ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ನ ಅಹಮದಾಬಾದ್ ನಲ್ಲಿ ಕ್ರೆಡಾಯ್ ಗಾರ್ಡನ್-ಪೀಪಲ್ಸ್ ಪಾರ್ಕ್ ಉದ್ಘಾಟಿಸಿದರು


ಜಗನ್ನಾಥ ರಥಯಾತ್ರೆಯ ಶುಭ ಸಂದರ್ಭದಲ್ಲಿ ಶ್ರೀ ಅಮಿತ್ ಶಾ ಅವರು ಅಹಮದಾಬಾದ್ ನ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿ ಮಂಗಳಾರತಿಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.

ಶ್ರೀ ಜಗನ್ನಾಥ ರಥಯಾತ್ರೆಯು ನಂಬಿಕೆ ಮತ್ತು ಭಕ್ತಿಯ ದೈವಿಕ ಸಂಗಮವಾಗಿದೆ, ಪ್ರತಿ ವರ್ಷ, ಇಲ್ಲಿ ದರ್ಶನ ಪಡೆಯುವ ಅನುಭವವು ದೈವಿಕ ಭಾವ ಹೆಚ್ಚಿಸುತ್ತದೆ ಮತ್ತು ಸ್ಮರಣೀಯವಾಗಿದೆ, ಮಹಾಪ್ರಭುಗಳು ಎಲ್ಲರಿಗೂ ಆಶೀರ್ವಾದ ನೀಡಲಿ - ಕೇಂದ್ರ ಗೃಹ ಸಚಿವರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಡೀ ವಿಶ್ವದಲ್ಲಿ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಪಸರಿಸಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯೋಗ ದಿನವನ್ನು ಜಾಗತಿಕ ವೇದಿಕೆಯ ಮೂಲಕ ಸಾಮೂಹಿಕ ಆಂದೋಲನ ಮಾಡಿದ್ದಾರೆ. ಯೋಗ ದಿನವನ್ನು ಇಂದು ಇಡೀ ವಿಶ್ವ ಒಪ್ಪಿಕೊಂಡಿದೆ, ಯೋಗ ದಿನದಂದು 170 ದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನರನ್ನು ಒಗ್ಗೂಡಿಸಿಕೊಂಡು ಕಡಿಮೆ ಅವಧಿಯಲ್ಲಿ ದೇಶದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಿದ್ದಾರೆ. ಇದನ್ನು ಇಂದು ದೇಶದ ಪ್ರತಿಯೊಬ್ಬ ನಾಗರಿಕರು ಅನುಭವಿಸುತ್ತಿದ್ದಾರೆ.

CREDAI ಮೂಲಸೌಕರ್ಯ ಸೃಷ್ಟಿ, ಯುವಕರ ಕೌಶಲ್ಯ ಅಭಿವೃದ್ಧಿ ಮತ್ತು ಸಮಾಜ ಸುಧಾರಣೆಯಲ್ಲಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ, ಇದು ವಿಶ್ವಾಸಾರ್ಹತೆ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ

Posted On: 20 JUN 2023 4:59PM by PIB Bengaluru

ಜಗನ್ನಾಥ ರಥಯಾತ್ರೆಯ ಶುಭ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಅಹಮದಾಬಾದ್ ನ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಂಗಳಾರತಿಯಲ್ಲಿ ಭಾಗವಹಿಸಿ ಮಹಾಪ್ರಭುಗಳ ಆಶೀರ್ವಾದ ಪಡೆದರು. 

