ಸಹಕಾರ ಸಚಿವಾಲಯ
azadi ka amrit mahotsav

ನವದೆಹಲಿಯ ಪ್ರಗತಿ ಮೈದಾನದಲ್ಲಿಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನಬಾರ್ಡ್ 42ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಷಣ


ಬೃಹತ್ ಪ್ರಮಾಣದಲ್ಲಿ ಗ್ರಾಮೀಣ ಜನಸಂಖ್ಯೆ ಹೊಂದಿರುವ ಭಾರತದಂತಹ ದೇಶವನ್ನು ನಬಾರ್ಡ್ ಇಲ್ಲದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ, ಇದು ಕಳೆದ 4 ದಶಕಗಳಿಂದಲೂ ಗ್ರಾಮೀಣ ಆರ್ಥಿಕತೆ, ಮೂಲಸೌಕರ್ಯ, ಕೃಷಿ, ಸಹಕಾರ ಸಂಸ್ಥೆಗಳು ಮತ್ತು ಸ್ವಸಹಾಯ ಗುಂಪುಗಳಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಗ್ರಾಮಗಳು ಸ್ವಾವಲಂಬಿಯಾಗುತ್ತಿವೆ; ಗ್ರಾಮೀಣ ಆರ್ಥಿಕತೆಯ ಆತ್ಮವೆಂದು ಪರಿಗಣಿಸಲ್ಪಟ್ಟಿರುವ ನಮ್ಮ ಕೃಷಿ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ ಕಂಡುಬರುತ್ತಿರುವ ಬದಲಾವಣೆಗಳನ್ನು ಹಳ್ಳಿಗಳಿಗೆ ಕೊಂಡೊಯ್ಯುವ ಸಂಕಲ್ಪ ಈಡೇರಿಸುವಲ್ಲಿ ನಬಾರ್ಡ್ ಮತ್ತು ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ

ದೇಶದ ಬಡತನ ನಿರ್ಮೂಲನೆ ಮತ್ತು ಕೃಷಿ ಅಭಿವೃದ್ಧಿಯ ಇತಿಹಾಸ ಬರೆಯುವಾಗ  ಮೋದಿ ಸರ್ಕಾರದ 9 ವರ್ಷಗಳು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತವೆ.

ಕುಸಿಯುತ್ತಿರುವ ಸಹಕಾರಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಮತ್ತು ದೇಶದ ಕೋಟ್ಯಂತರ ಜನರ ಜೀವನವನ್ನು ಸಮೃದ್ಧಗೊಳಿಸುವ ವ್ಯವಸ್ಥೆ ರೂಪಿಸಲು ಪ್ರಧಾನಿ ಮೋದಿ ಅವರು ಸಹಕಾರ ಸಚಿವಾಲಯ ಸ್ಥಾಪಿಸಿದರು.

ನಬಾರ್ಡ್ ಕೇವಲ ಬ್ಯಾಂಕ್ ಅಲ್ಲ, ಆದರೆ ದೇಶದ ಗ್ರಾಮೀಣ ವ್ಯವಸ್ಥೆ ಬಲಪಡಿಸುವ ಉದ್ದೇಶವಾಗಿದೆ, ನಬಾರ್ಡ್ ಗುರಿಗಳನ್ನು ಹಣಕಾಸಿನ ಮಾನದಂಡಗಳ ಮೇಲೆ ನಿಗದಿಪಡಿಸಬೇಕು, ಇದರೊಂದಿಗೆ ಮಾನವ ಮತ್ತು ಗ್ರಾಮೀಣ ಅಭಿವೃದ್ಧಿಯ ಗುರಿಗಳನ್ನು ಸಹ ನಿಗದಿಪಡಿಸಬೇಕು.

ಸ್ವ-ಸಹಾಯ ಗುಂಪುಗಳು ತಮ್ಮ ಕಾಲ ಮೇಲೆ ನಿಲ್ಲಲು ಸಹಾಯ ಮಾಡುವಲ್ಲಿ ನಬಾರ್ಡ್ ದೊಡ್ಡ ಪಾತ್ರ ವಹಿಸಿದೆ, ಇದು ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯನ್ನು ವಿಶೇಷವಾಗಿ ತಾಯಂದಿರು ಮತ್ತು ಸಹೋದರಿಯರು ಸ್ವಾವಲಂಬಿಗಳಾಗಲು, ಮತ್ತು ಸಮಾಜದಲ್ಲಿ ಗೌರವದಿಂದ ನೆಲೆಯೂರಲು ಅನುವು ಮಾಡಿಕೊಡುತ್ತಿದೆ.

