ಸಹಕಾರ ಸಚಿವಾಲಯ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿಂದು 'ಅಮೃತ್ ಕಾಲ: ರೋಮಾಂಚಕ ಭಾರತಕ್ಕಾಗಿ ಸಹಕಾರದ ಮೂಲಕ ಸಮೃದ್ಧಿ' ಎಂಬ ನಿರೂಪಣಾ ವಿಷಯದ 17ನೇ ಭಾರತೀಯ ಸಹಕಾರಿ ಸಮಾವೇಶ(ಕಾಂಗ್ರೆಸ್) ಉದ್ಘಾಟಿಸಿದರು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರಿ ಮಾರುಕಟ್ಟೆ, ಸಹಕಾರ ವಿಸ್ತರಣೆಯ ಸಲಹಾ ಸೇವಾ ಪೋರ್ಟಲ್ “ಇ-ಕಾಮರ್ಸ್ ವೆಬ್‌ಸೈಟ್” ಅನಾವರಣಗೊಳಿಸಿದರು
ಶ್ರೀ ಮೋದಿ ಅವರು ಸಹಕಾರ ಸಚಿವಾಲಯದ ಅಗತ್ಯಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ, ಅವರ ಮಾರ್ಗದರ್ಶನದಿಂದಾಗಿ ಸಹಕಾರಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗಿವೆ - ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿಕೆ
ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ, ಶ್ರೀ ಮೋದಿ ಅವರ ಈ ಅಧಿಕಾರಾವಧಿಯು ಸಹಕಾರಿ ಕ್ಷೇತ್ರದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ
ಕಳೆದ 25-30 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ನಿಶ್ಚಲತೆ ಇತ್ತು, ಸಹಕಾರಿಗಳು ಒಂದು ಶತಮಾನದಲ್ಲಿ ನೀಡಿದ ಕೊಡುಗೆಗಿಂತ ಶ್ರೀ ಮೋದಿ ಅವರ ನೇತೃತ್ವದಲ್ಲಿ ಸಹಕಾರಿ ಸಂಘಗಳು ಮುಂದಿನ 25 ವರ್ಷಗಳಲ್ಲಿ ಹೆಚ್ಚಿನ ಕೊಡುಗೆ ನೀಡುತ್ತವೆ ಎಂದು ಈ ಸಹಕಾರಿ ಸಮಾವೇಶದಲ್ಲಿ ನಾವು ನಿರ್ಣಯ ತೆಗೆದುಕೊಳ್ಳಬೇಕು.
ಸಕ್ಕರೆ ಕಾರ್ಖಾನೆಗಳ ಸುದೀರ್ಘ ಬಾಕಿ ಇರುವ ಸುಮಾರು 15,000 ಕೋಟಿ ರೂ. ಮೌಲ್ಯದ ತೆರಿಗೆ ವಿವಾದವನ್ನು ಕಾಯಿದೆಯ ಮೂಲಕ ಶ್ರೀ ಮೋದಿ ಅವರು ಇತ್ಯರ್ಥಗೊಳಿಸಿದ್ದಾರೆ. ಭವಿಷ್ಯದಲ್ಲಿ ಯಾವುದೇ ತೆರಿಗೆ ವಿವಾದಗಳು ಉಂಟಾಗದಂತಹ ವ್ಯವಸ್ಥೆಗಳನ್ನು ಮಾಡಿದ್ದಾರೆ
ಸಹಕಾರಿ ವಲಯಕ್ಕೆ ನಾವು ಹೊಸ ಕ್ಷೇತ್ರಗಳನ್ನು ಅಳವಡಿಸಿಕೊಳ್ಳಬೇಕು, ಕಂಪ್ಯೂಟರೀಕರಣ, ಆಧುನೀಕರಣ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಮುಕ್ತತೆ ತರಲು ನಾವು ಸ್ವಯಂ ಶಿಸ್ತು ಮತ್ತು ಸುಧಾರಣೆಗಳನ್ನು ಒಪ್ಪಿಕೊಳ್ಳಬೇಕು.
