ್ರಿಯ ಭಾಗವಹಿಸುವಿಕೆ ಮತ್ತು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯನ್ನು ಖಚಿತಪಡಿಸುತ್ತದೆ. ಈ ಉಪಕ್ರಮದ ಮೂಲಕ, ಹಿರಿಯ ನಾಗರಿಕರು ರಾಷ್ಟ್ರಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಳನ್ನು ಗುರುತಿಸುವ ಮೂಲಕ ಘನತೆ, ಗೌರವ ಮತ್ತು ಪರಿಪೂರ್ಣ ಜೀವನ ನಡೆಸುವ ವಾತಾವರಣ ಅಥವಾ ಪರಿಸರ ಸೃಷ್ಟಿಸಲು ಸರ್ಕಾರ ಶ್ರಮಿಸುತ್ತಿದೆ.

****

 

 

 



(Release ID: 1939135) Visitor Counter : 112


Read this release in: Telugu , English , Urdu , Hindi , Tamil