ಕಳೆದ 42 ವರ್ಷಗಳಲ್ಲಿ ನಬಾರ್ಡ್ ಗ್ರಾಮೀಣ ಆರ್ಥಿಕತೆಗೆ 20 ಲಕ್ಷ ಕೋಟಿ ರೂ. ಮರುಹಣಕಾಸು ನೀಡಿದ್ದು, ಕಳೆದ 42 ವರ್ಷಗಳಲ್ಲಿ ಶೇಕಡ 14ರ ಬೆಳವಣಿಗೆ ದರದಲ್ಲಿ ಇದು ಸಾಧನೆ ಮಾಡಿದೆ, ದೇಶದ ಗ್ರಾಮೀಣ ಆರ್ಥಿಕತೆ ಮತ್ತು ಅದರ ಅಭಿವೃದ್ಧಿಯನ್ನು ಊಹಿಸಲು ಸಾಧ್ಯವಿಲ್ಲ.

ನಬಾರ್ಡ್ ದೇಶದಲ್ಲಿ ಸುಮಾರು 1 ಕೋಟಿ ಸ್ವಸಹಾಯ ಗುಂಪುಗಳಿಗೆ ಹಣಕಾಸು ಒದಗಿಸಿದೆ, ಒಂದು ರೀತಿಯಲ್ಲಿ ಇದು ವಿಶ್ವದ ಅತಿ ದೊಡ್ಡ ಕಿರು ಹಣಕಾಸು ಕಾರ್ಯಕ್ರಮವಾಗಿದೆ

Posted On: 12 JUL 2023 9:00PM by PIB Bengaluru

ನವದೆಹಲಿಯ ಪ್ರಗತಿ ಮೈದಾನದಲ್ಲಿಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನಬಾರ್ಡ್ 42 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಅಮಿತ್ ಶಾ ಅವರು ಹಾಲು ಸಂಘಗಳಿಗೆ ಮೈಕ್ರೊ-ಎಟಿಎಂ ಕಾರ್ಡ್‌ಗಳು ಮತ್ತು ಈ ಸಂಘಗಳ ಸದಸ್ಯರಿಗೆ ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಿದರು.