ರಾಜ್ಯ ಮತ್ತು ಕೇಂದ್ರದ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡದೆ ಸಾಂವಿಧಾನಿಕ ಚೌಕಟ್ಟಿನಡಿ ಸಹಕಾರಿ ಕಾನೂನಿನಲ್ಲಿ ಏಕರೂಪತೆ ತರಲು ಮೋದಿ ಸರ್ಕಾರ ಶ್ರಮಿಸುತ್ತಿದೆ.
ಮೋದಿ ಸರ್ಕಾರವು ಪ್ರಾಥಮಿಕ ಕೃಷಿ ಸಾಲ ಸೊಸೈಟಿ(ಪಿಎಸಿಎಸ್)ಗಳನ್ನು ಹಲವು ಚಟುವಟಿಕೆಗಳೊಂದಿಗೆ ಜೋಡಿಸುವ ಮೂಲಕ ಕಾರ್ಯಸಾಧುವಾಗುವಂತೆ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ
Posted On:
01 JUL 2023 4:59PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಪ್ರಗತಿ ಮೈದಾನದಲ್ಲಿಂದು 'ಅಮೃತಕಾಲ್: ರೋಮಾಂಚಕ ಭಾರತಕ್ಕಾಗಿ ಸಹಕಾರದ ಮೂಲಕ ಸಮೃದ್ಧಿ' ಎಂಬ ನಿರೂಪಣಾ ವಿಷಯವಿರುವ 17ನೇ ಭಾರತೀಯ ಸಹಕಾರ ಸಮಾವೇಶ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ಸಹಕಾರಿ ಮಾರುಕಟ್ಟೆ ಮತ್ತು ಸಹಕಾರ ವಿಸ್ತರಣೆಯ ಸಲಹಾ ಸೇವಾ ಪೋರ್ಟಲ್ ‘ಇ-ಕಾಮರ್ಸ್ ವೆಬ್‌ಸೈಟ್’ ಅನಾವರಣಗೊಳಿಸಿದರು. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಖಾತೆ ರಾಜ್ಯ ಸಚಿವ ಶ್ರೀ ಬಿ ಎಲ್ ವರ್ಮಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಂತರ ಭಾಷಣ ಮಾಡಿದ ಸಚಿವ ಶ್ರೀ ಅಮಿತ್ ಶಾ, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಸಹಕಾರಿ ಚಳುವಳಿ ಅಸ್ತಿತ್ವದಲ್ಲಿತ್ತು, ಇದು ಸುಮಾರು 115 ವರ್ಷಗಳಷ್ಟು ಹಳೆಯದು. ಸ್ವಾತಂತ್ರ್ಯದ ನಂತರ, ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಮಿಕರ ಪ್ರಮುಖ ಬೇಡಿಕೆಯಾದ ಪ್ರತ್ಯೇಕ ಸಹಕಾರ ಸಚಿವಾಲ ರಚಿಸಲಾಗಿದೆ. ಸಹಕಾರಿ ಕ್ಷೇತ್ರವನ್ನು ವಿಸ್ತರಿಸಲು, ಸಮಯೋಚಿತ ಬದಲಾವಣೆಗಳನ್ನು ಪರಿಚಯಿಸಲು, ಪಾರದರ್ಶಕತೆ ತರಲು ಮತ್ತು ಭಾರತದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಜಾಗತಿಕ ಬದಲಾವಣೆಗಳನ್ನು ಅಳವಡಿಸಲು ಈ ಹಿಂದೆ ತೊಂದರೆಗಳಿದ್ದವು. ಆದರೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪಿಸಿದರು. ಕಳೆದ 75 ವರ್ಷಗಳಿಂದ ಬಾಕಿ ಉಳಿದಿದ್ದ ಹಲವಾರು ಬೇಡಿಕೆಗಳನ್ನು ಈಡೇರಿಸಿದ್ದಾರೆ. ಸಹಕಾರ ಸಚಿವಾಲಯ ರಚನೆ ಹಾಗೂ ಪ್ರಧಾನಿ ಅವರ ಮಾರ್ಗದರ್ಶನದಿಂದಾಗಿ ಸಹಕಾರಿ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಸಾಧ್ಯವಾಗಿದೆ ಎಂದು ಅಮಿತ್ ಶಾ ತಿಳಿಸಿದರು.