https://static.pib.gov.in/WriteReadData/userfiles/image/image001W01I.jpg

ಈ ಕುರಿತು ಶ್ರೀ ಅಮಿತ್ ಶಾ ಅವರು ಸರಣಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಶ್ರೀ ಜಗನ್ನಾಥ ರಥಯಾತ್ರೆಯು ನಂಬಿಕೆ ಮತ್ತು ಭಕ್ತಿಯ ದೈವಿಕ ಸಂಗಮವಾಗಿದೆ. ಪ್ರತಿ ವರ್ಷ ಇಲ್ಲಿ ದರ್ಶನ ಪಡೆದ ಅನುಭವ ದಿವ್ಯ ಮತ್ತು ಸ್ಮರಣೀಯ. ಮಹಾಪ್ರಭು ಎಲ್ಲರಿಗೂ ಅನುಗ್ರಹಿಸಲಿ. ಜೈ ಜಗನ್ನಾಥ ಎಂದು ಕೇಂದ್ರ ಗೃಹ  ಮತ್ತು ಸಹಕಾರ ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

https://static.pib.gov.in/WriteReadData/userfiles/image/image002CSDL.jpg

ಶ್ರೀ ಅಮಿತ್ ಶಾ ಅವರು ಇಂದು ಅಹಮದಾಬಾದ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಕೆಲವು ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದರು. 
ಅಹಮದಾಬಾದಿನ ನ್ಯೂ ರಾನಿಪ್ ನಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC), ಹೊಸದಾಗಿ ನಿರ್ಮಿಸಲಾದ ಉದ್ಯಾನವನವನ್ನು,  AMC ಮತ್ತು ರೈಲ್ವೆಯು 67 ಕೋಟಿ ರೂಪಾಯಿ ವೆಚ್ಚದಲ್ಲಿ ಚಾಂಡ್ಲೋಡಿಯಾದಲ್ಲಿ ನಿರ್ಮಿಸಿರುವ ಜಗತ್ಪುರ ರೈಲ್ವೆ ಮೇಲ್ಸೇತುವೆಯನ್ನು, ಮತ್ತು CREDAI ಗಾರ್ಡನ್ನಲ್ಲಿರುವ ಪೀಪಲ್ಸ್ ಪಾರ್ಕ್ ನಲ್ಲಿ ಉದ್ಘಾಟಿಸಿದರು.  ಬಾವ್ಲಾದ ತ್ರಿಮೂರ್ತಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶ್ರೀ ಅಮಿತ್ ಶಾ ಭೂಮಿಪೂಜೆ ನೆರವೇರಿಸಿದರು.

ಕ್ರೆಡಾಯ್ ಜನತಾ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ  ಹಾಗೂ ಸಹಕಾರ ಸಚಿವರು, ಕ್ರೆಡಾಯ್ ಸಂಸ್ಥೆಯು ಸುಮಾರು 2.5 ಕೋಟಿ ವೆಚ್ಚದಲ್ಲಿ 12,000 ಚದರ ಮೀಟರ್ ವಿಸ್ತೀರ್ಣದಲ್ಲಿ ಪೀಪಲ್ಸ್ ಪಾರ್ಕ್ ನಿರ್ಮಿಸಿದೆ. ಪರಿಸರದ ಜೊತೆಗೆ ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗ ಹಾಗೂ ಬಡ ಮಕ್ಕಳನ್ನೂ ಗಮನದಲ್ಲಿಟ್ಟುಕೊಂಡು ಕ್ರೆಡಾಯ್  ಈ ಸುಂದರ ತಾಣವನ್ನು ನಿರ್ಮಿಸಿದೆ. ಎಂದರು. ಇಂದು, ಹೆಚ್ಚುತ್ತಿರುವ ನಗರೀಕರಣದಲ್ಲಿ, ಉದ್ಯಾನವು ಸಾಮಾನ್ಯ ನಾಗರಿಕರಿಗೆ ಉತ್ತಮ ಮತ್ತು ಆರಾಮದಾಯಕ ಸ್ಥಳವಾಗಲಿದೆ ಎಂದರು.