https://static.pib.gov.in/WriteReadData/userfiles/image/image002FPMR.jpg

ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಗವತ್ ಕಿಶನರಾವ್ ಕರಾಡ್, ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಜ್ಞಾನೇಶ್ ಕುಮಾರ್ ಮತ್ತು ನಬಾರ್ಡ್ ಅಧ್ಯಕ್ಷ ಶ್ರೀ ಕೆ.ವಿ. ಶಾಜಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಂತರ ಮಾತನಾಡಿದ ಸಚಿವ ಶ್ರೀ ಅಮಿತ್ ಶಾ, ಸುಮಾರು 65% ಗ್ರಾಮೀಣ ಜನಸಂಖ್ಯೆ ಹೊಂದಿರುವ ಭಾರತವನ್ನು ನಬಾರ್ಡ್ ಇಲ್ಲದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಬಾರ್ಡ್ ಕಳೆದ 4 ದಶಕಗಳಿಂದ ಈ ದೇಶದ ಗ್ರಾಮೀಣ ಆರ್ಥಿಕತೆ, ಮೂಲಸೌಕರ್ಯ, ಕೃಷಿ, ಸಹಕಾರ ಸಂಸ್ಥೆಗಳು ಮತ್ತು ಸ್ವಸಹಾಯ ಗುಂಪುಗಳ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತದ ನಗರಗಳು ಮಾತ್ರವಲ್ಲ, ಹಳ್ಳಿಗಳು ಸಹ ಇಂದು ಸ್ವಾವಲಂಬಿಯಾಗುತ್ತಿವೆ.  ಇದರೊಂದಿಗೆ ಗ್ರಾಮೀಣ ಆರ್ಥಿಕತೆಯ ಆತ್ಮವೆಂದೇ ಬಿಂಬಿತವಾಗಿರುವ ನಮ್ಮ ಕೃಷಿ ಆರ್ಥಿಕತೆಯೂ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಕೃಷಿ ಆರ್ಥಿಕತೆಯಲ್ಲಿ ಸಹಕಾರಿ ಕ್ಷೇತ್ರವನ್ನು ಬೇರ್ಪಡಿಸಲಾಗದ ರೀತಿಯಲ್ಲಿ ಜೋಡಿಸಲಾಗಿದೆ. ಗ್ರಾಮದ ಪ್ರತಿಯೊಬ್ಬರು ಅದರಲ್ಲೂ ತಾಯಂದಿರು ಮತ್ತು ಸಹೋದರಿಯರು ಸ್ವಾವಲಂಬಿಗಳಾಗಲು ಮತ್ತು ಗೌರವದಿಂದ ಸಮಾಜದಲ್ಲಿ ನೆಲೆಯೂರಲು ಸ್ವಸಹಾಯ ಸಂಘಗಳು ತಮ್ಮ ಕಾಲ ಮೇಲೆ ನಿಲ್ಲಲು ನಬಾರ್ಡ್ ದೊಡ್ಡ ಪಾತ್ರ ನಿರ್ವಹಿಸುತ್ತಿದೆ ಎಂದು ಹೇಳಿದರು.

https://static.pib.gov.in/WriteReadData/userfiles/image/image003ZQVW.jpg

ಕಳೆದ 42 ವರ್ಷಗಳಲ್ಲಿ ನಬಾರ್ಡ್ ಅನೇಕ ಕ್ಷೇತ್ರಗಳಲ್ಲಿ ಉಪಕ್ರಮಗಳನ್ನು ಕೈಗೊಂಡಿದೆ, ವಿಶೇಷವಾಗಿ ನಬಾರ್ಡ್ ಮರುಹಣಕಾಸು ಮತ್ತು ಬಂಡವಾಳ ಕ್ರೋಡೀಕರಣ ಕೆಲಸವನ್ನು ಉತ್ತಮವಾಗಿ ಮುನ್ನಡೆಸಿದೆ. ಬಂಡವಾಳ ಕ್ರೋಡೀಕರಣಕ್ಕಾಗಿ  ಈವರೆಗೆ ನಬಾರ್ಡ್ ಮೂಲಕ ಗ್ರಾಮೀಣ ಆರ್ಥಿಕತೆಗೆ ಸುಮಾರು 8 ಲಕ್ಷ ಕೋಟಿ ರೂ. ಹೋಗಿದೆ. ವಿವಿಧ ಯೋಜನೆಗಳ ಅಡಿ, ಕೃಷಿ ಮತ್ತು ರೈತರ ಅಗತ್ಯಗಳನ್ನು ಪೂರೈಸಲು ಮತ್ತು ಕೃಷಿ ಉತ್ಪಾದನೆ ಬಲಪಡಿಸಲು ಮತ್ತು ವೈವಿಧ್ಯಗೊಳಿಸಲು ನಬಾರ್ಡ್ ಗ್ರಾಮೀಣ ಕೃಷಿ ಆರ್ಥಿಕತೆಗೆ 12 ಲಕ್ಷ ಕೋಟಿ ರೂ. ಒದಗಿಸಿದೆ. ಕಳೆದ 42 ವರ್ಷಗಳಲ್ಲಿ ನಬಾರ್ಡ್ ಗ್ರಾಮೀಣ ಆರ್ಥಿಕತೆಯಲ್ಲಿ 14% ಸರಾಸರಿ ಬೆಳವಣಿಗೆಯೊಂದಿಗೆ 20 ಲಕ್ಷ ಕೋಟಿ ರೂಪಾಯಿ ಮರುಹಣಕಾಸು ಒದಗಿಸಿದೆ. ಈ ಸಾಧನೆಯಿಲ್ಲದೆ ದೇಶದ ಗ್ರಾಮೀಣ ಆರ್ಥಿಕತೆ ಮತ್ತು ಅದರ ಅಭಿವೃದ್ಧಿಯನ್ನು ಊಹಿಸಲು ಸಾಧ್ಯವಿಲ್ಲ. ನಾವು ಅಂತಹ ಗುರಿಗಳನ್ನು ಹೊಂದಿಸಬೇಕು, ಅದು ಜನರನ್ನು ಕೆಲಸ ಮಾಡಲು ಪ್ರೋತ್ಸಾಹಿಸುತ್ತದೆ ಮತ್ತು ಮುಂದೆ ಪ್ರಗತಿಗೆ ಇತರರನ್ನು ಸಹ ಪ್ರೇರೇಪಿಸುತ್ತದೆ ಎಂದು ಶ್ರೀ ಶ್ಹಾ ಹೇಳಿದರು.