ಭಾರತದ ರಾಷ್ಟ್ರೀಯ ಸಹಕಾರಿ ಸಂಘವು ಸಹಕಾರಿ ಕ್ಷೇತ್ರದ ಅತ್ಯುನ್ನತ ಸಂಸ್ಥೆಯಾಗಿದೆ. ಶ್ರೀ ದಿಲೀಪ ಸಂಘಾನಿ ಅವರ ನೇತೃತ್ವದಲ್ಲಿ ಸಹಕಾರಿ ಒಕ್ಕೂಟವು ಅತ್ಯುತ್ತಮ ಸಮನ್ವಯ ಮತ್ತು ಪ್ರಯತ್ನಗಳ ಮೂಲಕ ಪ್ರಾಥಮಿಕ ಕೃಷಿ ಸಾಲ ಸೊಸೈಟಿಯಿಂದ ಹಿಡಿದು ಕೃಷಿ ಉತ್ಪಾದಕ ಮತ್ತು ಗ್ರಾಹಕ ಸೊಸೈಟಿ(ಎಪಿಎಸಿಎಸ್)ಗಳವರೆಗೆ ಎಲ್ಲಾ ಉಪಕ್ರಮಗಳು ಮತ್ತು ಬದಲಾವಣೆಗಳನ್ನು ಮಾಡಲಾಗಿದೆ. ದೇಶದಲ್ಲಿ 100 ವರ್ಷಗಳಿಗೂ ಹೆಚ್ಚು ಹಳೆಯದಾದ ಸಹಕಾರಿ ಆಂದೋಲನವು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿ, ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ, ಆದರೆ ಕಳೆದ 25-30 ವರ್ಷಗಳಿಂದ ಸಹಕಾರಿ ಕ್ಷೇತ್ರವು ನಿಂತ ನೀರಾಗಿತ್ತು. ಸಹಕಾರಿ ಕ್ಷೇತ್ರವು ಕೃಷಿ ಸಾಲ ವಿತರಣೆಯಲ್ಲಿ ಸುಮಾರು 29%, ರಸಗೊಬ್ಬರ ವಿತರಣೆಯಲ್ಲಿ 35%, ರಸಗೊಬ್ಬರ ಉತ್ಪಾದನೆಯಲ್ಲಿ 25%, ಸಕ್ಕರೆ ಉತ್ಪಾದನೆಯಲ್ಲಿ 35%, ಚರಕ(ನೂಲುವ ಯಂತ್ರ) ವಲಯದಲ್ಲಿ 30%, ಹಾಲು ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟದಲ್ಲಿ ಸುಮಾರು 15%, ಗೋಧಿ ಸಂಗ್ರಹಣೆಯಲ್ಲಿ 13% ಮತ್ತು ಭತ್ತ ಸಂಗ್ರಹಣೆಯಲ್ಲಿ 20%. ಪಾಲು ಹೊಂದಿದೆ. ಸಹಕಾರಿ ಕ್ಷೇತ್ರದಲ್ಲಿ ವಿಶೇಷವಾಗಿ ಸಾಲ ಸಹಕಾರ ಸಂಘಗಳು, ಗೃಹ ನಿರ್ಮಾಣ ಸಹಕಾರ ಸಂಘಗಳು, ಮೀನುಗಾರಿಕಾ ಸಂಘಗಳು ಮತ್ತು ಸಹಕಾರಿ ಬ್ಯಾಂಕ್‌ಗಳು ಸಮಾಜದ ಬಡ ವರ್ಗದವರ ಜೀವನೋಪಾಯವನ್ನು ಸುಧಾರಿಸಲು ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ಅಮಿತ್ ಶಾ ಹೇಳಿದರು.
