ಸಂಸದೀಯ ವ್ಯವಹಾರಗಳ ಸಚಿವಾಲಯ

ಸಂಸದೀಯ ವ್ಯವಹಾರ ಖಾತೆ ಸಚಿವ ಶ್ರೀ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ  ಸಂಸದೀಯ ಸದ್ಭಾವನಾ ನಿಯೋಗ ಬ್ರೆಜಿಲ್ ಗೆ ಭೇಟಿ 


ಭಾರತ ಮತ್ತು ಬ್ರೆಜಿಲ್ ನಡುವಿನ ರಚನಾತ್ಮಕ ಪಾಲುದಾರಿಕೆಯನ್ನು ಬಲಪಡಿಸಲು ದೃಢ ಹೆಜ್ಜೆ

Posted On: 14 JUN 2023 5:39PM by PIB Bengaluru

ಭಾರತ ಮತ್ತು ಬ್ರೆಜಿಲ್ ನಡುವಿನ ರಾಜತಾಂತ್ರಿಕ ಸಂಬಂಧ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ  ಸಂಭ್ರಮಾಚರಣೆಯ ಅಂಗವಾಗಿ ಮತ್ತು ಹಿರೋಷಿಮಾ ಜಿ -7 ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷ ಶ್ರೀ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ದ್ವಿಪಕ್ಷೀಯ ಮಾತುಕತೆ ಹಿನ್ನೆಲೆಯಲ್ಲಿ ಹಾಗೂ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿಗಳ ಕೇಂದ್ರ ಸಚಿವರು, ಶ್ರೀ. ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಂಸದರ ನಿಯೋಗ ಇದೇ ಜೂನ್ 11 ರಿಂದ 13, 2023 ರವರೆಗೆ ಬ್ರೆಜಿಲ್ಗೆ ಭೇಟಿ ನೀಡಿತು.

2006 ರಿಂದ ಕಾರ್ಯತಂತ್ರದ ಪಾಲುದಾರ ದೇಶವಾಗಿರುವ ಬ್ರೆಜಿಲ್ನೊಂದಿಗೆ ಭಾರತವು ತನ್ನ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೆಚ್ಚಿಸಲು ಈ ಸಂಸದರ ಮೊದಲ ಸದ್ಭಾವನಾ ನಿಯೋಗದ ಭೇಟಿಯಿಂದ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಜಿ ಶ್ರೀನಿವಾಸ್ ತಿಳಿಸಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ, ನಿಯೋಗವು ಉದ್ಯಾನವನಗಳ ನಗರ ಎಂದೇ ಖ್ಯಾತವಾಗಿರುವ ಬ್ರೆಸಿಲಿಯಾ ಮತ್ತು ರಿಯೊ ಡಿ ಜನೈರೊ ಹೃದಯಭಾಗದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಗಳಿಗೆ ನಮನ ಸಲ್ಲಿಸಿತು. ಭಾರತ ಮತ್ತು ಬ್ರೆಜಿಲ್ ನಡುವಿನ ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಶಾಂತಿಯ ಸಂಕೇತವಾಗಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ಜೂನ್ 13 ರಂದು, ನಿಯೋಗವು ಬ್ರೆಜಿಲಿಯನ್ ಸಂಸತ್ತಿನ ಮೇಲ್ಮನೆಯ ಫೆಡರಲ್ ಸೆನೆಟ್ನ ಅಧ್ಯಕ್ಷರಾದ ಶ್ರೀ ರೋಡ್ರಿಗೋ ಒಟಾವಿಯೊ ಸೊರೆಸ್ ಪಚೆಕೊ ಅವರೊಂದಿಗೆ ಮಾತುಕತೆ ನಡೆಸಿತು. ಭಾರತ ಮತ್ತು ಬ್ರೆಜಿಲ್ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರದ ಪಾಲುದಾರಿಕೆ, ಪರಸ್ಪರ ತಿಳಿವಳಿಕೆ ಮತ್ತು ಸಹಕಾರದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು. ಸಂಸದರ ನಿಯೋಗದ ಸದಸ್ಯರು ಭಾರತಕ್ಕೆ ಆಹ್ವಾನ ನೀಡುವಂತೆ ಶ್ರೀ ಪಚೆಕೊ ಅವರಿಗೆ ಮನವಿ ಸಲ್ಲಿಸಿತು. ಇದಕ್ಕೆ ಸಚಿವರು ಧನ್ಯವಾದ ಸಲ್ಲಿಸಿದರು. 

ನಿಯೋಗವು ಭಾರತ-ಬ್ರೆಜಿಲ್ ಫ್ರೆಂಡ್ಶಿಪ್ ಫ್ರಂಟ್ನ ಅಧ್ಯಕ್ಷ ಸೆನೆಟರ್ ನೆಲ್ಸನ್ ಟ್ರ್ಯಾಡ್ ಮತ್ತು ಫ್ರಂಟ್ನ ಇತರ ಪ್ರಮುಖ ಸದಸ್ಯರನ್ನು ಭೇಟಿ ಮಾಡಿತು. ಈ ಸಂವಾದವು ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸಲು ವೇದಿಕೆ ಕಲ್ಪಿಸಿದೆ.

ಇದರ ನಂತರ ಡೆಪ್ಯುಟಿ ಪ್ರೆಸಿಡೆಂಟ್ ಆಫ್್ ಕಾಂಗ್ರೆಸ್್ ಶ್ರೀ ಮಾರ್ಕೋಸ್ ಪಿರೇರಾ, ಫೆಡರಲ್ ಡೆಪ್ಯೂಟಿ ವಿನಿಶಿಯಸ್ ಕರ್ವಾಲೋ, ಭಾರತ-ಬ್ರೆಜಿಲ್ ಪಾರ್ಲಿಮೆಂಟರಿ ಫ್ರೆಂಡ್ಶಿಪ್ ಗ್ರೂಪ್ನ ಅಧ್ಯಕ್ಷರು ಮತ್ತು ಅದರ ಹಲವಾರು ಪ್ರತಿಷ್ಠಿತ ಸದಸ್ಯರ ಜತೆ ಮಾತುಕತೆ ನಡೆಸಲಾಯಿತು.

ಕಳೆದ ಎರಡು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರದಲ್ಲಿ ಗಮನಾರ್ಹ ಹೆಚ್ಚಳದ ಬಗ್ಗೆ ಉಭಯ ದೇಶಗಳ ನಿಯೋಗದ ಸದಸ್ಯರು ತೃಪ್ತಿಯನ್ನು ವ್ಯಕ್ತಪಡಿಸಿದರು. ಒಟ್ಟು ದ್ವಿಪಕ್ಷೀಯ ವ್ಯಾಪಾರವು 2020 ರಲ್ಲಿ US $ 7.05 ಶತಕೋಟಿಯಿಂದ 2022 ರಲ್ಲಿ US $ 15.20 ಶತಕೋಟಿಗೆ (115%) ಏರಿಕೆಯಾಗಿದೆ. ಈ ಕಾರ್ಯತಂತ್ರದ ವ್ಯಾಪಾರ ವಿಸ್ತರಣೆಗೆ ಒತ್ತು ನೀಡುವುದು ಪರಸ್ಪರ ಲಾಭದಾಯಕ ಪಾಲುದಾರಿಕೆಯನ್ನು ರೂಪಿಸಲು ಎರಡೂ ರಾಷ್ಟ್ರಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಉತ್ತೇಜಿಸುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ರಿಯೊ ಡಿ ಜನೈರೊ ಮತ್ತು ಬ್ರೆಸಿಲಿಯಾ ಎರಡಕ್ಕೂ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಶ್ರೀ ಪ್ರಹ್ಲಾದ್್ ಜೋಶಿ ಅವರು ಬ್ರೆಜಿಲ್ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿ ಮಾಡಿದರು. 

ಭಾರತದ ತ್ವರಿತ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಕುರಿತು ವಿವರಣೆ ನೀಡಿದರು. ಈ ಪ್ರಗತಿಗೆ ಕೊಡುಗೆ ನೀಡಿದ ಸರ್ಕಾರದ ವಿವಿಧ ನೀತಿ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದರು.  ಎತ್ತಿ ತೋರಿಸಿದರು. ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಅರ್ಥಮಾಡಿಕೊಳ್ಳಲು ಮತ್ತು ಇತರೆ ವಿಷಯಗಳ ಕುರಿತು ಚರ್ಚಿಸಲು, , ಭಾರತೀಯ ಸಮುದಾಯದ ಸದಸ್ಯರಿಗೆ ಮಾತೃಭೂಮಿಯ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಈ ಸಭೆ ಹೆಚ್ಚು ಅವಕಾಶ ಕಲ್ಪಿಸಿತು.

ಭಾರತೀಯ ಸಂಸತ್ತಿನ ಸದ್ಭಾವನಾ ನಿಯೋಗದ ಈ ಭೇಟಿಯು ಭಾರತ-ಬ್ರೆಜಿಲ್ ದ್ವಿಪಕ್ಷೀಯ ಸಂಬಂಧಗಳ ಶ್ರೀಮಂತ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ರಾಯಭಾರಿ ಸುರೇಶ್ ರೆಡ್ಡಿ ವಿವರಿಸಿದರು. ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನಮ್ಮ ಹಂಚಿಕೆಯ ಬದ್ಧತೆಯನ್ನು ಬಲಪಡಿಸುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ವರ್ಧಿತ ಸಹಯೋಗಕ್ಕೆ ದಾರಿ ಮಾಡಿಕೊಡಲಿದೆ ಮತ್ತು ಸೆನೆಟ್ ಮತ್ತು ಕಾಂಗ್ರೆಸ್ನಿಂದ ಸಂಸದೀಯ ನಿಯೋಗಗಳ ಭಾರತದ ಭೇಟಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಹೇಳಿದರು.

****(Release ID: 1932431) Visitor Counter : 103