1982ರಲ್ಲಿ ಕೃಷಿ ಹಣಕಾಸುಗಾಗಿ 896 ಕೋಟಿ ರೂ. ಅಲ್ಪಾವಧಿ ಸಾಲ ಒದಗಿಸಲಾಗಿತ್ತು, ಅದನ್ನು ನಬಾರ್ಡ್ ಇಂದು 1.58 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ. 1982ರಲ್ಲಿ ದೀರ್ಘಾವಧಿ ಕೃಷಿ ಸಾಲ ಕೇವಲ 2,300 ಕೋಟಿ ರೂ. ಇತ್ತು, ಅದೀಗ ನಬಾರ್ಡ್ ನಿಂದ 1 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದರು.

https://static.pib.gov.in/WriteReadData/userfiles/image/image004FQHK.jpg

ನಾವು ಆಜಾದಿ ಕಾ ಅಮೃತ ಮಹೋತ್ಸವದ ವರ್ಷದಲ್ಲಿದ್ದೇವೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಮುಂದೆ ಗುರಿ ಇಟ್ಟುಕೊಂಡಿದ್ದಾರೆ. ಸ್ವಾತಂತ್ರ್ಯದ 100 ವರ್ಷಗಳು ಪೂರ್ಣಗೊಂಡ ನಂತರ ಈ ಕ್ಷೇತ್ರದ ಪ್ರತಿಯೊಂದು ವಲಯದಲ್ಲೂ ಭಾರತ ಎಲ್ಲಿದೆ ಎಂಬ ಸಂಕಲ್ಪ ತೊಡುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ. ದೇಶದ ಗ್ರಾಮೀಣ ಆರ್ಥಿಕತೆ, ಕೃಷಿ, ಸಹಕಾರ ವ್ಯವಸ್ಥೆಯ ಹಣಕಾಸು ಮತ್ತು ಸ್ವಸಹಾಯ ಗುಂಪುಗಳ ವಿಸ್ತರಣೆ ಮತ್ತು ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿಯ ಗುರಿಯನ್ನು ನಬಾರ್ಡ್ ಹೊರತುಪಡಿಸಿ ಯಾರೂ ಸಾಧಿಸಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು.

ದೇಶದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ, 5 ಲಕ್ಷ ಕೋಟಿ ರೂ. ಮಂಜೂರಾಗಿದೆ. ನಬಾರ್ಡ್ ಮೂಲಕ 41 ದಶಲಕ್ಷ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿದೆ, ಇದು ಒಟ್ಟು ನೀರಾವರಿ ಭೂಮಿಯ ಶೇಕಡ 60ರಷ್ಟಿದೆ. ದೇಶದ ಗ್ರಾಮೀಣ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವಲ್ಲಿ ನಬಾರ್ಡ್ ಸಾಕಷ್ಟು ಕೊಡುಗೆ ನೀಡಿದೆ. ನಬಾರ್ಡ್ ಆರ್ಥಿಕ ನೆರವಿನಿಂದ ದೇಶದಲ್ಲಿ 13 ದಶಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳನ್ನು ಸ್ಥಾಪಿಸಲಾಗಿದೆ. ನಬಾರ್ಡ್ ದೇಶದಲ್ಲಿ ಸುಮಾರು 1 ಕೋಟಿ ಸ್ವ-ಸಹಾಯ ಗುಂಪುಗಳಿಗೆ ಹಣಕಾಸು ಒದಗಿಸಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಕಿರು ಹಣಕಾಸು ಕಾರ್ಯಕ್ರಮವಾಗಿದೆ ಎಂದು ಅಮಿತ್ ಶ್ಹಾ ಹೇಳಿದರು.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಬರುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಮೋದಿ ಸರ್ಕಾರ ನಿರ್ಧಾರ ಕೈಗೊಂಡಿದೆ. ನಬಾರ್ಡ್ ದೇಶಾದ್ಯಂತ ಸುಮಾರು 7,000 ಕೃಷಿ ಉತ್ಪಾದಕ ಸಂಘ(ಎಫ್‌ಪಿಒ)ಗಳನ್ನು ಹೊಂದಿದೆ, ಇದು ರೈತರು ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಪಡೆಯುವುದನ್ನು ಖಚಿತಪಡಿಸುತ್ತದೆ. 1992-93ರಲ್ಲಿ ಕೇವಲ 10 ಕೋಟಿ ರೂ. ಮೊತ್ತದ ಸಹಕಾರಿ ಅಭಿವೃದ್ಧಿ ನಿಧಿ ಸ್ಥಾಪನೆಯಾಗಿದ್ದು, ಅದೀಗ 293 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಅಮಿತ್ ಶ್ಹಾ ತಿಳಿಸಿದರು.

https://static.pib.gov.in/WriteReadData/userfiles/image/image005G4YX.jpg

ನಮ್ಮ ಹಿಂದಿನ ಸಾಧನೆ ಮತ್ತು ಮುಂದಿನ ದಿನಗಳಲ್ಲಿ ದೇಶದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಬಾರ್ಡ್, ಮುಂದಿನ 25 ವರ್ಷಗಳ ಗುರಿಗಳನ್ನು ನಿಗದಿಪಡಿಸಬೇಕು, ಇದನ್ನು ಪ್ರತಿ 5 ವರ್ಷಗಳಿಗೊಮ್ಮೆ ಪರಿಶೀಲಿಸಬೇಕು ಮತ್ತು 5 ವರ್ಷಗಳ ಗುರಿಗಳನ್ನು ಪ್ರತಿ ಬಾರಿ ಪರಿಶೀಲಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ವರ್ಷಗಳಲ್ಲಿ ಗುರಿ ಸಾಧಿಸಲು ಧೈರ್ಯ ಮತ್ತು ದೂರದೃಷ್ಟಿಯಿಂದ ಮುಂದೆ ಬರಬೇಕು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಬಾರ್ಡ್ ಮತ್ತು ಸಹಕಾರಿ ಸಂಸ್ಥೆಗಳ ಹೊರತಾಗಿ ಬೇರೆ ಯಾರು ಸಹ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಹಳ್ಳಿಗಳಿಗೆ ಕೊಂಡೊಯ್ಯುವ ಸಂಕಲ್ಪ ತೊಡಲು ಸಾಧ್ಯವೇ ಇಲ್ಲ ಎಂದು ಶ್ರೀ ಶಾ ಹೇಳಿದರು.