ಭಾರತೀಯ ಸಹಕಾರಿ ಕ್ಷೇತ್ರವು ಈ ಸಹಕಾರಿ ಸಮಾವೇಶದಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. ಕಳೆದ ಶತಮಾನದ ಕೊಡುಗೆಗೆ ಹೋಲಿಸಿದರೆ ಮುಂದಿನ 25 ವರ್ಷಗಳ ಅಮೃತ ಕಾಲದ ಅವಧಿಯಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುವ ಸಂಕಲ್ಪವನ್ನು ಈ ಸಮಾವೇಶದಲ್ಲಿ ತೆಗೆದುಕೊಳ್ಳಬೇಕು. ಈಗ ನಾವು ಯುವಕರು ಮತ್ತು ಮಹಿಳೆಯರನ್ನು ಸಹಕಾರಿ ಸಂಘಗಳೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸಹಕಾರಿ ಸಂಘಗಳ ಮೂಲಕ ಬಡವರ ಬದುಕು ಸುಧಾರಿಸಲು ಪ್ರಯತ್ನಿಸಬೇಕು. ಈ ಸಹಕಾರಿ ಸಮಾವೇಶದ ನಂತರ, ನಾವು ಸಹಕಾರಿಗಳ ಅಭಿವೃದ್ಧಿಯನ್ನು ಸಮಾನ(ಸಮ್ಮಿತೀಯ) ರೀತಿಯಲ್ಲಿ ರೂಪಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಲಾಗಿದ್ದು, ಇನ್ನೂ ಹೆಚ್ಚಿನದನ್ನು ಸಾಧಿಸಬೇಕಾಗಿದೆ. ಸಹಕಾರಿ ವಲಯಕ್ಕೆ ಹೊಸ ಹೊಸ ಕ್ಷೇತ್ರಗಳನ್ನು ಅಳವಡಿಸಿಕೊಳ್ಳಬೇಕು. ಸಹಕಾರಿ ಸಂಸ್ಥೆಗಳಲ್ಲಿ ಕಂಪ್ಯೂಟರೀಕರಣ, ಆಧುನೀಕರಣ ಮತ್ತು ಮುಕ್ತತೆ(ಪಾರದರ್ಶಕತೆ) ತರಲು ನಾವು ಸ್ವಯಂ-ಶಿಸ್ತು ಮತ್ತು ಸುಧಾರಣೆಗಳನ್ನು ಒಪ್ಪಿಕೊಳ್ಳಬೇಕು ಎಂದು ಅಮಿತ್ ಶಾ ತಿಳಿಸಿದರು..

