ಕಲ್ಲಿದ್ದಲು ಸಚಿವಾಲಯ

ಶೇ.44.22 ಬೆಳವಣಿಗೆಯೊಂದಿಗೆ, ಒಟ್ಟಾರೆ ಕಲ್ಲಿದ್ದಲು ದಾಸ್ತಾನು 13 ಜೂನ್, 2023 ರಂದು 110.58 ಮಿಲಿಯನ್ ಟನ್‌ಗಳನ್ನು ಮುಟ್ಟಿದೆ


ವಿದ್ಯುತ್ ವಲಯಕ್ಕೆ ಶೇ. 5.11 ಬೆಳವಣಿಗೆಯೊಂದಿಗೆ 164.84 ಎಂಟಿ ಕಲ್ಲಿದ್ದಲು ರವಾನೆಯನ್ನು ಖಚಿತಪಡಿಸಿದೆ

Posted On: 15 JUN 2023 4:53PM by PIB Bengaluru

‘ಆತ್ಮನಿರ್ಭರ ಭಾರತʼದ ದೃಷ್ಟಿಕೋನಕ್ಕೆ ಅನುಗುಣವಾಗಿ, ಕಲ್ಲಿದ್ದಲು ಸಚಿವಾಲಯವು ರಾಷ್ಟ್ರದ ಇಂಧನ ಭದ್ರತೆಯನ್ನು ಖಾತ್ರಿಪಡಿಸುವತ್ತ ಗಮನಹರಿಸಿದೆ. ಕಲ್ಲಿದ್ದಲು ಸಚಿವಾಲಯವು ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಎಲ್ಲಾ ಪಾಲುದಾರರಿಗೆ ಕಲ್ಲಿದ್ದಲಿನ ದಕ್ಷ ಸಾಗಣೆಯನ್ನು ಒದಗಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಒಟ್ಟಾರೆ ಕಲ್ಲಿದ್ದಲು ದಾಸ್ತಾನು ಅಂದರೆ, ಗಣಿಗಳು, ಟಿಪಿಪಿಗಳು ಮತ್ತು ಸಾಗಣೆಯಲ್ಲಿರುವ ಕಲ್ಲಿದ್ದಲು ದಾಸ್ತಾನು, 13 ಜೂನ್ .2023 ರವರೆಗೆ, 110.58 ಮಿಲಿಯನ್ ಟನ್ (ಎಂಟಿ) ತಲುಪಿದೆ, ಇದು ಕಳೆದ ವರ್ಷದ 76.67 ಮಿಲಿಯನ್ ಟನ್ ದಾಸ್ತಾನಿಗೆ ಹೋಲಿಸಿದರೆ ಶೇ.44.22 ರಷ್ಟು ಗಣನೀಯ ಹೆಚ್ಚಳವನ್ನು ಸೂಚಿಸುತ್ತದೆ. ಈ ಹೆಚ್ಚಿನ ಕಲ್ಲಿದ್ದಲು ದಾಸ್ತಾನು ಕಲ್ಲಿದ್ದಲು ಸಚಿವಾಲಯದಿಂದ ಸಾಕಷ್ಟು ಕಲ್ಲಿದ್ದಲು ಪೂರೈಕೆಯನ್ನು ನಿರ್ವಹಿಸುವ ಬದ್ಧತೆಯನ್ನು ಸೂಚಿಸುತ್ತದೆ.

 

ಹೆಚ್ಚುವರಿಯಾಗಿ, ಈ ತಿಂಗಳ 13 ನೇ ತಾರೀಖಿನಂದು ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ (ಸಿಐಎಲ್) ಪಿಟ್‌ಹೆಡ್ (ಗಣಿಯಿಂದ ಹೊರತೆಗೆದು ಅಲ್ಲಿಯೇ ದಾಸ್ತಾನು ಮಾಡಿದ) ಕಲ್ಲಿದ್ದಲು ದಾಸ್ತಾನು 59.73 ಎಂಟಿ ಆಗಿದೆ, ಇದು 13.06.2022 ರಲ್ಲಿದ್ದ 47.49 ಎಂಟಿ ದಾಸ್ತಾನಿಗೆ ಹೋಲಿಸಿದರೆ ಶೇ.25.77 ರಷ್ಟು ಬೆಳವಣಿಗೆ ದರವನ್ನು ಸೂಚಿಸುತ್ತದೆ. ಈ ಮೇಲ್ಮುಖ ಪ್ರವೃತ್ತಿಯು ಪರಿಣಾಮಕಾರಿ ದಾಸ್ತಾನು ನಿರ್ವಹಣಾ ತಂತ್ರಗಳು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ತೋರಿಸುತ್ತದೆ.

 

ಅದೇ ಸಮಯದಲ್ಲಿ, ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ರವಾನೆಗೆ ಸಂಬಂಧಿಸಿದಂತೆ, 13.06.2023 ರಂತೆ 2023-24 ನೇ ಹಣಕಾಸು ವರ್ಷಕ್ಕೆ ಸಂಚಿತ ಸಾಧನೆಯು 164.84 ಎಂಟಿ ಆಗಿದೆ, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 5.11 ರಷ್ಟು ಗಮನಾರ್ಹ ಬೆಳವಣಿಗೆ ದರವನ್ನು ದಾಖಲಿಸಿದೆ. ಅದು 13.06.2022 ರಂದು 156.83 ಎಂಟಿ ಆಗಿತ್ತು, ವಿದ್ಯುತ್ ವಲಯದ ಇಂಧನ ಅವಶ್ಯಕತೆಗಳನ್ನು ಪೂರೈಸಲು ಕಲ್ಲಿದ್ದಲಿನ ಸ್ಥಿರ ಪೂರೈಕೆಯನ್ನು ಖಾತ್ರಿಪಡಿಸಿದೆ.

ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ (ಟಿಪಿಪಿ) (ಡಿಸಿಬಿ) ಕಲ್ಲಿದ್ದಲು ದಾಸ್ತಾನು 01.04.2022 ರಂದು 24.04 ಎಂಟಿ ಮತ್ತು 13.06.2022 ರಂದು 22.57 ಎಂಟಿ ಆಗಿತ್ತು, ಇದು ಶೇ.6.1 ಕುಸಿತವಾಗಿದೆ. ಆದಾಗ್ಯೂ, ಏಪ್ರಿಲ್ 1, 2023 ರಂದು ಟಿಪಿಪಿ ಗಳಲ್ಲಿ (ಡಿಸಿಬಿ) ಕಲ್ಲಿದ್ದಲು ದಾಸ್ತಾನು 34.5 ಎಂಟಿ ಮತ್ತು 13.06.2023 ರಂದು 34.5 ಎಂಟಿ ಆಗಿತ್ತು, ಅಂದರೆ ಬೇಸಿಗೆ ಋತುವಿನ ಕೊನೆಯ ಎರಡೂವರೆ ತಿಂಗಳುಗಳಲ್ಲಿ ಕಲ್ಲಿದ್ದಲು ದಾಸ್ತಾನಿನಲ್ಲಿ ಯಾವುದೇ ಸವಕಳಿಯಾಗಿಲ್ಲ. ಈ ಅವಧಿಯಲ್ಲಿ ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆಯ ಹೆಚ್ಚಿನ ಬೆಳವಣಿಗೆ ದರವನ್ನು ಖಾತ್ರಿಪಡಿಸುವ ಮೂಲಕ ಇದು ಸಾಧ್ಯವಾಗಿದೆ. 13.06.2023 ರಂತೆ ಟಿಪಿಪಿಗಳಲ್ಲಿ (ಡಿಸಿಬಿ) ಕಲ್ಲಿದ್ದಲು ದಾಸ್ತಾನು ಕಳೆದ ವರ್ಷಕ್ಕೆ ಹೋಲಿಸಿದರೆ 34.55 ಎಂಟಿ ಆಗಿದೆ, ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 22.57 ಎಂಟಿ ಆಗಿತ್ತು, ಇದು ಸುಮಾರು ಶೇ.53.1 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಸೂಚಿಸುತ್ತದೆ.

ಒಟ್ಟಾರೆಯಾಗಿ, 2023-24 ನೇ ಹಣಕಾಸು ವರ್ಷದ ಸಂಚಿತ ಕಲ್ಲಿದ್ದಲು ಉತ್ಪಾದನೆಯು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, 13.06.2023 ರಂತೆ 182.06 ಎಂಟಿ ಉತ್ಪಾದನೆಯೊಂದಿಗೆ, ಹಿಂದಿನ ವರ್ಷದ ಅದೇ ಅವಧಿಯ ಉತ್ಪಾದನೆ 168.17 ಎಂಟಿಗೆ ಹೋಲಿಸಿದರೆ ಶೇ.8.26 ರಷ್ಟು ಬೆಳವಣಿಗೆ ದರವನ್ನು ಪ್ರತಿನಿಧಿಸುತ್ತದೆ. ಇದಲ್ಲದೆ, ಒಟ್ಟಾರೆ ಕಲ್ಲಿದ್ದಲು ರವಾನೆಯು ಗಣನೀಯ ಹೆಚ್ಚಳವನ್ನು ಕಂಡಿದೆ, 2023-24 ನೇ ಹಣಕಾಸು ವರ್ಷದಲ್ಲಿ 13.06.2023 ರಂದು 196.87 ಎಂಟಿ ತಲುಪಿದೆ. ಇದು ಹಿಂದಿನ ವರ್ಷದ ರವಾನೆಯಾದ 182.78 ಎಂಟಿಗೆ ಹೋಲಿಸಿದರೆ ಶೇ. 7.71 ರಷ್ಟು ಶ್ಲಾಘನೀಯ ಬೆಳವಣಿಗೆ ದರವಾಗಿದೆ.

ಕಲ್ಲಿದ್ದಲು ಸಚಿವಾಲಯವು ಕಾರ್ಯತಂತ್ರದ ಯೋಜನೆ ಮತ್ತು ಪರಿಣಾಮಕಾರಿ ಅನುಷ್ಠಾನದ ಮೂಲಕ ಕಲ್ಲಿದ್ದಲು ವಲಯದಲ್ಲಿ ಸುಸ್ಥಿರ ಬೆಳವಣಿಗೆಗೆ ಚಾಲನೆ ನೀಡಲು ಮತ್ತು ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ವಿದ್ಯುತ್ ಕ್ಷೇತ್ರಗಳಿಗಾಗಿ ದೇಶೀಯ ಕಲ್ಲಿದ್ದಲು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಂಪೂರ್ಣವಾಗಿ ಬದ್ಧವಾಗಿದೆ.

****

 



(Release ID: 1932626) Visitor Counter : 100


Read this release in: English , Urdu , Hindi , Tamil , Telugu