ಇಂದು ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಡೆಬಿಟ್ ಕಾರ್ಡ್‌ಗಳ ಜತೆಗೆ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸುವ ಸೇವೆ ಪ್ರಾರಂಭಿಸಿವೆ. ಸಹಕಾರಿ ಯೋಜನೆಯಡಿ ಎಲ್ಲಾ ಸಹಕಾರಿ ಸಂಘಗಳ ಸದಸ್ಯರ ಬ್ಯಾಂಕ್ ಖಾತೆಗಳನ್ನು ಜಿಲ್ಲಾ ಸಹಕಾರ ಬ್ಯಾಂಕ್‌ಗೆ ವರ್ಗಾಯಿಸಲಾಗಿದೆ. ಎಲ್ಲಾ ಹಾಲು ಉತ್ಪಾದಕ ಸಂಘಗಳನ್ನು “ಬ್ಯಾಂಕ್ ಮಿತ್ರ” ಎಂದು ಸೇರಿಸಲಾಗಿದೆ. ದೇಶದ ಸಹಕಾರಿ ವ್ಯವಸ್ಥೆಯಲ್ಲಿ ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರ’ ಎಂಬ ಪರಿಕಲ್ಪನೆಯೊಂದಿಗೆ ನಾವು ಮುನ್ನಡೆದರೆ ಮತ್ತು ಪ್ರಾಥಮಿಕ ಕೃಷಿ ಸಾಲ ಸೊಸೈಟಿ(ಪಿಎಸಿಎಸ್‌)ಯಿಂದ ಹಿಡಿದು ಕೃಷಿ ಉತ್ಪನ್ನ ಮತ್ತು ಗ್ರಾಹಕರ ಸೊಸೈಟಿ(ಎಪಿಎಸಿಎಸ್‌)ವರೆಗಿನ ಸಂಪೂರ್ಣ ಹಣವು ಅದರ ಮಡಿಲಲ್ಲೇ ಉಳಿದರೆ, ಸಹಕಾರಿ ವ್ಯವಸ್ಥೆಗೆ ಯಾರಿಂದಲೂ ಹಣದ ಅಗತ್ಯವಿರುವುದಿಲ್ಲ ಎಂದು ಶ್ರೀ ಶಾ ಹೇಳಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2014ರಿಂದ 2023ರ ವರೆಗಿನ 9 ವರ್ಷಗಳ ಅವಧಿಯು ಹಲವು ಕ್ಷೇತ್ರಗಳಲ್ಲಿ ಐತಿಹಾಸಿಕವಾಗಿದೆ. ವಿಶೇಷವಾಗಿ ಬಡತನ ನಿರ್ಮೂಲನೆ ಮತ್ತು ಕೃಷಿ ಅಭಿವೃದ್ಧಿಯಲ್ಲಿ ಈ ಸಾಧನೆಯಾಗಿದೆ.  ಈ 9 ವರ್ಷಗಳಲ್ಲಿ ಬಡತನ ನಿರ್ಮೂಲನೆ ಮತ್ತು ಕೃಷಿ ವ್ಯವಸ್ಥೆ ಬಲಪಡಿಸಲು ಅನೇಕ ಉಪಕ್ರಮಗಳನ್ನು ಕೈಗೊಂಡಿರುವುದರಿಂದ ದೇಶದ ಇತಿಹಾಸವನ್ನು ಬರೆಯುವಾಗಲೆಲ್ಲಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 9 ವರ್ಷಗಳ ಆಡಳಿತವು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ. 2 ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮತ್ತೊಂದು ಹೊಸ ಉಪಕ್ರಮ ಕೈಗೊಂಡು ಸಹಕಾರ ಸಚಿವಾಲಯ ಸ್ಥಾಪಿಸಿದರು. ಶ್ರೀ ಮೋದಿ ಅವರು ಕಳೆದ 5 ವರ್ಷಗಳಲ್ಲಿ ದೇಶದ ಕೋಟ್ಯಂತರ ಬಡ ಜನರ ಎಲ್ಲಾ ಕನಸುಗಳನ್ನು ನನಸಾಗಿಸಿದ್ದಾರೆ. ನಂತರ ಅವರು ಜನ್ ಧನ್ ಖಾತೆಯ ಮೂಲಕ ದೇಶದ ಆರ್ಥಿಕತೆಯೊಂದಿಗೆ ಈ ಜನರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಶ್ಹಾ ಹೇಳಿದರು.