ಪ್ರಧಾ ನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಸಹಕಾರಿ ಕ್ಷೇತ್ರದಲ್ಲಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಮತ್ತು ಕೇಂದ್ರದ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡದೆ ಸಾಂವಿಧಾನಿಕ ಚೌಕಟ್ಟಿನಡಿ, ಸಹಕಾರಿ ಕಾನೂನಿನಲ್ಲಿ ಸಮಾನತೆ ತರಲು ಮೋದಿ ಸರ್ಕಾರ ಪ್ರಯತ್ನಿಸಿ. ಶ್ರೀ ಮೋದಿ ಅವರ ಉಪಕ್ರಮದ ಮೇರೆಗೆ ಬಹುರಾಜ್ಯ ಸಹಕಾರ ಸಂಘಗಳ ಕಾಯಿದೆಗೆ ತಿದ್ದುಪಡಿ ತರಲು ಸಂಸದೀಯ ಸಮಿತಿಯು ಒಮ್ಮತದಿಂದ ಸೂಚಿಸಿದೆ. ಈ ಕಾನೂನು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲಾಗುವುದು. ಪ್ರಥಮಿಕ ಕೃಷಿ ಸಾಲ ಸೊಸೈಟಿ(ಪಿಎಸಿಎಸ್)ಗಳಿಗೆ ಇದ್ದ ಹಿಂದಿನ ಕಾನೂನುಗಳು ದೇಶಾದ್ಯಂತ ವಿಭಿನ್ನವಾಗಿದ್ದು, ಏಕರೂಪತೆ ತರಲು ಸಹಕಾರ ಸಚಿವಾಲಯವು ಪಿಎಸಿಎಸ್ ಬೈಲಾಗಳನ್ನು ಸಿದ್ಧಪಡಿಸಿದೆ, ಅವುಗಳಿಗೆ ಸಲಹೆ ನೀಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾಗಿದೆ. 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬೈಲಾಗಳನ್ನು ಒಪ್ಪಿಕೊಂಡಿವೆ. ದೇಶದ 85% ಪಿಎಸಿಎಸ್ ಗಳು ಈ ವರ್ಷದ ಸೆಪ್ಟೆಂಬರ್ ನಂತರ ಅದೇ ಕಾನೂನಿನ ಅಡಿ ಕಾರ್ಯ ನಿರ್ವಹಿಸುತ್ತವೆ. ಈ ಮೂಲಕ ಪ್ರಧಾನಿ ಮೋದಿ ಅವರು ಪಿಎಸಿಎಸ್ ಗಳನ್ನು ಬಹುಆಯಾಮ ಸಂಸ್ಥೆಗಳನ್ನಾಗಿಸಿದ್ದಾರೆ. ಈ ಕಾಯಿದೆಯು ಅವುಗಳ ವಿಸ್ತರಣೆಯನ್ನು ತುಂಬಾ ಸುಲಭಗೊಳಿಸುತ್ತದೆ. ಸಾಮಾನ್ಯ ಸೇವಾ ಕೇಂದ್ರಗಳಂತಹ ಅನೇಕ ಚಟುವಟಿಕೆಗಳನ್ನು ನಾವು ಪಿಎಸಿಎಸ್ ಗಳೊಂದಿಗೆ ಜೋಡಿಸಿದ್ದೇವೆ, ಇದು ಪಿಎಸಿಎಸ್ ಕಾರ್ಯಸಾಧುವಾಗಲು ಸಹಾಯ ಮಾಡುತ್ತದೆ, ಆದರೆ ಅವುಗಳನ್ನು ಗ್ರಾಮೀಣ ಸೇವೆಗಳ ಕೇಂದ್ರಗಳನ್ನಾಗಿ ಮಾಡಲಿದೆ. ಚಿಲ್ಲರೆ ಮಾರಾಟ ಮಳಿಗೆಗಳನ್ನು ಬದಲಾಯಿಸಲು ನಾವು ಉಪಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇತ್ತೀಚೆಗೆ ಪ್ರಧಾನಿ ಅವರು ವಿಶ್ವದ ಅತಿದೊಡ್ಡ ಆಹಾರ ಧಾನ್ಯ ಸಂಗ್ರಹ(ದಾಸ್ತಾನು) ಯೋಜನೆಗೆ ಅನುಮೋದನೆ ನೀಡಿದ್ದಾರೆ. ಈ ಯೋಜನೆಯ ಯಶಸ್ಸಿನೊಂದಿಗೆ ಮುಂದಿನ 5 ವರ್ಷಗಳಲ್ಲಿ ಶೇಖರಣಾ ವ್ಯವಸ್ಥೆಯಲ್ಲಿ ಸಹಕಾರಿಗಳ ಪಾಲು 35%ಗಿಂತ ಹೆಚ್ಚಾಗಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ನಾವು ದೇಶಾದ್ಯಂತ ಸಹಕಾರಿ ಸಂಸ್ಥೆಗಳ ಡೇಟಾಬೇಸ್ ರಚಿಸಿದ್ದೇ, ಅದರ 90% ಕೆಲಸ ಪೂರ್ಣಗೊಂಡಿದೆ, ಅದರ ಮೂಲಕ ನಾವು ಖಾಲಿ(ಅನುಪಯುಕ್ತ) ಸ್ಥಳಗಳನ್ನು ಗುರುತಿಸುತ್ತೇವೆ ಮತ್ತು ವಿಸ್ತರಣೆ ಮಾಡುತ್ತೇವೆ. ಪ್ರಸ್ತುತ ದೇಶದಲ್ಲಿ 85,000 ಪಿಎಸಿಎಸ್‌ಗಳಿವೆ. ಮುಂದಿನ 3 ವರ್ಷಗಳಲ್ಲಿ ದೇಶದ ಪ್ರತಿ ಪಂಚಾಯತಿಯಲ್ಲಿ ಪಿಎಸಿಎಸ್ ಸ್ಥಾಪನೆ ಆಗಲಿದೆ. ಅಂದರೆ ದೇಶದಲ್ಲಿ 3 ಲಕ್ಷ ಪಿಎಸಿಎಸ್ ಗಳು ಅಸ್ತಿತ್ವಕ್ಕೆ ಬರುತ್ತವೆ, ಅವು ಸಹಕಾರಿ ಕ್ಷೇತ್ರವನ್ನು ಬಲಪಡಿಸುತ್ತವೆ. ಜಿಇಎಂ ಪೋರ್ಟಲ್ ವೇದಿಕೆಯಲ್ಲಿ ಖರೀದಿದಾರರಾಗಿ ನೋಂದಾಯಿಸಲು ಸಹಕಾರಿ ಸಂಘಗಳಿಗೆ ಪ್ರಧಾನ ಮಂತ್ರಿ ಅನುಮೋದನೆ ನೀಡಿದ್ದಾರೆ ಎಂದರು. ಆದಾಯ ತೆರಿಗೆ ಕಾನೂನಿನ ಅಡಿ, ಸಹಕಾರಿ ಸಂಸ್ಥೆಗಳಿಗೆ ದಶಕಗಳಿಂದ ಅನ್ಯಾಯವಾಗಿದೆ ಮತ್ತು ಕಂಪನಿಗಳಿಗೆ ತಕ್ಕಂತೆ ಸಮಾನತೆ ಸಿಗಲಿಲ್ಲ, ಆದರೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಅಸಮಾನತೆಗಳನ್ನು ಒಂದೇ ಬಾರಿಗೆ ತೊಡೆದುಹಾಕಿದರು. ಮುಂಬರುವ ದಿನಗಳಲ್ಲಿ ದೊಡ್ಡ ಪ್ರಯೋಜನಗಳನ್ನು ಒದಗಿಸಲು ಕಂಪನಿಗಳಿಗೆ ಇರುವಂತೆ ಸಹಕಾರಿ ಸಂಸ್ಥೆಗಳಿಗೆ ಸಮಾನ ಸ್ಥಾನಮಾನ ನೀಡಿದರು. ಕಾಯಿದೆಯ ಮೂಲಕ 15,000 ಕೋಟಿ ರೂ. ಮೌಲ್ಯದ ಸಕ್ಕರೆ ಕಾರ್ಖಾನೆಗಳ ಸುದೀರ್ಘ ಬಾಕಿ ಇರುವ ತೆರಿಗೆ ವಿವಾದವನ್ನು ಪ್ರಧಾನಿ ಮೋದಿ ಅವರು ಇತ್ಯರ್ಥಗೊಳಿಸಿದ್ದಾರೆ. ಭವಿಷ್ಯದಲ್ಲಿ ಯಾವುದೇ ತೆರಿಗೆ ವಿವಾದಗಳು ಉಂಟಾಗದಂತೆ ಅಂತಹ ವ್ಯವಸ್ಥೆಗಳನ್ನು ಮಾಡಿದ್ದಾರೆ. ಡೇಟಾಬೇಸ್ ಜತೆಗೆ, ಅಮೃತ ಕಾಲದ ಸಮಯದಲ್ಲಿ ಸಹಕಾರಿಗಳ ವಿಸ್ತರಣೆಗೆ ಕೆಲಸ ಮಾಡುವ ಸಹಕಾರ ನೀತಿ ರೂಪಿಸಲು ನಾವು ಬಯಸುತ್ತೇವೆ. ತರಬೇತಿ ಮತ್ತು ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ನಾವು ಮುನ್ನಡೆಯುತ್ತಿದ್ದೇವೆ. ಸಹಕಾರ ವಿಶ್ವವಿದ್ಯಾಲಯ ಸ್ಥಾಪಿಸಲು ನಾವು ಅಂತರ್ ಸಚಿವಾಲಯದ ಚರ್ಚೆ ಪ್ರಾರಂಭಿಸಿದ್ದೇವೆ. ರಾಷ್ಟ್ರೀಯ ಸಹಕಾರಿ ಅಡಿ, ಪಂಚಾಯಿತಿ ಮಟ್ಟದವರೆಗೆ ನಮ್ಮ ತರಬೇತಿ ವ್ಯವಸ್ಥೆಯನ್ನು ಆಧುನೀಕರಿಸುವಲ್ಲಿ ಇದು ಸಹಾಯ ಮಾಡುತ್ತದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರ ಸಚಿವಾಲಯದ ಅಗತ್ಯಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರ ಮಾರ್ಗದರ್ಶನದಿಂದಾಗಿ ಸಹಕಾರಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಬಂದಿವೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಸಹಕಾರ್ ಸೇ ಸಮೃದ್ಧಿ”ಯ ದೂರದೃಷ್ಟಿಯನ್ನು ನಾವು ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಇದೀಗ ಈ ವರ್ಗವು ಅವರ ಮೂಲಭೂತ ಸೌಕರ್ಯಗಳನ್ನು ಪಡೆಯುವ ಹೋರಾಟದಿಂದ ಹೊರಬಂದು ಅವರ ಭವಿಷ್ಯವನ್ನು ಭರವಸೆಯಿಂದ ಎದುರು ನೋಡುತ್ತಿದ್ದಾರೆ. ಈ ವರ್ಗಕ್ಕೆ ಬಂಡವಾಳವಿಲ್ಲ, ಆದರೆ ಅವರ ಸಣ್ಣ ಬಂಡವಾಳ ಸಂಗ್ರಹದ ಕೆಲಸವನ್ನು ನಾವು ಖಂಡಿತವಾಗಿಯೂ ಮಾಡುತ್ತೇವೆ. ಇದನ್ನು ಸಹಕಾರಿ ಸಂಸ್ಥೆಗಳ ಮೂಲಕ ದೊಡ್ಡ ಬಂಡವಾಳವನ್ನಾಗಿ ಮಾಡಿ ಉದ್ಯಮಕ್ಕೆ ಸಂಪರ್ಕಿಸುತ್ತೇವೆ. ಈ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರವು ಪಾರದರ್ಶಕತೆ ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಇದು ಕಷ್ಟ ಆದರೆ ಅಸಾಧ್ಯವಲ್ಲ, ಇದನ್ನು ನಾವು ಯಶಸ್ವಿಗೊಳಿಸಿದರೆ ಇಡೀ ದೇಶದ ಸಹಕಾರ ಚಳವಳಿಗೆ ದೊಡ್ಡ ಉತ್ತೇಜನ ಸಿಗುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಈ ಅಧಿಕಾರಾವಧಿಯು ಸಹಕಾರಿ ಕ್ಷೇತ್ರದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
***
(Release ID: 1936937)
Visitor Counter : 296