ಕಲ್ಲಿದ್ದಲು ಸಚಿವಾಲಯ
ವಾಣಿಜ್ಯ ಬಳಕೆ ಮತ್ತು ಗಣಿಗಾರಿಕಾ ಸಂಸ್ಥೆಗಳ ಸ್ವಂತ ಬಳಕೆಗಾಗಿರುವ ಕಲ್ಲಿದ್ದಲು ಉತ್ಪಾದನೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪರಿಶೀಲಿಸಿದರು
ಹಣಕಾಸು ವರ್ಷ 2023-24ರಲ್ಲಿ 162 ದಶಲಕ್ಷ ಟನ್ ಉತ್ಪಾದನೆಯ ಗುರಿಯನ್ನು ಸಾಧಿಸಲು ನಿರ್ದೇಶಿಸಿದರು
Posted On:
06 JUL 2023 6:07PM by PIB Bengaluru
ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ವಾಣಿಜ್ಯ ಬಳಕೆ ಮತ್ತು ಸಂಸ್ಥೆಗಳ ಸ್ವಂತ ಬಳಕೆಗಾಗಿರುವ ಗಣಿಗಳ ಕಲ್ಲಿದ್ದಲು ಉತ್ಪಾದನಾ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಸಂಸ್ಥೆಗಳ ಸ್ವಂತ ಬಳಕೆಯ ಗಣಿಗಳಿಂದ ಕಲ್ಲಿದ್ದಲು ಉತ್ಪಾದನೆ ಮತ್ತು ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಉತ್ಪಾದನೆಯಲ್ಲಿ ಉತ್ತಮ ಪ್ರಗತಿಯಾಗಿದೆ, ಕಳೆದ ಆರು ವರ್ಷಗಳಲ್ಲಿ 216% ಬೆಳವಣಿಗೆಯಾಗಿದ್ದು, ಉತ್ಪಾದನೆ ಸ್ಥಿರವಾಗಿ ಹೆಚ್ಚಿತ್ತಿದೆ ಎಂದು ಕೇಂದ್ರ ಸಚಿವರು ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ಇಂದಿನ ಸಭೆಯಲ್ಲಿ ವಾಣಿಜ್ಯ ಮತ್ತು ಸಂಸ್ಥೆಗಳು ಸ್ವಂತ ಬಳಕೆಯ ಗಣಿಗಳಿಂದ ಕಲ್ಲಿದ್ದಲು ಉತ್ಪಾದನೆಯನ್ನು ಈ ಹಣಕಾಸು ವರ್ಷದಲ್ಲಿ 39% ರಷ್ಟು ಹೆಚ್ಚಿಸುವ ಮಾರ್ಗಗಳ ಕುರಿತು ಕೇಂದ್ರ ಸಚಿವ ಶ್ರೀ ಜೋಶಿ ಚರ್ಚಿಸಿದರು. ಈ ಸಂದರ್ಭದಲ್ಲಿ, 100 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯ ಗುರಿಯನ್ನು ಸಾಧಿಸಲು ಕಲ್ಲಿದ್ದಲು ಗಣಿ ಮಿಷನ್ ಯೋಜನೆಗೆ ವಿಶೇಷ ಒತ್ತು ನೀಡಲಾಯಿತು.
ಜೂನ್ 2020 ರಲ್ಲಿ, ಸಿ.ಎಂ.(ಎಸ್.ಪಿ) ಕಾಯಿದೆ 2015/ ಎಂ.ಎಂ.ಡಿ.ಆರ್. ಕಾಯಿದೆ 1957 ರ ಅಡಿಯಲ್ಲಿ ಮೊದಲ ಬಾರಿಗೆ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ಇಲ್ಲಿಯವರೆಗೆ, ವಾಣಿಜ್ಯ ಕಲ್ಲಿದ್ದಲು ಗಣಿಗಳ ಆರು ಹಂತಗಳ ಹರಾಜು ಪೂರ್ಣಗೊಂಡಿದೆ ಮತ್ತು ಒಟ್ಟು ವಾರ್ಷಿಕ 218.9 ದಶಲಕ್ಷ ಟನ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಒಟ್ಟು 86 ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ. ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಮೂಲಕ ಒಟ್ಟು 98 ಗಣಿಗಳನ್ನು ನೀಡುವ ಪ್ರಕ್ರಿಯೆಯ 7ನೇ ಹಂತ ಪ್ರಗತಿಯಲ್ಲಿದೆ.
ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಪ್ರಾರಂಭವಾಗುವ ಮೊದಲು, ಕಲ್ಲಿದ್ದಲು ಗಣಿ ಕಾರ್ಯಾಚರಣೆಯ ಸರಾಸರಿ ಅವಧಿಯು ಸುಮಾರು ಐದು ವರ್ಷಗಳಿದ್ದವು. ಆದರೆ, ಈ ನೂತನ ವಾಣಿಜ್ಯ ಹರಾಜಿನ ವ್ಯವಸ್ಥೆ ಪ್ರಾರಂಭಿಸಿದ ನಂತರ, ಈಗ ಕಲ್ಲಿದ್ದಲು ಗಣಿಗಳ ಕಾರ್ಯಾಚರಣೆಯ ಸರಾಸರಿ ಅವಧಿಯು ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಈಗಾಗಲೇ ವಾಣಿಜ್ಯ ಗಣಿಗಳ ಉತ್ಪಾದನೆಯು ಪ್ರಗತಿಯೊಂದಿಗೆ ಫಲಿತಾಂಶದಲ್ಲಿ ಉತ್ತಮ ಬದಲಾವಣೆ ಕಾಣತೊಡಗಿವೆ.
ಮೊದಲ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಾದ ನಂತರ, ಅದರ ಹಂಚಿಕೆಯಿಂದ ಒಂದು ವರ್ಷದೊಳಗೆ ಉತ್ಪಾದನೆಯನ್ನು ಪ್ರಾರಂಭಿಸಿತು. ನಾಲ್ಕು ವಾಣಿಜ್ಯ ಕಲ್ಲಿದ್ದಲು ಬ್ಲಾಕ್ ಗಳಾದ, ಸುಲ್ಯಾರಿ, ಗರೆಪಾಲ್ಮಾ IV/1, ಗರೆಪಾಲ್ಮಾ IV/7 ಮತ್ತು ಗೊಟಿಟೋರಿಯಾ ಮೈನ್ಸ್ ಗಳಿಂದ ಹಣಕಾಸು ವರ್ಷ 2021-22 ರಲ್ಲಿ 1.15 ದಶಲಕ್ಷ ಟನ್ ಮತ್ತು ಹಣಕಾಸು ವರ್ಷ 2022-23 ರಲ್ಲಿ 7.12 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯಾಗಿದೆ.
2023-24ರ ಆರ್ಥಿಕ ವರ್ಷದಲ್ಲಿ ಹೆಚ್ಚುವರಿಯಾಗಿ ಆರು ವಾಣಿಜ್ಯ ಗಣಿಗಳು ಹರಾಜಾಗಿದ್ದು, ಈ ಕಲ್ಲಿದ್ದಲು ಗಣಿಗಳಿಂದ 12.2 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ.
***
(Release ID: 1937881)
Visitor Counter : 144