https://static.pib.gov.in/WriteReadData/userfiles/image/image006QPHK.jpg

ಕಾನೂನುಗಳಲ್ಲಿ ಸಮಯೋಚಿತ ಬದಲಾವಣೆಗಳ ಕೊರತೆಯಿಂದಾಗಿ, ನಮ್ಮ ಸಹಕಾರಿ ವ್ಯವಸ್ಥೆಯು ಸಮಾಜದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಆಗುತ್ತಿರುವ ಆಧುನಿಕ ಬದಲಾವಣೆಗಳೊಂದಿಗೆ ಸಮನ್ವಯಗೊಳಿಸಲು ಸಾಧ್ಯವಾಗದೆ ಕಾಲಾನಂತರದಲ್ಲಿ ಹದಗೆಟ್ಟಿದೆ. ಈ ಸಂಪೂರ್ಣ ಸಹಕಾರಿ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರ ಸಚಿವಾಲಯ ಸ್ಥಾಪಿಸಿದರು ಮತ್ತು ಕೋಟ್ಯಂತರ ಜನರ ಜೀವನವನ್ನು ಸಮೃದ್ಧಗೊಳಿಸಿದರು.  ಕಳೆದ 2 ವರ್ಷಗಳಲ್ಲಿ ನಾವು ಪ್ರಾಥಮಿಕ ಕೃಷಿ ಸಾಲ ಸೊಸೈಟಿ(PACS)ಗಳಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದೇವೆ. ನಬಾರ್ಡ್ ಅನ್ನು ನೋಡಲ್ ಏಜೆನ್ಸಿಯಾಗಿ, 63,000 ಪಿಎಸಿಎಸ್‌ಗಳ ಗಣಕೀಕರಣ ಮಾಡಲಾಗುತ್ತಿದೆ, ಇದರ ಅಡಿ, ಬ್ಯಾಂಕಿಂಗ್, ಲೆಕ್ಕ ಪರಿಶೋಧನೆ ಸೇರಿದಂತೆ ಪಿಎಸಿಎಸ್‌ನಿಂದ ನಬಾರ್ಡ್‌ವರೆಗಿನ ಸಂಪೂರ್ಣ ವ್ಯವಸ್ಥೆಯನ್ನು ಸಾಫ್ಟ್‌ವೇರ್ ಮೂಲಕ ಆನ್‌ಲೈನ್ ಮಾಡಲಾಗುತ್ತಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸರ್ಕಾರವು ಪಿಎಸಿಎಸ್ ಬೈಲಾಗಳನ್ನು ಸಹ ಬದಲಾಯಿಸಿದೆ ಮತ್ತು ಅವುಗಳನ್ನು ಬಹು ಆಯಾಮಗಳನ್ನಾಗಿ ಮಾಡಲಾಗಿದೆ. ಈಗ  ಪಿಎಸಿಎಸ್ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದೆ. ಜನ ಆರೋಗ್ಯ ಕೇಂದ್ರ ತೆರೆಯುತ್ತದೆ, ರಸಗೊಬ್ಬರ ಅಂಗಡಿಗಳನ್ನು ನಡೆಸುತ್ತದೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಭಾಗವಾಗುತ್ತಿದೆ. ಪೆಟ್ರೋಲ್ ಪಂಪ್ ಮತ್ತು ಗ್ಯಾಸ್ ಏಜೆನ್ಸಿಯ ಕೆಲಸವನ್ನು ಒದಗಿಸಲಾಗುತ್ತಿದೆ. ಪಿಎಸಿಎಸ್ ಗಳನ್ನು ಕಾರ್ಯಸಾಧುವಾಗಿಸಲು ನಾವು ದೊಡ್ಡ ಬದಲಾವಣೆಗಳನ್ನು ತಂದಿದ್ದೇವೆ. ಆದರೆ ನಬಾರ್ಡ್‌ ಸಹಕಾರವಿಲ್ಲದೆ, ನಾವು ತಳಮಟ್ಟದಲ್ಲಿ ಇವೆಲ್ಲವನ್ನೂ ಜಾರಿಗೆ ತರಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಅಮಿತ್ ಶ್ಹಾ ತಿಳಿಸಿದರು.

