ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಕಾರ್ಯದರ್ಶಿ ಅಮೃತ್ ಲಾಲ್ ಮೀನಾ ಅವರು ಆಸ್ಟ್ರೇಲಿಯಾದಲ್ಲಿ ನಡಯುತ್ತಿರುವ ವಿಶ್ವ ಗಣಿಗಾರಿಕೆ ಕಾಂಗ್ರೆಸ್ 2023, ರಲ್ಲಿ ಇಂಡಿಯಾ ಪೆವಿಲಿಯನ್ ಅನ್ನು ಉದ್ಘಾಟಿಸಿದರು
Posted On:
28 JUN 2023 3:00PM by PIB Bengaluru
ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ ಅವರು ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ವಿಶ್ವ ಗಣಿಗಾರಿಕೆ ಕಾಂಗ್ರೆಸ್ (ಡಬ್ಲ್ಯುಎಂಸಿ) 2023 ರಲ್ಲಿ ಎನ್ ಎಲ್ ಸಿ ಇಂಡಿಯಾ ಲಿಮಿಟೆಡ್ (ಎನ್ ಎಲ್ ಸಿ ಐ ಎಲ್), ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಮತ್ತು ಎನ್ ಎಂ ಡಿ ಸಿ ಗಳನ್ನು ಹೊಂದಿರುವ ಇಂಡಿಯಾ ಪೆವಿಲಿಯನ್ ಅನ್ನು ಉದ್ಘಾಟಿಸಿದರು. ಡಬ್ಲ್ಯುಎಂಸಿಯಲ್ಲಿನ ಇಂಡಿಯಾ ಪೆವಿಲಿಯನ್ ಗಣಿಗಾರಿಕೆ, ಇಂಧನ ವಲಯದಲ್ಲಿ ದೇಶದ ತಾಂತ್ರಿಕ ಸಾಮರ್ಥ್ಯ ಮತ್ತು ಸುಸ್ಥಿರ ಅಭಿವೃದ್ಧಿ ಅಭ್ಯಾಸಗಳಿಗೆ ಅದರ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಶ್ರೀ ಅಮೃತ್ ಲಾಲ್ ಮೀನಾ ಮತ್ತು ಕಲ್ಲಿದ್ದಲು ಸಚಿವಾಲಯದ ಇತರ ಅಧಿಕಾರಿಗಳನ್ನು ಭಾಗವಹಿಸುವ ಭಾರತೀಯ ಪಿ ಎಸ್ ಇ ಗಳ ಜೊತೆಗೆ ಎನ್ ಎಲ್ ಸಿ ಇಂಡಿಯಾ ಲಿಮಿಟೆಡ್ (ಎನ್ ಎಲ್ ಸಿ ಐ ಎಲ್) ತನ್ನ ಪ್ರದರ್ಶನ ಪೆವಿಲಿಯನ್ ಗೆ ಸ್ವಾಗತಿಸಿದವು. ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮವು, ಗಣಿಗಾರಿಕೆ ಮತ್ತು ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಜ್ಞಾನ ಮತ್ತು ಪ್ರಗತಿಯನ್ನು ಹಂಚಿಕೊಳ್ಳಲು ಪ್ರಪಂಚದಾದ್ಯಂತದ ಉದ್ಯಮದ ನಾಯಕರು, ತಜ್ಞರು ಮತ್ತು ಸಂಸ್ಥೆಗಳನ್ನು ಒಂದೆಡೆ ಸೇರಿಸಿದೆ.
ಕಲ್ಲಿದ್ದಲು ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳ ಭೇಟಿಯು ಎನ್ ಎಲ್ ಸಿ ಐ ಎಲ್ ಗೆ ಮಹತ್ವದ ಕ್ಷಣವಾಯಿತು ಮತ್ತು ಅವರು ಕಲ್ಲಿದ್ದಲು ಗಣಿಗಾರಿಕೆಯ ಭವಿಷ್ಯ, ವಿದ್ಯುತ್ ಉತ್ಪಾದನೆ ಮತ್ತು ಇಂಧನ ಕ್ಷೇತ್ರದ ಮೇಲೆ ಅದರ ಪ್ರಭಾವದ ಬಗ್ಗೆ ಒಳನೋಟವುಳ್ಳ ಚರ್ಚೆಯಲ್ಲಿ ತೊಡಗಿದರು. ಭಾರತದ ಪೆವಿಲಿಯನ್ ನವೀನ ತಂತ್ರಜ್ಞಾನಗಳು, ಸುಸ್ಥಿರ ಗಣಿಗಾರಿಕೆ, ವಿದ್ಯುತ್ ಉತ್ಪಾದನಾ ಅಭ್ಯಾಸಗಳು ಮತ್ತು ಪರಿಸರ ಸಂರಕ್ಷಣೆಗೆ ದೇಶದ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಪೆವಿಲಿಯನ್‌ಗೆ ಆಗಮಿಸಿದ ಕಲ್ಲಿದ್ದಲು ಕಾರ್ಯದರ್ಶಿಯವರನ್ನು ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ನ ಸಿಎಂಡಿ ಶ್ರೀ ಪ್ರಸನ್ನ ಕುಮಾರ್ ಮೋಟುಪಲ್ಲಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಜವಾಬ್ದಾರಿಯುತ ಗಣಿಗಾರಿಕೆ ತಂತ್ರಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಇಂಧನ ಉದ್ಯಮದ ಪ್ರಗತಿಗೆ ಎನ್ ಎಲ್ ಸಿ ಐ ಎಲ್ ನ ಬದ್ಧತೆಯನ್ನು ಅವರು ಒತ್ತಿ ಹೇಳಿದರು.
ಎನ್ ಎಲ್ ಸಿ ಐ ಎಲ್ ನ ಮಾಜಿ ಸಿಎಂಡಿ ಡಾ ಎಂ ಪಿ ನಾರಾಯಣನ್ ಅವರು ಪ್ರದರ್ಶನ ಸ್ಥಳದಲ್ಲಿ ಉಪಸ್ಥಿತರಿದ್ದು, ಕ್ಷೇತ್ರದ ಬಗ್ಗೆ ತಮ್ಮ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು.
***
(Release ID: 1935949)
Visitor Counter : 128