ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು,  ಸರ್ಕಾರವು 2023-24 ನೇ ಸಾಲಿನ ಬೆಂಬಲ ಬೆಲೆ ಯೋಜನೆ (ಪಿಎಸ್ಎಸ್) ಯಡಿಯಲ್ಲಿ ತೊಗರಿ, ಉದ್ದು  ಮತ್ತು ಮಸೂರ್   ಬೇಳೆಕಾಳುಗಳ ಸಂಗ್ರಹಣೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದೆ;  ಈ ವರ್ಷ ಪಿಎಸ್ಎಸ್ ಅಡಿಯಲ್ಲಿ ರೈತರು ತಮ್ಮ ಉತ್ಪನ್ನವಾದ ತೊಗರಿ, ಉದ್ದು ಮತ್ತು ಮಸೂರ್ ಬೇಳೆಕಾಳುಗಳನ್ನು ಮಾರಾಟ ಮಾಡಲು ಮುಕ್ತರಾಗಿದ್ದಾರೆ.  


ಮುಂಬರುವ ಹಿಂಗಾರು ಮತ್ತು ಮುಂಗಾರು ಋತುವಿನಲ್ಲಿ ಈ ದ್ವಿದಳ ಧಾನ್ಯಗಳ ಬಿತ್ತನೆ ಪ್ರದೇಶವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯು ತೊಗರಿ ಮತ್ತು ಉದ್ದು ಬೇಳೆಕಾಳುಗಳ  ಮೇಲಿನ ಸಂಗ್ರಹಣೆಯ ಮೇಲಿನ ಮಿತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವುಗಳ ಬೆಲೆಗಳನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.

Posted On: 06 JUN 2023 5:55PM by PIB Bengaluru

ದೇಶದಲ್ಲಿ ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಲ್ಲಿ, ಸರ್ಕಾರವು 2023-24 ರ ಬೆಲೆ ಬೆಂಬಲ ಯೋಜನೆ (ಪಿಎಸ್ಎಸ್) ಕಾರ್ಯಾಚರಣೆಗಳ ಅಡಿಯಲ್ಲಿ ತೊಗರಿ, ಉದ್ದು  ಮತ್ತು ಮಸೂರ್   ಬೇಳೆಕಾಳುಗಳ  40% ರಷ್ಟು ಸಂಗ್ರಹಣೆಯ ನಿರ್ಬಂಧಗಳನ್ನು ತೆಗೆದುಹಾಕಿದೆ.  ಸರ್ಕಾರದ ಈ ನಿರ್ಧಾರದಿಂದ, ಈ ಬೇಳೆಕಾಳುಗಳನ್ನು ಯಾವುದೇ ಮಿತಿಯಿಲ್ಲದೆ  ಎಂ.ಎಸ್.ಪಿ ಮೇಲೆ ರೈತರಿಂದ ಖರೀದಿಸಬಹುದು. ಈ ಬೇಳೆಕಾಳುಗಳನ್ನು ಸರ್ಕಾರವು ಲಾಭದಾಯಕ ಬೆಲೆಯಲ್ಲಿ ಖಚಿತವಾಗಿ ಸಂಗ್ರಹಿಸುವುದರಿಂದ ಮುಂಬರುವ ಹಿಂಗಾರು ಮತ್ತು ಮುಂಗಾರು ಬಿತ್ತನೆ ಋತುಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ತೊಗರಿ, ಉದ್ದು ಮತ್ತು ಮಸೂರ್ ಬಿತ್ತನೆ ಪ್ರದೇಶವನ್ನು ಹೆಚ್ಚಿಸಲು ರೈತರನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ.

 
ಅಗತ್ಯ ವಸ್ತುಗಳ ಕೃತಕ ಕೊರತೆಯನ್ನು ತಡೆಗಟ್ಟಲು ಮತ್ತು ಲಾಭಕ್ಕಾಗಿ ವ್ಯಾಪಾರ ಮಾಡುವುದನ್ನು ತಡೆಯಲು, ಗ್ರಾಹಕರಿಗೆ ಕೈಗೆಟಕುವ ದರವನ್ನು ಸುಧಾರಿಸಲು ಅಗತ್ಯ ವಸ್ತುಗಳ ಕಾಯಿದೆ 1955 ರ ಅಡಿಯಲ್ಲಿ ಬೇಳೆಕಾಳುಗಳ ಸಂಗ್ರಹಣೆಯ ಮೇಲಿನ ನಿರ್ಬಂಧಗಳನ್ನು ಜೂನ್ 2, 2023 ರಂದು ವಿಧಿಸಿದ್ದನ್ನು ನೆನೆಯಬಹುದು . ಬೇಳೆಕಾಳುಗಳ ಸಂಗ್ರಹಣೆಯ ಮೇಲಿನ ನಿರ್ಬಂಧಗಳು ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ಗಿರಣಿ ಮಾಲೀಕರು ಮತ್ತು ಆಮದುದಾರರಿಗೆ ಅನ್ವಯವಾಗಿದೆ. ಗ್ರಾಹಕ ಕಲ್ಯಾಣ ಇಲಾಖೆಯ (https://fcainfoweb.nic.in/psp ) ಪೋರ್ಟಲ್ ನಲ್ಲಿ  ಅವರು ತಮ್ಮಲ್ಲಿರುವ ದಾಸ್ತಾನಿನ ವಿವರಗಳನ್ನು ಘೋಷಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
 
ಬಳಿಕ ಕೇಂದ್ರ ಗ್ರಾಹಕರ ಕಲ್ಯಾಣ ಇಲಾಖೆಯು ವಿವಿಧ ಶೇಖರಣಾ ಗೋದಾಮುಗಳಲ್ಲಿ ತಪಾಸಣೆ ನಡೆಸಿ ಬೇಳೆಕಾಳುಗಳ ಬೆಲೆ ಮತ್ತು ಶೇಖರಣಾ ವಿವರಗಳ ಮೇಲೆ ನಿಗಾ ಇಡುವಂತೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಕೇಂದ್ರ ಉಗ್ರಾಣ ನಿಗಮ ಮತ್ತು ರಾಜ್ಯ ಉಗ್ರಾಣ ನಿಗಮಗಳು ತಮ್ಮ ಗೋದಾಮುಗಳಲ್ಲಿರುವ ತೊಗರಿ ಮತ್ತು ಉದ್ದಿನ  ಕಾಳುಗಳ ವಿವರಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.

***



(Release ID: 1930399) Visitor Counter : 121