ನಬಾರ್ಡ್ ಕೇವಲ ಬ್ಯಾಂಕ್ ಅಲ್ಲ, ಆದರೆ ದೇಶದ ಗ್ರಾಮೀಣ ವ್ಯವಸ್ಥೆಯನ್ನು ಬಲಪಡಿಸುವ ಸಮಗ್ರ ಉದ್ದೇಶವಾಗಿದೆ. ನಬಾರ್ಡ್‌ನ ಗುರಿಗಳನ್ನು ಹಣಕಾಸಿನ ಮಾನದಂಡಗಳ ಮೇಲೆ ನಿಗದಿಪಡಿಸಬೇಕು, ಆದರೆ ಇವುಗಳೊಂದಿಗೆ ಮಾನವ ಮತ್ತು ಗ್ರಾಮೀಣ ಅಭಿವೃದ್ಧಿಯ ಗುರಿಗಳನ್ನು ಸಹ ನಿಗದಿಪಡಿಸಬೇಕು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ 3 ಬಹುರಾಜ್ಯ ಸಹಕಾರಿ ಸಂಘಗಳನ್ನು ರಚಿಸಲಾಗಿದೆ. ರೈತರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಬಹು-ರಾಜ್ಯ ಸಹಕಾರಿ ಸಾವಯವ ಸೊಸೈಟಿ ಸ್ಥಾಪಿಸಲಾಗಿದೆ.  ನಮ್ಮ ಕೃಷಿ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಗೆ ರಫ್ತು ಮಾಡಲು ಮತ್ತು ರಕ್ಷಣೆ, ಉತ್ತೇಜನಾ ಮತ್ತು ಪ್ರಚಾರಕ್ಕಾಗಿ ಬಹು-ರಾಜ್ಯ ಸಹಕಾರಿ ರಫ್ತು ಸಹಕಾರ ಸಂಘ ಸ್ಥಾಪಿಸಲಾಗಿದೆ. ನಮ್ಮ ಸಾಂಪ್ರದಾಯಿಕ ಬೀಜಗಳ ಅಭಿವೃದ್ಧಿಗಾಗಿ ಬಹು-ರಾಜ್ಯ ಸಹಕಾರಿ ಬೀಜ ಸಂಘವನ್ನು ಸಹ ಸ್ಥಾಪಿಸಲಾಗಿದೆ, ಇದು ಹೆಚ್ಚಿನ ಇಳುವರಿ ಹೊಂದಿರುವ ಬೀಜಗಳ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಹೆಚ್ಚಿಸುತ್ತದೆ.

ಆದಾಯ ತೆರಿಗೆಯ ದೃಷ್ಟಿಯಿಂದ, ಸ್ವಾತಂತ್ರ್ಯದ ಸುಮಾರು 50 ವರ್ಷಗಳ ನಂತರ ಸಹಕಾರಿ ಮತ್ತು ಕಾರ್ಪೊರೇಟ್‌ಗಳನ್ನು ಒಂದೇ ಮಟ್ಟದಲ್ಲಿ ತರುವ ಕೆಲಸದ ಮೂಲಕ ಸಹಕಾರಿಗಳನ್ನು ಉತ್ತೇಜಿಸುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ. ಅಲ್ಲದೆ, 10,000 ಕೋಟಿ ರೂ. ಮೌಲ್ಸದ ಸಕ್ಕರೆ  ಕಾರ್ಖಾನೆಗಳು ಹಳೆಯ ವಿವಾದಗಳನ್ನೂ ಬಗೆಹರಿಸಿದ್ದೇವೆ. ಸಹಕಾರಿಗಳ ಕಿರು ತೆರಿಗೆ(ಅಧಿಕ ಕರ ಅಥವಾ ಹೆಚ್ಚುವರಿ ಶುಲ್ಕ)ಯನ್ನು 12%ನಿಂದ 7%ಗೆ ಇಳಿಸಲಾಯಿತು, ಕನಿಷ್ಠ ಪರ್ಯಾಯ ತೆರಿಗೆ(MAT)ಯನ್ನು 18.5%ನಿಂದ 15%ಗೆ ಇಳಿಸಲಾಯಿತು. ಮುಕ್ತ ಮಾರುಕಟ್ಟೆಯಲ್ಲಿ ಸಹಕಾರಿ ಸಂಘಗಳನ್ನು ಉತ್ತೇಜಿಸುವ ಸಲುವಾಗಿ, ತೆರಿಗೆ ವಿಷಯದಲ್ಲಿ ಪರಿಸರ ಬೆಂಬಲ ಒದಗಿಸುವ ಕೆಲಸವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾಡಲಾಗಿದೆ ಎಂದು ಸಚಿವ ಅಮಿತ್ ಶ್ಹಾ ತಿಳಿಸಿದರು.

****

 


(Release ID: 1939133) Visitor Counter : 160


Read this release in: English , Urdu , Hindi , Marathi