https://static.pib.gov.in/WriteReadData/userfiles/image/image0031SVC.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಇಡೀ ವಿಶ್ವದಲ್ಲಿ ಪಸರಿಸಿದ್ದಾರೆ ಮತ್ತು ಅದಕ್ಕೆ ಯೋಗ ದಿನಾಚರಣೆಯು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು.  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯೋಗ ದಿನವನ್ನು ಜಾಗತಿಕ ವೇದಿಕೆಯಿಂದ ಸಾಮೂಹಿಕ ಆಂದೋಲನವಾಗಿ ಮಾಡಿದ್ದಾರೆ ಎಂದು ಹೇಳಿದರು. ಯೋಗ ದಿನದಂದು 170 ದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಪ್ರಯತ್ನದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಸಂಸ್ಕೃತಿಯನ್ನು ಜಗತ್ತಿನ ಮೂಲೆ ಮೂಲೆಗೆ ವಿಸ್ತರಿಸಿದ್ದಾರೆ. ಜೂನ್ 21 ರಂದು ವಿಶ್ವಸಂಸ್ಥೆಯಲ್ಲಿ (UN) ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಈ ಗೌರವಕ್ಕೆ ಪಾತ್ರರಾದ ವಿಶ್ವದ ಮೊದಲ ನಾಯಕರಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.  ಔಷಧಿಗಳಿಲ್ಲದೆ ಜೀವನ ಸಾಗಿಸುವ ರಹಸ್ಯವನ್ನು ಯೋಗ ಶಾಸ್ತ್ರಗಳಲ್ಲಿ ನಮ್ಮ ಋಷಿಗಳು ಹೇಳಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದನ್ನು ಜನರಿಗೂ ತಿಳಿಸಿದರು. ಚಿಕ್ಕ ಮಕ್ಕಳು ಮತ್ತು ಹದಿಹರೆಯದವರು ಸೇರಿದಂತೆ ಎಲ್ಲ ಜನರನ್ನು ಯೋಗದೊಂದಿಗೆ ಬೆಸೆಯುವ ಅಭಿಯಾನವನ್ನು ಪ್ರಾರಂಭಿಸಿದರು. 2014 ರಿಂದ ನಡೆಯುತ್ತಿರುವ ಈ ಅಭಿಯಾನದಿಂದಾಗಿ 10-15 ವರ್ಷಗಳಲ್ಲಿ ಜನರ ಜೀವನದಲ್ಲಿ ಭಾರಿ ಬದಲಾವಣೆಗಳು ಆಗುತ್ತವೆ ಎಂದು ಸಚಿವರು ತಿಳಿಸಿದರು.

https://static.pib.gov.in/WriteReadData/userfiles/image/image004EMR7.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ಮೇಲ್ದರ್ಜೆಗೇರಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತದ ಜನತೆ 2014 ರಲ್ಲಿ ಅತ್ಯಂತ ಭರವಸೆಯಿಂದ ಶ್ರೀ ನರೇಂದ್ರ ಮೋದಿ ಅವರನ್ನು ಪೂರ್ಣ ಬಹುಮತದೊಂದಿಗೆ ದೇಶದ ಪ್ರಧಾನಮಂತ್ರಿಯನ್ನಾಗಿ ಮಾಡಿದರು. ಆ ಸಮಯದಲ್ಲಿ ದೇಶದ ಜನರು ಭದ್ರತೆ, ಆರ್ಥಿಕತೆ, ಶಿಕ್ಷಣ, ಸಾರ್ವಜನಿಕ ಕಲ್ಯಾಣ, ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಗಾಗಿ ಹಾತೊರೆಯುತ್ತಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನರನ್ನು ಒಗ್ಗೂಡಿಸಿ, ಅಲ್ಪಾವಧಿಯಲ್ಲಿಯೇ ದೇಶದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತಂದರು, ಇದನ್ನು ದೇಶದ ಪ್ರತಿಯೊಬ್ಬ ನಾಗರಿಕರು ಇಂದು ಅನುಭವಿಸುತ್ತಿದ್ದಾರೆ ಎಂದು ಶ್ರೀ ಅಮಿತ್  ಶಾ ಹೇಳಿದರು.  ಇದೇ ಕಾರಣಕ್ಕಾಗಿಯೇ 2023ರ ಏಪ್ರಿಲ್ 10ರಂದು ಅರುಣಾಚಲ ಪ್ರದೇಶದ ಗಡಿ ಗ್ರಾಮವಾದ ಕಿಬಿತ್ತೂದಲ್ಲಿ ‘ವೈಬ್ರೆಂಟ್ ವಿಲೇಜ್ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಜನರು ಸಿಲಿಂಡರ್, ವಿದ್ಯುತ್, ಶೌಚಾಲಯ, ಆರೋಗ್ಯ ಸೌಲಭ್ಯಗಳನ್ನು, ಪ್ರತಿ ಮನೆಗೆ ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು ಒದಗಿಸಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು ಎಂದು ಸ್ಮರಿಸಿದರು. 

https://static.pib.gov.in/WriteReadData/userfiles/image/image005D7GE.jpg

ಕ್ರೆಡಾಯ್ ಮೂಲಸೌಕರ್ಯ ಸೃಷ್ಟಿ, ಯುವಕರ ಕೌಶಲ್ಯ ಅಭಿವೃದ್ಧಿ ಮತ್ತು ಸಮಾಜ ಸುಧಾರಣೆಯಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಇದು ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ಕ್ರೆಡಾಯ್ ಕೇವಲ ಪೀಪಲ್ಸ್ ಪಾರ್ಕ್ ಮಾಡದೆ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಡಿ ಮಕ್ಕಳಿಗೆ 75 ಅಂಗನವಾಡಿಗಳಲ್ಲಿ ಕ್ರೀಡಾ ಸೌಲಭ್ಯಗಳನ್ನು ಒದಗಿಸುವ ಉಪಕ್ರಮವನ್ನು ಕೈಗೊಂಡಿದೆ, ಇದು ಅನೇಕ ಜನರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು. ಇದರಿಂದ ಮಕ್ಕಳಲ್ಲಿ ಆಟವಾಡುವ ಹವ್ಯಾಸ ಹೆಚ್ಚಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಅವರ ಮನಸ್ಸಿನಲ್ಲಿರುವ ಕೀಳರಿಮೆಯೂ ದೂರವಾಗುತ್ತದೆ. ಗಾಂಧಿನಗರದಲ್ಲಿ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಗುಜರಾತ್ ಸರ್ಕಾರ ಮತ್ತು ಮುನ್ಸಿಪಲ್ ಕಾರ್ಪೊರೇಶನ್ಅನ್ನು ಶ್ರೀ ಅಮಿತ್ ಶಾ ಇದೇ ಸಂದರ್ಭದಲ್ಲಿ ಅಭಿನಂದಿಸಿದರು. 
ಗಾಂಧಿನಗರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಸುಮಾರು 5.42 ಲಕ್ಷ ಮರಗಳನ್ನು ನೆಡಲಾಗಿದೆ.  ಅಹಮದಾಬಾದ್ ಅನ್ನು ಹಸಿರುವ ವಲಯವನ್ನಾಗಿಸುವ ಅಭಿಯಾನವನ್ನು ಉತ್ತೇಜಿಸಲು ಇನ್ನಷ್ಟು ಹೊಸ ಮರಗಳನ್ನು ನೆಡುವ ಸಂಕಲ್ಪ ಮಾಡಬೇಕು ಎಂದು ಕ್ರೆಡಾಯ್ ನ ಪ್ರತಿಯೊಬ್ಬ ಸದಸ್ಯರಿಗೂ ಶ್ರೀ ಅಮಿತ್  ಶಾ ಅವರು ತಿಳಿಸಿದರು.

https://static.pib.gov.in/WriteReadData/userfiles/image/image006DIKN.jpg

*******



(Release ID: 1933891) Visitor Counter : 96